ಅನುದಿನದ ಮನ್ನಾ
1
1
30
ಪವಿತ್ರಾತ್ಮನ ದೂಷಣೆ ಎಂದರೇನು?
Friday, 3rd of October 2025
Categories :
ಪವಿತ್ರ ಆತ್ಮ (Holy spirit)
ದೆವ್ವಹಿಡಿದು ಕುರುಡನೂ ಮೂಕನೂ ಆಗಿರುವ ಒಬ್ಬನನ್ನು ಆತನ ಬಳಿಗೆ ಕರತಂದರು; ಆತನು ಅವನನ್ನು ಸ್ವಸ್ಥಮಾಡಲು ಆ ಮೂಕನಿಗೆ ಬಾಯಿ ಕಣ್ಣು ಎರಡೂ ಬಂದವು.ಅದಕ್ಕೆ ಜನರೆಲ್ಲರೂ ಬೆರಗಾಗಿ - ಈತನು ದಾವೀದಕುಮಾರನೇನು ಎಂದು ಮಾತಾಡುತ್ತಿದ್ದರು.(ಮತ್ತಾಯ 12:22-23)
ಆದರೆ ಫರಿಸಾಯರು ಅದನ್ನು ಕೇಳಿ - ಇವನು ದೆವ್ವಗಳ ಒಡೆಯನಾದ ಬೆಲ್ಜೆಬೂಲನ ಸಹಾಯದಿಂದ ದೆವ್ವಗಳನ್ನು ಬಿಡಿಸುತ್ತಾನೇ ಹೊರತು ಬೇರೆ ರೀತಿಯಿಂದ ಬಿಡಿಸುವದಿಲ್ಲ ಅಂದರು." (ಮತ್ತಾಯ 12:24)
ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಕರ್ತನಾದ ಯೇಸು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಿದ್ದಾನೆಂದು ಆರೋಪಿಸಿದರು. ಯೇಸುವಿನ ಸೇವೆಯನ್ನು ಅಪಖ್ಯಾತಿಗೊಳಿಸಲು ಅವರು ಇದನ್ನು ಮಾಡಿದರು. ಸ್ವಸ್ಥ ಬುದ್ದಿಯುಳ್ಳವರು ಯಾರಾದರೂ ಸೈತಾನನೊಂದಿಗೆ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಅನುಸರಿಸಲು ಬಯಸುತ್ತಾರೆಯೇ?
"ಆದಕಾರಣ ನಿಮಗೆ ಹೇಳುತ್ತೇನೆ, ಮನುಷ್ಯರು ಮಾಡುವ ಪ್ರತಿಯೊಂದು ಪಾಪಕ್ಕೂ ದೂಷಣೆಗೂ ಕ್ಷಮಾಪಣೆ ಉಂಟಾಗುವದು; ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆಯಿಲ್ಲ.ಯಾವನಾದರೂ ಮನುಷ್ಯಕುಮಾರನಿಗೆ ವಿರೋಧವಾಗಿ ಮಾತಾಡಿದರೆ ಅದು ಅವನಿಗೆ ಕ್ಷವಿುಸಲ್ಪಡುವದು; ಪವಿತ್ರಾತ್ಮನಿಗೆ ವಿರೋಧವಾಗಿ ಮಾತಾಡಿದರೆ ಅವನಿಗೆ ಇಹದಲ್ಲಾಗಲಿ ಪರದಲ್ಲಾಗಲಿ ಕ್ಷವಿುಸಲ್ಪಡುವದಿಲ್ಲ." (ಮತ್ತಾಯ 12:31-32)
ದೇವದೂಷಣೆ ಎಂಬ ಪದವನ್ನು ಸಾಮಾನ್ಯವಾಗಿ "ಧಿಕ್ಕರಿಸಿ ತೋರುವ ಅಗೌರವ" ಎಂದು ವ್ಯಾಖ್ಯಾನಿಸಲಾಗಿದೆ. ದೇವರನ್ನು ಶಪಿಸುವುದು ಅಥವಾ ದೇವರಿಗೆ ಸಂಬಂಧಿಸಿದ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸುವುದು ಮುಂತಾದ ಪಾಪಗಳಿಗೆ ಈ ಪದವನ್ನು ಅನ್ವಯಿಸಬಹುದು.
ದೇವದೂಷಣೆ ಎಂದರೆ ದೇವರ ಮೇಲೆ ಯಾವುದಾದರೂ ರೀತಿ ಕೆಟ್ಟದ್ದನ್ನು ಆರೋಪಿಸುವುದು ಅಥವಾ ನಾವು ಅವನಿಗೆ ಹೊಗಳಬೇಕಾದ ಒಳ್ಳೆಯ ಸಂಗತಿಗಳನ್ನು ಮಾಡದೇ ನಿರಾಕರಿಸುವಂತದ್ದು ಆಗಿದೆ. ಆದಾಗ್ಯೂ, ಈ ನಿರ್ದಿಷ್ಟ ದೇವದೂಷಣೆಯ ಪ್ರಕರಣವನ್ನು "ಪವಿತ್ರಾತ್ಮನ ದೂಷಣೆ" ಎಂದು ಕರೆಯಲಾಗುತ್ತದೆ.
ಫರಿಸಾಯರು ಸತ್ಯವನ್ನು ತಿಳಿದಿದ್ದರೂ ಮತ್ತು ಸಾಕಷ್ಟು ಪುರಾವೆಗಳನ್ನು ಹೊಂದಿದ್ದರೂ ಸಹ, ಪವಿತ್ರಾತ್ಮನ ಕಾರ್ಯದ ಫಲವನ್ನು ಪಿಶಾಚನಿಗೆ ಸಲ್ಲಿಸಿದರು . ಪವಿತ್ರಾತ್ಮನ ವಿರುದ್ಧ ಅವರು ಮಾಡಿದ ದೇವದೂಷಣೆಯು ದೇವರ ಕೃಪೆಯನ್ನು ಅವರು ಅಂತಿಮವಾಗಿ ತಿರಸ್ಕರಿಸಿದ್ದರು. ಯೇಸು ಜನಸಮೂಹಕ್ಕೆ ಪವಿತ್ರಾತ್ಮನ ದೇವದೂಷಣೆಯು "ಈ ಯುಗದಲ್ಲಾಗಲಿ ಅಥವಾ ಮುಂಬರುವ ಯುಗದಲ್ಲಾಗಲಿ ಕ್ಷಮಿಸಲ್ಪಡುವುದಿಲ್ಲ" ಎಂದು ಹೇಳಿದನು (ಮತ್ತಾಯ 12:32). ಇದು ಅವರ ಪಾಪವನ್ನು ಎಂದಿಗೂ ಕ್ಷಮಿಸಲಾಗುವುದಿಲ್ಲ ಎಂದು ಹೇಳುವ ಇನ್ನೊಂದು ಮಾರ್ಗವಾಗಿದೆ. ಅದು ಇಲ್ಲಿಯೂ ಅಲ್ಲ, ನಿತ್ಯತ್ವದಲ್ಲೂ ಕ್ಷಮಿಸಲ್ಪಡುವಿದಿಲ್ಲ.
ಇಂದು, ನಿರಂತರ ಅಪನಂಬಿಕೆಯ ಸ್ಥಿತಿಯು ದೇವದೂಷಣೆಗೆ ಸಮಾನವಾಗಿರುತ್ತದೆ. ಪವಿತ್ರಾತ್ಮನು ರಕ್ಷಿಸಲ್ಪಡದ ಲೋಕವನ್ನು ಪಾಪ, ನೀತಿ ಮತ್ತು ನ್ಯಾಯತೀರ್ಪಿನ ಕುರಿತು ಅಪರಾಧಿ ಎಂದು ನಿರ್ಣಯಿಸುತ್ತಾನೆ (ಯೋಹಾನ 16:8). ಆ ಮನವರಿಕೆಯನ್ನು ವಿರೋಧಿಸುವುದು ಮತ್ತು ಉದ್ದೇಶಪೂರ್ವಕವಾಗಿ ಪಶ್ಚಾತ್ತಾಪಪಡದೆ ಇರುವಂತದ್ದು ಆತ್ಮನನ್ನು "ದೂಷಣೆ" ಮಾಡಿದಂತೆಯೇ.
Bible Reading: Nahum 2-3; Habakkuk 1-3
ಪ್ರಾರ್ಥನೆಗಳು
ತಂದೆಯೇ, ನಾನು ನಿನ್ನ ಆತ್ಮನನ್ನು ದುಃಖಪಡಿಸಿದ ಸಮಯಗಳಿಗಾಗಿ ಯೇಸುನಾಮದಲ್ಲಿ ನನ್ನನ್ನು ಕ್ಷಮಿಸು. ಎಲ್ಲಾ ಪಾಪಗಳಿಂದ ನನ್ನನ್ನು ಬಿಡಿಸಿ ಕಾಪಾಡು ಮತ್ತು ಯಾವಾಗಲೂ ನಿನ್ನ ಹತ್ತಿರವೇ ಇರು ಯೇಸುನಾಮದಲ್ಲಿ.. ಆಮೆನ್.
Join our WhatsApp Channel

Most Read
● ಮೂರು ಆಯಾಮಗಳು● ಅನ್ಯ ಭಾಷೆಯಲ್ಲಿ ಪ್ರಾರ್ಥಿಸುವಂಥದ್ದು ಆಂತರಿಕ ಸ್ವಸ್ಥತೆಯನ್ನು ತರುತ್ತದೆ.
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ಸಫಲತೆ ಎಂದರೇನು?
● ಶ್ರೇಷ್ಠ ಸಂತತಿ
● ದಿನ 24:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಗತಿಯನ್ನು ಬದಲಾಯಿಸಿ
ಅನಿಸಿಕೆಗಳು