ಅನುದಿನದ ಮನ್ನಾ
3
2
148
ಅಂತ್ಯಕಾಲ - ಪ್ರವಾದನಾ ಕಾವಲುಗಾರರು
Saturday, 20th of September 2025
Categories :
ಮಧ್ಯಸ್ತಿಕೆ ಪ್ರಾರ್ಥನೆ (Intercession)
"ನನ್ನ ಪ್ರಿಯನನ್ನೂ ಅವನ ತೋಟವನ್ನೂ ಕುರಿತು ನನ್ನ ಪ್ರಿಯನ ಒಂದು ಗೀತವನ್ನು ನಾನು ಹಾಡುವೆ, ಕೇಳಿರಿ. ಸಾರವತ್ತಾದ ಗುಡ್ಡದ ಮೇಲೆ ನನ್ನ ಪ್ರಿಯನಿಗೆ ದ್ರಾಕ್ಷೆಯ ತೋಟವಿತ್ತು. ಅವನು ಅದನ್ನು ಅಗತೆಮಾಡಿ ಕಲ್ಲುಗಳನ್ನು ತೆಗೆದುಹಾಕಿ ಒಳ್ಳೊಳ್ಳೇ ದ್ರಾಕ್ಷೆಯ ಸಸಿಗಳನ್ನು ನೆಟ್ಟು ಮಧ್ಯದಲ್ಲಿ ಬುರುಜನ್ನು ಕಟ್ಟಿ ದ್ರಾಕ್ಷೆಯ ತೊಟ್ಟಿಯನ್ನು ಕೊರೆಯಿಸಿ ಮಾಡಿಕೊಂಡು ತೋಟವು [ಒಳ್ಳೇ] ದ್ರಾಕ್ಷೆಯ ಹಣ್ಣನ್ನು ಕೊಡುವದೆಂದು ಎದುರುನೋಡುತ್ತಿರಲು ಅದು ಹೊಲಸುಹಣ್ಣನ್ನು ಬಿಟ್ಟಿತು.(ಯೆಶಾಯ 5:1-2 KJV)
ಇಸ್ರೇಲ್ ದೇವರ ದ್ರಾಕ್ಷಿತೋಟ. ಸಭೆಯು ದೇವರ ದ್ರಾಕ್ಷಿತೋಟವಾಗಿದೆ. ಕರ್ತನು ನೆಟ್ಟ ಫಲಿತಾಂಶವು ಫಲಪ್ರದವಾಗಿರಬೇಕು. ಇಲ್ಲಿ ನೀವು ಗಮನಿಸಬೇಕೆಂದು ನಾನು ಬಯಸುವ ಎರಡು ವಿಷಯಗಳಿವೆ.
1. ಕರ್ತನು ತನ್ನ ದ್ರಾಕ್ಷಿತೋಟದ ಸುತ್ತಲೂ ಬೇಲಿಯನ್ನು ಹಾಕಿದನು.
2. ಆತನು ಮಧ್ಯದಲ್ಲಿ ಒಂದು ಗೋಪುರವನ್ನು ಇಡುತ್ತಾನೆ.
ಶತ್ರುವನ್ನು ದೂರವಿಡಲು ಬೇಲಿ ಮತ್ತು ಗೋಪುರ ಎರಡೂ ಅಗತ್ಯ. ಬೇಲಿ ಮತ್ತು ಗೋಪುರ ಏಕೆ ಬೇಕು?
"ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು. ನೀವು ಹೊರಟುಹೋಗಿ ಫಲಕೊಡುವವರಾಗಬೇಕೆಂತಲೂ ನೀವು ಕೊಡುವ ಫಲವು ನಿಲ್ಲುವಂಥದಾಗಬೇಕೆಂತಲೂ ನಿಮ್ಮನ್ನು ನೇವಿುಸಿದ್ದೇನೆ. ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.. . (ಯೋಹಾನ 15:16)
ನಾವು ಫಲ ನೀಡಲು ಮಾತ್ರ ನೇಮಿಸಲ್ಪಟ್ಟಿಲ್ಲ, ಆದರೆ ಆ ಫಲ ಉಳಿಯುವಂತ ಫಲವಾಗಿರಬೇಕೆಂದು ನೇಮಿಸಲ್ಪಟ್ಟಿದ್ದೇವೆ. ಆ ಫಲ ಉಳಿಯದಿದ್ದರೆ ಫಲ ನೀಡುವುದರಿಂದ ಏನು ತಾನೇ ಪ್ರಯೋಜನ?
" ಕಳ್ಳನು ಕದ್ದುಕೊಳ್ಳುವದಕ್ಕೂ ಕೊಯ್ಯುವದಕ್ಕೂ ಹಾಳುಮಾಡುವದಕ್ಕೂ ಬರುತ್ತಾನೆ ಹೊರತು ಮತ್ತಾವದಕ್ಕೂ ಬರುವದಿಲ್ಲ;... " . (ಯೋಹಾನ 10:10)
ಶತ್ರು ಕುಟುಂಬಗಳು, ಮನೆಗಳು, ಸಭೆಗಳು, ಸೇವೆಗಳ ಮತ್ತು ಸಂಸ್ಥೆಗಳ ಫಲವನ್ನು ನಾಶಮಾಡಲು ಬಯಸುತ್ತಾನೆ. ಬೇಲಿ ಇಲ್ಲದೆ ದ್ರಾಕ್ಷಿತೋಟವನ್ನು ಮಾಡುವುದು ಅವಿವೇಕತನ. ದ್ರಾಕ್ಷಿತೋಟಕ್ಕೆ ಬೇಲಿ ರಕ್ಷಣಾತ್ಮಕ ತಡೆಗೋಡೆಯನ್ನು ಒದಗಿಸುತ್ತದೆ. ಗೋಪುರವು ಕಾವಲುಗಾರನಿಗೆ ಇರಲು ಒಂದು ಸ್ಥಳವಾಗಿದೆ. ದ್ರಾಕ್ಷಿತೋಟಗಳಿಗೆ ಕಾವಲುಗಾರರು ಬೇಕು.
ಹಾಗೇ ಸ್ಥಳೀಯ ಸಭೆಗಳಿಗೆ ದ್ರಾಕ್ಷಿತೋಟವನ್ನು ರಕ್ಷಿಸಲು ಗೋಪುರಗಳು ಮತ್ತು ಕಾವಲುಗಾರರು ಬೇಕು. ಸಂಸ್ಥೆಗಳಿಗೆ ಕಾವಲುಗಾರರು ಬೇಕು. ಯಾಕೆಂದರೆ ಕರ್ತನು ನನಗೆ ಹೀಗೆ ಹೇಳಿದ್ದಾನೆ:
"ಕರ್ತನು ನನಗೆ ಹೇಳಿರುವದೇನಂದರೆ - ಕಾವಲುಗಾರನನ್ನು ಇಡು, ನಡೆ; ಕಂಡದ್ದನ್ನು ತಿಳಿಸಲಿ; " (ಯೆಶಾಯ 21:6)
ಕಾವಲುಗಾರರು ಪ್ರವಾದನಾ ಮಧ್ಯಸ್ಥಗಾರರಾಗಿದ್ದಾರೆ. ಮಧ್ಯಸ್ಥಿಕೆ ಏಕೆ ಮುಖ್ಯ ಎಂಬುದನ್ನು ಈಗ ನೀವು ನೋಡುತ್ತೀರಿ.
ಇಜ್ರೇಲಿನ ಬುರುಜಿನಲ್ಲಿದ್ದ ಕಾವಲುಗಾರನು ಯೇಹುವಿನ ಗುಂಪಿನವರನ್ನು ಕಂಡು - ಜನರ ಒಂದು ಗುಂಪು ಕಾಣಿಸುತ್ತದೆ ಎಂದು ಯೋರಾಮನಿಗೆ ತಿಳಿಸಿದನು. ಯೋರಾಮನು ಅವನಿಗೆ - ನೀನು ಒಬ್ಬ ರಾಹುತನನ್ನು ಕರೆದು ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಾರೋ ಎಂದು ಕೇಳುವದಕ್ಕಾಗಿ ಕಳುಹಿಸು ಎಂಬದಾಗಿ ಆಜ್ಞಾಪಿಸಿದನು."(2 ಅರಸುಗಳು 9:17)
ಕಾವಲುಗಾರ ಎಂದರೆ ಕಾವಲು ಕಾಯುವವನು. ಪ್ರಾಚೀನ ನಗರಗಳ ಗೋಡೆಗಳ ಮೇಲೆ ಕಾವಲುಗಾರರನ್ನು ನಿಯೋಜಿಸಲಾಗುತಿತ್ತು. ಕಾವಲುಗಾರನು ಕೇವಲ ನೋಡುವುದಷ್ಟೇ ಅಲ್ಲದೇ, ಗಮನಿಸುವುದಲ್ಲದೇ ಅಥವಾ ಕೇಳುವುದಷ್ಟೇ ಅಲ್ಲದೇ; ಕಾವಲುಗಾರನು ತುತ್ತೂರಿ ಊದುತ್ತಾನೆ. ಅದು ಅವರ ಜವಾಬ್ದಾರಿಯಾಗಿತ್ತು. ಶತ್ರು ವೇಷ ಧರಿಸಿ ಬರುತ್ತಾನೆ, ಆದರೆ ಆತ್ಮೀಕ ಕಾವಲುಗಾರನು ಜಾಗರೂಕನಾಗಿದ್ದು ತುತ್ತೂರಿ ಊದಿ ತನ್ನ ಕುಟುಂಬ ಸದಸ್ಯರಿಗೆ ಬೇಗನೆ ಎಚ್ಚರಿಕೆ ನೀಡಿ ನಾಶವಾಗದಂತೆ ಧ್ವನಿಮಾಡಬೇಕು.
ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು - ನರಪುತ್ರನೇ, ನಿನ್ನ ಜನರನ್ನು ಸಂಬೋಧಿಸಿ ಅವರಿಗೆ ಹೀಗೆ ನುಡಿ - ನಾನು ದೇಶದ ಮೇಲೆ ಖಡ್ಗವನ್ನು ಬೀಳಮಾಡುವಾಗ ಆ ದೇಶದವರು ತಮ್ಮಲ್ಲಿ ಆರಿಸಿ ನೇವಿುಸಿಕೊಂಡ ಕಾವಲುಗಾರನು ದೇಶದ ಮೇಲೆ ಬೀಳುವ ಖಡ್ಗವನ್ನು ನೋಡಿದ ಕೂಡಲೆ ಕೊಂಬನ್ನೂದಿ ಸ್ವಜನರನ್ನು ಎಚ್ಚರಿಸಿದರೂ ಕೊಂಬಿನ ಕೂಗನ್ನು ಕೇಳಿದ ಯಾವನೇ ಆಗಲಿ ಎಚ್ಚರಗೊಳ್ಳದೆ ಬೀಳುವ ಖಡ್ಗಕ್ಕೆ ಸಿಕ್ಕಿ ನಾಶವಾದರೆ ತನ್ನ ಮರಣಕ್ಕೆ ತಾನೇ ಕಾರಣ. ಅವನು ಕೊಂಬಿನ ಕೂಗನ್ನು ಕೇಳಿಯೂ ಎಚ್ಚರಗೊಳ್ಳಲಿಲ್ಲವಷ್ಟೆ; ತನ್ನ ಮರಣಕ್ಕೆ ತಾನೇ ಕಾರಣನು; ಎಚ್ಚರಗೊಂಡಿದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳುತ್ತಿದ್ದನು.ಆದರೆ ಕಾವಲುಗಾರನು ಬೀಳುವ ಖಡ್ಗವನ್ನು ನೋಡಿಯೂ ಕೊಂಬನ್ನೂದದೆ ಸ್ವಜನರನ್ನು ಎಚ್ಚರಿಸದೆ ಇರುವಲ್ಲಿ ಖಡ್ಗವು ಬಿದ್ದು ಆ ಜನರೊಳಗೆ ಯಾವನನ್ನೇ ಆಗಲಿ ನಾಶಮಾಡಿದರೆ ತನ್ನ ಅಧರ್ಮದಲ್ಲೇ ನಾಶಗೊಂಡ ಆ ಮನುಷ್ಯನ ಮರಣಕ್ಕೆ ಹೊಣೆಯಾದ ಕಾವಲುಗಾರನಿಗೆ ಮುಯ್ಯಿತೀರಿಸುವೆನು.
(ಯೆಹೆಜ್ಕೇಲ 33:1-6)
ಇಬ್ಬರು ಕಾವಲುಗಾರರನ್ನು ಇಲ್ಲಿ ವಿವರಿಸಲಾಗಿದೆ:
1. ಶ್ರದ್ಧೆಯುಳ್ಳ ಕಾವಲುಗಾರ
2. ಬೇಜವಾಬ್ದಾರಿ ಕಾವಲುಗಾರ
ದ್ರಾಕ್ಷಾಲತೆ ಮತ್ತು ಹೊಲಗಳಿಗೆ ಕಾವಲುಗಾರರು ಇರುವಂತದ್ದು ವಿಶೇಷವಾಗಿ ಕೊಯ್ಲಿನ ಸಮಯದಲ್ಲಿ ಅವರ ಜವಾಬ್ದಾರಿ ಪ್ರಾಣಿಗಳು ಮತ್ತು ಕಳ್ಳರಿಂದ ಉತ್ಪನ್ನಗಳನ್ನು ಕಾಪಾಡುವುದು.ಅದಕ್ಕಾಗಿ ದೇವರು ಕಾವಲುಗಾರರನ್ನೇ ಜವಾಬ್ದಾರರನ್ನಾಗಿ ಮಾಡುವನು
"ನಾವು ಒಟ್ಟಾಗಿ ಯೆರೂಸಲೇವಿುನವರಿಗೆ ವಿರುದ್ಧವಾಗಿ ಯುದ್ಧಕ್ಕೆ ಹೋಗಿ ಅವರನ್ನು ತಳಮಳಗೊಳಿಸೋಣ ಎಂದು ಒಳಸಂಚು ಮಾಡಿಕೊಂಡರು. ನಾವಾದರೋ ನಮ್ಮ ದೇವರಿಗೆ ಮೊರೆಯಿಟ್ಟು ಅವರಿಗೆ ವಿರುದ್ಧವಾಗಿ ಅವರು ಬರುವ ದಾರಿಯಲ್ಲಿ ಹಗಲಿರುಳು ಕಾವಲಿಟ್ಟೆವು".[ನೆಹೆಮಿಯಾ 4:8-9]
ನೆಹೆಮಿಯಾನ ವಿರೋಧಿಗಳು ಜೆರುಸಲೆಮ್ನ ಗೋಡೆಗಳ ನಿರ್ಮಾಣವನ್ನು ತಡೆಯಲು ಬಂದಿದ್ದರು. ನೆಹೆಮಿಯಾನು ಅಪೊಸ್ತಲರ ಸೇವೆಯ ಚಿತ್ರಣ ವನ್ನು ಬಿಂಬಿಸುತ್ತಾನೆ. ಅಪೊಸ್ತಲರು ಸಭೆಯ ನಿರ್ಮಾಪಕರಾಗಿದ್ದಾರೆ. ಹಾಗಾಗಿ ಕಟ್ಟಡ ನಿರ್ಮಾಣಕ್ಕೆ ವಿರೋಧ ಮತ್ತು ಬೆಳವಣಿಗೆಗೆ ವಿರೋಧವನ್ನು ನಿರೀಕ್ಷಿಸಬಹುದು. ವಿರೋಧಿಗಳನ್ನು ಜಯಿಸಲು ತಂತ್ರವೆಂದರೆ ಹಗಲು ರಾತ್ರಿ ಅವರ ವಿರುದ್ಧ ಕಾವಲು ಕಾಯುವುದು.
ಅಪೊಸ್ತಲರು ಮತ್ತು ಪ್ರವಾದಿಗಳು ಸಭೆಯ ನಿರ್ಮಾಣದಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಅಪೊಸ್ತಲರು ಕಟ್ಟಡ ನಿರ್ಮಾಣ ಮಾಡುವಾಗ ಅವರಿಗೆ ಸಹಾಯ ಮಾಡುವಂತ ಪ್ರವಾದಿಗಳು ಅಪೊಸ್ತಲರಿಗೆ ಅಗತ್ಯವಿದೆ.
...ಎಲ್ಲಾ ಜನರು ಕರ್ತನಿಗಾಗಿ ಕಾವಲು ಕಾಯಬೇಕು. (2 ಪೂರ್ವಕಾಲವೃತ್ತಾಂತ 23:6)
ಎಲ್ಲಾ ವಿಶ್ವಾಸಿಗಳಿಗೆ ಕಾವಲು ಕಾಯಲು ಆಜ್ಞಾಪಿಸಲಾಗಿದೆ.
ಪ್ರತಿಯೊಬ್ಬ ಕ್ರೈಸ್ತನು ತನ್ನ ಪ್ರಾರ್ಥನಾ ಜೀವನದಲ್ಲಿ ಸ್ವಲ್ಪ ಮಟ್ಟಿಗೆ ಆತ್ಮೀಕ ಕಾವಲುಗಾರನಾಗಿರಲು ಕರೆಯಲ್ಪಟ್ಟಿದ್ದಾನೆ. ಅದು ನಿಮ್ಮ ಕುಟುಂಬದ ಗೋಡೆಗಳ ಮೇಲೆ, ಅಥವಾ ನಿಮ್ಮ ಸಭೆ ಅಥವಾ ನಿಮ್ಮ ನಗರದ ಗೋಡೆಗಳ ಮೇಲೆ ಕಾವಲುಗಾರನಾಗಿರಬಹುದು, ಅಥವಾ ದೇವರು ನಿಮಗೆ ರಾಷ್ಟ್ರದ ಗೋಡೆಗಳ ಮೇಲೆ ಆತ್ಮೀಕ ಕಾವಲುಗಾರನಾಗಿರಲು ಕರೆ ಕೊಡಬಹುದು.
ಕರ್ತನಾದ ಯೇಸು ಕಾವಲುಗಾರನಾಗಿರುವುದರ ಕುರಿತು ಮಾತನಾಡಿದ್ದಾನೆ.
ಆ ಸಮಯ ಯಾವಾಗ ಎಂದು ನಿಮಗೆ ತಿಳಿದಿಲ್ಲವಾದ್ದರಿಂದ ಎಚ್ಚರದಿಂದಿರಿ, ಎಚ್ಚರವಾಗಿದ್ದು ಪ್ರಾರ್ಥಿಸಿ. (ಮಾರ್ಕ್ 13: 33)
ಬಹುಶಃ ನೀವು ನಿಮ್ಮ ಕುಟುಂಬಕ್ಕೆ ನೀವು ಕಾವಲುಗಾರನಾಗಿರಲು ಕರೆಯಲ್ಪಟ್ಟಿರಬಹುದು. ತಾಯಂದಿರೇ, ನಿಮ್ಮ ಮಕ್ಕಳು ಮತ್ತು ನಿಮ್ಮ ಸಂಗಾತಿಗೆ ಕಾವಲುಗಾರನಾಗಿರಬೇಕೆಂದು ಕರ್ತನು ನಿಮ್ಮನ್ನು ಕರೆಯುತ್ತಾನೆ.
Bible Reading: Daniel 2-3
ಪ್ರಾರ್ಥನೆಗಳು
1. ತಂದೆಯೇ, ಆತ್ಮೀಕ ಕಾವಲುಗಾರರಾಗಿ ನಮ್ಮ ಜವಾಬ್ದಾರಿಯನ್ನು ಸಂತೋಷದಿಂದ ವಹಿಸಿಕೊಳ್ಳಲು ನಮಗೆ ಸಹಾಯ ಮಾಡಿ.
2. ನಿಮ್ಮ ಅಗಾಪೆ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಬಿಡುಗಡೆ ಮಾಡಿ ಇದರಿಂದ ಅದು ಹೊರೆಯಾಗದೆ ನಮಗೆ ಸಂತೋಷಕರವಾಗುತ್ತದೆ.
Join our WhatsApp Channel

Most Read
● ದ್ವಾರ ಪಾಲಕರು / ಕೋವರ ಕಾಯುವವರು● ನಿಮ್ಮ ವಿಮೋಚನೆ ಮತ್ತು ಗುಣಪಡಿಸುವಿಕೆಯ ಉದ್ದೇಶ
● ಸಂತೃಪ್ತಿಯ ಭರವಸೆ
● ಬೆಟ್ಟಗಳ ಮತ್ತು ತಗ್ಗಿನ ದೇವರು.
● ಕರ್ತನ ಆನಂದ
● ನಿಮ್ಮ ಜಗತ್ತನ್ನು ರೂಪಿಸಲು ನಿಮ್ಮ ಕಲ್ಪನೆಯನ್ನು ಬಳಸಿಕೊಳ್ಳಿ.
● ದೇವರು ಹೇಗೆ ಒದಗಿಸುತ್ತಾನೆ #1
ಅನಿಸಿಕೆಗಳು