ಅನುದಿನದ ಮನ್ನಾ
ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ
Friday, 9th of August 2024
4
3
173
Categories :
ಸಮಯ ನಿರ್ವಹಣೆ (Time Management)
"ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ." (ಎಫೆಸದವರಿಗೆ 5:16)
"ನನಗೆ ಏನಾದರೂ ಇನ್ನೂ ಸ್ವಲ್ಪ ಸಮಯ ಸಿಕ್ಕಿದಿದ್ದರೆ!" ಎನ್ನುವಂತದು ಅನೇಕ ಯಶಸ್ವಿ ವ್ಯಕ್ತಿಗಳ ಅಳಲಾಗಿದೆ. ನಾವು ನಮ್ಮ ನಮಗಿರುವ ದಿನನಿತ್ಯದ ದಿನಚರಿಗಳನ್ನು ಪೂರೈಸುವುದಕ್ಕಾಗಿ ಬಹಳ ಬಿಡುವಿಲ್ಲದಂತಹ ಹೊರೆಹೊತ್ತಂತಹ ಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ಕೆಲವೊಂದು ಸಾರಿ ಈ ಎಲ್ಲಾ ಹೊರೆಗಳಿಂದ ಬಹಳ ಹತಾಶರಾಗಿ ಬಿಡುತ್ತೇವೆ. ನೀವೂ ಸಹ ಈ ಅನುಭವ ಹಾದು ಹೋಗಿದ್ದಿರೆಂದು ನನಗೆ ಗೊತ್ತು.
ಈ ವಿಶ್ವದಲ್ಲಿ ಅತ್ಯಂತ ಅಮೂಲ್ಯವಾದಂತ ಸಂಪನ್ಮೂಲಗಳಲ್ಲಿ ಸಮಯವೂ ಒಂದಾಗಿದೆ. ದೇವರು ಪಾಪಿಗೂ- ಸಂತನಿಗೂ ಇಬ್ಬರಿಗೂ ಒಂದೇ ಸಮನಾಗಿ 24 ಗಂಟೆಗಳನ್ನೇ ದಿನಕ್ಕೆ ಕೊಟ್ಟಿದ್ದಾನೆ.
ಇಂದಿನ ದಿನಮಾನದಲ್ಲಿ ಬಿಡುವಿಲ್ಲದ ಕಾರ್ಯನಿರತತೆ ಎಂಬುದು ಸಾಮಾನ್ಯ ಸಂಗತಿಯಾಗಿದೆ. ಆದಾಗಿಯೂ ಈ ರೀತಿ ಬಿಡುವಿಲ್ಲದ ಕಾರ್ಯನಿರತತೆ ಎಂದ ಮಾತ್ರಕ್ಕೆ ಅದು ಬಹಳ ಫಲ ಕೊಡುತ್ತಿದೆ ಎಂದು ಅರ್ಥವಲ್ಲ. ವಾಸ್ತವವಾಗಿ ಈ ವಿಚಾರವನ್ನು ನಾವು ನೆನಪಿನಲ್ಲಿಟ್ಟುಕೊಂಡಿರಬೇಕು.
ಕ್ರೈಸ್ತರಾದ ನಮಗೆ ಸಮಯ ನಿರ್ವಹಣೆ ಎಂಬುದು ಅತ್ಯಂತ ನಿರ್ಣಾಯಕ ಅಂಶವಾಗಿದೆ. ಏಕೆಂದರೆ ದೇವರು ನಮಗೆ ಅನುಗ್ರಹಿಸಿರುವ ಎಲ್ಲದರ ಮೇಲು ನಾವು ಉತ್ತಮ ಮನೆವಾರ್ತೆಯವರಾಗಿರಬೇಕೆಂದು ದೇವರು ನಮ್ಮನ್ನು ಕರೆದಿದ್ದಾನೆ. ಸಮಯ ನಿರ್ವಹಣೆ ಎಂದ ಕೂಡಲೇ ನಿಮ್ಮ ದಿನದ ವೇಳಾಪಟ್ಟಿಯನ್ನು ಸಾಧ್ಯವಾದಷ್ಟು ಏನೋ ಒಂದು ಕೆಲಸದಿಂದ ತುಂಬುವಂತದ್ದು ಎಂದು ಬಹಳ ಜನ ಭಾವಿಸುತ್ತಾರೆ. ಇದೊಂದು ತಪ್ಪಾದ ಗ್ರಹಿಕೆಯಾಗಿದೆ.
ಮೊದಲನೆಯದಾಗಿ ನೀವೊಬ್ಬ ಗೃಹಿಣಿಯಾಗಿದ್ದರೂ ಅಥವಾ ವಿದ್ಯಾರ್ಥಿಯಾಗಿದ್ದರೂ ಸಹ ನಿಮ್ಮ ಕಾರ್ಯ ಪಟ್ಟಿಗಳನ್ನು ನಿರ್ವಹಿಸಲು ಯಾವಾಗಲೂ ಕ್ಯಾಲೆಂಡರ್ ಅನ್ನು ಸಮಯಪಟ್ಟಿಗಳನ್ನು ಬಳಸಿ. ಇದು ನಿಮ್ಮ ಸಮಯವನ್ನು ಕರಾರುವಕ್ಕಾಗಿ ಮತ್ತು ಪರಿಣಾಮಕಾರಿಯಾಗಿ ಯೋಜಿಸಲು ನಿಮಗೆ ಸಹಾಯ ಮಾಡುತ್ತದೆ.
ಎರಡನೆಯದಾಗಿ, ನಾನು ಯಾವುದಾದರೂ ಕೆಲಸವನ್ನು ಒಪ್ಪಿಕೊಳ್ಳುವ ಮೊದಲು ಉದಾಹರಣೆಗೆ ಯಾರನ್ನಾದರೂ ಭೇಟಿಯಾಗುವುದು...ಇತ್ಯಾದಿ. ಮಾಡುವಾಗ ನಾನು ಅದು ದೇವರ ದೃಷ್ಟಿಯಲ್ಲಿ ಮುಖ್ಯವಾಗಿದೆಯೇ ಇದರಿಂದ ದೇವರಿಗೆ ಮಹಿಮೆಯಾಗುತ್ತದೆಯೇ ಎಂದು ನನಗೆ ನಾನೇ ಕೇಳಿಕೊಳ್ಳುತ್ತೇನೆ.ಕರ್ತನಾದ ಯೇಸುವು ಪ್ರಾಶಸ್ತ್ಯದ ತತ್ವದ ಕುರಿತು ಹೀಗೆ ಹೇಳಿದ್ದಾನೆ. "ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು." ಎಂದು (ಮತ್ತಾಯ 6:33) ಹಾಗಾಗಿ ಯಾವಾಗಲೂ ಮುಖ್ಯವಾದ ವಿಚಾರಾಗಳಿಗಾಗಿಯೇ ಪ್ರಾಶಸ್ತ್ಯ ನೀಡಿರಿ. ಮುಖ್ಯವಾದವುಗಳ ಕಡೆಗೆ ಮನಸ್ಸಿಡಿರಿ.
ಮೂರನೆಯದಾಗಿ, ಸಮಯವನ್ನು ಸಮರ್ಥವಾಗಿ ನಿರ್ವಹಿಸಬೇಕೆಂದುಕೊಂಡರೆ, ನೀವು ಎಲ್ಲರಿಗೂ ಸಹ "ಸರಿ" ಎಂದು ಹೇಳಲು ಸಾಧ್ಯವಿಲ್ಲ. ಕೆಲವು ವಿಚಾರಗಳಿಗೆ ಕೆಲವರಿಗೆ "ಇಲ್ಲಾ" ಎಂದು ಹೇಳುವಂಥದ್ದನ್ನೂ ಕೂಡ ಅದು ಒಳಗೊಂಡಿರುತ್ತದೆ. ಇಂದು ಎಲ್ಲರಿಗೂ ಎಲ್ಲದಕ್ಕೂ "ಸರಿ" "ಆಗಲಿ" ಎಂದು ಹೇಳಿ ತಮ್ಮ ಜೀವನವನ್ನೇ ಅಸ್ತವ್ಯಸ್ತಗೊಳಿಸಿಕೊಂಡು ಹೈರಾಣಾಗಿ ಹತಾಶೆಯಿಂದ ಓಡುತ್ತಿರುವವರು ಬಹಳ ಮಂದಿ ಇದ್ದಾರೆ.
ಕಡೆಯದಾಗಿ, ನನ್ನ ಸಮಯವನ್ನು ಸಮರ್ಥವಾಗಿ ನಾನು ನಿರ್ವಹಿಸುವ ಜ್ಞಾನ -ವಿವೇಕಗಳನ್ನು ನನಗೆ ದಯಪಾಲಿಸಬೇಕೆಂದು ನಾನು ಯಾವಾಗಲೂ ಕರ್ತನಲ್ಲಿ ಪ್ರಾರ್ಥಿಸುತ್ತಿರುತ್ತೇನೆ. ಉದಾಹರಣೆಗೆ ಸುವಾರ್ತೆ ಸೇವೆಗಾಗಿಯೋ ಇಲ್ಲವೇ ಪ್ರಸಂಗಿಸಲೋ ನನಗೆ ಆಮಂತ್ರಣ ಬಂದಾಗಲೆಲ್ಲಾ ತಕ್ಷಣವೇ "ಸರಿ" ಎಂದು ನಾನು ಒಪ್ಪಿಕೊಳ್ಳುವುದಿಲ್ಲ. ನಾನು ಅದನ್ನು ಕರ್ತನ ಮುಂದೆ ಪ್ರಾರ್ಥನೆಯಲ್ಲಿ ಇಡುತ್ತೇನೆ. ಕರ್ತನು ಫಲವಿಲ್ಲದ ಪ್ರಯತ್ನಗಳಿಂದ ನನ್ನನ್ನು ತಪ್ಪಿಸಲಿ ಎಂದು ಪ್ರಾರ್ಥಿಸುತ್ತೇನೆ. ನೀವೂ ಸಹ ಈ ಪ್ರಾರ್ಥನೆಯ ಅಂಶವನ್ನು ನಿಮ್ಮ ಪ್ರಾರ್ಥನೆಗಳಲ್ಲಿ ಅಳವಡಿಸಿಕೊಳ್ಳಬಹುದು.
ನಾನು ಉಪಯೋಗಿಸುವ ಮತ್ತೊಂದು ಸಮಯ ನಿರ್ವಹಣೆಯ ತಂತ್ರವೆಂದರೆ, ನಾನು ಸಹಾಯವನ್ನು ಕೇಳಿಕೊಳ್ಳುತ್ತೇನೆ. ನನ್ನ ಸುತ್ತಲಿನ ಅಂದರೆ ನನ್ನ ಮನೆಯಲ್ಲಿರುವ ನನ್ನ ಹೆಂಡತಿಯನ್ನು ಅಥವಾ ಮಕ್ಕಳನ್ನು ನನಗೆ ಸಹಾಯ ಮಾಡಿರಿ ಎಂದು ಕೇಳಿ ಪಡೆಯುತ್ತೇನೆ. ಅಗತ್ಯವಿದ್ದಾಗ ನಿಮ್ಮ ಕುಟುಂಬದವರ ಮತ್ತು ಸ್ನೇಹಿತರ ಸಹಾಯವನ್ನು ಕೇಳಲು ನಾಚಿಕೆ ಪಟ್ಟುಕೊಳ್ಳಬೇಡಿರಿ.
ನಮ್ಮ ಸಮಯವನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ನಾವು ಹೆಚ್ಚು ಫಲಪ್ರದರಾಗಬಹುದು ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಆಗ ನಾವು ನಮ್ಮ ಕರೆಯನ್ನು ಹೆಚ್ಚು ಸಮರ್ಪಕವಾಗಿ ಪೂರೈಸಿ, ದೇವರಿಗೆ ಮಹಿಮೆಯನ್ನು ತಂದುಕೊಡಬಹುದು.
ಪ್ರಾರ್ಥನೆಗಳು
ತಂದೆಯೇ, ನಾನು ಸಮಯವನ್ನು ಸಮರ್ಪಕವಾಗಿಯೂ ಪರಿಣಾಮಕಾರಿಯಾಗಿಯೂ ನಿರ್ವಹಿಸುವಂತೆ ಜ್ಞಾನ ವಿವೇಕವನ್ನೂ - ವಿವೇಚನೆಯನ್ನೂ ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ತಂದೆಯೇ ನಿಷ್ಪಲವಾದ ಪ್ರಯತ್ನಗಳಿಂದ- ಚಟುವಟಿಕೆಗಳಿಂದ ನನ್ನನ್ನು ಯೇಸು ನಾಮದಲ್ಲಿ ಕಾಪಾಡು. ನಿನ್ನ ಮಹಿಮೆಗಾಗಿ ನಾನು ಫಲ ಕೊಡುವಂತೆ ನನಗೆ ಸಹಾಯ ಮಾಡು. ಆಮೇನ್.
Join our WhatsApp Channel
Most Read
● ಉಪವಾಸದ ಮೂಲಕ ದೇವದೂತರ ಸಂಚಲನೆಯನ್ನು ಉಂಟು ಮಾಡುವುದು.● ನಿಮ್ಮ ಕೆಲಸದ ಕುರಿತ ಒಂದು ರಹಸ್ಯ
● ನಿಮ್ಮ ಅನುಭವವನ್ನು ವ್ಯರ್ಥ ಮಾಡಿಕೊಳ್ಳಬೇಡಿರಿ
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ವಾಕ್ಯದಿಂದ ಬೆಳಕು ಬರುತ್ತದೆ
● ದೇವರು ನನಗಿಂದು ಒದಗಿಸುತ್ತಾನೋ?
● ದಿನ 26:40ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು