ಬಹುತೇಕ ಸಮಯದಲ್ಲಿ ಚಿಕ್ಕ ಮಕ್ಕಳನ್ನು ಈ ಒಂದು ನಿರ್ದಿಷ್ಟ ವಿಚಾರಕ್ಕೆ ನಿದರ್ಶನವಾಗಿ ತೆಗೆದುಕೊಳ್ಳಲಾಗುತ್ತದೆ. ಚಿಕ್ಕ ಮಕ್ಕಳು ತಮ್ಮ ಪ್ರಶ್ನೆಗಳಿಗೆ ಮೊದಲು ತಾವು ಉತ್ತರಿಸದೇ ಇತರರ ಪ್ರಶ್ನೆಗಳಿಗೆ ಉತ್ತರ ಕೊಡಲು ಬಹಳ ಉತ್ಸುಕರಾಗಿರುತ್ತಾರೆ. ಉಪಾಧ್ಯಾಯರು ಉದಾಹರಣೆಗಳನ್ನು ಮಾದರಿಗಳನ್ನು ಉಪಯೋಗಿಸಿಕೊಂಡು ಪಾಠ ಹೇಳಿಕೊಡುವಾಗ ಅವರು ಆಸಕ್ತಿಯಿಂದ ಕೇಳಿ, ತಕ್ಷಣವೇ ಅದಕ್ಕೆ ಉತ್ತರ ಕೊಡುತ್ತಿರುತ್ತಾರೆ ಆದರೆ ಅವರಿಗೆ ವೈಯಕ್ತಿಕವಾಗಿ ಬೇರೆಯಾದ ಪ್ರಶ್ನೆಯನ್ನು ಕೊಟ್ಟಾಗ ಅದನ್ನು ಪರಿಹರಿಸಲು ಸಾಧ್ಯವಾಗದಂತ ಸಮಸ್ಯೆಯನ್ನು ಎದುರಿಸುತ್ತಾರೆ.
ಉದಾಹರಣೆಗಳ ಮೂಲಕ ಅದೇ ರೀತಿಯ ಲೆಕ್ಕಗಳನ್ನು ಯಾರ ಸಹಾಯವೂ ಇಲ್ಲದೆ ಆ ಮಕ್ಕಳು ಸ್ವತಂತ್ರವಾಗಿ ಪರಿಹರಿಸ ಬಲ್ಲವರಾಗಿರುತ್ತಾರೆ. ನಿಮ್ಮ ಸುತ್ತಲಿನ ಜನರು ಸಹ ಹೀಗೆಯೇ ಜೀವನದಲ್ಲಿ ಇವರಿಂದ ಏನಾದರೂ ಕಲಿಯಬಹುದಾ ಎಂದು ನಿಜ ಜೀವನದ ಆದರ್ಶವ್ಯಕ್ತಿಗಳನ್ನು ಹುಡುಕುತ್ತಿರುತ್ತಾರೆ. ನೀವು ಎಂದಾದರೂ ಇತರರು ನಿಮ್ಮನ್ನು ಯಾವುದಕ್ಕಾದರೂ ಅನುಕರಿಸುವಂತಹ ಸ್ಥಾನದಲ್ಲಿ ನಿಂತಿದ್ದೀರಾ? ಅದು ನೀವು ನಡೆಯುವ ಹಾಗೆ ನಡೆಯಲು ಅನುಕರಿಸುವಂಥದ್ದೋ, ನೀವು ನಗುವ ರೀತಿಯಲ್ಲಿ ನಗಲು ಅನುಕರಿಸುವಂಥದ್ದೋ ಅಥವಾ ನೀವು ಮಾತನಾಡುವ ಶೈಲಿಯಲ್ಲಿ ಮಾತನಾಡಲು ಅನುಸರಿಸುವಂತದ್ದೋ ಆಗಿರಬಹುದು.
ಯಾರಾದರೂ ನಿಮ್ಮನ್ನು ಅನುಕರಿಸಲು ಬಯಸುತ್ತಾರೆ ಎಂದು ತಿಳಿದುಕೊಳ್ಳುವುದು ಒಂದು ಹೆಮ್ಮೆಯ ಸಂಗತಿಯಾಗಿದ್ದರೂ ಅದೊಂದು ಪ್ರಮುಖ ಜವಾಬ್ದಾರಿಯೂ ಆಗಿರುತ್ತದೆ. ನಾನು ಒಂದು ಕಾರಿನ ಹಿಂಬದಿಯಲ್ಲಿ ಅಂಟಿಸಿದ ಸ್ಟಿಕರ್ ಅನ್ನು ನೋಡಿದೆ ಅದರಲ್ಲಿ "ನನ್ನನ್ನು ಹಿಂಬಾಲಿಸಬೇಡಿರಿ,ನಾನು ಸಹ ಕಳೆದು ಹೋಗಿದ್ದೇನೆ" ಎಂದು ಬರೆದಿತ್ತು. ದುರಾದೃಷ್ಟವಷಾತ್ಇದು ಇಂದಿನ ಪ್ರಪಂಚ ವ್ಯವಹಾರಗಳ ಸ್ಥಿತಿಯಾಗಿದ್ದು ಇಂದು ಅನೇಕ ಹಿತ -ಚಿಂತಕರು ಎಣಿಸುವ ಕ್ರೈಸ್ತರ ಸ್ಥಿತಿಯೂ ಆಗಿದೆ.
ಕ್ರೈಸ್ತರಾಗಿ ನೀವು ಮತ್ತು ನಾನು ಇತರರು ನಮ್ಮನ್ನು ಅನುಕರಣೆ ಮಾಡಲು ಯೋಗ್ಯವಾದ ಜೀವನ ಶೈಲಿಯನ್ನು ಜೀವಿಸುತ್ತಾ ಇತರರಿಗೆ ಮಾದರಿಯಾಗಿ ಇರಬೇಕೆಂದೇ ಕರೆಯಲ್ಪಟ್ಟಿದ್ದೇವೆ. ನಮ್ಮ ನಡೆಗಳು ನಮ್ಮ ನುಡಿಗಳು ನಾವು ಎಂತಹ ಮಹಿಮೆಯುಳ್ಳ ತಂದೆಯಾದ ದೇವರ ಕುಟುಂಬಕ್ಕೆ ಸೇರಿದ್ದೇವೆ ಎಂದು ಹೆಮ್ಮೆಯಿಂದ ಜನರಿಗೆ ಪ್ರಕಟಿಸುವಂತಿರಬೇಕು. ನಿಮ್ಮ ವಯಸ್ಸು ಎಂದು ಎಷ್ಟೇ ಇರಲಿ. ಅದು ಕೇವಲ ಸಂಖ್ಯೆ ಅಷ್ಟೇ. ಅಪೋಸ್ತಲನಾದ ಪೌಲನು ತಾನು ಕರ್ತನಲ್ಲಿ ನಡೆಸುತ್ತಿದ್ದ ತಿಮೋತಿಯನಿಗೆ ಬರೆದಿದ್ದೇನೆಂದರೆ "ಯೌವನಸ್ಥನೆಂದು ನಿನ್ನನ್ನು ಅಸಡ್ಡೆಮಾಡುವದಕ್ಕೆ ಯಾರಿಗೂ ಅವಕಾಶಕೊಡದೆ ನಂಬುವವರಿಗೆ ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ ನೀನೇ ಮಾದರಿಯಾಗಿರು. " ಎಂಬುದೇ (1 ತಿಮೊಥೆಯನಿಗೆ 4:12)
ಭಕ್ತಿ ಪೂರ್ವಕ ಮಾದರಿಯ ಜೀವಿತವನ್ನು ಜೀವಿಸುವಂಥದ್ದು ಅದೊಂದು ಆಯ್ಕೆ ಅಲ್ಲ ಅದು ಶಾಸ್ತ್ರಧಾರಿತ ಅಜ್ಞೆಯಾಗಿದೆ. "ಸತ್ಕಾರ್ಯಮಾಡುವದರಲ್ಲಿ ನೀನೇ ಮಾದರಿಯಾಗಿರು. ನೀನು ಮಾಡುವ ಉಪದೇಶದಲ್ಲಿ ಯಥಾರ್ಥತ್ವವೂ ಗೌರವವೂ ಆಕ್ಷೇಪಣೆಗೆ ಆಸ್ಪದವಿಲ್ಲದಂಥ ಸ್ವಸ್ಥಬುದ್ಧಿಯೂ ಇರಬೇಕು; ಆಗ ನಮ್ಮನ್ನು ಎದುರಿಸುವವರು ನಮ್ಮ ವಿಷಯದಲ್ಲಿ ಕೆಟ್ಟದ್ದೇನೂ ಹೇಳುವದಕ್ಕೆ ಅವಕಾಶವಿಲ್ಲದೆ ನಾಚಿಕೊಳ್ಳುವರು."(ತೀತನಿಗೆ 2:7-8).
ತೀತನು ಒಬ್ಬ ಕ್ರೈಸ್ತನು ಅನ್ನುವುದಕ್ಕಿಂತಲೂ ಹೆಚ್ಚಾಗಿ ಒಬ್ಬ ಆದರ್ಶ ವ್ಯಕ್ತಿಯಾಗಿ, ಮಾದರಿಯಾಗಿ ಇರಬೇಕು. ನಾವು ನಮ್ಮ ಕುಟುಂಬದಲ್ಲಿ, ಸಂಬಂಧಿಕರ ಮಧ್ಯದಲ್ಲಿ, ನಮ್ಮ ಸುತ್ತಲಿನ ಜನರ ಒಳಗೆ ಶಕ್ತಿಯುತವಾಗಿ ಪರಿಣಾಮ ಬೀರಲು ಇರುವ ಏಕೈಕ ಮಾರ್ಗವೆಂದರೆ, ನಾವು ನಂಬಿರುವುದಂತದ್ದಕ್ಕೇ ಮಾದರಿಯಾಗಿ ಜೀವಿಸುವಂತಹದ್ದಾಗಿದೆ. ಇದುವೇ ಶಕ್ತಿಯುತವಾದ ಆದರೆ ಮೂಲಭೂತವಾದ ನಿಯಮವಾಗಿದೆ. ಆದರೂ ನಾವು ಆಗಾಗ ಇದನ್ನು ಮರೆತು ಹೋಗುತ್ತೇವೆ. ಹಾಗಾಗಿ ನೀವೇ ಒಂದು ಮಾದರಿಯಾಗಿರ್ರಿ.
ಪ್ರಾರ್ಥನೆಗಳು
ತಂದೆಯೇ, ನೀನು ಯಾವಾಗಲೂ ನನಗೆ ಕಿವಿಗೊಡುವವನಾಗಿದ್ದೀಯ ಅದಕ್ಕಾಗಿ ನಿನಗೆ ಸ್ತೋತ್ರ. ನಾನು ನಡೆಯಲ್ಲಿಯೂ ನುಡಿಯಲ್ಲಿಯೂ ಇತರರಿಗೆ ಒಂದು ಬಲವಾದ ಮಾದರಿಯಾಗಿರುವಂತೆ ಯೇಸು ನಾಮದಲ್ಲಿ ನನ್ನನ್ನು ಮಾರ್ಪಡಿಸು. ಆಮೆನ್.
Join our WhatsApp Channel
Most Read
● ಮೂರು ನಿರ್ಣಾಯಕ ಪರೀಕ್ಷೆಗಳು● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ಅತ್ಯುನ್ನತವಾದ ರಹಸ್ಯ
● ಸಾಧನೆಯ ಪರೀಕ್ಷೆ.
ಅನಿಸಿಕೆಗಳು