ಅನುದಿನದ ಮನ್ನಾ
ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Tuesday, 26th of November 2024
4
1
161
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಓ ಕರ್ತನೇ, ನಿನ್ನ ಚಿತ್ತವು ನೆರವೇರಲಿ
“ನಿಮ್ಮ ರಾಜ್ಯವು ಬೇಗನೇ ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಮಿಯ ಮೇಲೆಯೂ ನೆರವೇರಲಿ” ಎಂದು ಹೇಳಿದನು. (ಮತ್ತಾಯ 6:10)
ನಾವು ದೇವರ ಚಿತ್ತವನ್ನು ಮಾಡಬೇಕೆಂದು ಪ್ರಾರ್ಥಿಸುವಾಗ, ನಾವು ಪರೋಕ್ಷವಾಗಿ ಆತನ ರಾಜ್ಯವನ್ನು ಸ್ಥಾಪಿಸಲು ಮತ್ತು ನಮ್ಮ ಜೀವನಕ್ಕಾಗಿ ಆತನ ಪರಿಪೂರ್ಣ ಯೋಜನೆಗಳನ್ನು ಕೈಗೊಳ್ಳಲು ಬೇಡಿ ಕೊಳ್ಳುವವರಾಗುತ್ತೇವೆ.
ನಾವು ದೇವರ ಚಿತ್ತವನ್ನು ಮಾಡಬೇಕೆಂದು ನಾವು ಪ್ರಾರ್ಥಿಸಿದಾಗ ನಮ್ಮ ದೃಷ್ಟಿಕೋನವು ಬದಲಾಗುತ್ತದೆ. ಆತನ ಇಚ್ಛೆಯು ನಮ್ಮ ಅಗತ್ಯಗಳನ್ನು ಸ್ವಯಂಚಾಲಿತವಾಗಿ ಪೂರೈಸುತ್ತದೆ, ಆದ್ದರಿಂದ ನಾವು ನಮ್ಮ ಸ್ವಂತ ಇಚ್ಛೆಗಾಗಿ ಶ್ರಮಿಸುವ ಅಗತ್ಯವಿಲ್ಲ.
ದೇವರ ಚಿತ್ತವನ್ನು ಮಾಡಬೇಕೆಂದು ನಾವು ಪ್ರಾರ್ಥಿಸುವಾಗ ನಮ್ಮ "ಸ್ವಾರ್ಥ ", ಅಹಂಕಾರಗಳು ಮತ್ತು ಮಹಿಮೆಯು ಶಿಲುಬೆಗೇರಿಸಲ್ಪಡುತ್ತದೆ. ದೇವರ ಚಿತ್ತವು ಕಾರ್ಯರೂಪಕ್ಕೆ ಬರುವ ಮೊದಲು ಭೌತಿಕ ಕ್ಷೇತ್ರದಲ್ಲಿ ಪ್ರಾರ್ಥಿಸಬೇಕಾಗಿದೆ.
ನಮ್ಮ ಪ್ರಾರ್ಥನೆಯಲ್ಲಿ ನಾವು ದೇವರನ್ನು ಆಹ್ವಾನಿಸದಿದ್ದರೆ, ಆತನು ನಮ್ಮೆಡೆಗೆ ಹೆಜ್ಜೆ ಹಾಕುವುದಿಲ್ಲ.
ನಾವು ದೇವರ ಚಿತ್ತವನ್ನು ಏಕೆ ತಿಳಿದುಕೊಳ್ಳಬೇಕು?
1. ನೀವು ದೇವರ ಚಿತ್ತವನ್ನು ತಿಳಿದಿಲ್ಲದಿದ್ದರೆ, ದೇವರ ಚಿತ್ತದ ಪ್ರಕಾರ ಪ್ರಾರ್ಥಿಸಲು ಕಷ್ಟವಾಗುತ್ತದೆ.
2 ಅರಸು 4: 33-35 ರಲ್ಲಿ, ಪ್ರವಾದಿಯಾದ ಎಲಿಷನು ಮತ್ತು ಸ್ತ್ರೀಯು ಇಬ್ಬರೂ ಆ ಸ್ತ್ರೀಯ ಮಗನು ಅಕಾಲಿಕವಾಗಿ ಸಾಯುವುದು ದೇವರ ಚಿತ್ತವಲ್ಲ ಎಂಬುದನ್ನು ತಿಳಿದಿದ್ದರು, ಆದ್ದರಿಂದಲೇ , ಪ್ರವಾದಿಯಾದ ಎಲಿಷನು ಹುಡುಗನು ಜೀವದಿಂದೇಳುವವರೆಗೂ ಆಸಕ್ತಿಯಿಂದ ಪ್ರಾರ್ಥಿಸಿದನು. ನೀವು ದೇವರ ಚಿತ್ತದ ಬಗ್ಗೆ ಅಜ್ಞಾನದಲ್ಲಿದ್ದಾಗ, ಜೀವನವು ನೀಡುವ ಯಾವುದನ್ನಾದರೂ ನೀವು ಸ್ವೀಕರಿಸುವವರಾಗಿರುತ್ತೀರಿ.
2. ನೀವು ದೇವರ ಚಿತ್ತವನ್ನು ತಿಳಿದಿಲ್ಲದಿದ್ದರೆ, ನೀವು ಪಾಪಕ್ಕೆ ಶೋಧನೆಗೊಳಗಾದ ನೀವು ವೈಫಲ್ಯತೆ ಹೊಂದಬಹುದು.
ಮತ್ತಾಯ 4: 1-11 ರಲ್ಲಿ, ಯೇಸು ಸೈತಾನನ ಶೋಧನೆಗಳನ್ನು ಜಯಿಸಿದನು. ಏಕೆಂದರೆ ಆತನು ದೇವರ ಚಿತ್ತವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದನು. ಕೆಲವು ಹಂತದಲ್ಲಿ, ಸೈತಾನನು ದೇವರ ವಾಕ್ಯವನ್ನು ತಪ್ಪಾಗಿ ಪ್ರತಿನಿಧಿಸುತ್ತಾನೆ. ಆದರೆ ಯೇಸು ಅವನನ್ನು ಎದುರಿಸಿದನು. ನೀವು ದೇವರ ಚಿತ್ತ ತಿಳಿದಿಲ್ಲವಾದ್ದರಲ್ಲಿ ಸೈತಾನನು , ನಿಮ್ಮ ಜೀವನದಲ್ಲಿ ಆಟವಾಡಿ ನಿಮ್ಮನ್ನು ಬಲೆಗೆ ಬೀಳಿಸುತ್ತಾನೆ.
3. ನಮ್ಮ ಸುರಕ್ಷತೆ, ಆಶೀರ್ವಾದ ಮತ್ತು ಸಂಪತ್ತು ಇವುಗಳನ್ನು ದೇವರ ಚಿತ್ತವು ಒಳಗೊಂಡಿದೆ.
ನಾವು ದೇವರ ಚಿತ್ತದ ಕುರಿತು ಅಜ್ಞಾನದಲ್ಲಿದ್ದರೆ, ಸೈತಾನನು ಅದರ ಲಾಭವನ್ನು ಪಡೆಯಬಹುದು. " ಪ್ರಿಯನೇ, ನೀನು, ನಿನ್ನ ಆತ್ಮ ವಿಷಯದಲ್ಲಿ ಅಭಿವೃದ್ಧಿ ಹೊಂದಿರುವ ಪ್ರಕಾರವೇ, ಎಲ್ಲಾ ವಿಷಯಗಳಲ್ಲಿಯೂ ಅಭಿವೃದ್ಧಿಹೊಂದಿ, ಸುಕ್ಷೇಮವಾಗಿ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. “ (3 ಯೋಹಾನ 2)
ಅನಾರೋಗ್ಯವು ತಮ್ಮ ಜೀವನದ ಭಾಗವಾಗಿದೆಎಂಬುದು ದೇವರ ಚಿತ್ತ ಎಂದು ಕೆಲವರು ಭಾವಿಸುತ್ತಾರೆ. ಬಡತನದ ಮೂಲಕ ದೀನತ್ವದ ಜೀವನವನ್ನು ನಡೆಸಬೇಕೆಂದು ದೇವರು ಬಯಸುತ್ತಾನೆ ಎಂದು ಕೆಲವರು ಭಾವಿಸುತ್ತಾರೆ. ಹೀಗೆ ಇವರೆಲ್ಲ ಸೈತಾನನ ಬಾಧೆಗಳನ್ನು ಮೋಸ ಹೋಗಿದ್ದಾರೆ. ಹಾಗಾಗಿ ನಿಮ್ಮ ಜೀವನಕ್ಕಾಗಿ ದೇವರ ಚಿತ್ತ ಇರುವುದಕ್ಕಿಂತಲೂ ಕೆಳಗಿನ ಯಾವುದನ್ನಾದರೂ ವಿರೋಧಿಸುವ ಸಮಯ ಇದಾಗಿದೆ.
4. ನಾವು ದೇವರ ಚಿತ್ತವನ್ನು ತಿಳಿದು ಕೊಂಡಾಗ ಮಾತ್ರವೇ ನಾವು ದೇವರ ಚಿತ್ತಕ್ಕೆ ವಿಧೇಯರಾಗಿ ಬದುಕಬಹುದು.
ನಾವು ದೇವರ ಚಿತ್ತದ ಬಗ್ಗೆ ಅಜ್ಞಾನದಲ್ಲಿದ್ದರೆ, ನಾವು ಅವನ ಇಚ್ಛೆಗೆ ವಿರುದ್ಧವಾದ ಕೆಲಸಗಳನ್ನು ಸ್ವಯಂಚಾಲಿತವಾಗಿ ಮಾಡುತ್ತೇವೆ. " ಆಗ ನಾನು, ಇಗೋ, ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದಿರುವ ಪ್ರಕಾರ ನಿನ್ನ ಚಿತ್ತವನ್ನು ನೆರವೇರಿಸುವುದಕ್ಕೆ ಬಂದಿದ್ದೇನೆ” ಎಂದು ಹೇಳಿದೆನು(ಇಬ್ರಿಯ 10:7)
5. ನಾವು ದೇವರ ಚಿತ್ತಕ್ಕೆ ಅನುಗುಣವಾಗಿ ನಡೆಯದಿದ್ದಾಗ, ಸೈತಾನನು ನಮ್ಮ ಮೇಲೆ ಆಕ್ರಮಣ ಮಾಡಲು ಸಿದ್ದನಾಗುತ್ತಾನೆ.
ಅದರಿಂದ "ಸೈತಾನನಿಗೆ ಅವಕಾಶಕೊಡಬೇಡಿರಿ." (ಎಫೆಸ 4:27)
6. ನಾವು ದೇವರ ಚಿತ್ತದ ಹೊರತಾಗಿ ಜೀವಿಸುವಾಗ ಸೈತಾನನು ನಮ್ಮ ವಿರುದ್ಧ ದೋಷರೋಪ ಮಾಡುತ್ತಾನೆ.
"ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವುದನ್ನು ಯೆಹೋವನು ನನಗೆ ತೋರಿಸಿದನು. ಸೈತಾನನು ಯೆಹೋಶುವನಿಗೆ ಪ್ರತಿವಾದಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು. (ಜೆಕರ್ಯಾ 3:1)
7. ದೇವರು ತನ್ನ ಚಿತ್ತದ ಹೊರತಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ.
"ನೀವು ಬೇಡಿದರೂ ಬೇಡಿದ್ದನ್ನು ಪಡೆದುಕೊಳ್ಳುವುದಿಲ್ಲ. ಏಕೆಂದರೆ, ನಿಮ್ಮ ಭೋಗಗಳಿಗಾಗಿ ಉಪಯೋಗಿಸಬೇಕೆಂದು ದುರುದ್ದೇಶಕ್ಕಾಗಿ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುವುದಿಲ್ಲ."(ಯಾಕೋಬ 4:3).
ನಮ್ಮ ಪ್ರಾರ್ಥನೆಗಳು ದೇವರ ಚಿತ್ತದಿಂದ ಹೊರತಾಗಿರುವಾಗ ನಾವು ಉತ್ತರಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ.
8. ನಾವು ದೇವರ ಚಿತ್ತದ ಹೊರತು ಪಡಿಸಿ ಆತನು ನಮ್ಮ ಜೀವಿತದಲ್ಲಿರುವ ಉದ್ದೇಶವನ್ನು ಪೂರೈಸಲು ಸಾಧ್ಯವಿಲ್ಲ
"ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. [5] ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. [6] ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟುಹೋಗುತ್ತವೆ. [7] ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು. (ಯೋಹಾನ 15:4-7)
2 ದೇವರ ಚಿತ್ತವನ್ನು ತಿಳಿದುಕೊಳ್ಳಲು ಮತ್ತು ನಿಮ್ಮ ಜೀವನಕ್ಕಾಗಿ ಇರುವ ಆತನ ಯೋಜನೆಯನ್ನು ತಿಳಿದುಕೊಳ್ಳಲು 2 ಪ್ರಮುಖ ಕೀಲಿಗಳು.
- ದೇವರೊಂದಿಗೆ ನಡೆಯಿರಿ.
ನೀವು ದೇವರೊಂದಿಗೆ ನಿಮ್ಮ ಸಂಬಂಧವನ್ನು ಬೆಳೆಸಿಕೊಳ್ಳಬೇಕು. ನೀವು ಆತನನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕೇ ಹೊರತು ಆತನ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸಬಾರದು.
ಆತನ ವಾಕ್ಯದಲ್ಲಿ ಸಮಯವನ್ನು ಕಳೆಯುವುದರ ಮೂಲಕ, ಪ್ರಾರ್ಥನೆಗಾಗಿ ಸಮಯವನ್ನು ತೆಗೆದುಕೊಳ್ಳುವ ಹಾಗೂ ಚರ್ಚ್‌ನ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಮತ್ತು J-12 ನಾಯಕರ ಅಡಿಯಲ್ಲಿ ನಿರ್ದೇಶನ ಪಡೆದು ನೀವು ಮಾಡಬಹುದಾದ ಪ್ರತಿಯೊಂದು ಅವಕಾಶವನ್ನು ಬಳಸಿಕೊಳ್ಳುವ ಮೂಲಕ ನೀವು ಆ ಸಂಬಂಧವನ್ನು ಉತ್ತಮವಾಗಿ ಬೆಳೆಸಿಕೊಳ್ಳುತ್ತೀರಿ.
ನಿಮ್ಮ ಜೀವನದಲ್ಲಿ ಈ ಶಿಸ್ತುಗಳನ್ನು ನೀವು ಕಂಡುಕೊಂಡಾಗ ದೇವರು ಆತನ ಯೋಜನೆಯನ್ನು ನಿಮಗೆ ಪ್ರಕಟ ಪಡಿಸುವ ಮೂಲಕ ನಿಮ್ಮ ಮೊದಲ ಹಂತಗಳನ್ನು ಪ್ರಾರಂಭಿಸಿ.
"ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. [6] ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.(ಜ್ಞಾನೋಕ್ತಿ 3:5-6.
- ದೇವರ ಚಿತ್ತವೆಂದು ನೀವು ಈಗಾಗಲೇ ತಿಳಿದಿರುವದನ್ನು
ಅನುಸರಿಸಿ ಅನೇಕ ಜನರು ತಮ್ಮ ಜೀವನಕ್ಕಾಗಿ ದೇವರ ಯೋಜನೆ ಏನೆಂದು ತಿಳಿಯಲು ಬಯಸುತ್ತಾರೆ ಎಂದು ತೋರುತ್ತದೆ, ಆದರೆ 98 ಪ್ರತಿಶತದಷ್ಟು ಆತನ ಚಿತ್ತವು ಈಗಾಗಲೇ ಆತನ ವಾಕ್ಯದ ಮೂಲಕ ಎಚ್ಚರಿಕೆಯಿಂದ ಪ್ರಕಟವಾಗಿದೆ ಎಂಬ ಅಂಶವನ್ನು ಅವರು ಕಡೆಗಣಿಸುತ್ತಾರೆ.
ದೇವರು ತನ್ನ ಚಿತ್ತದ ಅನೇಕ ಅಂಶಗಳ ಬಗ್ಗೆ ಬಹಳ ಸ್ಪಷ್ಟವಾಗಿರುತ್ತಾನೆ. ಉದಾಹರಣೆಗೆ, ನಾವು ಲೈಂಗಿಕ ಅನೈತಿಕತೆಯಿಂದ ದೂರವಿರುವುದು ಆತನ ಯೋಜನೆಯಾಗಿದೆ.
"ದೇವರ ಚಿತ್ತವೇನಂದರೆ ನೀವು ಶುದ್ಧರಾಗಬೇಕೆಂಬುದೇ. ಆದ್ದರಿಂದ ಹಾದರಕ್ಕೆ ದೂರವಾಗಿರಬೇಕು. (1 ಥೆಸಲೊನೀಕ 4:3).
ದೇವರು ನಮಗೆ ಸ್ಪಷ್ಟವಾಗಿ ತೋರಿಸಿದ ವಿಷಯಗಳಿಗೆ ನಾವು ವಿಧೇಯರಾಗದಿದ್ದರೆ, ನಮ್ಮ ಜೀವನಕ್ಕಾಗಿ ಆತನ ಯೋಜನೆಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ಮಾಹಿತಿಯನ್ನು ಆತನು ಪ್ರಕಟಿಸಬೇಕು ಎಂದು ನಾವು ಏಕೆ ಭಾವಿಸಬೇಕು?
Bible Reading Plan : Matthew : 25 - 28
ಪ್ರಾರ್ಥನೆಗಳು
1. ತಂದೆಯೇ, ನಿನ್ನ ಚಿತ್ತವು ಯೇಸುವಿನ ಹೆಸರಿನಲ್ಲಿ ನನ್ನ ಜೀವನದಲ್ಲಿ ನೆರವೇರಲಿ. (ಮತ್ತಾಯ 6:10, ಲೂಕ 22:42)
2. ನನ್ನ ಪರಲೋಕದ ತಂದೆಯು ನನ್ನ ಜೀವನದಲ್ಲಿ ನೆಡದ ಯಾವುದೇ ಸಂಗತಿಯಾದರೂ ಯೇಸುವಿನ ಹೆಸರಿನಲ್ಲಿ ಬೆಂಕಿಯಿಂದ ನಾಶವಾಗಲಿ . (ಮತ್ತಾಯ 15:13)
3. ನನ್ನ ಏಳಿಗೆಹೊಂದುವುದೇ ದೇವರ ಚಿತ್ತವಾಗಿದೆ; ಆದ್ದರಿಂದ, ನನ್ನ ಜೀವನದಲ್ಲಿ ವೈಫಲ್ಯ, ನಷ್ಟ ಮತ್ತು ವಿಳಂಬದ ಚಟುವಟಿಕೆಗಳನ್ನು ನಾನು ಯೇಸು ನಾಮದಲ್ಲಿ ನಿಷೇಧಿಸುತ್ತೇನೆ. ( 3 ಯೋಹಾನ 1:2, ಯೆರೆಮಿಯಾ 29:11)
4. ನಾನು ಉತ್ತಮ ಆರೋಗ್ಯದಿಂದಿರಬೇಕೆಂಬುದು ದೇವರ ಚಿತ್ತವಾಗಿದೆ; ಆದ್ದರಿಂದ, ನಾನು ನನ್ನ ದೇಹದಲ್ಲಿನ ಯಾವುದೇ ಕಾಯಿಲೆ ಮತ್ತು ಕಾಯಿಲೆಯ ಮೂಲವನ್ನು ಯೇಸುನಾಮದಲ್ಲಿ ನಾಶಪಡಿಸುತ್ತೇನೆ. (ವಿಮೋಚನಕಾಂಡ 15:26, ಯೆಶಾಯ 53:5)
5. ನಾನು ಸಾಲ ಕೊಡುವವನಾಗಿರಬೇಕೇ ಹೊರತು ಸಾಲ ತೆಗೆದುಕೊಳ್ಳುವವನಲ್ಲ ಎಂಬುದೇ ದೇವರ ಚಿತ್ತವಾಗಿದೆ; ಆದ್ದರಿಂದ, ನನ್ನನ್ನು ಸಾಲದಲ್ಲಿರಿಸಲು ಹೂಡುವ ಎಲ್ಲಾ ನಾನು ಸೈತಾನನ ಕಾರ್ಯಸೂಚಿಯನ್ನು ಯೇಸುವಿನ ಹೆಸರಿನಲ್ಲಿ ನಾಶಪಡಿಸುತ್ತೇನೆ. (ಧರ್ಮೋಪದೇಶಕಾಂಡ 28:12, ರೋಮ 13:8)
6. ನನಗೆ ವಿರುದ್ಧವಾಗಿರುವ ಯಾವುದೇ ನಿಯಮವನ್ನು ಯೇಸು ನಾಮದಲ್ಲಿ ಯೇಸುವಿನ ರಕ್ತದ ಮೂಲಕ ಶಿಲುಬೆಗೆ ಜಡಿಯುತ್ತೇನೆ (ಕೊಲೊಸ್ಸೆ 2:14)
7. ನನ್ನನ್ನು ಗುರಿಯಾಗಿಸಿಕೊಂಡ ಯಾವುದೇ ವಶೀಕರಣ, ಭವಿಷ್ಯಜ್ಞಾನ, ಶಾಪಗಳು ಮತ್ತು ದುಷ್ಟ ಸಂಗತಿಗಳನ್ನು ಯೇಸು ನಾಮದಲ್ಲಿ ನಾನು ಚದುರಿಸುತ್ತೇನೆ. (ಅರಣ್ಯಕಾಂಡ 23:23, ಯೆಶಾಯ 54:17)
8. ದುಷ್ಟತ್ವ , ಸಾವು, ಅವಮಾನ, ನಷ್ಟ, ನೋವು, ನಿರಾಕರಣೆ ಮತ್ತು ವಿಳಂಬವನ್ನು ಯೇಸು ನಾಮದಲ್ಲಿ ನನ್ನ ಜೀವನದಿಂದ ತೆಗೆದುಹಾಕಲ್ಪಡಲಿ ಎಂದು ಆಜ್ಞಾಪೀಸುತ್ತೇನೆ. (ಕೀರ್ತನೆ 91:10, ಧರ್ಮೋಪದೇಶಕಾಂಡ 7:15)
9. ನನ್ನ ವಿರುದ್ಧ ರಚಿಸಲಾದ ಯಾವುದೇ ಆಯುಧವು ಜಯಿಸದು ಮತ್ತು ನನ್ನ ವಿರುದ್ಧ ಎದ್ದ ಎಲ್ಲಾ ನಾಲಿಗೆಯನ್ನು ಯೇಸುವಿನ ಹೆಸರಿನಲ್ಲಿ ನಾನು ಖಂಡಿಸುತ್ತೇನೆ. (ಯೆಶಾಯ 54:17)
10. ಕರ್ತನೇ, ನಿನ್ನ ಚಿತ್ತವನ್ನು ಮಾಡಲು ಮತ್ತು ಭೂಮಿಯ ಮೇಲೆ ನಿನ್ನ ರಾಜ್ಯವನ್ನು ವಿಸ್ತರಿಸಲು ಯೇಸುವಿನ ಹೆಸರಿನಲ್ಲಿ ನನಗೆ ಅಧಿಕಾರ ನೀಡು. (ಅ. ಕೃ 1:8, ಮತ್ತಾಯ 28:19-20)
Join our WhatsApp Channel
Most Read
● ಉತ್ತಮ ಹಣ ನಿರ್ವಹಣೆ● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ಪರಲೋಕದ ವಾಗ್ದಾನ
● ದುಷ್ಟ ಮಾದರಿಗಳಿಂದ ಹೊರಬರುವುದು.
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ಬಲವಾದ ಮೂರುಹುರಿಯ ಹಗ್ಗ
● ನಿರ್ಣಯಾಕ ಅಂಶವಾಗಿರುವ ವಾತಾವರಣದ ಒಳನೋಟ -2
ಅನಿಸಿಕೆಗಳು