"ಆದದರಿಂದ ನಾವು ಧೈರ್ಯಗೆಡುವದಿಲ್ಲ. ನಮ್ಮ ದೇಹವು ನಾಶವಾಗುತ್ತಾ ಇದ್ದರೂ ನಮ್ಮ ಆಂತರ್ಯವು ದಿನೇದಿನೇ ಹೊಸದಾಗುತ್ತಾ ಬರುತ್ತದೆ.ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ.ನಾವು ಕಾಣುವಂಥದನ್ನು ಲಕ್ಷಿಸದೆ ಕಾಣದಿರುವಂಥದನ್ನು ಲಕ್ಷಿಸುವವರಾಗಿದ್ದೇವೆ. ಕಾಣುವಂಥದು ಸ್ವಲ್ಪಕಾಲ ಮಾತ್ರ ಇರುವದು; ಕಾಣದಿರುವಂಥದು ಸದಾಕಾಲವೂ ಇರುವದು."(2 ಕೊರಿಂಥದವರಿಗೆ 4:17-18)
ನಿಜವಾಗಿಯೂ ಕೃಪೆಯು ನಮ್ಮ ಯಾವುದೇ ಸ್ವಂತ ಪ್ರಯತ್ನದಲ್ಲಿ ಮಾಡಿದ ಕಾರ್ಯಗಳ ಆಧಾರದ ಮೇಲೆ ದೊರಕದೇ ನಮಗೆ ದೇವರ ಬಲದಿಂದ ದೊರಕುವ ನಮಗೆ ತಕ್ಕದಲ್ಲದ ದಯೆ ಆಗಿದೆ. ಆದರೆ ನಾವು ದೇವರಲ್ಲಿ ಬೆಳೆಯುತ್ತಾ ಹೋದಂತೆ ಕೃಪೆಯು ಒಂದೊಂದೇ ಎಳೆ ಎಳೆಯಾಗಿ ಒಂದು ಸ್ತರದಿಂದ ಮತ್ತೊಂದು ಸ್ತರಕ್ಕೆ
ಚಲಿಸುತ್ತಾ ನಮ್ಮನ್ನು ಕರೆದೊಯ್ಯುತ್ತದೆ. ಒಂದು ಸುಂದರವಾದ ವಿಷಯವೇನೆಂದರೆ, ನಿಮ್ಮ ಪ್ರಸ್ತುತ ಅಗತ್ಯತೆಗಳು ನಿಮ್ಮ ಹಾಗೂ ದೇವರ ನಡುವಿನ ಪ್ರಸ್ತುತ ಅನ್ಯೋನ್ಯತೆಯ ಆಧಾರದಲ್ಲಿಯೇ ತೆರೆದುಕೊಳ್ಳುವಂಥದ್ದಾಗಿದೆ. ಸಂಕಟಗಳ ಸಮಯದಲ್ಲಿ ತಾಳ್ಮೆಯ ರೂಪದಲ್ಲಿ ಕೃಪೆಯು ತೆರೆದುಕೊಳ್ಳುತ್ತದೆ. ಹತಾಶೆಯ ಸಮಯದಲ್ಲಿ ದೇವರನ್ನು ವಿಶ್ವಾಸಿಸುವ ದೇವರನ್ನು ನಿರೀಕ್ಷಿಸುವ ಕೃಪೆಯ ರೂಪದಲ್ಲಿ ತೆರೆದುಕೊಳ್ಳುತ್ತದೆ. ಹಾಗೆಯೇ ಇತರ ಸಮಯಗಳಲ್ಲಿ ಅದಕ್ಕೆ ತಕ್ಕಂತೆ ನಿಮಗೆ ಅಗತ್ಯವಿರುವ ಸಮಾಯೋಚಿತ ಸಹಾಯದ ರೂಪದಲ್ಲಿ ಕೃಪೆಯ ಪದರಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಯೋಹಾನ 1:16ರಲ್ಲಿ ಸತ್ಯವೇದವು ಇನ್ನೂ ಮುಂದುವರೆದು ಹೇಳುವುದೇನೆಂದರೆ "ನಾವೆಲ್ಲರು ಆತನ ಪರಿಪೂರ್ಣತೆಯೊಳಗಿಂದ ಕೃಪೆಯ ಮೇಲೆ ಕೃಪೆಯನ್ನು ಹೊಂದಿದೆವು."ಎಂದು. ದೇವರ ಸರ್ವ ಸಂಪೂರ್ಣತೆಯಲ್ಲಿ ಮತ್ತು ಅನಂತತೆಯಲ್ಲಿ ನಾವು ಕೃಪೆಯನ್ನು ಹೊಂದಿಕೊಂಡಿದ್ದೇವೆ. ಆದರೆ ಅದು ಕೇವಲ ಕೃಪೆಯಷ್ಟೇ ಆಗಿರದೇ ಕೃಪೆಯ ಮೇಲೆ ದೊರಕುವ ಕೃಪೆಯಾಗಿದೆ.
ಅಂದರೆ ನಾವು ಯಾವುದಾದರೂ ವಿಷಯಕ್ಕಾಗಿ ಅಥವಾ ಪರಿಸ್ಥಿತಿಗಾಗಿ ಕೃಪೆಯನ್ನು ಹೊಂದಿಕೊಂಡಾಗ ನಾವು ಸ್ವೀಕರಿಸಿದ ಕೃಪೆಯನ್ನು ನಾವು ಚೆನ್ನಾಗಿ ಬಳಸಿಕೊಳ್ಳಲು ಮತ್ತು ಅದಕ್ಕಾಗಿ ಸ್ತುತಿಸಲು ಸಾಧ್ಯವಾಗುವಂತೆ ಆತನು ನಮಗೆ ಮತ್ತೊಂದು ಕೃಪೆಯ ಪದರವನ್ನು ತೆರೆದಿಡುತ್ತಾನೆ. ನಾವು ಕೃಪೆಯಲ್ಲಿ ನಡೆಯಲೂ ನಮಗೆ ಕೃಪೆ ಬೇಕು! ಮತ್ತು ಆ ಕೃಪೆಯು ದೇವರಿಂದಲೇ, ಆತನಿಗಾಗಿಯೇ ಪೂರೈಸಲ್ಪಟ್ಟದಾಗಿದ್ದು ಆ ಕೃಪೆಯು ಮತ್ತೂ ಹೆಚ್ಚು ಹೆಚ್ಚಾಗಿ ಅನುಗ್ರಹಿಸುವಂತಾದ್ದಾಗಿದೆ.
"ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ." ಎಂದು ಇಬ್ರಿಯರಿಗೆ 4:16 ರಲ್ಲಿ ಸತ್ಯವೇದದಲ್ಲಿ ಚರ್ಚಿಸಲಾದ ಕೃಪೆಯ ಪರಿಕಲ್ಪನೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಜೀವನದಲ್ಲಿ ಕೆಲವೊಮ್ಮೆ ಗೋಡೆಗಳ ಮಧ್ಯದಲ್ಲಿ ಇರುಕಿಸುವ ಸಂದರ್ಭಗಳಲ್ಲಿ ಇರುವಾಗ ಜೀವನವು ನಮ್ಮನ್ನು ಪರೀಕ್ಷೆಗೆ ಒಳಪಡಿಸುತ್ತದೆ. ಆಗ ನಾವು ಮೂಲೆಗುಂಪಾಗಿದ್ದೇವೆ ನಾವಿನ್ನು ಏನೂ ಮಾಡಲಾರದ ಸ್ಥಿತಿಯಲ್ಲಿದ್ದೇವೆ ಎನ್ನುವ ಸಂದರ್ಭ ಬರುತ್ತದೆ. ಆಗ ದೇವರ ಕರುಣೆಯನ್ನು ಹೊಂದುವಂತೆಯೂ ಸಮಯೊಚಿತವಾದಂತಹ ಸಹಾಯವನ್ನು ಹೊಂದುವಂತೆಯೂ ಆತನ ಕೃಪಾಸನದ ಮುಂದೆ ಧೈರ್ಯವಾಗಿ ಬರಲು ನಮಗೆ ಕೃಪೆ ಬೇಕು.
ನಮ್ಮ ಜೀವನದ ಎಂತಹದೇ ಸಮಸ್ಯೆಗಳಲ್ಲಾಗಲಿ ನಾವು ಕೃಪೆಯೇ ನರಾವತಾರ ಎತ್ತಿದ -ಯೇಸುವಿನ ಮುಖ ನೋಡಲು, ಆ ಸಮಸ್ಯೆಗಳ ಮೇಲೆ ಜಯ ಸಾಧಿಸಲು ಕೃಪೆಯನ್ನು ಹೊಂದಿಕೊಳ್ಳಬೇಕಾಗುತ್ತದೆ. ಈ ಕೃಪೆಯು ಕೃಪೆಯಲ್ಲಿಯೇ ಮುಗಿದು ಹೋಗುವುದಿಲ್ಲ!. ಒಂದೊಂದು ಹಂತದ ಕೃಪೆಯನ್ನು ದಾಟುತ್ತಾ ಹೋದಂತೆ ವಿಲಕ್ಷಣ ಎನಿಸಿಕೊಳ್ಳುವಂತಹ ಮತ್ತೊಂದು ಪದರದ ಕೃಪೆಯು ತೆರೆದುಕೊಳ್ಳುತ್ತಾ ಹೋಗುತ್ತದೆ. ನೋಡಿರಿ, ಕೃಪೆ ಇಲ್ಲದೆ ನಮ್ಮ ನಂಬಿಕೆಯು ನಿರರ್ಥಕವಾದದ್ದೆ.
ಇಂದಿನಿಂದ ನೀವು ಹೊರಗೆ ಹೋಗುವಲ್ಲೆಲ್ಲಾ ದೇವರ ಕೃಪೆಯ ಮೇಲೆ ಆಧಾರಗೊಳ್ಳಬೇಕು. ಆಗ ನಿಮ್ಮ ಜೀವನದಲ್ಲೆಲ್ಲಾ ಆತನ ಕೃಪೆಯೇ ನಿಮಗೆ ಸಹಾಯ ಮಾಡಬಲ್ಲದು.
ಪ್ರಾರ್ಥನೆಗಳು
ಕರ್ತನೇ, ನಾನಿಂದು ಹೊರಗೆ ಹೋಗುವಲೆಲ್ಲಾ ನನ್ನ ಪ್ರತಿಯೊಂದು ಅಗತ್ಯದ ಪ್ರತಿಯೊಂದು ಹಂತದಲ್ಲೂ ನಿನ್ನ ಕೃಪೆಯೇ ನನಗೆ ಬೇಕಾದ ಸಹಾಯ ಮಾಡಲೆಂದು ಪ್ರಾರ್ಥಿಸುತ್ತೇನೆ. ನಾನು ಕೃಪೆಯನ್ನು ಹೊಂದುವಂತೆ ನಿನ್ನನ್ನು ಮನಪೂರ್ವಕವಾಗಿ ಹುಡುಕುವ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು.ಆಮೆನ್.
Join our WhatsApp Channel
Most Read
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ
ಅನಿಸಿಕೆಗಳು