ಅನುದಿನದ ಮನ್ನಾ
ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ
Thursday, 1st of August 2024
2
0
159
Categories :
ಪಶ್ಚಾತ್ತಾಪ (Repentance)
“ಪಾಳು ಬಿದ್ದಿರುವ ನಿಮ್ಮ ಭೂಮಿಯನ್ನು ಉತ್ತು ಹದಮಾಡಿ,..(ಯೆರೆ 4:3)
ನಾವು ಸಾಮಾನ್ಯವಾಗಿ ಅತಿ ಬೇಗನೆ ಬೇರೆಯವರ ಕೊರತೆಗಳನ್ನು ಮತ್ತು ತಪ್ಪುಗಳನ್ನು ಕಂಡುಹಿಡಿಯುವವರಾಗಿರುತ್ತೇವೆ. ಇತರ ಜೀವನದಲ್ಲಿ ಯಾವ ಕ್ಷೇತ್ರಗಳಿಗಾಗಿ ಪ್ರಾರ್ಥಿಸಬೇಕು ಅದಕ್ಕೆಲ್ಲಾ ಪ್ರಾರ್ಥಿಸುತ್ತೇವೆ. ಆದಾಗಿಯೂ ಇಂದು ಇದು ನಮ್ಮ ಹೃದಯಗಳನ್ನು ಪರೀಕ್ಷಿಸಿಕೊಳ್ಳುವ ಕಾಲವಾಗಿದೆ.
ಪಾಳು ಬಿದ್ದ ಭೂಮಿಯು ವ್ಯವಸಾಯ ಮಾಡದ ಭೂಮಿಯಾಗಿದೆ. ವಿಶೇಷವಾಗಿ ಈ ಭೂಮಿಯು ಮೊದಲು ಉಳುಮೆಯಾಗುತ್ತಿತ್ತು. ಆದರೆ ಈಗ ತಿಂಗಳುಗಟ್ಟಲೆಯಿಂದ ಹಾಗೆಯೇ ನಿಷ್ಕ್ರಿಯವಾಗಿ ಬಿಟ್ಟುಬಿಟ್ಟಿದೆ. ಅಂತಹ ನೆಲದಲ್ಲಿ ಉಳುಮೆ ಮಾಡುವುದು ಕಷ್ಟಕರ. ಪಾಳು ನೆಲವನ್ನು ಮತ್ತೆ ಹದ ಮಾಡುವವರೆಗೂ ಉಪಯುಕ್ತವಾದ ಯಾವುದನ್ನೂ ಸಹ ಅಲ್ಲಿ ಬೆಳೆಯಲು ಸಾಧ್ಯವಿಲ್ಲ.
ನಮ್ಮ ಹೃದಯವು ಸಹ ಕೆಲವೊಮ್ಮೆ ಈ ರೀತಿಯ ಹದ ಮಾಡದ ಭೂಮಿಯ ಹಾಗೆ ಆಗಿಬಿಟ್ಟಿರುತ್ತದೆ. ಬಹುಶಃ ನೀವು ನಿಮ್ಮ ತಂದೆ ಅಥವಾ ತಾಯಿಯ (ಅಥವಾ ನಿಮ್ಮ ಹತ್ತಿರದವರ) ಸ್ವಸ್ಥತೆಗಾಗಿ ಕರ್ತನಲ್ಲಿ ಪ್ರಾರ್ಥಿಸಿದ್ದಿರಬಹುದು. ಭರವಸೆಯೂ ಇಟ್ಟಿದ್ದಿರಬಹುದು. ಆದರೆ ಅವರು ಸ್ವಸ್ತತೆ ಹೊಂದದೆ ಹೋಗಿದ್ದಿರಬಹುದು. ನಿಮ್ಮ ಕುಟುಂಬದಲ್ಲಿ ನೀವು ಅಥವಾ ಯಾರೋ ಒಬ್ಬರು ಕೆಲಸವಿಲ್ಲದೆ ತಿಂಗಳುಗಟ್ಟಲೆಯಿಂದ ಕೂತಿರಬಹುದು. ಇದು ನಿಮ್ಮ ನಂಬಿಕೆಯನ್ನೇ ಪ್ರಶ್ನಿಸುತ್ತಿರಬಹುದು. ಬಹುಶಃ ನೀವು ದೀರ್ಘಕಾಲದಿಂದ ನಿಮ್ಮ ಸಂಬಂಧಗಳ ವಿಚಾರದಲ್ಲಿ ವೈಮನಸ್ಯ ಹೊಂದಿರಬಹುದು. ಈಗ ನೀವು ದೇವರು ಪ್ರಾರ್ಥನೆಗೆ ಉತ್ತರ ಕೊಡುವುದಿಲ್ಲ. ವಿಶೇಷವಾಗಿ ನಿಮಗೆ ಕೊಡುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರಬಹುದು.
ದೇವರು ಹೊಸದಾದ ಮತ್ತು ಫಲ ಕೊಡುವಂತಹ ಸಂಗತಿಗಳನ್ನು ನಿಮ್ಮ ಹೃದಯದಲ್ಲಿ ಬಿತ್ತಬೇಕಾದರೆ ಮೊದಲು ನಿಮ್ಮ ಅಪನಂಬಿಕೆಯಿಂದಾದ ಗಡಸುತನವನ್ನು ಒಡೆದು ನಿಮ್ಮ ಹೃದಯವನ್ನು ಹಸನುಗೊಳಿಸಬೇಕು. ಇದಕ್ಕೆ ಹೃದಯಪೂರ್ವಕವಾಗಿ ಮಾನಸಂತರ ಪಡುವುದು ಮತ್ತು ಪಾಪದ ಹರಿಕೆಯನ್ನು ಮಾಡುವಂತದ್ದು ಆಳವಾಗಿ ಉತ್ತುವಂತಹ ಒಂದು ಮಾರ್ಗವಾಗಿದೆ.
"ಮುಳ್ಳಿನ ನಡುವೆ ಬಿತ್ತಬೇಡಿರಿ "(ಯೆರೆ 4:3) ಸತ್ಯವೇದವು ಏಕಕಾಲದಲ್ಲಿ ಬಿತ್ತನೆ ಮಾಡಲೂ ಉತ್ತೇಜಿಸುತ್ತದೆ. ಅದೇ ಸಮಯದಲ್ಲಿ ಮುಳ್ಳಿನ ನಡುವೆ ಬಿತ್ತಬಾರದೆಂದು ಧೈರ್ಯಗೆಡಿಸುತ್ತದೆ.
ನಮ್ಮ ಹೃದಯದ ಹೊಲದಲ್ಲಿರುವ ಮುಳ್ಳುಗಳೇ ನಮ್ಮನ್ನು ನಿಷ್ಪಲರನ್ನಾಗಿ ಮಾಡುತ್ತದೆ? ಬಿತ್ತುವವನ ಸಾಮ್ಯದಲ್ಲಿ ಮನುಷ್ಯನ ಹೃದಯದ ಸ್ಥಿತಿಯನ್ನು ವಿವರಿಸಲು ಯೇಸುಸ್ವಾಮಿಯು ಹೊಲದಲ್ಲಿರುವ ಮುಳ್ಳು ಗಿಡವನ್ನು ಉಪಯೋಗಿಸಿದ್ದಾನೆ.
"ಒಬ್ಬನು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಯೂ ಐಶ್ವರ್ಯದಿಂದುಂಟಾಗುವ ಮೋಸವೂ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ, ಫಲವನ್ನು ಕೊಡದೆ ಇರುತ್ತಾನೆ; ಇವನೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವನು."(ಮತ್ತಾಯ 13:22)
"ಇನ್ನು ಕೆಲವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ ಐಶ್ವರ್ಯದಿಂದುಂಟಾಗುವ ಮೋಸವೂ ಇತರ ವಿಷಯಗಳ ಮೇಲಣ ಆಶೆಗಳೂ ಒಳಗೆ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ ಫಲವನ್ನು ಕೊಡದೆ ಇರುತ್ತಾರೆ; ಇವರೇ ಮುಳ್ಳುಗಿಡಗಳಲ್ಲಿ ಬೀಜಬಿದ್ದ ನೆಲವಾಗಿರುವವರು."(ಮಾರ್ಕ 4:18-19)
"ಬೇರೆ ಕೆಲವರು ವಾಕ್ಯವನ್ನು ಕೇಳಿದ ಮೇಲೆ ಬರಬರುತ್ತಾ ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗಗಳಿಂದ ಅಡಗಿಸಲ್ಪಟ್ಟು ಫಲವನ್ನು ಮಾಗಿಸುವದಿಲ್ಲ; ಇವರೇ ಮುಳ್ಳುಗಿಡಗಳಲ್ಲಿ ಬೀಜ ಬಿದ್ದ ನೆಲವಾಗಿರುವವರು."(ಲೂಕ 8:14)
ಈ ಮೇಲಿನ ಮೂರೂ ವಾಕ್ಯಗಳಿಂದ ನಾಲ್ಕು ಸಂಗತಿಗಳು ತಿಳಿದು ಬರುತ್ತವೆ.
1) ಜೇವನದ ಚಿಂತೆಗಳು.
2) ಐಶ್ವರ್ಯದಿಂದಾಗುವ ಮೋಸಗಳು
3)ಲೋಕ ಸಂಗತಿಗಳಿಗೆ ಗಡಿಬಿಡಿ ಮಾಡುವುದು
4) ಐಶ್ವರ್ಯ ಮತ್ತು ಭೋಗಗಳು.
ನಿಮ್ಮ ಹೃದಯದ ಪರಿಸ್ಥಿತಿಗೆ ಅನುಗುಣವಾಗಿ ಆ ಮುಳ್ಳುಗಳು ಲೈಂಗಿಕ ತೃಷೆಯನ್ನೊ, ಕಾಮದಾಶೆಯನ್ನೋ ಪ್ರತಿನಿಧಿಸುತ್ತಿರಬಹುದು. ಭೋಗಾಸಕ್ತಿ, ಹೆಮ್ಮೆ, ಕೋಪ, ಸ್ವಾರ್ಥ, ಮನೋರಂಜನೆಯ ಮೇಲಿನ ಅಜಾಗ್ರತೆಯ ಪ್ರೇಮ, ಮೋಜು -ಮಸ್ತಿ, ಚಟಗಳು, ದುರಾಸೆಯು ಮತ್ತಿತರ ಮುಳ್ಳುಗಳಾಗಿರಬಹುದು.ಇಲ್ಲಿರುವ ಪ್ರತಿಯೊಂದೂ ಸಹ ದೇವರ ವಾಕ್ಯವನ್ನು ಚುಚ್ಚಿ ಬಾಧಿಸುವಂತಹುಗಳಾಗಿವೆ. ಇಲ್ಲಿರುವ ಪ್ರತಿಯೊಂದೂ ಸಹ ದೇವರು ನನ್ನ ಹಾಗೂ ನಿಮ್ಮೊಳಗೆ ಬೆಳಸಲು ಇಚ್ಚಿಸುವ ಬೆಳೆಯ ಮೇಲೆ ವಿನಾಶಕಾರಿಯದ ಪರಿಣಾಮವನ್ನು ಉಂಟು ಮಾಡುವಂತಹವುಗಳಾಗಿವೆ.
"ನೀತಿಯ ಬೀಜವನ್ನು ಬಿತ್ತಿರಿ, ಪ್ರೀತಿಯ ಫಲವನ್ನು ಕೊಯ್ಯಿರಿ, ಗೆಯ್ಯದ ನಿಮ್ಮ ಭೂವಿುಯನ್ನು ಗೆಯ್ಯಿರಿ; ಯೆಹೋವನು ಬಂದು ನಮ್ಮ ಮೇಲೆ ನೀತಿಯನ್ನು ವರ್ಷಿಸಲೆಂದು ಆತನನ್ನು ಶರಣುಹೊಗುವ ಸಮಯವು ಒದಗಿದೆ."(ಹೋಶೇಯ 10:12)
ನೀವು ಕಡೆಯದಾಗಿ ಕರ್ತನ ಮುಂದೆ ಮೊಣಕಾಲೂರಿ ಕಣ್ಣೀರಿಟ್ಟು ಹೃದಯ ಒಡೆದು ಪ್ರಾರ್ಥಿಸಿದ್ದು ಯಾವಾಗ? ನೀವು ಆತನಿಗೆ ನಿಮ್ಮ ಹೃದಯವನ್ನು ಉತ್ತು ಹದ ಮಾಡುವಂತೆ ನಿಮ್ಮ ಜೀವನದ ಕ್ಷೇತ್ರಗಳಲ್ಲಿ ಅನುಮತಿಸುವಿರಾ? ನೀವು ಆತನ ಸ್ವರಕ್ಕೇ ವಿಧೇಯರಾಗುವಿರಾ?
ಪ್ರಾರ್ಥನೆಗಳು
1. ತಂದೆಯೇ, ನಿನ್ನ ವಾಕ್ಯ ಹೇಳುತ್ತದೆ "ಜ್ಞಾನವೇ ಮೂಲ ಸಾಧನ"ವೆಂದು. ಯೇಸುವಿನ ನಾಮದಲ್ಲಿ ಉಳುಮೆ ಮಾಡದಂತ ನನ್ನ ಹೃದಯವನ್ನು ಉತ್ತು ಹಸನು ಮಾಡುವಂತಹ ಜ್ಞಾನವನ್ನು ನನಗೆ ಅನುಗ್ರಹಿಸು.
2. ತಂದೆಯೇ, ನಿನ್ನ ವಾಕ್ಯ ಹೇಳುತ್ತದೆ "ನನ್ನ ತಂದೆಯು ನೆಡದಂತ ಪ್ರತಿಯೊಂದು ಸಹ ಬೇರು ಸಮೇತ ನಿರ್ಮೂಲವಾಗಲಿ" ಎಂದು. ಹಾಗಾಗಿ ನನ್ನಲ್ಲಿ ಫಲ ಕೊಡದಂತೆ ತಡೆಯುತ್ತಿರುವ ಎಲ್ಲಾ ಸಂಗತಿಗಳನ್ನು ಯೇಸು ನಾಮದಲ್ಲಿ ನಿರ್ಮೂಲಗೊಳಿಸು. ಆಮೆನ್.
2. ತಂದೆಯೇ, ನಿನ್ನ ವಾಕ್ಯ ಹೇಳುತ್ತದೆ "ನನ್ನ ತಂದೆಯು ನೆಡದಂತ ಪ್ರತಿಯೊಂದು ಸಹ ಬೇರು ಸಮೇತ ನಿರ್ಮೂಲವಾಗಲಿ" ಎಂದು. ಹಾಗಾಗಿ ನನ್ನಲ್ಲಿ ಫಲ ಕೊಡದಂತೆ ತಡೆಯುತ್ತಿರುವ ಎಲ್ಲಾ ಸಂಗತಿಗಳನ್ನು ಯೇಸು ನಾಮದಲ್ಲಿ ನಿರ್ಮೂಲಗೊಳಿಸು. ಆಮೆನ್.
Join our WhatsApp Channel
Most Read
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1● ಕೃಪೆಯಲ್ಲಿ ಬೆಳೆಯುವುದು
● ಅತ್ಯಂತ ಸಾಮಾನ್ಯ ಭಯಗಳು
● ಪರಿಣಾಮಕಾರಿಯಾಗಿ ಸತ್ಯವೇದವನ್ನು ಓದುವುದು ಹೇಗೆ
● ಅಗ್ನಿಯು ಸುರಿಯಲ್ಪಡಬೇಕು
● ಅಪ್ಪನ ಮಗಳು - ಅಕ್ಷಾ
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು