ಅನುದಿನದ ಮನ್ನಾ
1
0
49
ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಆತ್ಮೀಕ ಆಹಾರಕ್ರಮ
Saturday, 9th of August 2025
Categories :
ಶಿಸ್ತು ( Discipline)
ಇಂದು ಜಗತ್ತಿನಲ್ಲಿ ಆಹಾರದ ಪ್ರವೃತ್ತಿಗಳು ಎನ್ನುವಂತದ್ದು ಒಂದು ಗೀಳಾಗಿ ಬಿಟ್ಟಿದೆ, ಮಧ್ಯಂತರ ಉಪವಾಸ ಮತ್ತು ಶುದ್ಧ ಆಹಾರಕ್ರಮ ಇವೆಲ್ಲವುಗಳ ಮಧ್ಯ ಒಂದು ಆಳವಾದ ಹಸಿವು, ಹೆಚ್ಚಾಗಿ ಗಮನಕ್ಕೆ ಬಾರದೇ ಹೋಗಿದೆ - ಅದುವೇ ಆತ್ಮದ ಹಸಿವು.
ಕ್ರೈಸ್ತರಾಗಿ, ಇದು ನಮ್ಮ ತಟ್ಟೆಯಲ್ಲಿ ಇಂದು ಏನೇನಿದೆ ಎಂಬುದರ ಕುರಿತು ಮಾತ್ರವಲ್ಲ, ನಮ್ಮ ಆತ್ಮವನ್ನು ಪೋಷಿಸುವಂತದ್ದು ಏನೇನಿದೆ ಎಂಬುದನ್ನು ನಾವು ನೋಡಬೇಕು. ಆದರೆ ನಾವು ಅದನ್ನು ಅರಿತುಕೊಂಡಿದ್ದೆವೋ ಇಲ್ಲವೋ, ನಾವು ಯಾವಾಗಲೂ ಉತ್ತಮ ಆಹಾರಕ್ರಮ ಕುರಿತು ಕಾಳಜಿ ವಹಿಸುವವರಾಗಿದ್ದೇವೆ.
ಪ್ರಶ್ನೆ: ನೀವು ನಿಮ್ಮ ಆತ್ಮವನ್ನು ಪೋಷಿಸುತ್ತಿದ್ದೀರಾ ಅಥವಾ ನಿಮ್ಮ ಶರೀರದಿಚ್ಛೆಯನ್ನು ಪೋಷಿಸುತ್ತಿದ್ದೀರಾ?
"ವಿಧೇಯರಾದ ಮಕ್ಕಳಿಗೆ ತಕ್ಕಂತೆ ನಡೆಯಿರಿ, ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮ್ಮ ದುರಾಶೆಗಳನ್ನು ಅನುಸರಿಸಿ ನಡೆದಂತೆ ಇನ್ನು ನಡೆಯುವವರಾಗಿರಬೇಡಿರಿ" ಎಂದು. 1 ಪೇತ್ರ 1:14 ಹೇಳುತ್ತದೆ.
ನಮ್ಮ ಆಸೆಗಳು ತಟಸ್ಥವಾಗಿಲ್ಲ ಎಂದು ಇದು ನಮಗೆ ನೆನಪಿಸುತ್ತದೆ - ಅವು ಶರೀರದಿಚ್ಚೆಯನ್ನು ಪೋಷಿಸುತ್ತವೆ ಅಥವಾ ಆತ್ಮವನ್ನು ಪೋಷಿಸುತ್ತವೆ.
1. ಶರೀರದಿಚ್ಚೆ ಮಾರಕ
ಆಹಾರಕ್ರಮ ಪ್ರಕಾರ ನೀವು ಶರೀರದಿಚ್ಚೆಯನ್ನು ಮಾತ್ರ ಪೋಷಿಸಿದಾಗ, ನೀವು ನಿಮ್ಮ ಆತ್ಮವನ್ನು ಹಸಿವಿನಿಂದ ಬಳಳಿಸುತ್ತೀರಿ. ಅದು ಕೇವಲ ಕಾವ್ಯಾತ್ಮಕ ಭಾಷೆಯಲ್ಲ - ಇದು ಶಾಶ್ವತ ಪರಿಣಾಮಗಳನ್ನು ಹೊಂದಿರುವ ಆತ್ಮೀಕ ಸತ್ಯವೂ ಹೌದು. ಶರೀರವು ಆರಾಮ, ಭೋಗ, ಗಮನ ಮತ್ತು ತಾತ್ಕಾಲಿಕ ಉತ್ತುಂಗವನ್ನು ಮಾತ್ರ ಬಯಸುತ್ತದೆ. ಇದು ಪೋಷಿಸುವುದು ಎಂತಹುಗಳೆಂದರೆ
- ಹೆಮ್ಮೆ: “ನನಗೆ ಉತ್ತಮವಾದದ್ದು ಯಾವುದು ಎಂದು ತಿಳಿದಿದೆ .
- ಕಾಮ: “ನನಗೆ ಈಗ ಅದು ಬೇಕೇ ಬೇಕು.”
- ಕೋಪ ಮತ್ತು ಕಹಿ: “ಅವರು ಇದಕ್ಕೆ ಅರ್ಹರು.”
- ಸುಳ್ಳು: “ನಾನು ಸತ್ಯವನ್ನು ಕೊಂಚ ಡೊಂಕು ಮಾಡಿದೆ ಅಷ್ಟೇ.”
- “ನಾನು ಕೇಳಿದ್ದನ್ನು ನಾನು ನಿಮಗೆ ಹೇಳುತ್ತೇನೆ…”
ನೀವು ಈ ಹಸಿವುಗಳಿಗೆ ಪ್ರತಿ ಬಾರಿ ಮಣಿದಾಗ, ನಿಮ್ಮನ್ನು ದೇವರಿಂದ ದೂರ ಎಳೆಯಲು ವಿನ್ಯಾಸಗೊಳಿಸಲಾದ ಒಂದು ವ್ಯವಸ್ಥೆಗೆ ಉರುವಲನ್ನು ಒದಗಿಸಿಕೊಡುತ್ತೀರಷ್ಟೇ.
"ನೀವು ಶರೀರಭಾವವನ್ನು ಅನುಸರಿಸಿ ಬದುಕಿದರೆ ಸಾಯುವುದು ನಿಶ್ಚಯ;..."ಎಂದು ರೋಮನ್ನರು 8:13 ಎಚ್ಚರಿಸುತ್ತದೆ. ಬಲವಾದ ಮಾತುಗಳು. ಆದರೆ ಏಕೆ? ಏಕೆಂದರೆ ಶರೀರಭಾವವು ನಿಯಂತ್ರಿಸಲು ನಮ್ಮನ್ನು ಬಯಸುತ್ತದೆ ಅದು ಪ್ರತಿ ಬಾರಿಯೂ ಆತ್ಮನನ್ನು ವಿರೋಧಿಸುತ್ತದೆ (ಗಲಾತ್ಯ 5:17).
2. ನೀವು ದೇವರಿಂದ ಓಡಿಹೋಗುವಾಗ
ಸೈತಾನನು ತನ್ನ ಸೇನೆಯನ್ನು ಅದಕ್ಕಾಗಿ ನಿಮಗೆ ಸಹಾಯಮಾಡಲು ಸವಾರಿ ಕಳುಹಿಸುತ್ತಾನೆ ಒಂದು ಗಂಭೀರವಾದ ಸತ್ಯವಿದೆ: ನೀವು ದೇವರಿಂದ ಓಡಿಹೋಗುವುದನ್ನು ಆಯ್ಕೆ ಮಾಡಿದ ಪ್ರತಿ ಬಾರಿಯೂ, ಶತ್ರುವು ನಿಮಗೆ ಬೇಕಾದ ಸಾರಿಗೆಯನ್ನುಯೋನನು ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುವ ಹಡಗನ್ನು ಕಂಡುಕೊಂಡಂತೆ (ಯೋನ 1:3) ಒದಗಿಸಲು ಹೆಚ್ಚು ಸಿದ್ಧವಾಗಿರುತ್ತಾನೆ.
ನೀವು ಸಹ ಪಾಪ ಮಾಡಲು ಅವಕಾಶಗಳನ್ನೂ, ನಿರುಪದ್ರವವೆಂದು ತೋರುವ ಗೊಂದಲಗಳನ್ನು ಮತ್ತು ದಂಗೆಯನ್ನು ಪ್ರೋತ್ಸಾಹಿಸುವ ಜನರನ್ನು ಕಂಡುಕೊಳ್ಳುವಿರಿ. ಆದರೆ ಇಲ್ಲಿ ವಂಚನೆ ಇದೆ - ಸೈತಾನನು ನಿಮ್ಮ ದಂಗೆಗೆ ಸಹಾಯಧನ ನೀಡುತ್ತಾನೆ. ನೀವು ನಿಮ್ಮದೇ ಆದ ಚಂಡಮಾರುತದಲ್ಲಿ ಸಿಲುಕಿಕೊಳ್ಳುವವರೆಗೆ ಅವನು ಅದನ್ನು ಸುಲಭವಾದದ್ದು ಮೋಜು ಕೊಡುವುದಾಗಿ ಮತ್ತು ಸಮರ್ಥನೀಯವಾಗಿದೆ ಎನಿಸುತ್ತದೆ.
ನೆನಪಿಡಿ: ಅನುಕೂಲವು ದೃಢೀಕರಣವಲ್ಲ. ಬಾಗಿಲು ತೆರೆದ ಮಾತ್ರಕ್ಕೆ ದೇವರು ಅದನ್ನು ತೆರೆದಿದ್ದಾನೆ ಎಂದರ್ಥವಲ್ಲ.
3. ಆರೋಗ್ಯಕರ ಆಹಾರವನ್ನು ಸೇವಿಸಿ
ಚಿಕಿತ್ಸೆ ಸರಳವಾದರೂ ಶಕ್ತಿಯುತವಾಗಿದೆ: ಪ್ರತಿದಿನ ದೇವರ ವಾಕ್ಯವನ್ನು ಸೇವಿಸಿ. ನಿಮ್ಮ ದೇಹಕ್ಕೆ ಪೋಷಣೆ ಅಗತ್ಯವಿರುವಂತೆ, ನಿಮ್ಮ ಆತ್ಮವು ಧರ್ಮಗ್ರಂಥವನ್ನು ಬಯಸುತ್ತದೆ. "ಮನುಷ್ಯನು ರೊಟ್ಟಿಯಿಂದ ಮಾತ್ರ ಬದುಕುವುದಿಲ್ಲ, ಆದರೆ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕಬೇಕು." (ಮತ್ತಾಯ 4:4)ಎಂದು ಕರ್ತನಾದ ಯೇಸು ಹೇಳಿದನು.
ಇದು ಸೈತಾನನನ್ನು ದೂರವಿಡಲು ದಿನಕ್ಕೆ ಒಂದು ವಾಕ್ಯವನ್ನು ಓದುವುದರ ಬಗ್ಗೆ ಅಲ್ಲ. ಇದು ಸತ್ಯವನ್ನು ಜೀರ್ಣಿಸಿಕೊಳ್ಳುವುದು, ಜ್ಞಾನವನ್ನು ಅಗಿಯುವುದು ಮತ್ತು ದೈವಿಕ ಪ್ರಕಟಣೆಗಳ ಮೂಲಕ ರೂಪಾಂತರಗೊಳ್ಳುವುದರ ಕುರಿತಾಗಿರುತ್ತದೆ.
ಇದರಿಂದ ಪ್ರಾರಂಭಿಸಿ:
- ಕೀರ್ತನೆ 1: ಕರ್ತನ ನಿಯಮದಲ್ಲಿ ಆನಂದಿಸಲು ಕಲಿಯಿರಿ.
- ನಾಣ್ಣುಡಿಗಳು: ದೈನಂದಿನ ನಿರ್ಧಾರಗಳಿಗಾಗಿ ಪ್ರಾಯೋಗಿಕ ಜ್ಞಾನವನ್ನು ಪಡೆಯಿರಿ.
- ಸುವಾರ್ತೆಗಳು: ಯೇಸುವಿನ ಹೃದಯವನ್ನು ಅನ್ವೇಷಿಸಿ.
- ರೋಮನ್ನರು: ಕ್ರಿಸ್ತನಲ್ಲಿ ನೀವು ಯಾರಾಗಿದ್ದೀರಿ ಎಂಬುದನ್ನು ಅರ್ಥಮಾಡಿಕೊಳ್ಳಿ.
ನಿಮ್ಮ ಆತ್ಮೀಕ ಹಸಿವು ಹೆಚ್ಚಾದಂತೆ, ಶರೀರಭಾವದ ಕಸದ ಹಂಬಲಗಳು ಸ್ವಾಭಾವಿಕವಾಗಿ ಕಡಿಮೆಯಾಗುತ್ತವೆ.
4. ನಿಮ್ಮ ಆಹಾರವು ನಿಮ್ಮ ಗತಿಯನ್ನು ನಿರ್ಧರಿಸುತ್ತದೆ.
ಪ್ರತಿದಿನ, ನಿಮಗೆ ಒಂದು ಆಯ್ಕೆ ಇದೆ: ಶರೀರಭಾವವನ್ನು ಪೋಷಿಸಿವ ಮೂಲಕ ನಿಮ್ಮ ಆತ್ಮವನ್ನು ಹಸಿವಿನಿಂದ ಸಾಯಿಸುವುದು, ಅಥವಾ ನಿಮ್ಮ ಆತ್ಮವನ್ನು ಪೋಷಿಸಿ ಮತ್ತು ಶರೀರಭಾವವನ್ನು ಶಿಲುಬೆಗೇರಿಸುವುದು. ಫಲಿತಾಂಶವು ಕೇವಲ ಆತ್ಮೀಕವಾಗಿಯಲ್ಲ ಅದು ನಿಮ್ಮ ಸಂಬಂಧಗಳು, ಭಾವನೆಗಳು, ನಿರ್ಧಾರಗಳು ಮತ್ತು ಪರಂಪರೆಯ ಮೇಲೆಯೂ ಪರಿಣಾಮ ಬೀರುವಂತದ್ದಾಗಿರುತ್ತದೆ.
ಇಂದು ಕ್ರೋಡಿಕರಿಸಿ ಇಡಿ:
- ನೀವು ಏನನ್ನು ನೋಡುತ್ತಿದ್ದೀರಿ?
- ನೀವು ಏನನ್ನು ಕೇಳುತ್ತಿದ್ದೀರಿ?
- ನೀವು ಏನನ್ನು ಧ್ಯಾನಿಸುತ್ತಿದ್ದೀರಿ?
- ನೀವು ಏನನ್ನು ಮಾತನಾಡುತ್ತಿದ್ದೀರಿ?
ಕರ್ತನಾದ ಯೇಸು ಹೇಳಿದಂತೆ, “ ನ್ಯಾಯನೀತಿಗಾಗಿ ಹಸಿದು ಹಾತೊರೆಯುವವರು ಭಾಗ್ಯವಂತರು; ದೇವರು ಅವರಿಗೆ ತೃಪ್ತಿಯನ್ನೀಯುವರು.” (ಮತ್ತಾಯ 5:6)
ಹಾಗಾದರೆ, ನೀವು ಯಾವುದಕ್ಕಾಗಿ ಹಸಿದಿದ್ದೀರಿ?
Bible Reading: Isaiah 61-64
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿಮ್ಮ ವಾಕ್ಯಕ್ಕಾಗಿ ನನ್ನಲ್ಲಿ ಆಳವಾದ ಹಸಿವನ್ನು ಜಾಗೃತಗೊಳಿಸಿ. ಶರೀರ ಭಾವದ ಹಂಬಲಗಳನ್ನು ತಿರಸ್ಕರಿಸಲು ಮತ್ತು ನಿಮ್ಮ ಸತ್ಯದಲ್ಲಿ ನಾನು ಆನಂದಿಸಲು ನನಗೆ ಸಹಾಯ ಮಾಡಿ. ಪ್ರತಿದಿನ ನನ್ನನ್ನು ನಿಮ್ಮ ಆತ್ಮ, ಜ್ಞಾನ ಮತ್ತು ತಿಳುವಳಿಕೆಯಿಂದ ತುಂಬಿಸಿ. ಯೇಸುವಿನ ಹೆಸರಿನಲ್ಲಿ ಬೇಡಿಹೊಂದಿದ್ದೇನೆ ಆಮೆನ್.
Join our WhatsApp Channel

Most Read
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ● ಆಳವಾದ ನೀರಿನೊಳಗೆ
● ಇನ್ನು ಸಾವಕಾಶವಿಲ್ಲ.
● ಸ್ತುತಿಯು ಸಮೃದ್ಧಿಯನ್ನುಂಟುಮಾಡುತ್ತದೆ
● ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು - 2
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ
● ಈ ಹೊಸ ವರ್ಷದ ಪ್ರತಿ ದಿನದಲ್ಲೂ ಸಂತೋಷವನ್ನು ಅನುಭವಿಸುವುದು ಹೇಗೆ?
ಅನಿಸಿಕೆಗಳು