ಅನುದಿನದ ಮನ್ನಾ
1
0
55
ಶ್ರೇಷ್ಠತೆಯನ್ನು ಸಾಧಿಸುವುದು ಹೇಗೆ?
Friday, 8th of August 2025
Categories :
ಶ್ರೇಷ್ಠತೆ (Excellence)
ನಾನು ನಿನ್ನೆ ಹೇಳಿದಂತೆ, ಶ್ರೇಷ್ಠತೆಯು ದೈನಂದಿನ ಅಭ್ಯಾಸವಾಗಿರಬೇಕು ಮತ್ತು ಒಮ್ಮೆ ಮಾತ್ರ ನಡೆಯುವ ಘಟನೆಯಾಗಿರಬಾರದು. ಶ್ರೇಷ್ಠತೆಯ ನನ್ನ ಸರಳ ವ್ಯಾಖ್ಯಾನವೆಂದರೆ: ಯಾರಾದರೂ ನೋಡುತ್ತಾರೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ದೈನಂದಿನ ಸಾಮಾನ್ಯ ಕೆಲಸಗಳನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಮಾಡುವುದು.
ವಾಸ್ತವವೆಂದರೆ ದೇವರು ನಮ್ಮ ಕೆಲಸವನ್ನು ನೋಡುವವನಾಗಿ ನಮಗೆ ಅರ್ಥವಾಗದ ರೀತಿಯಲ್ಲಿ ನಮಗೆ ಪ್ರತಿಫಲ ನೀಡುತ್ತಾನೆ. ಆದಾಗ್ಯೂ, ಶ್ರೇಷ್ಠತೆಯ ಜೀವನವನ್ನು ನಡೆಸಲು, ನಾವು ಶ್ರೇಷ್ಠತೆಯ ಉದ್ದೇಶವನ್ನು ಸಹ ಅರ್ಥಮಾಡಿಕೊಳ್ಳಬೇಕು, ಇಲ್ಲದಿದ್ದರೆ ಅದು ಜೀವನದ ಬದಲು ಮರಣವನ್ನು ಮತ್ತು ಖಂಡನೆಯನ್ನು ತರುವ ವಿಷಯವಾಗುತ್ತದೆ.
ನಾವು ಕೆಲವು ಅಂಕಗಳನ್ನು ಗಳಿಸಲು ಅಥವಾ ಆತನ ಸ್ವೀಕಾರವನ್ನು ಗಳಿಸಲು ದೇವರು ನಮ್ಮನ್ನು ಶ್ರೇಷ್ಠತೆಯಿಂದ ಕೆಲಸಗಳನ್ನು ಮಾಡಲು ಕೇಳುವುದಿಲ್ಲ. ವಾಸ್ತವವಾಗಿ, ಯೇಸು ನಮ್ಮಲ್ಲಿ ಪ್ರತಿಯೊಬ್ಬರಿಗೂ ಶಿಲುಬೆಯಲ್ಲಿ ನಮಗಾಗಿ ಮಾಡಿದ್ದಕ್ಕಾಗಿ ನಾವು ಈಗಾಗಲೇ ತಂದೆಯಿಂದ ಸ್ವೀಕರಿಸಲ್ಪಟ್ಟಿದ್ದೇವೆ. ಕ್ರಿಸ್ತನ ಮಾಡಿಮುಗಿಸಿರುವ ಕೆಲಸಕ್ಕೆ ನಾವು ಎಂದಿಗೂ ಹೆಚ್ಚಿನದನ್ನು ಸೇರಿಸಲು ಸಾಧ್ಯವಿಲ್ಲ. (ಎಫೆಸ 1:6-7)
ನಾವು ಶ್ರೇಷ್ಠತೆಯಲ್ಲಿ ನಡೆಯಬೇಕೆಂದು ದೇವರು ಬಯಸುವ ನಿಜವಾದ ಉದ್ದೇಶವೆಂದರೆ ನಾವು ತಂದೆಯಂತೆ, ಮಗನಂತೆ ಆತನ ಪ್ರತಿರೂಪ ವಾಗಬೇಕೆಂಬುದೇ. ಶ್ರೇಷ್ಠತೆಯಲ್ಲಿ ನಡೆಯುವ ಮೂಲಕ, ನಾವು ಹೆಚ್ಚು ಹೆಚ್ಚಾಗಿ ಆತನಂತೆ ಆಗುತ್ತೇವೆ.
"ನೀವು ಪ್ರಕಾಶಮಾನ ಬೆಳಕಿಗಿಂತ ಪ್ರಕಾಶಮಾನವಾಗಿರುತ್ತೀರಿ, ನೈಸರ್ಗಿಕ ಸಂಪತ್ತು ತುಂಬಿದ ಪರ್ವತಗಳಿಗಿಂತ ಹೆಚ್ಚು ಶ್ರೇಷ್ಠ ಆಗಿದ್ದೀರಿ". (ಕೀರ್ತನೆ 76:4)
ದೇವರು (ಕ್ರಿಸ್ತನಲ್ಲಿರುವ)ನಿಮ್ಮ ಕುರಿತು ಮತ್ತು ನನ್ನ ಕುರಿತು ಹೇಗೆ ಮಾತನಾಡುತ್ತಾನೆ ಎಂಬುದನ್ನು ನೋಡಿ
"ದೇಶದಲ್ಲಿರುವ ದೈವಭಕ್ತರು (ಸಂತರು) ಶ್ರೇಷ್ಠರು, ಉದಾತ್ತರು ಮತ್ತು ಮಹಿಮೆಯುಳ್ಳವರು, ಅವರಲ್ಲಿ ನನಗೆ ಎಲ್ಲಾ ಸಂತೋಷವಿದೆ." (ಕೀರ್ತನೆ 16:3 ವರ್ಧಿತ)
ಹಾಗಾದರೆ, ನಾವು ಶ್ರೇಷ್ಠತೆಯನ್ನು ಹೇಗೆ ಅನುಸರಿಸಬೇಕು?
"ನಿಮ್ಮನ್ನು ಕತ್ತಲೆಯೊಳಗಿನಿಂದ ತನ್ನ ಆಶ್ಚರ್ಯಕರವಾದ ಬೆಳಕಿಗೆ ಕರೆದಾತನ ಅದ್ಭುತಕಾರ್ಯಗಳನ್ನೂ ಆತನ ಶ್ರೇಷ್ಠತೆಯನ್ನು ಪ್ರಚಾರಮಾಡುವವರಾಗುವಂತೆ ನೀವು ದೇವರಿಂದ ಆರಿಸಿಕೊಳ್ಳಲ್ಪಟ್ಟ ಜನಾಂಗವೂ, ರಾಜವಂಶಸ್ಥರಾದ ಯಾಜಕರೂ, ಪರಿಶುದ್ಧ ಜನಾಂಗವೂ, ದೇವರ ಸ್ವಕೀಯ ಜನರೂ ಆಗಿದ್ದೀರಿ."(1 ಪೇತ್ರ 2:9 ESV)ಎಂದುಅಪೊಸ್ತಲ ಪೇತ್ರನು ಬರೆಯುತ್ತಾನೆ.
ನಾವು ಕತ್ತಲೆಯೊಳಗಿಂದ ಆತನ ಅದ್ಭುತ ಬೆಳಕಿಗೆ ಕರೆಯಲ್ಪಟ್ಟ ಕಾರಣವನ್ನು ಗಮನಿಸಿ; ಅದು ಆತನ ಶ್ರೇಷ್ಠತೆಗಳನ್ನು ಘೋಷಿಸುವುದಕ್ಕಾಗಿಯೇ ಆಗಿದೆ.
ಆದ್ದರಿಂದ ಶ್ರೇಷ್ಠತೆಯನ್ನು ಅನುಸರಿಸುವ ಮೊದಲ ಮಾರ್ಗವೆಂದರೆ ದೇವರನ್ನು ಅನುಸರಿಸುವುದು, ಆತನ ಗುಣಲಕ್ಷಣಗಳನ್ನು ಧ್ಯಾನಿಸಿ ನಮ್ಮ ಸಂಪರ್ಕಕ್ಕೆ ಬರುವವರಿಗೆ ಆತನ ಅತ್ಯುತ್ತಮ ಗುಣಲಕ್ಷಣಗಳನ್ನು ಘೋಷಿಸುವುದಾಗಿದೆ.
"ಆದುದರಿಂದ ದೇವರ( ತಂದೆಯಾದ ದೇವರ) ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ. (ಆತನ ನಡತೆಯನ್ನು ಅನುಕರಣೆ ಮಾಡಿ ಮತ್ತು ಆತನ ಮಾದರಿಯನ್ನು ಅನುಸರಿಸಿ) (ಎಫೆಸ 5:1 ವರ್ಧಿತ) ಎಂದು ಅಪೊಸ್ತಲ ಪೌಲನು ಬರೆಯುತ್ತಾನೆ
ದೇವರು ನಮ್ಮನ್ನು ತನ್ನ ಸ್ವರೂಪದಲ್ಲಿ ಮತ್ತು ಆತನ ಹೋಲಿಕೆಗೆ ಸರಿಯಾಗಿ ಸೃಷ್ಟಿಸಿದನು. ಈಗ, ಆತನ ವಿಮೋಚನೆಗೊಂಡ ಮಕ್ಕಳಾಗಿ, ನಾವು ಕ್ರಿಸ್ತನಲ್ಲಿ ಆ ಸ್ವರೂಪಕ್ಕೆ ಪುನಃಸ್ಥಾಪಿಸಲ್ಪಡುತ್ತಿದ್ದೇವೆ.
Bible Reading: Isaiah 57-60
ಅರಿಕೆಗಳು
ತಂದೆಯೇ, ನಿನ್ನ ಹೆಸರಿಗೆ ಮಹಿಮೆ ತರುವ ಶ್ರೇಷ್ಠ ಜೀವನವನ್ನು ನಡೆಸಲು ನನಗೆ ಬೇಕಾದ ಎಲ್ಲವನ್ನೂ ನೀವು ನನಗೆಕ್ರಿಸ್ತ ಯೇಸುವಿನಲ್ಲಿ ಅನುಗ್ರಹಿಸಿದ್ದೀರಿ ಎಂದು ಯೇಸುನಾಮದಲ್ಲಿ ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. ಆಮೆನ್.
Join our WhatsApp Channel

Most Read
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ಎರಡು ಸಾರಿ ಸಾಯಬೇಡಿರಿ
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಗುರಿಯನ್ನು ತಲುಪಲು ಬಲವನ್ನು ಹೊಂದಿಕೊಳ್ಳಿರಿ.
● ಜಯಶಾಲಿಗಳಿಗಿಂತ ಹೆಚ್ಚಿನವರು.
ಅನಿಸಿಕೆಗಳು