ನಮ್ಮ ಆಧುನಿಕ ಜಗತ್ತಿನ ಡಿಜಿಟಲ್ ಚಕ್ರವ್ಯೂಹದಲ್ಲಿ, ಸ್ವಯಂ ನಿರಾಕರಣೆ ಒಂದು ಕಲಾ ಪ್ರಕಾರವಾಗಿದೆ. ನಮ್ಮ ಅತ್ಯುತ್ತಮ ವ್ಯಕ್ತಿತ್ವವನ್ನು ತೋರಿಸಲು, ನಮಗೆ ಅನಾನುಕೂಲವನ್ನುಂಟುಮಾಡುವ ಭಾಗಗಳನ್ನು ತಪ್ಪಿಸಲು ನಾವು ನಮ್ಮ ಸಾಮಾಜಿಕ ಮಾಧ್ಯಮವನ್ನು ಕ್ಯುರೇಟ್ ಮಾಡುತ್ತೇವೆ. ಇದು ನಮ್ಮ ಆತ್ಮೀಕ ಜೀವನದಲ್ಲೂ ನಿಜವಾಗಬಹುದು. "ಸತ್ಯವು ನಿಮ್ಮನ್ನು ಬಿಡುಗಡೆ ಗೊಳಿಸುತ್ತದೆ" (ಯೋಹಾನ 8:32) ಎಂಬ ವಾಕ್ಯದ ಪ್ರಾಚೀನ ಜ್ಞಾನದಲ್ಲಿ ವಿಶೇಷವಾಗಿ ನಾವು ಒಂದು ನಿರ್ದಿಷ್ಟ ಪಾಪದಲ್ಲಿ ಜೀವಿಸುತ್ತಿರುವಾಗ ನಾವು ಅದನ್ನು ಬಚ್ಚಿಟ್ಟು ನಾವು ಹೇಳುವುದಕ್ಕಿಂತಲೂ ಮಾಡಿ ತೋರಿಸುವಂತದ್ದು ಅರ್ಥ ಮಾಡಿಸಲು ಸುಲಭ ಮಾರ್ಗವಾಗಿರುತ್ತದೆ. ನಮ್ಮ ಅಪರಿಪೂರ್ಣತೆಗಳನ್ನು ಎತ್ತಿ ತೋರಿಸುವುದರಿಂದ ನಮಗೆ ಉಂಟಾಗುವ ಅನಾನುಕೂಲತೆಗಳು ಮಾನವೀಯತೆಯಷ್ಟೇ ಪ್ರಾಚೀನ ಅನುಭವವಾಗಿರುತ್ತದೆ.
ಬೆಳಕಿನಿಂದ ಓಡಿಹೋಗಲು ಮತ್ತು ಕತ್ತಲೆಯನ್ನು ಪ್ರೀತಿಸಲು ತವಕಿಸುವ ಈ ಪ್ರಚೋದನೆಯು ಹೊಸದಲ್ಲ. "ಆ ತೀರ್ಪು ಏನಂದರೆ - ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು."ಎಂದು ಯೋಹಾನ 3:19 ಹೇಳುತ್ತದೆ, ನಾವು ಪಾಪದಲ್ಲಿ ಜೀವಿಸುತ್ತಿರುವಾಗ, ನಾವು ಬಯಸದ ಕೊನೆಯ ವಿಷಯವೆಂದರೆ ನಾವು ಮರೆಮಾಡಲು ಬಯಸುವ ನಮ್ಮ ಭಾಗಗಳ ಮೇಲೆ ಬೆಳಕನ್ನು ಬೆಳಗಿಸುವ ಸ್ಥಳದಲ್ಲಿ - ಅಥವಾ ಜನರೊಂದಿಗೆ - ಇರುವುದು.
ಆದಾಗ್ಯೂ, ತಪ್ಪಿಸಿಕೊಳ್ಳುವುದು ಪರಿಹಾರವಲ್ಲ; ಅದು ನಮಗೆ ನಾವೇ ಸೃಷ್ಟಿಸಿಕೊಂಡ ಸೆರೆಮನೆಯಾಗಿರತ್ತದೆ ಇದು ನಮ್ಮನ್ನು ಸ್ವಸ್ಥತೆ ಮತ್ತು ವಿಮೋಚನೆಯಿಂದ ದೂರವಿಡುತ್ತದೆ.ಆದರಿಂದ ಯಾಕೋಬ 5:16 ಸಲಹೆ ನೀಡುವುದೇನೆಂದರೆ, "ಆದ್ದರಿಂದ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿಕೊಂಡು ಮತ್ತು ನೀವು ಗುಣಮುಖರಾಗುವಂತೆ ಒಬ್ಬರಿಗೊಬ್ಬರು ಪ್ರಾರ್ಥಿಸಿ." ಇದು ಸಾಮಾನ್ಯವಾಗಿ ಅನುಕೂಲಕರವಾಗಿರುವುದಿಲ್ಲ, ಆದರೆ ಬೆಳಕನ್ನು ಅಪ್ಪಿಕೊಳ್ಳುವಂತದ್ದು ಪಾಪದ ಸಂಕೋಲೆಗಳಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಲು ಇಡುವ ಮೊದಲ ಹೆಜ್ಜೆಯಾಗಿದೆ.
ಹಾಗೆ ಮಾಡಲು, ನಮಗೆ ನಾವೇ ಹೇರಿಕೊಂಡು ಕತ್ತಲೆಯಿಂದ ಹೊರಬಂದು ನಮ್ಮ ದೌರ್ಬಲ್ಯಗಳನ್ನು ಎದುರಿಸಲು ಪ್ರೀತಿಯಿಂದ ಪ್ರೋತ್ಸಾಹಿಸುವ ನಾಯಕರನ್ನು ಹುಡುಕಬೇಕು. ಆದರೆ ನಾವು ಈ ಜ್ಞಾನೋದಯಕ್ಕೆ ಇರುವ ಪ್ರತಿರೋಧವನ್ನು ಹೇಗೆ ದಾಟಬಹುದು?
ಇದು ನಮ್ಮ ಮಾನವ ದೌರ್ಬಲ್ಯವನ್ನು ಮತ್ತು ದೇವರು ನಮ್ಮ ಮೇಲೆ ಹೊಂದಿರುವ ಬೇಷರತ್ತಾದ ಪ್ರೀತಿಯನ್ನು ಅಂಗೀಕರಿಸಿಕೊಳ್ಳುವ ಮೂಲಕ ಪ್ರಾರಂಭವಾಗುತ್ತದೆ. ರೋಮ 5:8 ಹೇಳುತ್ತದೆ, "ಆದರೆ ನಾವು ಇನ್ನೂ ಪಾಪಿಗಳಾಗಿದ್ದಾಗಲೇ ಕ್ರಿಸ್ತನು ನಮಗೋಸ್ಕರ ಸತ್ತನೆಂಬದರಲ್ಲಿ ದೇವರು ನಮ್ಮ ಮೇಲೆ ಎಂತ ಪ್ರೀತಿಯನ್ನು ತೋರಿಸಿದ್ದಾನೆ ಎಂಬುದು ಪ್ರಕಟವಾಗುತ್ತದೆ." ಬೆಳಕು ಇರುವುದು ನಮ್ಮನ್ನು ಖಂಡಿಸುವುದಕೋಸ್ಕರ ಇರದೇ, ನೀತಿ ಮತ್ತು ಶಾಂತಿಯ ಮಾರ್ಗದಲ್ಲಿ ನಮ್ಮನ್ನು ಮಾರ್ಗದರ್ಶಿಸಲು ಮತ್ತು ಪ್ರಕಟಪಡಿಸಲು ಇದೆ ಎಂಬುದನ್ನು ಅರ್ಥಮಾಡಿಕೊಳ್ಳಿ.
ಮೊದಲ ಮಾನವರಾದ ಆದಾಮ ಮತ್ತು ಹವ್ವರು ಪರಲೋಕ, ದೇವರೊಂದಿಗಿನ ಸಂಪರ್ಕ ಮತ್ತು ಪಾಪರಹಿತ ಜೀವನ ಎಲ್ಲವನ್ನೂ ಹೊಂದಿದ್ದರು. ಆದರೆ ಅವರು ಜ್ಞಾನವೃಕ್ಷದಿಂದ ಹಣ್ಣನ್ನು ತಿನ್ನುವ ಮೂಲಕ ದೇವರಿಗೆ ಅವಿಧೇಯರಾದ ಕ್ಷಣದಿಂದ ಅವರು ತಮ್ಮ ಉಲ್ಲಂಘನೆ ಮತ್ತು ಅಪೂರ್ಣತೆಗಳಿಂದ ಉಂಟಾಗುವ ನೋವನ್ನು ಅರಿತುಕೊಂಡರು.
ತರುವಾಯ ಯೆಹೋವದೇವರು ಸಂಜೆಯ ತಂಗಾಳಿಯಲ್ಲಿ ತೋಟದೊಳಗೆ ಸಂಚರಿಸುತ್ತಿರುವಾಗ ಆ ಸ್ತ್ರೀಪುರುಷರು ಆತನ ಸಪ್ಪಳವನ್ನು ಕೇಳಿ ಆತನಿಗೆ ಕಾಣಿಸಬಾರದೆಂದು ತೋಟದ ಮರಗಳ ಹಿಂದೆ ಅಡಗಿಕೊಂಡರು. ಎಂದು ಆದಿಕಾಂಡ 3:8 ನಮಗೆ ಹೇಳುತ್ತದೆ.
ಆದಾಮ ಮತ್ತು ಹವ್ವರ ಪ್ರವೃತ್ತಿಯು ತಮ್ಮ ಪಾಪವನ್ನು ಎದುರಿಸುವ ಬದಲು ದೇವರ ಸಾನಿಧ್ಯದಿಂದ ತಪ್ಪಿಸಿಕೊಂಡು ತಮ್ಮನ್ನು ಮರೆಮಾಡಿಕೊಂಡರು. ಬೆಳಕಿನಿಂದ ಓಡಿಹೋಗುವ ಮತ್ತು ಕತ್ತಲೆಯನ್ನು ಪ್ರೀತಿಸುವ ಈ ಪ್ರಚೋದನೆಯು ಹೊಸದಲ್ಲ. ಯೋಹಾನ 3:20 ಹೇಳುತ್ತದೆ," ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ;
ನಾವು ಪಾಪದಲ್ಲಿ ಜೀವಿಸುತ್ತಿರುವಾಗ, ನಾವು ಮರೆಯಾಗಿಡಲು ಬಯಸುವ ನಮ್ಮ ಭಾಗಗಳ ಮೇಲೆ ಬೆಳಕನ್ನು ಬೆಳಗಿಸುವ ಸ್ಥಳದಲ್ಲಿ - ಅಥವಾ ಜನರೊಂದಿಗೆ - ಇರಲು ನಾವು ಬಯಸುವುದಿಲ್ಲ.
ಯಾವುದೇ ರೀತಿಯ ಬೆಳವಣಿಗೆಯಂತೆ ಆತ್ಮೀಕ ಬೆಳವಣಿಗೆಯು ಸಾಮಾನ್ಯವಾಗಿ ಅನಾನುಕೂಲಕರವಾಗಿರುತ್ತದೆ. ಇದರರ್ಥ ನಾವು ನಮ್ಮ ಅಪರಿಪೂರ್ಣತೆಗಳನ್ನು ಮುಖಾಮುಖಿಯಾಗಿ ಎದುರಿಸ ಬೇಕು ಮತ್ತು ಅದಕ್ಕಾಗಿ ಕೃಪೆಯನ್ನು ಬೇಡಿಕೊಳ್ಳಬೇಕು .
ಜ್ಞಾನೋಕ್ತಿ 28:13 ಹೇಳುತ್ತದೆ, "ತನ್ನ ಪಾಪಗಳನ್ನು ಮರೆಮಾಡುವವನು ಏಳಿಗೆ ಹೊಂದುವುದಿಲ್ಲ, ಆದರೆ ಅವುಗಳನ್ನು ಒಪ್ಪಿಕೊಂಡು ತ್ಯಜಿಸುವವನು ಕರುಣೆಯನ್ನು ಪಡೆಯುತ್ತಾನೆ." ಎಂದು ತಪ್ಪಿಸಿಕೊಳ್ಳುವಿಕೆಯ ನಿರರ್ಥಕತೆಯನ್ನು ಗುರುತಿಸಿ ಮತ್ತು ದೈವಿಕ ಬೆಳಕು ಪ್ರೀತಿ, ಕ್ಷಮೆ ಮತ್ತು ಉತ್ತಮ ಜೀವನಕ್ಕೆ ನೀಡುವ ಕರೆಯಾಗಿದೆ ಎಂಬುದನ್ನು ನೆನಪಿಡಿ.
Bible Reading: Zechariah 10-14
ಪ್ರಾರ್ಥನೆಗಳು
ತಂದೆಯೇ, ಬೆಳಕಿನ ಕಡೆಗೆ ತಿರುಗಿಕೊಳ್ಳುವಂತೆ ನನಗೆ ಸಹಾಯ ಮಾಡು. ಈ ದೌರ್ಬಲ್ಯವನ್ನು ಜಯಿಸಲು ನಿನ್ನ ದೈವಿಕ ಅನುಗ್ರಹವನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ಪವಿತ್ರಾತ್ಮನೊಂದಿಗೆ ಸಂವೇದನಶೀಲರಾಗಿ ವರ್ತಿಸುವುದು● ಯೇಸುವನ್ನು ನೋಡುವ ಬಯಕೆ
● ವಾಕ್ಯದಲ್ಲಿರುವ ಜ್ಞಾನ
● ನೀವೇ ಮಾದರಿಯಾಗಿರ್ರಿ
● ಮೊಗ್ಗು ಬಿಟ್ಟಂತಹ ಕೋಲು
● ದೇವರಿಗಾಗಿ ದಾಹದಿಂದಿರುವುದು
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
