ಅನುದಿನದ ಮನ್ನಾ
ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
Sunday, 24th of March 2024
3
3
400
Categories :
ಬದಲಾವಣೆ (Change)
ನಿಮ್ಮ ಜೀವನದಲ್ಲಿ ಯಾವುದಾದರೂ ಬದಲಾವಣೆಯು ಪರಿಣಾಮಕಾರಿಯಾಗಿಯೂ ಒಂದು ಮೌಲ್ಯ ತರುವಂತದ್ದು ಆಗಿರಬೇಕೆಂದರೆ ಅದು ಶಾಶ್ವತವಾದದ್ದು ಸ್ಥಿರತೆಯುಳ್ಳದ್ದು ಆಗಿರಬೇಕು. ಚಂಚಲತ್ವದಿಂದ ಕೂಡಿರುವ ಬದಲಾವಣೆಯು ಹತಾಶೆಯನ್ನು ನಿರಾಶೆಯನ್ನು ಒಳಗೊಂಡಿರುತ್ತದೆ. ಬಹುತೇಕ ಜನರು ಒಂದು ಭಯದಿಂದಲೂ ಕಳವಳದಿಂದಲೂ ಒಂದು ಬದಲಾವಣೆಯನ್ನು ಎದುರು ಗೊಳ್ಳುತ್ತಾರೆ ಏಕೆಂದರೆ ಅವರ ಮನಸ್ಸಿನ ಆಳವಾದ ಸ್ಥರದಲ್ಲಿ ಅವರಿಗೆ ನಿಜಕ್ಕೂ ಈ ಬದಲಾವಣೆಯು ಬಹುಕಾಲ ಉಳಿಯುವಂತದ್ದು ಎಂಬ ನಂಬಿಕೆ ಇರುವುದಿಲ್ಲ. ಎಲ್ಲಿ ಈಗ ತರುತ್ತಿರುವ ಬದಲಾವಣೆಯು ತಾತ್ಕಾಲಿಕವಾದದ್ದಾಗಿ ಬಿಡುತ್ತದೋ ಎಂಬ ಆತಂಕ ಅವರಿಗೆ ಇರುತ್ತದೆ.
ಇಂದು ನಾನು ಶಾಶ್ವತವಾಗಿರುವಂತಹ ಬದಲಾವಣೆಯನ್ನು ತರಲು ಇರುವ ತತ್ವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಈ ತತ್ವಗಳು ಸರಳವಾಗಿದ್ದರೂ ನೀವು ಅವುಗಳನ್ನು ಅಳವಡಿಸಿಕೊಂಡಾಗ ಅತೀ ಬಲವುಳ್ಳದ್ದಾಗಿ ಕಾರ್ಯ ಮಾಡುವಂಥದ್ದಾಗಿದೆ. ನೀವುವೈಯಕ್ತಿವಾಗಿ ನಿಮ್ಮಲ್ಲೇ ಒಂದು ವೈಯಕ್ತಿಕ ಬದಲಾವಣೆ ತರಲು ಅಥವಾ ಕಂಪನಿಯಾಗಿ ಒಂದು ಕಂಪನಿಯ ಆದಾಯವನ್ನು ಗರಿಷ್ಟಪಡಿಸಬೇಕೆಂದು ಪ್ರಯತ್ನಿಸುತ್ತಿರಬಹುದು.
ತತ್ವ -1:ನಿಮ್ಮ ಆಲೋಚನಾಮಟ್ಟವನ್ನು ಉನ್ನತೀಕರಿಸಿ
ನಿಮಗೀಗ ಇರುವ ಸ್ಥಿತಿಗತಿಗೆ ತಕ್ಕಂತೆ ನಿಮ್ಮ ಸುತ್ತಲಿನ ಜನರ ಸಂಸ್ಕೃತಿಗೆ ಪೂರ್ವಪರ ಯೋಚಿಸದೆ ಒಗ್ಗಿಕೊಳ್ಳಬೇಡಿರಿ. ಬದಲಾಗಿ ನಿಮ್ಮ ಲಕ್ಷ್ಯವನ್ನು ದೇವರ ಮೇಲೆ ಇರಿಸಿ. (ಆತನ ವಾಕ್ಯಗಳ ಮೇಲೆ ಇರಿಸಿ) ಆಗ ನೀವು ಆಂತರ್ಯದಿಂದ ಹೊರಗೂ ಕಾಣುವಂತ ಬದಲಾವಣೆಯನ್ನು ಕಾಣುತ್ತೀರಿ.
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ."(ರೋಮಾಪುರದವರಿಗೆ 12:2)
ಮೊಟ್ಟಮೊದಲನೆಯದಾಗಿ ನಾವು ಶಾಶ್ವತವಾದ ಒಂದು ಬದಲಾವಣೆಯನ್ನು ತರಲು ಮಾಡಬೇಕಾಗಿರುವುದು ನಮ್ಮ ಲಕ್ಷ್ಯವನ್ನು ಬದಲಾಯಿಸುವಂತದ್ದು. ಯಾವಾಗಲೂ ಒಂದು ವಿಷಯವನ್ನು ನೆನಪಿಡಿರಿ. ನೀವು ಯಾವ ದಿಕ್ಕನ್ನು ಲಕ್ಷಿಸುತ್ತಿದ್ದೀರೋ ಆ ದಿಕ್ಕಿನಲ್ಲಿಯೇ ನೀವು ಚಲಿಸುವವರಾಗಿರುತ್ತೀರಿ.
ಈಗಷ್ಟೇ ನಾವು ಓದಿದಂತಹ ಮೇಲಿನ ದೇವರ ವಾಕ್ಯವು ನಾವು ಶಾಶ್ವತವಾದ ಬದಲಾವಣೆ ಹೊಂದಲು ನಮಗಿರುವ ನೀಲಿನಕಾಶೆಯಾಗಿದೆ.
1.ಪೂರ್ವಪರ ಯೋಚನೆ ಮಾಡದೇ ನಮ್ಮ ಸುತ್ತಲಿರುವ ಜನರ ಸಂಸ್ಕೃತಿಗೆ ನಾವು ಒಗ್ಗಿಕೊಳ್ಳಲು ಹೋಗಬಾರದು. ಅನೇಕ ಬಾರಿ ನಾವು ಈ ರೀತಿ ಒಗ್ಗಿಕೊಳ್ಳಲು ಹೋಗುವ ಕಾರಣವೇನೇಂದರೆ ಅದು ನಮಗೆ ಸುಲಭ ಎನಿಸುತ್ತದೆ ಅದಕ್ಕಾಗಿ.
ನನಗೆ ಎಂದಿಗೂ ಧೂಮಪಾನ ಮಾಡಿಯೇ ಇರದಂತಹ ಜನರು ತಿಳಿದಿದ್ದಾರೆ. ಆದರೆ ಅವರು
ಧೂಮಪಾನ ಮಾಡುವಂತಹ ಸಹೋದ್ಯೋಗಿಗಳ ಜೊತೆಗೆ ಸೇರಿಕೊಂಡಾಗ ಅವರು ಸಹ ಧೂಮಪಾನ ಮಾಡಲು ಆರಂಭಿಸಿದರು.
ನಿಮ್ಮ ಸುತ್ತಲಿರುವವರ ಸಂಸ್ಕೃತಿ ಹಾಗೂ ಜನರು ನಿಮ್ಮ ಭಕ್ತಿಯ ಮೌಲ್ಯಗಳನ್ನು ಮರುರೂಪಿಸಲು ಅವಕಾಶ ಕೊಡಬೇಡಿರಿ. ಹಾಗೆ ಮಾಡಿದ್ದಲ್ಲಿ ನೀವು ಸಹ ನದಿಯ ತಟದಲ್ಲಿ ಸತ್ತ ಮೀನುಗಳು ತೇಲುವಂತೆ ತೇಲಿ ಹೋಗಿ ಬಿಡುವಿರಿ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಪರಿಪೂರ್ಣವಾದ ಜ್ಞಾನದಿಂದಲೂ ಆತ್ಮಿಕ ತಿಳುವಳಿಕೆಯಿಂದಲೂ ನಾನು ಸದಾ ತುಂಬಿರಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. ಆಮೇನ್.
Join our WhatsApp Channel
Most Read
● ದೇವರಿಗಾಗಿ ಮತ್ತು ದೇವರೊಂದಿಗೆ.● ಇಸ್ಕಾರಿಯೋತಾ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು - 1
● ದಿನ 32:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಗತಿಯನ್ನು ಬದಲಾಯಿಸಿ
● ಕೊರತೆಯಿಲ್ಲ
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #2
ಅನಿಸಿಕೆಗಳು