ಅನುದಿನದ ಮನ್ನಾ
0
0
1
ಯೇಸು ಈಗ ಪರಲೋಕದಲ್ಲಿ ಏನು ಮಾಡುತ್ತಿದ್ದಾನೆ?
Sunday, 10th of August 2025
Categories :
ಪ್ರಾರ್ಥನೆ (prayer)
ಮಧ್ಯಸ್ತಿಕೆ ಪ್ರಾರ್ಥನೆ (Intercession)
ಕರ್ತನಾದ ಯೇಸು ಕ್ರಿಸ್ತನು ಈಗ ನಿಮಗಾಗಿ ಮತ್ತು ನನಗಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದಾನೆಂದು ನಿಮಗೆ ತಿಳಿದಿದೆಯೇ?
"ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವುದಕ್ಕೆ ಶಕ್ತನಾಗಿದ್ದಾನೆ. ಯಾಕೆಂದರೆ ಅವರಿಗೋಸ್ಕರ ವಿಜ್ಞಾಪನೆ ಮಾಡುವುದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ." ಎಂದು ಇಬ್ರಿಯ 7:25 ನಮಗೆ ಹೇಳುತ್ತದೆ.
ಮತ್ತು " ನಮ್ಮನ್ನು ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತ ಯೇಸು ಮರಣವನ್ನು ಹೊಂದಿದ್ದಲ್ಲದೆ ಜೀವಿತನಾಗಿ ಎದ್ದು ದೇವರ ಬಲಗಡೆಯಲ್ಲಿದ್ದು ನಮಗೋಸ್ಕರ ಬೇಡುವವನಾಗಿದ್ದಾನೆ."ಎಂದು ರೋಮನ್ನರು 8:34 ನಮಗೆ ಹೇಳುತ್ತದೆ.
ಯೇಸು ಕ್ರಿಸ್ತನು ಸತ್ತವರೊಳಗಿಂದ ಪುನರುತ್ಥಾನಗೊಂಡ ನಂತರ, ಯೇಸುವಿನ ಸೇವೆಯು ಮಧ್ಯಸ್ಥಿಕೆಯಾಗಿದೆ. ಮಧ್ಯಸ್ಥಿಕೆಯ ಸೇವೆಯು ಯೇಸುವಿನ ಸೇವೆಯಾಗಿದ್ದರೆ, ಅದು ನಮ್ಮ ಸೇವೆಯೂ ಆಗಿರಬೇಕು. ಮಧ್ಯಸ್ಥಿಕೆಯ ಸೇವೆಯು ಅಂತ್ಯಕಾಲದ ಸೇವೆಯಾಗಿದೆ. ಯೇಸು ತಂದೆ ದೇವರ ಸಿಂಹಾಸನದ ಮುಂದೆ ಮಧ್ಯಸ್ಥಿಕೆ ವಹಿಸುತ್ತಿದ್ದಾನೆ ಎಂಬ ಅಂಶವು ಯೇಸು ಜೀವಂತವಾಗಿದ್ದಾನೆ ಮತ್ತು ತಂದೆಯಿಂದ ನಮ್ಮ ಪರಿಪೂರ್ಣ ಮಹಾಯಾಜಕನಾಗಲು ಅಧಿಕಾರವನ್ನು ಪಡೆದಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ.
ಹಳೆಯ ಒಡಂಬಡಿಕೆಯಲ್ಲಿ, ಜನರ ಪರವಾಗಿ ಕಾರ್ಯನಿರ್ವಹಿಸಲು ಮಹಾಯಾಜಕರನ್ನು ನೇಮಿಸಲಾಗಿತಿತ್ತು.
1. ಅವರು ಇಸ್ರಾಯೇಲ್ಯರ ಪರವಾಗಿ ಪಾಪಗಳಿಗಾಗಿ ಯಜ್ಞಗಳನ್ನು ತೆಗೆದುಕೊಂಡು ಹೋಗಿ ಅವರಿಗಾಗಿಯೂ ಪ್ರಾರ್ಥಿಸಬೇಕಾಗಿತ್ತು (ಇಬ್ರಿಯ 5:1).
2. ಆದರೆ ಅದನ್ನು ಮತ್ತೆ ಮತ್ತೆ ಮಾಡಬೇಕಾಗಿತ್ತು.
3. ಯಾಜಕರು ಸಾಯುವವರಾಗಿದ್ದರು, ಆದ್ದರಿಂದ ಹೊಸ ಯಾಜಕರನ್ನು ನೇಮಿಸಬೇಕಾಗಿತ್ತು (ಇಬ್ರಿಯ 7:23).
ವ್ಯತ್ಯಾಸವೆಂದರೆ…
1. ಯೇಸು ಒಮ್ಮೆ ಮಾತ್ರ ಯಜ್ಞವನ್ನು ತೆಗೆದುಕೊಂಡು ಹೋದರೆ ಸಾಕಿತ್ತು. ನಂತರ ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನು. ಇದು ಆತನ ಯಜ್ಞದ ಮರಣದ ಶಾಶ್ವತ ಮೌಲ್ಯವನ್ನು ನಮಗೆ ತೋರಿಸುತ್ತದೆ.
2. ಆತನು ಶಾಶ್ವತವಾಗಿ ಜೀವಂತವಾಗಿರುವುದರಿಂದ, ಆತನು ನಮಗಾಗಿ ಅಂತ್ಯವಿಲ್ಲದೆ ಮಧ್ಯಸ್ಥಿಕೆ ವಹಿಸಲು ಸಮರ್ಥನಾಗಿದ್ದಾನೆ. ಆತನು ಶಾಶ್ವತವಾಗಿ ಆ ಕಾರ್ಯದಲ್ಲಿ ಮುಂದುವರಿಯುತ್ತಾನೆ (ಇಬ್ರಿಯ 7:24).
ಯೇಸುವಿನ ಮಧ್ಯಸ್ಥಿಕೆಯ ಸೇವೆಯು ದೇವರ ಮುಂದೆ ನಮ್ಮ ಮೇಲೆ ಆರೋಪ ಮಾಡುತ್ತಿರುವ ಸೈತಾನನ ಚಟುವಟಿಕೆಯನ್ನು ಶಾಶ್ವತವಾಗಿ ಎದುರಿಸುತ್ತದೆ (ಪ್ರಕಟನೆ 12:10).
ಬಹುಶಃ ನಿಮ್ಮನ್ನು ಯಾವುದಾದರೂ ಸಂಗತಿ ಕಾಡುತ್ತಿರಬಹುದು ಅದು ನಿಮ್ಮ ಸಮಾಧಾನವನ್ನು ಕೆಡಿಸಿರಬಹುದು . ಇದೀಗ, ಯೇಸು ನಿಮಗಾಗಿ ಮತ್ತು ನಿಮ್ಮ ಪ್ರೀತಿಪಾತ್ರರಿಗಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದಾನೆ ಎಂದು ತಿಳಿಯಿರಿ. ಈ ಸಂಗತಿಯೇ ನಿಮ್ಮ ಆತ್ಮಕ್ಕೆ ಶಾಂತಿಯನ್ನು ತರುತ್ತದೆ.
Bible Reading: Isaiah 65-66 ; Jeremiah 1
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ತಂದೆಯ ಮುಂದೆ ನನ್ನನ್ನು ಪ್ರತಿನಿಧಿಸಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನನಗಾಗಿ ಮಧ್ಯಸ್ಥಿಕೆ ವಹಿಸುತ್ತಿದ್ದೀರಿ. ಈ ಸಾಂತ್ವನವನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ನನಗೆ ಕಲಿಸಿಕೊಡಿ. ಮಧ್ಯಸ್ಥಿಕೆ ವಹಿಸಲು ನನಗೆ ಕಲಿಸಿಕೊಡಿ. ಆಮೆನ್.
Join our WhatsApp Channel

Most Read
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.● ಕರ್ತನ ಬಳಿಗೆ ಹಿಂತಿರುಗಿ ಬನ್ನಿ
● ಪ್ರವಾದನಾ ಕೀರ್ತನೆ.
● ಕರ್ತನ ಆನಂದ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಅದು ನಿಮಗೆ ಮುಖ್ಯವಾದ್ದದಾದರೆ, ಅದು ದೇವರಿಗೂ ಮುಖ್ಯವೇ.
● ಅತ್ಯಂತ ಸಾಮಾನ್ಯ ಭಯಗಳು
ಅನಿಸಿಕೆಗಳು