"ಆಗ ಮೂವತ್ತೆಂಟು ವರ್ಷದಿಂದ ರೋಗಿಯಾಗಿದ್ದ ಒಬ್ಬ ಮನುಷ್ಯನು ಅಲ್ಲಿ ಇದ್ದನು. ಅವನು ಬಿದ್ದುಕೊಂಡಿರುವುದನ್ನು ಯೇಸು ಕಂಡು ಅವನು ಈಗಾಗಲೇ ಬಹುಕಾಲದಿಂದ ಆ ಸ್ಥಿತಿಯಲ್ಲಿದ್ದಾನೆಂದು ತಿಳಿದು ಅವನಿಗೆ, “ನಿನಗೆ ಗುಣಹೊಂದಲು ಮನಸ್ಸಿದೆಯೋ?” ಎಂದು ಕೇಳಿದನು."
[ಯೋಹಾನ 5:5-6 ವರ್ಧಿತ]
ಆ ಮನುಷ್ಯನು ಸ್ಪಷ್ಟವಾಗಿ ಬಹಳ ಸಮಯದಿಂದ ಅನಾರೋಗ್ಯದಲ್ಲಿದ್ದನು ಎಂದು ಯೇಸು ಈ ಅಸಹಾಯಕನನ್ನು "ನೀನು ಗುಣಮುಖರಾಗಲು ಬಯಸುತ್ತೀಯ?" ಎಂದು ಕೇಳುವುದು ತುಂಬಾ ಕುತೂಹಲಕಾರಿ ಪ್ರಶ್ನೆಯಾಗಿದೆ.
"ನೀವು ನಿಜವಾಗಿಯೂ ಗುಣಮುಖರಾಗಲು ಬಯಸುತ್ತೀರಾ?" ಎಂಬ ಸಂದೇಶವನ್ನು ನೀವು ಓದುವಾಗಲೂ ಇದು ನಿಮಗೆ ಕರ್ತನು ಕೇಳುತ್ತಿರುವ ಪ್ರಶ್ನೆ ಎಂದು ನಾನು ನಂಬುತ್ತೇನೆ.
ನನಗೆ ವಿವರಿಸಲು ಅನುಮತಿಸಿ! ನಿಜವಾಗಿಯೂ ಗುಣಮುಖರಾಗಲು ಬಯಸದ ಜನರಿದ್ದಾರೆ ಎಂದು ನಿಮಗೆ ತಿಳಿದಿದೆಯೇ? ಪಾಸ್ಟರ್ ಮೈಕೆಲ್, ನೀವು ಗಂಭೀರವಾಗಿ ಹೇಳುತ್ತೀರಾ? ಹೌದು! ನೀವು ಅದನ್ನು ಸರಿಯಾಗಿ ಕೇಳಿಸಿಕೊಂಡಿದ್ದೀರಿ. ಇಂದು ತಮ್ಮ ಅನಾರೋಗ್ಯದಿಂದ ಗುಣಮುಖರಾಗಲು ಬಯಸದ ಅನೇಕ ಜನರಿದ್ದಾರೆ.
ಈಗ, ಇದು ಯಾರನ್ನೂ ಖಂಡಿಸಲು ಹೇಳುತ್ತಿಲ್ಲ, ಬದಲಾಗಿ ಸರಿಪಡಿಸಲು ಮತ್ತು ಸಹಾಯ ಮಾಡಲು ಹೇಳುತ್ತಿದ್ದೇನೆ. ನಿಮ್ಮ ಸಮಸ್ಯೆಗಳನ್ನು ನೀವು ನಂಬುವ ಅಥವಾ ಗೌರವಿಸುವವರೊಂದಿಗೆ ಹಂಚಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದಾಗ್ಯೂ, ತಮ್ಮ ಸಮಸ್ಯೆಗಳ ಕುರಿತು ಸಿಕ್ಕವರೊಂದಿಗೆಲ್ಲಾ ಮತ್ತು ಎಲ್ಲರೊಂದಿಗೆ ಹೇಳಿಕೊಳ್ಳಲು ಇಷ್ಟಪಡುವ ಜನರಿದ್ದಾರೆ.
ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವ ಮಟ್ಟಕ್ಕೂ ಹೋಗುತ್ತಾರೆ. ಇದು ಆರೋಗ್ಯಕರವಲ್ಲ ಏಕೆಂದರೆ ಈ ಮಾಹಿತಿಯನ್ನು ಬಳಸಿಕೊಂಡು ನಿಮ್ಮನ್ನು ಭಾವನಾತ್ಮಕವಾಗಿ ಕುಶಲತೆಯಿಂದ ತಮಗೆ ಬೇಕಾದ ಹಾಗೇ ಬಳಸಿಕೊಳ್ಳುವ ಜನರಿದ್ದಾರೆ.(ನಾನು ಇದನ್ನು ಹೇಳುತ್ತಿಲ್ಲ) ಇದು ವೈದ್ಯಕೀಯವಾಗಿ ಸಾಬೀತಾಗಿದೆ.
ಕೆಲವು ಜನರಿಗೆ, ಸಹಾನುಭೂತಿ ಪಡೆಯುವುದು ಗಮನ ಸೆಳೆಯುವ ಒಂದು ಮಾರ್ಗವಾಗಿದೆ. ಕೆಲವು ಜನರಿಗೆ ಅತಿಯಾದ ಗಮನ ಬೇಕು, ಮತ್ತು ಅವರು ಅದನ್ನು ಅನುಚಿತವಾಗಿ ವರ್ತಿಸುವ ಮೂಲಕ ಪಡೆಯುತ್ತಾರೆ. ಕೆಲವರು ಯಾವಾಗಲೂ ದೂರು ನೀಡಲು ಏನನ್ನಾದರೂ ಹೊಂದಿ ಕೊಳ್ಳಲು ಸಹಾನುಭೂತಿಯನ್ನು ಹುಡುಕುತ್ತಾರೆ.
ದಯವಿಟ್ಟು ಬೇಸರಗೊಳ್ಳಬೇಡಿ. ಒಳ್ಳೆಯ ಶಸ್ತ್ರಚಿಕಿತ್ಸಕನು ಹೊಲಿಗೆ ಹಾಕುವ ಮೊದಲು ಕತ್ತರಿಸುತ್ತಾನೆ. ನೀವು ನಿಜವಾಗಿಯೂ ಗುಣಮುಖರಾಗಲು ಬಯಸುತ್ತೀರಾ ಅಥವಾ ನಿಮ್ಮ ಸಮಸ್ಯೆಯ ಬಗ್ಗೆ ಮಾತನಾಡಿಕೊಂಡಿರಲು ಬಯಸುತ್ತೀರಾ?
ರೂತ್ ಅಧ್ಯಾಯ 1 ನಮಗೆ ನವೋಮಿ ಎಂಬ ಮಹಿಳೆಯ ಕುರಿತು ಹೇಳುತ್ತದೆ. ಬರಗಾಲದ ಸಮಯದಲ್ಲಿ, ಅವರು ಮೋವಾಬ್‌ಗೆ ಸ್ಥಳಾಂತರಗೊಂಡಿದ್ದರು. ಅವರು ಮೋವಾಬ್‌ನಲ್ಲಿದ್ದಾಗ, ಅವಳ ಗಂಡ ಮತ್ತು ಅವಳ ಇಬ್ಬರು ಗಂಡು ಮಕ್ಕಳು ಸತ್ತರು. ಇದರಿಂದ ಅವಳು ಸಂಪೂರ್ಣವಾಗಿ ಧ್ವಂಸಗೊಂಡಿರಬೇಕು. ಅವಳ ಇಡೀ ಪ್ರಪಂಚವೇ ಕುಸಿದು ಹೋಯಿತೆಂದು ಭಾವಿಸಿರಬೇಕು. ನಂತರ, ಮೋವಾಬ್‌ನಲ್ಲಿದ್ದಾಗ, ದೇವರು ತನ್ನ ಜನರನ್ನು ಹೇಗೆ ಸಂಧಿಸಿದನೆಂಬ ಸುದ್ದಿಯನ್ನು ಅವಳು ಕೇಳಿ ಅವಳು ತನ್ನ ಸೊಸೆ ರೂತಳೊಂದಿಗೆ ಬೆಥ್ ಲೆಹೆಮ್‌ನಲ್ಲಿರುವ ತನ್ನ ಮನೆಗೆ ಹಿಂತಿರುಗುತ್ತಾಳೆ.
" ಹಾಗೆಯೇ ಇಬ್ಬರೂ ಬೇತ್ಲೆಹೇಮಿನವರೆಗೂ ನಡೆದುಹೋದರು. ಅವರು ಬೇತ್ಲೆಹೇಮಿನಲ್ಲಿ ಪ್ರವೇಶಿಸುವಾಗ ಆ ಪಟ್ಟಣದವರಲ್ಲಿ ಕುತೂಹಲ ಮೂಡಿಸಿತು. ಅವರು, “ಇವಳು ನೊವೊಮಿಯೋ?” ಎಂದರು.
ಆಗ ಆಕೆಯು ಅವರಿಗೆ, “ನನ್ನನ್ನು ‘ನೊವೊಮಿ’ ಎಂದು ಕರೆಯಬೇಡಿರಿ. ಮಾರಾ ಎಂದು ಕರೆಯಿರಿ ಏಕೆಂದರೆ ಸರ್ವಶಕ್ತರು ನನ್ನನ್ನು ಬಹು ದುಃಖದಿಂದ ನಡೆಸಿದರು. ನಾನು ಪರಿಪೂರ್ಣಳಾಗಿ ಹೊರಟುಹೋದೆನು.
ಯೆಹೋವ ದೇವರು ನನ್ನನ್ನು ಏನೂ ಇಲ್ಲದೆ ಬರಮಾಡಿದ್ದಾರೆ. ಯೆಹೋವ ದೇವರು ನನಗೆ ವಿರೋಧವಾಗಿ ಸಾಕ್ಷಿಕೊಟ್ಟು, ಸರ್ವಶಕ್ತರಾದ ದೇವರು ನನಗೆ ವಿರೋಧವಾಗಿ ನನ್ನನ್ನು ಬಾಧಿಸಿರುವುದರಿಂದ ನೀವು ನನ್ನನ್ನು ನೊವೊಮಿ ಎಂದು ಕರೆಯುವುದು ಸರಿಯೇ?” ಎಂದಳು.
(ರೂತ್ 1:19-21)
ನವೋಮಿ ತಿರುಗಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದಳು. ಆದಾಗ್ಯೂ, ಅವಳು ಒಳಗಿನಿಂದ ಸಂಪೂರ್ಣವಾಗಿ ಜಜ್ಜಿ ಹೋಗಿದ್ದಳು. ತನ್ನ ಗಂಡ ಮತ್ತು ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ನಂತರ, ಅವಳು ಆಳವಾದ ಗಾಯಗಳನ್ನು ಹೊಂದಿದ್ದಳು. ಅವಳು ಜನರಿಗೆ ಅವಳನ್ನು ನವೋಮಿ (ಅಂದರೆ ಆಹ್ಲಾದಕರ) ಎಂದು ಕರೆಯಬೇಡಿ, ಬದಲಿಗೆ ಅವಳನ್ನು ಮಾರಾ (ಅಂದರೆ ಕಹಿ) ಎಂದು ಕರೆಯುವಂತೆ ಹೇಳಿದಳು.
ನಾನು ನಿಮಗೆ ಒಂದು ವಿಷಯ ಹೇಳಬಹುದೇ? ನಿಮ್ಮ ಹೋರಾಟವೇ ನಿಮ್ಮ ಗುರುತಾಗಲು ಬಿಡಬೇಡಿ. ನಿಮ್ಮ ಸಮಸ್ಯೆಯು ನಿಮಗೊಂದು ಹೆಸರು ಕೊಡಲು ಬಿಡಬೇಡಿ. ನಿಮ್ಮ ಹೋರಾಟಗಳು ನಿಮ್ಮ ಗುರುತನ್ನು ಬದಲಾಯಿಸುವಂತೆ ನಿಮ್ಮನ್ನು ಒತ್ತಾಯಿಸಲು ಬಿಡಬೇಡಿ.
ನವೋಮಿ ತನ್ನ ಹೋರಾಟ ಮತ್ತು ನೋವನ್ನು ಅವಳ ಹೆಸರಾಗುವಂತೆ ಬಿಟ್ಟು ಕೊಡುವವಳಾಗಿದ್ದಳು. ನೀವು ಕುಡಿತದಿಂದ ಹೋರಾಡುತ್ತಿರಬಹುದು, ಆದರೆ ನಿಮ್ಮನ್ನು ಕುಡುಕ ಎಂದು ಕರೆದುಕೊಳ್ಳಬೇಡಿ. ನಿಮ್ಮ ಸಂಬಂಧಗಳಲ್ಲಿ ನೀವು ತಪ್ಪುಗಳನ್ನು ಮಾಡಿರಬಹುದು, ಆದರೆ ನಿಮ್ಮನ್ನು ವಿಫಲರು ಎಂದು ಕರೆದು ಕೊಳ್ಳಬೇಡಿ.
ನೀವು ನಿಮ್ಮ ಕೆಲಸವನ್ನು ಕಳೆದುಕೊಂಡಿರಬಹುದು ಅಥವಾ ಬಹುಶಃ ಕೆಲವು ಸವಾಲುಗಳನ್ನು ಎದುರಿಸುತ್ತಿರಬಹುದು, ಆದರೆ ನೀವು 'ಯಾವುದಕ್ಕೂ ಬಾರದವರಲ್ಲ '. ದೇವರು ನಿಮ್ಮನ್ನು ನೋಡುವ ಹಾಗೇ ನೀವು ಇದ್ದೀರಿ.
Bible Reading: Daniel 4-5
ಅರಿಕೆಗಳು
ದೇವರು ನನ್ನ ಕುರಿತು ಏನು ಹೇಳುತ್ತಾನೋ ನಾನು ಹಾಗೆ ಇದ್ದೇನೆ. ನಾನು ಕ್ರಿಸ್ತ ಯೇಸುವಿನಲ್ಲಿ ನೂತನ ಸೃಷ್ಟಿ; ಹಳೆಯ ವಿಷಯಗಳೆಲ್ಲ ಕಳೆದುಹೋಗಿವೆ. ಈಗ ಎಲ್ಲವೂ ನೂತನವಾಯಿತು. ಯೇಸುನಾಮದಲ್ಲಿ ವಾಕ್ಯವು ಹೇಳುವಂತೆಯೇ ನಾನು ಇದ್ದೇನೆ. ಆಮೆನ್.
Join our WhatsApp Channel

Most Read
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಜಯಿಸುವ ನಂಬಿಕೆ
● ಸಂತೃಪ್ತಿಯ ಭರವಸೆ
● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಅಪರಾಧಗಳಿಗಿರುವ ಪರಿಪೂರ್ಣ ಪರಿಹಾರ.
ಅನಿಸಿಕೆಗಳು