ಅನುದಿನದ ಮನ್ನಾ
1
0
412
ಕೃತಜ್ಞತೆಯ ಯಜ್ಞ
Sunday, 18th of August 2024
Categories :
ಉಪಕಾರಸ್ತುತಿ (Thanksgiving)
"ಕೃತಜ್ಞತಾಯಜ್ಞಗಳನ್ನು ಸಮರ್ಪಿಸಿ ಉತ್ಸಾಹಧ್ವನಿಮಾಡುತ್ತಾ ಆತನ ಮಹತ್ಕಾರ್ಯಗಳನ್ನು ವರ್ಣಿಸಲಿ."(ಕೀರ್ತನೆಗಳು 107:22)
ಹಳೆ ಒಡಂಬಡಿಕೆಯಲ್ಲಿ ಕೃತಜ್ಞತಾ ಸ್ತೋತ್ರವು ಯಾವಾಗಲೂ ರಕ್ತಧಾರೆಯನ್ನು ಒಳಗೊಂಡಿರುತಿತ್ತು. ಹೊಸ ಒಡಂಬಡಿಕೆಯಲ್ಲಿ ಯೇಸು ಕ್ರಿಸ್ತನು ತನ್ನನ್ನೇ ತಾನು ನಮಗಾಗಿ ಒಂದೇ ಬಾರಿ ಯಜ್ಞವಾಗಿ ಶಿಲುಬೆಯ ಮೇಲೆ ಸಮರ್ಪಿಸಿಕೊಂಡನು. ಹಾಗಾಗಿ ಇನ್ನು ರಕ್ತಧಾರೆಯ ಅವಶ್ಯಕತೆ ಇಲ್ಲ. ಆದಾಗಿಯೂ ಸತ್ಯವೇದವು "ಕೃತಜ್ಞತಾ ಸ್ತೋತ್ರದ" ಯಜ್ಞದ ಕುರಿತು ಮಾತನಾಡುತ್ತದೆ.
ನಾವು ಯಾವಾಗಲೂ ಕರ್ತನ ಬಳಿಗೆ ಬರುವಾಗ ಕೃತಜ್ಞತಾ ಸ್ತೋತ್ರದೊಡನೆಯೂ ಸ್ತುತಿಗಳ ಯಜ್ಞದೊಂದಿಗೂ ಬರಬೇಕೆಂದು ಸತ್ಯವೇದವು ನಮಗೆ ಅಜ್ಞಾಪಿಸುತ್ತದೆ. (ಕೀರ್ತನೆಗಳು 100:4). ನಮ್ಮ ಕುಟುಂಬದಲ್ಲಿ ನಮ್ಮ ಜೀವಿತದಲ್ಲಿ ಎಲ್ಲವೂ ಅನಿಷ್ಟವಾಗಿ ನಡೆಯುತ್ತಿರುವ ಸಮಯ ಬಂದಾಗ ನಾವು ಕರ್ತನಿಗೆ ಸ್ತೋತ್ರವನ್ನು ಸಲ್ಲಿಸುವುದು ಸ್ತುತಿ ಮಾಡುವುದು ಬೇಕೋ - ಬೇಡವೋ ಎಂಬ ಆಯ್ಕೆ ನಮಗೆ ಬಿಟ್ಟದ್ದು.ಇದು ಅಕ್ಷರಶಃ ನಮ್ಮ ಆಂತರ್ಯದಲ್ಲಿ ರಕ್ತಧಾರೆ ಸುರಿಸುವಂತ ಸಂಗತಿಯಾಗಿದೆ.
ನನಗೆ ನಿಮ್ಮ ಬಗ್ಗೆ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಇಂತಹ ಒಂದು ಕಣಿವೆಯನ್ನು ದಾಟುವ ಸಮಯವಿತ್ತು. ಆಗ ನಮ್ಮ ಮಾಂಸದ ಶರೀರವು "ಇನ್ನು ಯಾವುದಕ್ಕಾಗಿ ದೇವರ ಸ್ತೋತ್ರ ಮಾಡುತ್ತಿದ್ದೀಯ? ಇನ್ನೇನೂ ಒಳ್ಳೆಯದಾಗುವುದೇ ಇಲ್ಲ" ಇಂದು ಕೂಗಿಕೊಳ್ಳುತ್ತದೆ.
ಆದರೂ ನೀವು ಒಂದು ಆಯ್ಕೆ ಮಾಡಿಕೊಂಡು ಕರ್ತನೇ "ನೀನು ನನಗಾಗಿ ಕೊಟ್ಟ ರಕ್ಷಣೆಗಾಗಿ ಸ್ತೋತ್ರ. ನನ್ನನ್ನು ಇಷ್ಟು ದೂರ ನಡೆಸಿದಕ್ಕಾಗಿ ಸ್ತೋತ್ರ" ಎಂದು ಹೇಳುವವರಾಗಿರುತ್ತೀರಿ. ಯಜ್ಞ ಎಂದರೆ ಅದು ಒಂದು ಬೆಲೆಯನ್ನು ನೀವು ಕಟ್ಟಬೇಕು ಎನ್ನುವುದಾಗಿದೆ.ಆಗ ನೀವು ಅಕ್ಷರಶಃ ಕಣ್ಣೀರಿಡುತ್ತಾ ಇರುತ್ತೀರಿ. ಆದರೂ ಅದು ಕೃತಜ್ಞತಾ ಯಜ್ಞ ಎಂದು ಕರೆಸಿಕೊಳ್ಳುತ್ತದೆ. ಇಂತಹ ಪ್ರಕರಣದಲ್ಲಿ ಯಜ್ಞ ಎಂದರೆ ಬೇರೇನೋ ಆಗಿರದೇ ಸ್ವತಃ ನೀವೇ ಆ ಯಜ್ಞವಾಗಿರುತ್ತೀರಿ.
ಕೆಲವೊಮ್ಮೆ ನಮ್ಮ ಲೌಕಿಕ ಶರೀರವು ದೇವರನ್ನು ಸ್ತೋತ್ರ ಮಾಡಲು ಬಯಸುವುದಿಲ್ಲ. ಅದಾಗಿಯೂ "ಎಲ್ಲಾ ಪರಿಸ್ಥಿತಿಗಳಲ್ಲೂ" ನಾವು ದೇವರಿಗೆ ಸ್ತೋತ್ರ ಸಲ್ಲಿಸಬೇಕು. ಏಕೆಂದರೆ ಅದುವೇ ನಮಗಾಗಿ ಇರುವ ದೇವರ ಚಿತ್ತವಾಗಿದೆ. (1 ಥೆಸಲೋನಿಕ 5:18). ನಾವು ಯಾವುದೇ ಪರಿಸ್ಥಿತಿ ಹಾದು ಹೋಗುತ್ತಿದ್ದರೂ ಸರಿಯೇ ನಾವು ಯಾವಾಗಲೂ ಪ್ರತಿದಿನವೂ ದೇವರಿಗೆ ಕೃತಜ್ಞತಾ ಸ್ತೋತ್ರ ಸಲ್ಲಿಸಬೇಕೆಂಬುದು ಆತನ ಚಿತ್ತವಾಗಿದೆ.
ನಮ್ಮ ಅನುದಿನದ ಜೀವಿತದಲ್ಲಿ ಎಷ್ಟೊಂದು ಸವಾಲುಗಳು ನಮಗೆ ಎದುರಾಗಿ ಬರುತ್ತವೆ. ಈ ಎಲ್ಲಾ ಸವಾಲುಗಳು ನಾವು ಗೊಣಗುಟ್ಟುವಂತೆಯೂ, ಎಲ್ಲದರ ಕುರಿತು ದೂರು ಹೇಳುವಂತೆಯೂ ಮಾಡುತ್ತದೆ. ಆದರೆ ಅಂತಹ ಸಮಯದಲ್ಲಿಯೂ ನಮ್ಮೊಳಗೆ ದೇವರ ಶಾಂತಿಯನ್ನು ಕಾಯ್ದುಕೊಳ್ಳುವುದು ಹೇಗೆ? ಅದರ ರಹಸ್ಯವನ್ನು ಸತ್ಯವೇದವು ನಮಗೆ ಕೊಲಸ್ಸೆ 3:15ರಲ್ಲಿ ಪ್ರಕಟಿಸುತ್ತದೆ.
"ಕ್ರಿಸ್ತನಿಂದಾದ ಸಮಾಧಾನವು ನಿಮ್ಮ ಹೃದಯಗಳಲ್ಲಿ ಯಜಮಾನನಂತಿದ್ದು ತೀರ್ಪುಹೇಳಲಿ; ನೀವು ಒಂದೇ ದೇಹಕ್ಕೆ ಸೇರಿದವರಾದದರಿಂದ ಸಮಾಧಾನದಿಂದಿರುವದಕ್ಕಾಗಿ ಕರೆಯಲ್ಪಟ್ಟಿರಿ. ಇದಲ್ಲದೆ ಕೃತಜ್ಞತೆಯುಳ್ಳವರಾಗಿರ್ರಿ."(ಕೊಲೊಸ್ಸೆಯವರಿಗೆ 3:15)
ದಿನದ ಎಲ್ಲಾ ಸಮಯದಲ್ಲೂ ದೇವರಿಗೆ ಕೃತಜ್ಞತ ಸ್ತೋತ್ರ ಸಲ್ಲಿಸುತ್ತಾ ಜೀವಿಸುವ ಸ್ವಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ "ಕರ್ತನೆ ಈ ಒಂದು ಪರಿಸ್ಥಿತಿಯನ್ನು ಗೆಲ್ಲಲು ಸಹಾಯ ಮಾಡಿದಕ್ಕಾಗಿ ನಿನಗೆ ಸ್ತೋತ್ರ. ಕರ್ತನೆ ನೀನು ಸಿಂಹಾಸನರೂಢನಾಗಿದ್ದು ನನ್ನ ಜಯವಾಗಿರುವುದಕ್ಕಾಗಿ ನಿನಗೆ ಸ್ತೋತ್ರ" ಎಂದು ಹೇಳಿರಿ
"ಆದದರಿಂದ ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ."(ಇಬ್ರಿಯರಿಗೆ 13:15)
ಸುತ್ತಲೂ ನೋಡುತ್ತಾ ಲೋಕದ ನಕರಾತ್ಮಕ ವಿಚಾರಗಳಿಗೆ ಒಳಗಾಗುವ ಬದಲು ದೇವರಿಗೆ ಕೃತಜ್ಞತೆ ಸಲ್ಲಿಸಲು ಇರುವ ಕಾರಣಗಳಿಗಾಗಿ ಸುತ್ತಲೂ ಹುಡುಕಿರಿ. "ನಿರಂತರವಾಗಿ" ವಾಕ್ಯಗಳನ್ನು ಧ್ಯಾನಿಸಿ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೃತಜ್ಞತಾ ಯಜ್ಞವನ್ನು ದಿನಚರಿಯಾಗಿ ಅಭ್ಯಾಸಿಸ ಬೇಕೇ ವಿನಃ ಅದೊಂದು ವಿಶೇಷ ದಿನಾಚರಣೆಯಾಗಿ ಅಲ್ಲ.
ನೀವು ಈ ರೀತಿ ಮಾಡುವಾಗ ನಿಮ್ಮೆಲ್ಲಾ ಪರಿಸ್ಥಿತಿಗಳ ಮೇಲೆ ದೇವರ ಸಮಾಧಾನದ ಹರಿಯುವಿಕೆಯನ್ನು ನೀವು ಕಾಣಲು ಆರಂಭಿಸುವಿರಿ.ಇದು ದೇವರೊಂದಿಗೆ ನೀವು ಮಹತ್ತರವಾದ ಅನ್ಯೋನ್ಯತೆಯನ್ನು ಸ್ಥಾಪಿಸಿಕೊಳ್ಳಲು ಸಹಕರಿಸುತ್ತದೆ. ನಮ್ಮ ನಮ್ಮ ಮನಸ್ಸು, ದೇಹ ಮತ್ತು ಆತ್ಮದಲ್ಲಿನ ಸಮಾಧಾನವು ನಮ್ಮ ಕೃತಜ್ಞತಾ ಅಭ್ಯಾಸದೊಂದಿಗೆ ಸಂಪರ್ಕ ಹೊಂದಿದೆ.
ಪ್ರಾರ್ಥನೆಗಳು
ತಂದೆಯೇ, ಇದುವರೆಗೂ ನಡೆಸಿದ ನಿನ್ನ ಕೃಪೆಗಾಗಿ ಯೇಸು ನಾಮದಲ್ಲಿ ನಿನಗೆ ಸ್ತೋತ್ರ ಮತ್ತು ನೀನು ಇನ್ನೂ ಮುಂದೆಯೂ ನಮ್ಮನ್ನು ನಡೆಸುವ ನಂಬಿಗಸ್ತನಾಗಿರುವುದಕ್ಕಾಗಿ ಸ್ತೋತ್ರ. ಕೃತಜ್ಞತಾ ಸ್ವಭಾವವು ನನ್ನ ಜೀವಿತದ ಮೂಲ ಅಸ್ತಿವಾರವಾಗಿರುವಂತಹ ಕೃಪೆಯನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel

Most Read
● ಯಹೂದವು ಮುಂದಾಗಿ ಹೊರಡಲಿ● ಸಾಧನೆಯ ಪರೀಕ್ಷೆ.
● ನಂಬಿಕೆ ಎಂದರೇನು ?
● ಭಯದ ಆತ್ಮ
● ಅಧರ್ಮಗಳ ಆಳ್ವಿಕೆಯ ಬಲವನ್ನು ಮುರಿಯುವುದು - I
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
● ದೇವರು ಹೇಗೆ ಒದಗಿಸುತ್ತಾನೆ #1
ಅನಿಸಿಕೆಗಳು