ಅನುದಿನದ ಮನ್ನಾ
1
0
74
ನಿಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಿ
Tuesday, 5th of August 2025
Categories :
ಶ್ರೇಷ್ಠತೆ (Excellence)
"ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ".(ಕೀರ್ತನೆ 139:14)
ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯದ ಹಂತವನ್ನು ತಲುಪಬೇಕೆಂದು ದೇವರು ಬಯಸುತ್ತಾನೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೀವು ಅತ್ಯುತ್ತಮರಾಗಬೇಕೆಂದು ಆತನು ಬಯಸುತ್ತಾನೆ.
ಈಗ ನೀವು ಹಾಗೆ ಮಾತನಾಡುವಾಗ, ನಮ್ಮ ಇತರ ಕ್ರೈಸ್ತ ಸಹೋದರರಿಂದ ನೀವು ತಪ್ಪಾಗಿ ಗ್ರಹಿಸಲ್ಪಡುವ ಅಪಾಯವನ್ನು ಎದುರಿಸುತ್ತೀರಿ. ಇದಕ್ಕೆ ಕಾರಣವೆಂದರೆ ನಮ್ಮ ಆರಂಭಿಕ ಹಂತಗಳಿಂದಲೂ, ದೀನ ಮತ್ತು ಅತ್ಯಲ್ಪನು ಎಂದು ಎಣಿಸುವಂತೆ ಕ್ರಿಸ್ತನನ್ನು ಅನುಸರಿಸಲು ನಮಗೆ ಬೋಧಿಸಲಾಗಿದೆ .
ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ ಆದರೆ ದೀನರಿಗೆ ಕೃಪೆಯನ್ನು ನೀಡುತ್ತಾನೆ ಎಂಬುದು ಸಂಪೂರ್ಣವಾಗಿ ನಿಜ (ಯಾಕೋಬ 4:6). ಈ ಶಾಸ್ತ್ರದ ಅರ್ಥವೇನೆಂದರೆ, ನಿಮ್ಮ ಸುತ್ತಲಿನ ಎಲ್ಲರಿಗಿಂತ ನೀವು ಉತ್ತಮರು ಎಂದು ನೀವು ಭಾವಿಸಬೇಕೆಂದು ದೇವರು ಬಯಸುವುದಿಲ್ಲ - ಅದು ಹೆಮ್ಮೆ. ಆದಾಗ್ಯೂ, ನೀವು ಸಾಧ್ಯವಾದಷ್ಟು ಉತ್ತಮವಾಗಿರಬೇಕೆಂದು ಕರ್ತನು ಬಯಸುತ್ತಾನೆ.
ಯಾರೋ ಒಬ್ಬರು ತುಂಬಾ ಸರಿಯಾಗಿ ಹೇಳಿದ್ದಾರೆ. ದೇವರು ನಿಮ್ಮನ್ನು ನೀವು ಇರುವಂತೆಯೇ ಪ್ರೀತಿಸುತ್ತಾನೆ, ನೀವು ಇರುವಂತೆಯೇ ಅಂಗೀಕರಿಸಿಕೊಂಡು ಆತನು ನಿಮ್ಮನ್ನು ತುಂಬಾ ಪ್ರೀತಿಸುತ್ತಾನೆ. ಆದರೆ ನೀವು ಅತ್ಯುತ್ತಮರಾಗಬೇಕೆಂದು ಆತನು ಬಯಸುತ್ತಾನೆ. ಈ ರೀತಿಯಾಗಿ, ತಂದೆಯನ್ನು ಮಹಿಮೆಪಡಿಸಲಾಗುತ್ತದೆ. (ಯೋಹಾನ 15:8)
ದೇವರು ನಿಮಗೆ ಹೇಳುವ ಯಾವುದೇ ಕೆಲಸವನ್ನು ಮಾಡಲು ನೀವು ಸಮರ್ಥರು ಎಂದು ನಂಬುವುದು ಹೆಮ್ಮೆಯಲ್ಲ; ಅದು ನಂಬಿಕೆ. "ನೀವು ಇಷ್ಟಪಟ್ಟು ನನಗೆ ವಿಧೇಯರಾದರೆ, ನೀವು ರಾಜರಂತೆ ಹಬ್ಬ ಮಾಡುತ್ತೀರಿ". (ಯೆಶಾಯ 1:19 ಸಂದೇಶ)
ಒಂದೇ ಷರತ್ತು ಎಂದರೆ ನಮ್ಮ ಜೀವನದಲ್ಲಿ ಎಲ್ಲಾ ಕ್ಷಣದಲ್ಲಿಯೂ ದೇವರ ಚಿತ್ತವನ್ನು ಪಾಲಿಸಬೇಕು. ದೇವರು ಆದಾಮ ಮತ್ತು ಹವ್ವರನ್ನು ಮರುಭೂಮಿಯಲ್ಲಲ್ಲ, ಏದೆನ್ ತೋಟದಲ್ಲಿ ಇರಿಸಿದನು. ಅವರು ಆತನ ಚಿತ್ತಕ್ಕೆ ವಿಧೇಯರಾಗಿ ನಡೆಯುವವರೆಗೂ, ಅವರು ರಾಜರಂತೆಯೇ ಬದುಕಿದರು.
ನಿಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ. ಇದು ನಿಮ್ಮ ಜೀವನದಲ್ಲಿ ಆತಂಕ ಮತ್ತು ಭಯವನ್ನು ತರುತ್ತದೆ. ಆದಾಗ್ಯೂ, ದೇವರು ನಿಮ್ಮಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರಲು, ನಿಮ್ಮನ್ನು ನೀವು ಅತ್ಯುತ್ತಮವಾಗಿಸಲು ನೀವು ಅನುಮತಿಸುವಾಗ ನೀವು ವರ್ಣಿಸಲಾಗದ ಸಂತೃಪ್ತಿ ಮತ್ತು ಸಮಾಧಾನವನ್ನು ಹೊಂದಿರುತ್ತೀರಿ.
ನೀವು ನಂಬಿಕೆಯಿಂದ ನಂಬಿಕೆಗೆ (ರೋಮನ್ನರು 1:17), ಬಲದಿಂದ ಬಲಕ್ಕೆ, ಮಹಿಮೆಯಿಂದ ಮಹಿಮೆಗೆ (2 ಕೊರಿಂಥ 3:16-18) ಮುನ್ನಡೆಯುವಿರಿ. ಈ ದೇವರವಾಕ್ಯಗಳು ದೇವರ ಜನರಾಗಿ ನಾವು ಹೊಂದಿರುವ ಉನ್ನತಿ, ರೂಪಾಂತರ, ಮಹಿಮೆ ಮತ್ತು ಸಬಲೀಕರಣದ ಅಂತ್ಯವಿಲ್ಲದ ಸಾಧ್ಯತೆಯನ್ನು ಪ್ರತಿಬಿಂಬಿಸುತ್ತವೆ.
Bible Reading: Isaiah 45-48
ಪ್ರಾರ್ಥನೆಗಳು
ತಂದೆಯೇ, ನಿಮ್ಮ ಮಾರ್ಗದಲ್ಲಿ ನಿರಂತರವಾಗಿ ನಡೆಯುವಂತೆ, ಎಲ್ಲಾ ಸಮಯದಲ್ಲೂ ನಿಮ್ಮ ಉದ್ದೇಶದಲ್ಲಿ ದೃಢವಾಗಿ ಮುಂದುವರಿಯುವಂತೆ ನನಗೆ ಸಾಮರ್ಥ್ಯವನ್ನು ಯೇಸುನಾಮದಲ್ಲಿ ಅನುಗ್ರಹಿಸು. ಆಮೆನ್.
Join our WhatsApp Channel

Most Read
● ದೇವರು ಹೇಗೆ ಒದಗಿಸುತ್ತಾನೆ #3● ಇತರರಿಗಾಗಿ ಪ್ರಾರ್ಥಿಸುವುದು
● ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
● ಬಲವಾದ ಮೂರುಹುರಿಯ ಹಗ್ಗ
● ಎದುರಾಗುವ ವಿರೋಧಗಳನ್ನು ನಂಬಿಕೆಯಿಂದ ಎದುರಿಸುವುದು.
● ದಿನ 04: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅನ್ಯಭಾಷೆಯನ್ನಾಡುವುದು ಪ್ರಗತಿಯನ್ನು ತರುತ್ತದೆ.
ಅನಿಸಿಕೆಗಳು