ಅನುದಿನದ ಮನ್ನಾ
ಯಾವಾಗ ಸುಮ್ಮನಿರಬೇಕು ಮತ್ತು ಯಾವಾಗ ಮಾತನಾಡಬೇಕು
Tuesday, 17th of September 2024
2
1
191
Categories :
ಮಾತು (Speech)
ಯಾವಾಗ ಮಾತನಾಡಬೇಕು ಯಾವಾಗ ಸುಮ್ಮನಿರಬೇಕು ಎಂದು ಅರಿತಿರುವುದನ್ನೇ ವಿವೇಕ ಮತ್ತು ವಿವೇಚನೆ ಎಂದು ಕರೆಯಲಾಗುತ್ತದೆ.
ಯಾವಾಗ ಮೌನ ಬಂಗಾರ?
ಕೋಪದ ಸಮಯದಲ್ಲಿ ಮೌನವು ಅತ್ಯುತ್ತಮವಾದದ್ದು. ನಾವು ಆ ಕೋಪದ ಸಮಯದಲ್ಲಿ ಮಾತನಾಡಿದರೆ ಖಂಡಿತವಾಗಿಯೂ ದೇವರ ವಾಕ್ಯಕ್ಕನುಗುಣವಾಗಿ ಮಾತನಾಡುವುದಿಲ್ಲ ಎಂದು ಅರಿತುಕೊಂಡು ಆ ಸಮಯದಲ್ಲಿ ಮೌನವಾಗಿರುವುದು ಅತ್ಯುತ್ತಮ ಕಾರ್ಯ. "ನನ್ನ ಪ್ರಿಯ ಸಹೋದರರೇ, ನೀವು ಬಲ್ಲವರು. ಆದರೆ ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ"ಎಂದು ಯಾಕೋಬನು 1:19 ನಮಗೆ ಸೂಚಿಸುತ್ತದೆ.
ಇದಕ್ಕೆ ಅನುರೂಪವಾಗಿ "ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ ವಂಚನೆಯ ಮಾತುಗಳನ್ನಾಡದಂತೆ ತುಟಿಗಳನ್ನೂ ಬಿಗಿಹಿಡಿಯಲಿ."ಎಂದು1 ಪೇತ್ರನು 3:10 ಹೇಳುತ್ತದೆ.
ಮೌನವು ನಮ್ಮನ್ನು ಪಾಪ ಮಾಡದಂತೆ ತಪ್ಪಿಸಿ (ಜ್ಞಾನೋಕ್ತಿ 10:9)ನಮಗೆ ಗೌರವವನ್ನು ತರುತ್ತದೆ (ಜ್ಞಾನೋಕ್ತಿ 11:12)ಮತ್ತು ಮೌನಿಯು ಜ್ಞಾನಿಯ ಹಾಗೆ ವಿವೇಕಿಯ ಹಾಗೆಯೂ ಕಾಣಿಸಲ್ಪಡುತ್ತಾನೆ (ಜ್ಞಾನೋಕ್ತಿ 17:28) ಎಂದು ದೇವರ ವಾಕ್ಯ ಹೇಳುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ನಿಮ್ಮ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳುವ ಮೂಲಕ ನೀವು ಆಶೀರ್ವದಿಸಲ್ಪಡುತ್ತೀರಿ.
ಕೆಲವೊಮ್ಮೆ ಮಾತನಾಡುವುದಕ್ಕಿಂತ ಸುಮ್ಮನೆ ಕಿವಿ ಕೊಡುವಂತದ್ದು ಅತ್ಯುತ್ತಮ ಆಯ್ಕೆಯಾಗಿರುತ್ತದೆ. ಆದಾಗಿಯೂ ಕಿವಿ ಕೊಡುವಂಥದ್ದು ಅನೇಕರಿಗೆ ಕಷ್ಟಕರವಾದ ಸಂಗತಿ. ಏಕೆಂದರೆ ಅದಕ್ಕೆ ದೀನತ್ವದ ಅಗತ್ಯವಿದೆ ಮತ್ತು ತಪ್ಪಾಗಿ/ ಅನರ್ಥ ಮಾಡಿಕೊಳ್ಳಬಹುದಾದ ಅಪಾಯವನ್ನು ಎದುರಿಸುವ ಎದೆಗಾರಿಕೆ ಅದಕ್ಕೆ ಬೇಕಾಗುತ್ತದೆ. ಮನುಷ್ಯ ಸಹಜ ಸ್ವಭಾವವು ಸ್ವಾಭಿಮಾನ ಉಳಿಸಿಕೊಳ್ಳಲು ಹೋರಾಡುತ್ತದೆ ಆದರೆ ಕ್ರಿಸ್ತನ ರೀತಿಯ ಸ್ವಭಾವವು ಸ್ವಾಭಿಮಾನವನ್ನು ಬಿಟ್ಟುಕೊಡುತ್ತದೆ. ((ಮಾರ್ಕ್ 8:34)
ಯಾವಾಗ ಮೌನವು ಬಂಗಾರವಲ್ಲ?
"ಸಬ್ಬತ್‍ದಿನದಲ್ಲಿ ಯಾವದನ್ನು ಮಾಡುವದು ನ್ಯಾಯ? ಮೇಲನ್ನು ಮಾಡುವದೋ, ಕೇಡನ್ನು ಮಾಡುವದೋ? ಪ್ರಾಣವನ್ನು ಉಳಿಸುವದೋ, ತೆಗೆಯುವದೋ? ಎಂದು ಹೇಳಲು ಅವರು ಸುಮ್ಮನಿದ್ದರು."(ಮಾರ್ಕ 3:4)
ಕೆಲವೊಂದು ಸಮಯಗಳಿವೆ.ಅಲ್ಲಿ ನಿಜಕ್ಕೂ ಮೌನವೂ ಬಂಗಾರವಾಗಲು ಸಾಧ್ಯವಿಲ್ಲ.
"ಹೊಲಿಯುವ ಸಮಯ, ಸುಮ್ಮನಿರುವ ಸಮಯ, ಮಾತಾಡುವ ಸಮಯ, ಪ್ರೀತಿಸುವ ಸಮಯ,"(ಪ್ರಸಂಗಿ 3:7)
ಕೆಲವೊಂದು ಸಮಯದಲ್ಲಿ ನಾವು ಸುಮ್ಮನಿರಬೇಕು. ಆದರೆ ಕೆಲವೊಂದು ಸಮಯದಲ್ಲಿ ನಾವು ಮಾತನಾಡಲೇಬೇಕು ಎಂದು ದೇವರ ವಾಕ್ಯ ಸ್ಪಷ್ಟವಾಗಿ ಹೇಳುತ್ತದೆ. ಮಾತನಾಡಲೇಬೇಕಾದ ಸಮಯದಲ್ಲಿ ಒಬ್ಬನಾಗಲಿ/ ಒಬ್ಬಳಾಗಲಿ ಮೌನವಾಗಿದ್ದರೆ ಅದು ಬಹಳ ಅಪಾಯಕಾರಿ ಆದದ್ದು.
ಮತವನ್ನು ನೀಡಬೇಕಾದವರು ಮತ ಚಲಾಯಿಸಲೇ ಹೋದರೆ ತಪ್ಪಾದ ಮನುಷ್ಯನು ಅಧಿಕಾರಕ್ಕೆ ಬರುತ್ತಾನೆ. ಸುಮ್ಮನಿರುವುದರಲ್ಲಿನ ಅಪಾಯಕ್ಕೆ ಇದೊಂದು ಉದಾಹರಣೆಯಾಗಿದೆ.
ಸುವಾರ್ತೆ ಸಾರುವ ವಿಚಾರದಲ್ಲಿ ನಾವು ಮೌನವಾಗಿರಬಾರದು. ಸುವಾರ್ತೆಯನ್ನು ಹಂಚಿಕೊಳ್ಳುವಂತದ್ದು ನಾವು ಶಿಲುಬೆಯ ವಿಚಾರದಲ್ಲಿ ನಾಚಿಕೊಳ್ಳುವರಲ್ಲ ಎಂಬುದನ್ನು ಪ್ರದರ್ಶಿಸುತ್ತದೆ. ಕ್ರಿಸ್ತನು ತನ್ನ ಶಿಷ್ಯರಿಗೆ ಕೊಟ್ಟ ಕಡೆಯ ಆಜ್ಞೆ ಎಂದರೆ "ಹೋಗಿರಿ, ಎಲ್ಲಾ ಜನಾಂಗದವರನ್ನು ನನ್ನ ಶಿಷ್ಯರನ್ನಾಗಿ ಮಾಡಿರಿ" ಎಂಬುದಾಗಿದೆ (ಮತ್ತಾಯ 28: 19)
ಒಂದು ವೇಳೆ ಯೇಸುವಿನ ಶಿಷ್ಯರು ಮತ್ತು ಇತರ ಸಾಕ್ಷಿಗಳು ಈ ಒಂದು ಆಜ್ಞೆಗೆ ಅವಿಧೇಯರಾಗಿ ಸುಮ್ಮನಿದ್ದರೆ ಏನಾಗುತ್ತಿತ್ತು ಸ್ವಲ್ಪ ಯೋಚಿಸಿ ನೋಡಿರಿ. ನೀವು ಮತ್ತು ನಾನು ನಿಶ್ಚಿತವಾಗಿ ಕರ್ತನ ಬಗ್ಗೆ ಅರಿಯದವರಾಗಿಯೇ ಇರುತ್ತಿದ್ದೆವು.
ಹಾಗೆಯೇ ಚರ್ಚಿನಲ್ಲಿ ಯಾವುದೋ ಒಂದು ತಪ್ಪಾದ ಸಂಗತಿ ಜರಗುತಿದೆ ಎಂದು ನಿಮಗೆ ತಿಳಿದು ಬಂದರೆ ಸರಿಯಾದ ಅಧಿಕಾರಿಗಳಿಗೆ ಅದನ್ನು ವಿವೇಕಯುತವಾಗಿ ತಿಳಿಸಬೇಕು. ಇಲ್ಲದಿದ್ದರೆ ಇಂತಹ ಸಮಯದಲ್ಲಿ ನೀವು ಸುಮ್ಮನಿರುವುದಾದರೆ ಅನೇಕರು ಬೆಲೆತೆತ್ತಬೇಕಾದ ಪರಿಸ್ಥಿತಿಗೆ ಅದು ತಳ್ಳುತ್ತದೆ.
ಹಾಗಾಗಿ ನಾವು ಹೇಗೆ ಮಾತನಾಡಬೇಕು?
"ಅವರ ಬೆದರಿಸುವಿಕೆಗೆ ಹೆದರದೆ ಕಳವಳಪಡದೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ." ಎಂದು 1 ಪೇತ್ರನು 3:15 ನಮಗೆ ಬೋದಿಸುತ್ತದೆ
"ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳಿದುಕೊಳ್ಳುವಿರಿ." ಎಂದು ಕೊಲೊಸ್ಸೆಯವರಿಗೆ 4:6ನಮಗೆ ತಿಳಿಸಿ ಕೊಡುತ್ತದೆ
"ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣ ಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂಬುದೇ.." ನಮ್ಮ ಗುರಿಯಾಗಿದೆ (ತೀತನಿಗೆ 3:2)
ಮಾರ್ಟಿನ್ ನಿಮೊಲ್ಲರ್(1892-1984) ಒಬ್ಬ ಹೆಸರಾಂತ ಪಾದ್ರಿಯಾಗಿದ್ದು ಅವರು ಹಿಟ್ಲರ್ ಗೆ ಸಾರ್ವಜನಿಕವಾಗಿ ಬಹಿರಂಗವಾದ ವೈರಿಯಾಗಿ ಕಾಣಿಸಿಕೊಂಡರು. ಅವರು ತಮ್ಮ ಕಡೆಯ ಏಳು ವರ್ಷಗಳನ್ನು ನಾಜಿ ಆಳ್ವಿಕೆಯ ಕಾನ್ಸಂಟ್ರೇಷನ್ ಕ್ಯಾಂಪ್ಗಳ್ಳಲ್ಲಿ ಕಳೆದರು.
ಪ್ರಾಯಶಃ ನಿಮ್ಮೊಲ್ಲರ್ ರವರು ಅವರ ಅತ್ಯುತ್ತಮವಾದ ಈ ಉಲ್ಲೇಖಗಳಿಗಾಗಿಯೇ ನೆನಪಾಗುತ್ತಾರೆ:
"ಮೊದಲಿಗೆ ಈ ನಾಜಿ ಗಳು ಸಮಾಜವಾದಿಗಳಿಗಾಗಿ ಬಂದರು- ನಾನು ಮಾತನಾಡಲಿಲ್ಲ. ಏಕೆಂದರೆ ನಾನು ಸಮಾಜವಾದಿಯಾಗಿರಲಿಲ್ಲ.
ನಂತರ ಇವರುಗಳು ಟ್ರೇಡ್ ಯೂನಿಯನ್ಗಳಿಗಾಗಿ ಬಂದರು- ನಾನು ಮಾತನಾಡಲಿಲ್ಲ. ಏಕೆಂದರೆ ನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ.
ನಂತರ ಇವರುಗಳು ಯಹೂದಿಗಳಿಗಾಗಿ ಹುಡುಕಲು ಬಂದರು- ನಾನು ಮಾತನಾಡಲಿಲ್ಲ. ಏಕೆಂದರೆ ನಾನು ಒಬ್ಬ ಯಹೂದಿ ಆಗಿರಲಿಲ್ಲ.
ನಂತರ ಅವರು ನನಗಾಗಿಯೇ ಬಂದರು ಮತ್ತು ನನ್ನ ಪರವಾಗಿ ಮಾತನಾಡಲು ಯಾರು ಇರಲಿಲ್ಲ."
ಪ್ರಾರ್ಥನೆಗಳು
ತಂದೆಯೇ ಯಾವಾಗ ನಾನು ಮಾತನಾಡಬೇಕು ಮತ್ತು ಯಾವಾಗ ಮೌನವಾಗಿರಬೇಕು ಎಂಬ ವಿವೇಕ ಮತ್ತು ವಿವೇಚನೆಯನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು
ನನ್ನ ಪ್ರತಿಯೊಂದು ಸಂಭಾಷಣೆಯು ಯಾವಾಗಲೂ ನಿನ್ನ ಕೃಪೆಯಿಂದ ತುಂಬಿರಲಿ. ಉಪ್ಪಿನಂತೆ ರುಚಿಯಾಗಿರಲಿ.ಆಗ ನಾನು ಯಾರಿಗೆ ಹೇಗೆ ಉತ್ತರ ನೀಡಬೇಕೆಂದು ತಿಳಿದುಕೊಳ್ಳಬಹುದು ಎಂದು ಯೇಸುನಾಮದಲ್ಲಿ ಬೇಡುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ಹೆಚ್ಚಿನ ಹೊರೆ ಬೇಡ● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
● ಆ ವಾಕ್ಯವನ್ನು ಹೊಂದಿಕೊಳ್ಳಿರಿ
● ಅತ್ಯಂತ ಸಾಮಾನ್ಯ ಭಯಗಳು
● ಮೊಗ್ಗು ಬಿಟ್ಟಂತಹ ಕೋಲು
● ಯುದ್ಧಕ್ಕಾಗಿ ತರಬೇತಿ.
● ದಿನ 06: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು