"ಪಸ್ಕವೆಂಬ, ಹುಳಿಯಿಲ್ಲದ ರೊಟ್ಟಿಯ ಹಬ್ಬವು ಸಮೀಪವಾಗಿತ್ತು. ಮುಖ್ಯಯಾಜಕರೂ ನಿಯಮ ಬೋಧಕರೂ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಹುಡುಕುತ್ತಿದ್ದರು. ಆದರೆ ಅವರು ಜನರಿಗೆ ಭಯಪಟ್ಟರು."(ಲೂಕ 22:1-2)
ಬೈಬಲ್ ಪ್ರಕಾರ, ಇಸ್ರಾಯೇಲ್ಯರು ಪ್ರತಿ ವರ್ಷ ಪಸ್ಕದ ಸಮಯದಲ್ಲಿ ಐಗುಪ್ತದ ಬಂಧನದಿಂದ ಬಿಡುಗಡೆಯಾದ ಸ್ಮರಣಾರ್ಥವಾಗಿ ಹುಳಿಯಿಲ್ಲದ ರೊಟ್ಟಿಯನ್ನು ಮಾತ್ರ ತಿನ್ನಬೇಕಾಗಿತ್ತು. ಇಸ್ರಾಯೇಲ್ ಮಕ್ಕಳು ತ್ವರೆಯಾಗಿ ಐಗುಪ್ತವನ್ನು ತೊರೆದ ಕಾರಣ, ಅವರಿಗೆ ಹಿಟ್ಟಿಗೆ ಹುಳಿ ಸೇರಿಸುವಷ್ಟು ಸಮಯವಿರಲಿಲ್ಲ.
ಬೈಬಲ್‌ನಲ್ಲಿ, ಹುಳಿಯು ಬಹುತೇಕ ಯಾವಾಗಲೂ ಪಾಪದೊಂದಿಗೆ ಸಂಬಂಧಿಸಿದೆ. ಇಡೀ ಹಿಟ್ಟಿನ್ನು ವ್ಯಾಪಿಸಿರುವ ಹುಳಿಯಂತೆ, ಪಾಪವು ಒಬ್ಬ ವ್ಯಕ್ತಿ, ಚರ್ಚ್ ಅಥವಾ ರಾಷ್ಟ್ರದಲ್ಲಿ ಹರಡುತ್ತಾ, ಅಂತಿಮವಾಗಿ ಅದನ್ನು ಅತಿಕ್ರಮಿಸಿ ಅದರಲ್ಲಿ ಭಾಗಿಯಾದವರನೆಲ್ಲ ಅದರ ಬಂಧನಕ್ಕೆ ತಳ್ಳಿ ಅಂತಿಮವಾಗಿ ಮರಣ ತರುತ್ತದೆ (ಗಲಾತ್ಯ 5:9).
ಪಸ್ಕದ ಸಮಯದಲ್ಲಿ, ಯಹೂದಿಗಳು ತಮ್ಮ ಮನೆಗಳಿಂದ ಎಲ್ಲಾ ಹುಳಿಯನ್ನು (ಯೀಸ್ಟ್) ತೆಗೆದುಹಾಕಬೇಕೆಂದು ಸೂಚಿಸಲಾಗಿದ್ದು(ವಿಮೋಚನಕಾಂಡ 12:15), ಇದು ಅವರ ಜೀವನದಿಂದ ಪಾಪವನ್ನು ತೆಗೆದುಹಾಕುವುದನ್ನು ಸೂಚಿಸುತ್ತದೆ. ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ತಮ್ಮ ಮನೆಗಳನ್ನು ಶುದ್ಧೀಕರಿಸಿದ್ದರೇ ಹೊರತು ಅವರ ಹೃದಯಗಳನ್ನಲ್ಲ.
"ಬಹು ಜಾಗ್ರತೆಯಿಂದ ನಿನ್ನ ಹೃದಯವನ್ನು ಕಾಪಾಡಿಕೋ; ಏಕೆಂದರೆ ಅದರೊಳಗಿಂದ ನಿನ್ನ ಕೃತ್ಯಗಳು ಜೀವಧಾರೆಯಾಗಿ ಹೊರಡುತ್ತವೆ. ಎಂದುಜ್ಞಾನೋಕ್ತಿಗಳು 4:23 ನಮಗೆ ನೆನಪಿಸುತ್ತದೆ. ಪ್ರಧಾನ ಯಾಜಕರು ಮತ್ತು ಶಾಸ್ತ್ರಿಗಳು ಧಾರ್ಮಿಕ ಆಚರಣೆಗಳನ್ನು ದೋಷರಹಿತವಾಗಿ ನಿರ್ವಹಿಸಿದರೂ, ಅವರು ತಮ್ಮ ಹೃದಯಗಳನ್ನು ರಕ್ಷಿಸುವ ಪ್ರಾಥಮಿಕ ಜವಾಬ್ದಾರಿಯನ್ನು ಪೂರೈಸುವಲ್ಲಿ ವಿಫಲರಾದರು.
ಅವರು ದೇವರಿಗೆ ಭಯಪಡದೆ ಜನರಿಗೆ ಭಯಪಟ್ಟರು. ಈ ತಪ್ಪಾದ ಭಯವು ಯಾವುದೆಂದು ಜ್ಞಾನೋಕ್ತಿ 29:25 ವಿವರಿಸುತ್ತದೆ, "ಖಂಡಿತವಾಗಿಯೂ ಮನುಷ್ಯನ ಭಯವು ಒಂದು ಉರುಲಾಗಿರುವುದು; ಯೆಹೋವ ದೇವರಲ್ಲಿ ಭರವಸವಿಡುವವನು, ಸಂರಕ್ಷಣೆ ಹೊಂದುವನು." ನಾವು ದೇವರಿಗಿಂತ ಮನುಷ್ಯರ ಅಭಿಪ್ರಾಯಗಳು ಮತ್ತು ತೀರ್ಪುಗಳಿಗೆ ಆದ್ಯತೆ ನೀಡಿದಾಗ, ನಾವು ಆತ್ಮೀಕ ಅವನತಿಗೆ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿದ್ದೇವೆ.
ಮತ್ತಾಯ 10:28 ರಲ್ಲಿ ಯೇಸು ಹೀಗೆ ಹೇಳುತ್ತಾನೆ, "ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ." ಪ್ರಧಾನ ಯಾಜಕರು ಮತ್ತು ಶಾಸ್ತ್ರಿಗಳು ದೇವರ ಭಯಕ್ಕಿಂತ ಹೆಚ್ಚಾಗಿ ಜನರ ಭಯದ ಆಧಾರದ ಮೇಲೆ ವರ್ತಿಸುವುದನ್ನೇ ಆರಿಸಿಕೊಂಡರು. ಅವರ ಧಾರ್ಮಿಕ ಬಾಹ್ಯಾಚರಣೆಯು ದೋಷರಹಿತವಾಗಿತ್ತು, ಆದರೆ ಆಂತರಿಕವಾಗಿ, ಅವರು ಯೇಸು ವಿವರಿಸಿದಂತೆ, " ಏಕೆಂದರೆ ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ. ಆದರೆ ಒಳಗೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರುತ್ತವೆ." (ಮತ್ತಾಯ 23:27).
ಅವರನ್ನು ಟೀಕಿಸುವುದು ಸುಲಭ, ಆದರೆ ನಾವು ಸಹ ದೇವರ ಅಭಿಪ್ರಾಯಗಳಿಗಿಂತ ಜನರ ಅಭಿಪ್ರಾಯಗಳಿಗೆ ಎಷ್ಟು ಬಾರಿ ಈ ರೀತಿ ಆದ್ಯತೆ ನೀಡಿದ್ದೇವೆ ಅಲ್ಲವೇ? ಸ್ವೀಕಾರ, ಪ್ರಶಂಸೆ ಅಥವಾ ಪ್ರಗತಿಗಾಗಿ ನಮ್ಮ ನಂಬಿಕೆಗಳನ್ನು ರಾಜಿ ಮಾಡಿಕೊಳ್ಳುವ ಎಷ್ಟು ಕ್ಷಣಗಳಿಲ್ಲ? ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳಂತೆ, ನಾವು ಎಂದಾದರೂ ನಮ್ಮ ಹೊರತೋರಿಕೆ ಮೇಲೆ ಹೆಚ್ಚು ಗಮನಹರಿಸಿ, ನಮ್ಮ ಹೃದಯದ ಸ್ಥಿತಿಯನ್ನು ನಿರ್ಲಕ್ಷಿಸಿದ್ದೇವಾ?
ನಾವು ನಮ್ಮ ಹೃದಯದ ಸ್ಥಿತಿಯನ್ನು ಪ್ರತಿಬಿಂಬಿಸುವಾಗ, ಕೇವಲ ಧಾರ್ಮಿಕ ಶುಚಿತ್ವಕ್ಕಾಗಿ ಅಲ್ಲ, ನಿಜವಾದ ರೂಪಾಂತರಕ್ಕಾಗಿ ಶ್ರಮಿಸೋಣ. ಇದು ಮನುಷ್ಯನಿಗೆ ಭಯಪಡುವ ಕುರಿತಾಗಲೀ ಅಥವಾ ಅವರ ಅನುಮೋದನೆಯನ್ನು ಪಡೆಯುವ ಕುರಿತಾಗಲೀ ಅಲ್ಲ. ನಮ್ಮ ಹೃದಯಗಳು ಕರ್ತನ ಬಗ್ಗೆ ಭಕ್ತಿಪೂರ್ವಕ ಭಯ ಮತ್ತು ಆತನಿಗೆ ವಿಧೇಯತೆಯಿಂದ ಬದುಕುವ ಬಯಕೆಯಿಂದ ಆಕರ್ಷಿತವಾಗಬೇಕು. ಹಾಗೆ ಮಾಡುವಾಗ, ಪಾಪದ ಹುಳಿ ನಮ್ಮ ಹೃದಯದ ಕೋಣೆಗಳಿಗೆ ನುಸುಳದಂತೆ ಕಾಪಾಡಿಕೊಂಡು ಅದು ನಮ್ಮನ್ನು ದಾರಿ ತಪ್ಪಿಸುತ್ತಿಲ್ಲ ಎಂಬ ಖಚಿತತೆಯಲ್ಲಿರುತ್ತೇವೆ.
Bible Reading: John 10-11
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಪಾಪದ ಹುಳಿ ಮತ್ತು ಲೌಕಿಕ ಆಸೆಗಳನ್ನು ತೆಗೆದುಹಾಕಿ ನಮ್ಮ ಹೃದಯಗಳನ್ನು ಶುದ್ಧೀಕರಿಸು ಮನುಷ್ಯರ ಅನುಮೋದನೆಗಿಂತ ನಿನ್ನ ಚಿತ್ತಕ್ಕೆ ಆದ್ಯತೆ ನೀಡಲು ನಮಗೆ ಶಕ್ತಿಯನ್ನು ನೀಡು. ನಾವು ಮಾಡುವ ಎಲ್ಲದರಲ್ಲೂ ನಮ್ಮ ಜೀವನವು ನಿನ್ನನ್ನು ಮಹಿಮೆಪಡಿಸಲಿ. ಯೇಸುನಾಮದಲ್ಲಿ. ಆಮೆನ್.
Join our WhatsApp Channel
Most Read
● ದೇವರ ವಾಕ್ಯವು ನಿಮ್ಮನ್ನು ಬೇಸರಗೊಳಿಸಬಹುದೇ?● ಪ್ರವಾದನಾ ವಾಕ್ಯವನ್ನು ಸ್ವೀಕರಿಸಿದ ನಂತರ ಏನು ಮಾಡಬೇಕು?
● ಸುಂದರ ದ್ವಾರ
● ಆತ್ಮವಂಚನೆ ಎಂದರೇನು? - II
● ಮುಂದಿನ ಹಂತಕ್ಕೆ ಹೋಗುವುದು
● ದೇವರು ಒದಗಿಸುವನು
● ಭೂಮಿಗೆ ಉಪ್ಪಾಗಿದ್ದೀರಿ
ಅನಿಸಿಕೆಗಳು
