ಅನುದಿನದ ಮನ್ನಾ
0
0
67
ಮಧ್ಯಸ್ತಿಕೆ ಪ್ರಾರ್ಥನೆಗಾರರಿಗೆ ಒಂದು ಪ್ರವಾದನಾ ಸಂದೇಶ
Sunday, 7th of September 2025
Categories :
ಮಧ್ಯಸ್ತಿಕೆ ಪ್ರಾರ್ಥನೆ (Intercession)
ಇಂದು ಬೆಳಿಗ್ಗೆ, ಪವಿತ್ರಾತ್ಮನು ನನ್ನೊಂದಿಗೆ ಬಹಳ ಬಲವಾಗಿ ಮಾತನಾಡಿದನು ಮಧ್ಯಸ್ಥಿಕೆ ಪ್ರಾರ್ಥನೆಗಾರರನ್ನು ಪ್ರೋತ್ಸಾಹಿಸುವಂತೆ ನನ್ನ ಮೇಲೆ ಪ್ರಭಾವ ಬೀರಿದನು.
"ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿ ಮಾಡಿರಿ"
[ಕೊಲೊಸ್ಸೆ 4:2]
1.ಮುಂದುವರಿಸಿ
ನಿಮ್ಮ ಜೀವನದಲ್ಲಿ ನೀವು ಪ್ರಾರ್ಥಿಸುತ್ತಿದ್ದ ಯಾವುದಾದರೂ ವಿಚಾರದಲ್ಲಿ ಸಾಕು ಬಿಟ್ಟುಬಿಡೋಣ ಎಂದು ಪ್ರಚೋದಿಸಲ್ಪಟ್ಟ ಸಮಯವನ್ನು ನೀವು ಎಂದಾದರೂ ಅನುಭವಿಸಿದ್ದೀರಾ? ಅವುಗಳಿಗೆ ಉತ್ತರ ಪಡೆಯಲು ಬಹುಕಾಲ ಕಾಯಬೇಕಾಗುತ್ತದೆ ಎನಿಸುತ್ತಿದೆಯೇ? ಮಧ್ಯಸ್ಥಗಾರನಾಗಿರುವುದು ಕೃತಜ್ಞತೆಯಿಲ್ಲದ ಕೆಲಸದಂತೆ ಭಾಸವಾಗುತ್ತಿರುತ್ತದೆ. ಅಲ್ಲಿ ಆರಾಧನಾ ನಾಯಕರು ಮತ್ತು ಧರ್ಮೋಪದೇಶಕರಂತೆ ಸಿಗುವಂತೆ ಯಾರೂ ನಿಮ್ಮ ಕಡೇ ಗಮನಿಸುತ್ತಿರುವುದಿಲ್ಲ.
ಆದರೂ ಮಧ್ಯಸ್ಥಗಾರನು ದೇವರ ಹೃದಯಕ್ಕೆ ಬಹಳ ಹತ್ತಿರವಾಗಿರುತ್ತಾನೆ. ಮಧ್ಯಸ್ಥಗಾರನು ಮಧ್ಯಸ್ಥಿಕೆಯನ್ನು ತ್ಯಜಿಸಿ ಹಸಿರು ಹುಲ್ಲು ಹಾಸಿನ ಪ್ರದೇಶಕ್ಕೆ ಹೋಗಲು ಪ್ರಚೋದಿಸಲ್ಪಟ್ಟ ಸಂದರ್ಭಗಳಿವೆ.
ಸೈತಾನನ ದೊಡ್ಡ ಸುಳ್ಳುಗಳಲ್ಲಿ ಒಂದು ಯಾವುದೆಂದರೆ ಅವನು 'ನಿಮ್ಮ ಮಧ್ಯಸ್ಥಿಕೆಯು ಯಾವುದೇ ಫಲ ನೀಡುತ್ತಿಲ್ಲ; ಅದು ಯಾವ ಪರಿಣಾಮವನ್ನೂ ಬೀರುತ್ತಿಲ್ಲ' ಎಂದು ಹೇಳುವುದಾಗಿದೆ. ಆದರೆ ಇರುವ ಸತ್ಯವು ಸಂಪೂರ್ಣವಾಗಿ ಭಿನ್ನವಾಗಿದೆ."ಮುಂದುವರೆಸಿ ಮಧ್ಯಸ್ಥಿಕೆ ವಹಿಸುವುದನ್ನು ನಿಲ್ಲಿಸಬೇಡಿ. ನೀವು ಆತ್ಮದ ಕ್ಷೇತ್ರದಲ್ಲಿ ಪ್ರಬಲವಾದ ಪ್ರಭಾವ ಬೀರುತ್ತಿದ್ದೀರಿ." ಎಂದು ಪವಿತ್ರಾತ್ಮನು ನಿಮಗೆ ಹೇಳುತ್ತಾನೆ. ನೀವು ಮಧ್ಯಸ್ತಿಕೆ ವಹಿಸುವುದನ್ನು ನಿಲ್ಲಿಸಿಬಿಟ್ಟರೆ, ವಿಷಯಗಳು ಇನ್ನಷ್ಟು ಹದಗೆಟ್ಟು ಅವು ನಿಮ್ಮ ಕೈ ಮೀರಿ ಹೋಗಬಹುದು.
2. ಪ್ರಾರ್ಥನೆಯಲ್ಲಿ ಅತ್ಯಾಸಕ್ತಿ ವುಳ್ಳವರಾಗಿರ್ರಿ.
ಅತ್ಯಾಸಕ್ತಿಯಿಂದ ಪ್ರಾರ್ಥಿಸುವುದು ಎಂದರೆ ಕೇವಲ ಕರ್ತವ್ಯ ಅಥವಾ ಹೊರೆಯ ಭಾವನೆಯಿಂದ ಪ್ರಾರ್ಥಿಸುವುದಲ್ಲ, ಬದಲಾಗಿ ನೀವು ಮಧ್ಯಸ್ಥಿಕೆ ವಹಿಸುವಾಗ ದೇವರ ಚಿತ್ತವನ್ನು ಪೂರೈಸುತ್ತಿದ್ದೀರಿ ಎಂದು ತಿಳಿದುಕೊಂಡು ಪ್ರಾರ್ಥಿಸುವುದಾಗಿದೆ.
3. ಎಚ್ಚರವಾಗಿದ್ದು ಪ್ರಾರ್ಥಿಸಿ.
ದೇವರವಾಕ್ಯದಲ್ಲಿ ಒಬ್ಬ ಮಧ್ಯಸ್ಥಗಾರನನ್ನು ಗೋಡೆಯ ಮೇಲಿನ ಕಾವಲುಗಾರನಿಗೆ ಹೋಲಿಸಲಾಗುತ್ತದೆ. [ಯೆಶಾಯ 62:6 ಓದಿ]
ಒಬ್ಬ ಕಾವಲುಗಾರ ನಿದ್ರಿಸುತ್ತಿದ್ದರೆ, ಅವನು ನೋಡಲಾಗಲೀ ಅಥವಾ ಕೇಳಿಸಿಕೊಳ್ಳುವುದಕ್ಕಾಗಲೀ ಆಗುವುದಿಲ್ಲ. ಆದ್ದರಿಂದ ಅವನು ಯಾರಿಗಾಗಿ ಕಾವಲು ಕಾಯುತ್ತಾನೋ ಅವರನ್ನು ಎಚ್ಚರಿಸಲು ಸಹ ಸಾಧ್ಯವಿಲ್ಲ. ಆದರಿಂದ ಜಾಗರೂಕ ಮಧ್ಯಸ್ಥಗಾರನು ದೇವರಿಗೆ ಬಹಳ ಮುಖ್ಯನಾದವನು.
ಎಚ್ಚರವಾಗಿದ್ದು ಪ್ರಾರ್ಥಿಸುವ ಮಧ್ಯಸ್ಥಗಾರನು ಮಧ್ಯಸ್ಥಿಕೆಯ ಸಮಯದಲ್ಲಿ ಪ್ರಾರ್ಥಿಸುವುದಲ್ಲದೆ, ವೈಯಕ್ತಿಕ ಪ್ರಾರ್ಥನೆಯ ಮೂಲಕ ದಿನದ ಆರಂಭದಲ್ಲಿ ತನ್ನ ಆತ್ಮೀಕ ಸ್ನಾಯುಗಳನ್ನು ಚುರುಕುಗೊಳಿಸಿಕೊಂಡಿರುತ್ತಾನೆ. ಅಂತಹ ಮಧ್ಯಸ್ಥಗಾರನು ಪ್ರಾರ್ಥನೆಯ ಪ್ರವಾದನಾ ಆಯಾಮವನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿದ್ದು, ಅಲ್ಲಿ ಅವನು ಅಥವಾ ಅವಳು ಕರ್ತನು ಏನು ಹೇಳುತ್ತಿದ್ದಾನೆ ಮತ್ತು ಮಾಡುತ್ತಿದ್ದಾನೆ ಎಂಬುದನ್ನು ನೋಡಿ ಮತ್ತು ಕೇಳುವವರಾಗಿರಬಹುದು.
4. ಕೃತಜ್ಞತೆ ಸ್ತೋತ್ರ ಸಲ್ಲಿಕೆ.
ಕೃತಜ್ಞತೆ ಸ್ತೋತ್ರ ಸಲ್ಲಿಸುವಿಕೆ ಕ್ರಿಯೆಯು ಒಬ್ಬ ಮಧ್ಯಸ್ಥಗಾರನಿಗೆ ಬಹಳ ಮುಖ್ಯ ಏಕೆಂದರೆ ಇದು ಕರ್ತನ ಹೃದಯವನ್ನು ಸ್ಪರ್ಶಿಸುವುದಲ್ಲದೆ, ಕೃತಜ್ಞತೆ ಸಲ್ಲಿಸುವ ಮಧ್ಯಸ್ಥಗಾರನ ಹೃದಯದ ಮೇಲೂ ಪ್ರಭಾವ ಬೀರುತ್ತದೆ.
ಕೃತಜ್ಞತೆ ಸ್ತೋತ್ರ ಸಲ್ಲಿಸುವಂತದ್ದು ಮಧ್ಯಸ್ಥಗಾರನನ್ನು ಹೆಮ್ಮೆಯಿಂದ ದೂರವಿಡುತ್ತದೆ ಮತ್ತು ಕರ್ತನಿಗೆ ಮಹಿಮೆಯನ್ನು ತರುತ್ತದೆ. ಮಧ್ಯಸ್ಥಿಕೆಗೆ ನಿಮ್ಮನ್ನು ನೀವು ಬದ್ಧರನ್ನಾಗಿ ಮಾಡಿಕೊಳ್ಳುಬೇಕೆಂದು ಪವಿತ್ರಾತ್ಮನ ಪರವಾಗಿ ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
ನೋಹ ಅಪ್ಲಿಕೇಶನ್ ಮೂಲಕ ಮಧ್ಯಸ್ಥಿಕೆ ಪ್ರಾರ್ಥನೆಯಲ್ಲಿ ಸೇರಿ. ಮಧ್ಯಸ್ಥಿಕೆಯ ಪ್ರಾರ್ಥನೆಯ ನದಿಯ ನೀರಿನಲ್ಲಿ ಇನ್ನೂ ನಿಮ್ಮ ಪಾದಗಳನ್ನು ಒದ್ದೆ ಮಾಡಿಕೊಳ್ಳದವರು, ದಯವಿಟ್ಟು ಹೀಗೆ ಮಾಡಿ, ಏಕೆಂದರೆ ಈ ಸಮಯದಲ್ಲಿ ಕ್ರಿಸ್ತನ ದೇಹಕ್ಕೆ ನಿಮ್ಮ ಸಹಾಯ ಬೇಕಾಗುತ್ತದೆ. ನೀವು ಆತ್ಮನ ಕರೆಯನ್ನು ಕೇಳುತ್ತಿದ್ದೀರಾ?
Bible Reading: Ezekiel 19-20
ಪ್ರಾರ್ಥನೆಗಳು
ಇಗೋ ನಾನಿದ್ದೇನೆ, ಕರ್ತನೇ. ನಿನ್ನ ಮಹಿಮೆಗಾಗಿ ನನ್ನನ್ನು ಬಳಸು. ಪ್ರಾರ್ಥಿಸುವುದನ್ನು ನನಗೆ ಕಲಿಸಿಕೊಡು.
Join our WhatsApp Channel

Most Read
● ಸಮಯದ ಸೂಚನೆಗಳ ವಿವೇಚನೆ.● ಸಣ್ಣ ಸಣ್ಣ ರಾಜಿ ಮಾಡಿಕೊಳ್ಳುವಿಕೆಯು.
● ಪ್ರಾರ್ಥನಾ ಹೀನತೆ ಎಂಬ ಪಾಪ
● ಯೇಸುವನ್ನು ನೋಡುವ ಬಯಕೆ
● ಕ್ರೈಸ್ತರು ದೇವದೂತರಿಗೆ ಆಜ್ಞೆ ನೀಡಬಹುದೇ?
● ತಾಳ್ಮೆಯನ್ನು ಅಳವಡಿಸಿಕೊಳ್ಳುವುದು
● ದೇವರ ಸಮೀಪಕ್ಕೆ ಬನ್ನಿರಿ
ಅನಿಸಿಕೆಗಳು