ಅನುದಿನದ ಮನ್ನಾ
ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
Thursday, 22nd of February 2024
3
3
351
Categories :
ಪ್ರಾರ್ಥನೆ (prayer)
ಅನೇಕ ಜನರು ತಾವು ಮಾಡುತ್ತಿದ್ದ ಕಾರ್ಯಗಳನ್ನೇ ಮಾಡುತ್ತಾ ಅದರಲ್ಲೇ ಸಿಕ್ಕಿಹಾಕಿಕೊಂಡಿರುತ್ತಾರೆ ವಿನಃ ದೇವರ ವಾಕ್ಯವು ಏನು ಹೇಳುತ್ತದೆಯೋ ಅದನ್ನು ತಮ್ಮ ಜೀವಿತದಲ್ಲಿ ಅಳವಡಿಸಿಕೊಂಡು ಅದನ್ನು ಪ್ರತಿಫಲಿಸುವಂತೆ ಮಾಡಲು ಸಮಯ ತೆಗೆದುಕೊಳ್ಳುವುದಿಲ್ಲ.
ನಾನೀಗ ಏನನ್ನು ಹೇಳುತ್ತಿದ್ದೇನೋ ದಯಮಾಡಿ ಅದನ್ನು ಅರ್ಥ ಮಾಡಿಕೊಳ್ಳಿ. ನಿಮ್ಮೆಲ್ಲಾ ಆಲೋಚನೆಗಳು ದೇವರ ವಾಕ್ಯಕ್ಕೆ ಸಂಬಂಧಪಟ್ಟಂತೆ ಇರಬೇಕು. ನೀವು ನಿಮ್ಮ ಜೀವನವನ್ನು ವಾಕ್ಯಕ್ಕೆ ಸಂಬಂಧಿಸಿದಂತೆ ಯೋಚಿಸದೇ ಸಾದಾಸಗಟಾಗಿ ಯೋಚಿಸುತ್ತಿದ್ದರೆ ನಿಮ್ಮ ಜೀವಿತವನ್ನು ಭಯದಲ್ಲೂ ಚಿಂತೆಯಲ್ಲೂ ಅಂತ್ಯಗೊಳಿಸುತ್ತೀರಿ. ಆದಾಗಿಯೂ ನೀವು ನಿಮ್ಮ ಜೀವನವನ್ನು ದೇವರ ವಾಕ್ಯಕ್ಕೆ ಅನುಗುಣವಾಗಿ ಇರಬೇಕೆಂದು ಯೋಚಿಸಿ ಅದರಂತೆ ಹೆಜ್ಜೆ ಇಡಲು ಆರಂಭಿಸಿದರೆ ನೀವು ಕ್ರಿಯಾತ್ಮಕ ಆಲೋಚನೆಗಳೊಂದಿಗೂ ಕುಶಲವಾದ ಆಲೋಚನೆಗಳಿಂದಲೂ ನಿಮ್ಮ ಜೀವಿತವನ್ನು ಮೇಲೆ ತರಬಲ್ಲಿರಿ.
"ಆದರೆ ಮರಿಯಳು ಆ ಮಾತುಗಳನ್ನೆಲ್ಲಾ ತನ್ನ ಮನಸ್ಸಿನಲ್ಲಿಟ್ಟುಕೊಂಡು ಯೋಚಿಸುತ್ತಿದ್ದಳು."(ಲೂಕ 2:19)
ಯೇಸುವಿನ ತಾಯಿಯಾದ ಮರಿಯಳು ಬದುಕನ್ನೇ ಬದಲಾಯಿಸುವ ಸಂದೇಶವನ್ನು ದೇವದೂತನಾದ ಗೇಬ್ರಿಯೆಲನಿಂದ ಹೊಂದಿದಾಗ ಆಕೆಯು ಆ ವಾಕ್ಯವನ್ನು ಸ್ವೀಕರಿಸಿ ಅದರಂತೆ ಪ್ರತಿಫಲಿಸಲು ಆರಂಭಿಸಿದಳು. ಅವಳು ಎಷ್ಟು ಹೆಚ್ಚು ಹೆಚ್ಚಾಗಿ ವಾಕ್ಯವನ್ನು ತನ್ನಲ್ಲಿ ಪ್ರತಿಫಲಿಸಲು ಆರಂಭಿಸಿದಳೋ ಅಷ್ಟೇ ಹೆಚ್ಚು ಹೆಚ್ಚಾಗಿ ಅವಳಲ್ಲಿ ವಾಕ್ಯವು ಬೆಳೆಯುತ್ತಾ ಬಂದಿತು.
ಇಂದಿನ ದಿನಮಾನಗಳಲ್ಲಿ ಜನರಿಗೆ ವಿಶ್ರಾಂತಿ ಬೇಕು ಎಂದ ಕೂಡಲೇ ಅವರು ಮಾಡುವ ಕೆಲಸವೇನೆಂದರೆ, ತಮ್ಮ ಸ್ಮಾರ್ಟ್ ಫೋನ್ ಗಳನ್ನು ಕೈಗಳಲ್ಲಿ ಎತ್ತಿಕೊಂಡು ಕುಳಿತುಬಿಡುವಂಥದ್ದು. ಇದು ದೇವರ ವಾಕ್ಯವು ಅವರಲ್ಲಿ ಪ್ರತಿಫಲಿಸುವುದನ್ನು ಅಡ್ಡಿಪಡಿಸುವಂತದ್ದಾಗಿದೆ. ಇದು ನೀವು ದೇವರ ವಾಕ್ಯವನ್ನು ಧ್ಯಾನಿಸಿ ಅದರಲ್ಲಿರುವ ಬೆಲೆಯುಳ್ಳ ಆಂತರಿಕ ಅರ್ಥವನ್ನು ಅರ್ಥೈಸಿಕೊಳ್ಳಲಾರದಂತೆ ಅದರ ಸಂಪೂರ್ಣ ಮಟ್ಟವನ್ನು ತಲುಪಲಾರದಂತೆ ಮಾಡುತ್ತದೆ.
ಸಾಮಾನ್ಯವಾಗಿ ನಾನು ನನ್ನ ದಿನವನ್ನು ಪ್ರಾರ್ಥನೆಯಿಂದ ಮುಗಿಸುವಾಗ ನನ್ನ ದಿನವನ್ನು ಹೇಗೆ ಕಳೆದೆನೆಂದು ನಾನೊಮ್ಮೆ ವೀಕ್ಷಿಸುತ್ತೇನೆ. ಅದರಲ್ಲಿ ಕೆಲವೊಮ್ಮೆ ನನ್ನ ಪತ್ನಿಯೊಡನೆ ಕಠೋರವಾಗಿ ನಡೆದುಕೊಂಡಿದ್ದರೆ ಕರ್ತನಲ್ಲಿ ಅದಕ್ಕಾಗಿ ಕೃಪೆಯನ್ನು ಬೇಡಿಕೊಳ್ಳುತ್ತೇನೆ. ನಾನು ಮನಸ್ಸಿನಲ್ಲಿ ಈ ದಿನವನ್ನು ಹೇಗೆಲ್ಲಾ ನೆರವೇರಿತು, ಕರ್ತನು ಅದಕ್ಕೆ ನನಗೆ ಹೇಗೆಲ್ಲಾ ಸಹಾಯ ಮಾಡಿದನು ಎಂದು ನೆನೆಸಿ ಆತನಿಗೆ ಸ್ತೋತ್ರ ಸಲ್ಲಿಸುತ್ತೇನೆ. ಆಗಲೇ ಕರ್ತನು ತನ್ನ ಹೊಸ ಯೋಜನೆಯನ್ನು, ಬದಲಾವಣೆಯನ್ನು ಮುಂತಾದ ಕಾರ್ಯಗಳನ್ನು ನನಗೆ ಪ್ರಕಟಿಸುತ್ತಾನೆ.
ನೀವು ಪ್ರಯತ್ನಿಸಿ ನೋಡಿರಿ
ನೀವು ಆತನ ಉಪಸ್ಥಿತಿಯನ್ನು ಪ್ರತಿಫಲಿಸುವಾಗ ಈ ಕೆಲವು ಪ್ರಶ್ನೆಗಳನ್ನು ನಿಮ್ಮಲ್ಲಿ ನೀವೇ ಕೇಳಿಕೊಳ್ಳಬಹುದು.
ನಾನು ಈ ದಿನವನ್ನು ದೇವರ ವಾಕ್ಯಕ್ಕನುಗುಣವಾಗಿ ಕಳೆದಿದ್ದೇನಾ?( ಈ ದಿನದಲ್ಲಿ ನಾನು ಮಾಡಿದ ಕೆಲಸಗಳು ದೇವರ ವಾಕ್ಯ ಕ್ಕನುಗುಣವಾಗಿತ್ತಾ?)
ನಾನು ಯಾವೆಲ್ಲಾ ಸಂಗತಿಗಳನ್ನು ಬದಲಾಯಿಸಿಕೊಳ್ಳುವ ಅಗತ್ಯವಿದೆ?
ಯಾವೆಲ್ಲ ಕಾರ್ಯಗಳನ್ನು ನಾನು ಚೆನ್ನಾಗಿ ಮಾಡಿದೆ? ಅವುಗಳಿಗಾಗಿ ಕರ್ತನನ್ನು ಸ್ತುತಿಸಿದ್ದೇನಾ?
ನಾನು ಈ ದಿನ ಮಾಡುತ್ತಿರುವ ಕಾರ್ಯಗಳಿಂದ ಯಾವುದಾದರೂ ದೀರ್ಘಕಾಲಿಕ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆಯಾ?ಅದನ್ನು ಬದಲಾಯಿಸಬೇಕಾ? ಈ ರೀತಿ ಪ್ರಶ್ನೆಗಳನ್ನು ನಿಮ್ಮಲ್ಲಿ ನೀವೇ ಕೇಳಿಕೊಳ್ಳಿ.
ಗಮನಿಸಿ : ಈ ದಿನದ ಸಂದೇಶಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ಯಾವುದಾದರೂ ಒಳ್ಳೆಯ ಮಾತುಗಳಿದ್ದರೆ, ಕೆಲವು ಒಳ್ಳೆಯ ಸಾಮ್ಯಗಳಿದ್ದರೆ ಅಥವಾ ದೇವರ ವಾಕ್ಯವಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿ.
ಇದು ನನಗೆ ಬಹಳ ಸಹಕಾರಿಯಾದದ್ದು.
ಪ್ರಾರ್ಥನೆಗಳು
ತಂದೆಯಾದ ದೇವರೇ ನನ್ನ ಜೀವನದ ಪ್ರತಿಯೊಂದು ದಿನದಲ್ಲೂ ನಿಮ್ಮ ಆತ್ಮದ ಬೆಳಕು ಪ್ರಕಾಶಿಸಲಿ. ತಂದೆಯೇ ಕರ್ತನಾದ ಯೇಸು ಕ್ರಿಸ್ತನ ಸ್ವಭಾವವು ಯೇಸು ನಾಮದಲ್ಲಿ ನನ್ನ ಜೀವತದಲ್ಲೆಲ್ಲಾ ಪ್ರತಿಫಲಿಸಲಿ. ಆಮೆನ್.
Join our WhatsApp Channel
Most Read
● ಪುರಾತನ ಮಾರ್ಗಗಳನ್ನು ವಿಚಾರಿಸಿ● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಕರ್ತನಾದ ಯೇಸುಕ್ರಿಸ್ತನನ್ನು ಅನುಕರಣೆ ಮಾಡುವುದು ಹೇಗೆ
● ಪ್ರಾರ್ಥನಾ ಹೀನತೆ ಎಂಬ ಪಾಪ
● ಒಳಕೋಣೆ
● ಪರಲೋಕದ ವಾಗ್ದಾನ
ಅನಿಸಿಕೆಗಳು