ಅನುದಿನದ ಮನ್ನಾ
0
1
151
ಮೋಸದ ಜಗತ್ತಿನಲ್ಲಿ ಸತ್ಯವನ್ನು ವಿವೇಚಿಸಿ ತಿಳಿಯುವುದು.
Thursday, 23rd of October 2025
ನಂಬಿಕೆಯ ನಿರಂತರ ತಿರುಚುವ ಪ್ರಯಾಣದಲ್ಲಿ, ವಂಚನೆಯ ಕಾರ್ಗತ್ತಲಿನಿಂದ ಸತ್ಯದ ಬೆಳಕನ್ನು ವಿವೇಚಿಸುವುದು ಬಹಳ ಮುಖ್ಯ. ದೇವರ ಶಾಶ್ವತ ವಾಕ್ಯವಾದ ಬೈಬಲ್, ಮಹಾ ಮೋಸಗಾರನಾದ ಸೈತಾನನ ಕುರಿತು ನಮಗೆ ಎಚ್ಚರಿಕೆ ನೀಡುತ್ತದೆ, ಅವನು ಬೆಳಕಿನ ದೇವದೂತನಂತೆ ವೇಷ ಧರಿಸಿ ಬಂದು (2 ಕೊರಿಂಥ 11:14), ದೇವರ ಮಕ್ಕಳನ್ನು ದಾರಿ ತಪ್ಪಿಸಲು ಸುಳ್ಳಿನ ಹೆಣಿಗೆಯನ್ನು ಹೆಣೆಯುತ್ತಾನೆ ಎಂದು ಅದು ಹೇಳುತ್ತದೆ.
ಸೈತಾನನು ಎಂದಿಗೂ ಭೀಕರ ರೂಪಗಳಲ್ಲಿ ನಮಗೆ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ತೋರಿಕೆಯಲ್ಲಿ ದೈವಿಕ ಕಾಂತಿಯಿಂದ ಮುಸುಕುಧರಿಸಿ ಬರುತ್ತಾನೆ, ಇದರಿಂದಾಗಿ ಲಕ್ಷಾಂತರ ಜನರು ನೀತಿಯ ಮಾರ್ಗದಿಂದ ದಾರಿ ತಪ್ಪುತ್ತಾರೆ. ಆದ್ದರಿಂದ, ಪ್ರತಿಯೊಬ್ಬ ವಿಶ್ವಾಸಿಯು ದೇವರ ವಾಕ್ಯದಲ್ಲಿ ನೆಲೆಗೊಳ್ಳಬೇಕಾದ್ದು ವಂಚನೆಯಿಂದ ಸತ್ಯವನ್ನು ವಿವೇಚಿಸಿ ಪ್ರತ್ಯೇಕಿಸಿ ಕೊಂಡು ಕರ್ತನ ಶಾಶ್ವತ ಸತ್ಯದ ಬೆಳಕಿನಲ್ಲಿ ನಡೆಯುವುದು ಬಹಳ ಅವಶ್ಯಕ. " ಇದೇನೂ ಆಶ್ಚರ್ಯವಲ್ಲ; ಸೈತಾನನು ತಾನೇ ಪ್ರಕಾಶರೂಪವುಳ್ಳ ದೇವದೂತನ ವೇಷವನ್ನು ಹಾಕಿಕೊಳ್ಳುವಾಗ.... " ( ಕೊರಿಂಥ 11:14 NIV)
ಸೈತಾನನ ಮಹಾ ವಂಚನೆಯೆಂದರೆ ತನ್ನನ್ನು ಸುಳ್ಳಿನ ಪಿತಾಮಹನಾಗಿ ಅಲ್ಲದೇ, ಬದಲಾಗಿ ದೈವಿಕ ಪ್ರಕಟಣೆ ಮೂಲವಾಗಿ ತೋರಿಸಿಕೊಳ್ಳುವ ಅವನ ಸಾಮರ್ಥ್ಯ.ದೇವರ ವಾಕ್ಯದ ಮೇಲೆ ಆಧಾರಗೊಳ್ಳದವರನ್ನು ಬಲೆಗೆ ಬೀಳಿಸುವ ಆಶಯದೊಂದಿಗೆ ಅವನು ಜ್ಞಾನೋದಯದ ಸೋಗಿನಲ್ಲಿ ತನ್ನ ಮೋಸದ ಉದ್ದೇಶವನ್ನು ಮರೆಮಾಚುತ್ತಾನೆ. ಹಿಂದೆ ಇತಿಹಾಸದಲ್ಲಿ ಅವನು ಇದನ್ನು ಹಲವು ಬಾರಿ ಮಾಡಿ, ಲಕ್ಷಾಂತರ ಕ್ರೈಸ್ತರನ್ನು ನಿಜವಾದ ನಂಬಿಕೆಯಿಂದ ದೂರವಿಟ್ಟಿದ್ದಾನೆ.
ಆದಿಕಾಂಡ 27 ರಲ್ಲಿ, ಏಸಾವನ ವಸ್ತ್ರಗಳನ್ನು ಧರಿಸಿದ ಯಾಕೋಬನು ತನ್ನ ತಂದೆ ಇಸಾಕನನ್ನು ವಂಚಿಸಿದನು. ಯಾಕೋಬನು ಏಸಾವನನ್ನು ಅನುಕರಿಸಿದ್ದು ನಿಜವಾದ ವರ ಅಥವಾ ನಿಜವಾದ ಗುರುತನ್ನು ಕೂಡ ತಪ್ಪಾಗಿ ಅನುಕರಿಸಬಹುದಾಗಿದ್ದು, ಇದು ಒಂದು ಗ್ರಹಿಕೆಗೂ ಮತ್ತು ವಾಸ್ತವಕ್ಕೂ ನಡುವೆ ಬಿರುಕು ಉಂಟುಮಾಡುತ್ತದೆ ಎಂಬುದನ್ನು ಸೂಚಿಸುತ್ತದೆ. ಯಾಕೋಬನ ವಂಚಿಸುವ ಕೃತ್ಯವು ಬಾಹ್ಯ ನೋಟವನ್ನು ಮೀರಿ ನೋಡಬೇಕಾದ ಮತ್ತು ಆಧಾರಗೊಳ್ಳಬೇಕಾದ ಸತ್ಯವನ್ನು ಗ್ರಹಿಸಬೇಕೆಂಬವಿವೇಚನೆಯ ಅಗತ್ಯವನ್ನು ಬಲಪಡಿಸುತ್ತದೆ
"ದೇವರ ಉಪದೇಶವನ್ನೂ ದೇವರ ಬೋಧನೆಯನ್ನೂ ವಿಚಾರಿಸುವ ಎಂದು ಅವರು ಹೇಳದಿದ್ದರೆ ಅವರಿಗೆ ಎಂದಿಗೂ ಬೆಳಗಾಗುವದಿಲ್ಲ." (ಯೆಶಾಯ 8:20 NIV) ದೇವರ ವಾಕ್ಯದ ಸತ್ಯದಿಂದ ಬೇರ್ಪಟ್ಟವರು ಶಾಶ್ವತ ಕತ್ತಲೆಯಲ್ಲಿ ಅಲೆದಾಡುತ್ತಿರುತ್ತಾ ಶತ್ರುಗಳ ಸುಳ್ಳುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಕಾರ್ಗತ್ತಲಿನಲ್ಲಿ ಕಳೆದುಹೋದವರು ದೇವರಿಂದ ದೂರವಾದವರೂ ಮತ್ತು ಆತ್ಮೀಕ ಶೂನ್ಯತೆಯ ಹಸಿವಿನೊಂದಿಗೆ ಹೋರಾಡುವ ಆತ್ಮಗಳ ದುಃಖದ ಚಿತ್ರಣವನ್ನು ಯೆಶಾಯ ಚಿತ್ರಿಸುತ್ತಾನೆ. ಅಂಥವರು ಕಹಿತನದಿಂದ, ದೇವರನ್ನು ಶಪಿಸುತ್ತಾ ಆತನ ದೈವಿಕ ಸಾನಿಧ್ಯದಿಂದ ಹೊರಗೆ ಸಾಂತ್ವನವನ್ನು ಹುಡುಕುತ್ತಾರೆ. ದೇವರ ವಾಕ್ಯವನ್ನು ತಿರಸ್ಕರಿಸುವ ಪರಿಣಾಮವಾಗಿ ಉಂಟಾಗುವ ಆತ್ಮೀಕ ಕುರುಡುತನವು ಆಗಾಗ್ಗೆ ದೇವರ ವಿರುದ್ಧ ಕೋಪ ಮತ್ತು ಅಸಮಾಧಾನಕ್ಕೆ ಕಾರಣವಾಗಿ ಅದು ಅಂತಹ ವ್ಯಕ್ತಿಗಳನ್ನು ದೇವರಿಂದ ಮತ್ತಷ್ಟು ದೂರ ಮಾಡುತ್ತದೆ.
ಈ ಸಂಗತಿಗಳನ್ನು ಕೇಳಿ ಕಂಡವನು ಯೋಹಾನನೆಂಬ ನಾನೇ. ನಾನು ಕೇಳಿ ಕಂಡಾಗ ಈ ಸಂಗತಿಗಳನ್ನು ನನಗೆ ತೋರಿಸಿದ ದೇವದೂತನಿಗೆ ನಮಸ್ಕಾರಮಾಡಬೇಕೆಂದು ಅವನ ಪಾದಕ್ಕೆ ಬಿದ್ದೆನು. ಅವನು ನನಗೆ - ಮಾಡಬೇಡ ನೋಡು; ನಾನು ನಿನಗೂ ಪ್ರವಾದಿಗಳಾಗಿರುವ ನಿನ್ನ ಸಹೋದರರಿಗೂ ಈ ಪುಸ್ತಕದಲ್ಲಿ ಬರೆದಿರುವ ಮಾತುಗಳನ್ನು ಕೈಕೊಂಡು ನಡೆಯುವವರಿಗೂ ಜೊತೆಯ ದಾಸನಾಗಿದ್ದೇನೆ; ದೇವರಿಗೇ ನಮಸ್ಕಾರಮಾಡು ಎಂದು ಹೇಳಿದನು.(ಪ್ರಕಟನೆ 22:8-9 NIV)
ಇಲ್ಲಿ ದೇವದೂತನ ಪರಲೋಕದ ಮಹಿಮೆಯನ್ನು ನೋಡಿ ಅಪೊಸ್ತಲ ಯೋಹಾನನು ಕೂಡ ಒಂದು ಕ್ಷಣ ಪ್ರಭಾವಿತನಾಗಿಬಿಡುತ್ತಾನೆ,.ಇದು ಮನುಷ್ಯನ ದುರ್ಬಲತೆಯನ್ನು ವಿವರಿಸುತ್ತದೆ. ದೇವದೂತನ ಉಪದೇಶವು ದೇವರನ್ನು ಮಾತ್ರ ಆರಾಧಿಸುವ ನಮ್ಮ ಉದ್ದೇಶವನ್ನು ಒತ್ತಿಹೇಳುತ್ತದೆ, ನಮ್ಮ ಭಕ್ತಿ ಮತ್ತು ಆರಾಧನೆಯನ್ನು ನಮ್ಮ ಸೃಷ್ಟಿಕರ್ತ ದೇವರಿಗೆ ಮಾತ್ರ ಸಲ್ಲಿಸತಕ್ಕದ್ದು ಎಂದು ಹೇಳುತ್ತದೆ.
ನಾವು ವಂಚನೆಯನ್ನು ಹೇಗೆ ಜಯಿಸುತ್ತೇವೆ? "ನಿನ್ನ ವಾಕ್ಯವೇ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು." (ಕೀರ್ತನೆ 119:105)
ವಾಕ್ಯದ ದೈವಿಕ ಪ್ರಕಟಣೆಗಳಲ್ಲಿ ನಾವು ಮುಳುಗುವ ಮೂಲಕ, ನಾವು ಸತ್ಯದ ಬೆಳಕಿನಿಂದ ಪ್ರಕಾಶಿಸಲ್ಪಡುತ್ತೇವೆ, ನಮ್ಮ ಹೆಜ್ಜೆಗಳನ್ನು ನೀತಿಯ ಹಾದಿಯಲ್ಲಿ ಮಾರ್ಗದರ್ಶಿಸುತ್ತ ವಂಚನೆಯ ಬಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ.
Bible Reading: Mark 9-10
ಪ್ರಾರ್ಥನೆಗಳು
ಶಾಶ್ವತ ತಂದೆಯೇ, ವಂಚನೆಯನ್ನು ಪ್ರಕಟಪಡಿಸಿ ನಿಮ್ಮ ಶಾಶ್ವತ ಸತ್ಯವನ್ನು ನೋಡಲು ನಮಗೆ ವಿವೇಚನೆಯನ್ನು ನೀಡು. ನಿಮ್ಮ ವಾಕ್ಯವು ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವ ದೀಪವಾಗಲಿ, ಕಾರ್ಗತ್ತಲನ್ನು ಹೋಗಲಾಡಿಸುವ ಬೆಳಕಾಗಿ, ನಮ್ಮನ್ನು ನೀತಿ ಮತ್ತು ತಿಳುವಳಿಕೆಯಲ್ಲಿ ನಡೆಯುವಂತೆ ಕರೆದೊಯ್ಯಲಿ. ಯೇಸುವಿನ ಹೆಸರಿನಲ್ಲಿ ನಾವು ಪ್ರಾರ್ಥಿಸುತ್ತೇವೆ ತಂದೆಯೇ. ಆಮೆನ್.
Join our WhatsApp Channel
Most Read
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1● ಸರ್ವಶಕ್ತನಾದ ದೇವರ ಅದ್ಬುತ ಸಮಾಗಮ.
● ಭವ್ಯಭವನದ ಹಿಂದಿರುವ ಮನುಷ್ಯ
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ನಿಮ್ಮ ಪದೋನ್ನತಿಗಾಗಿ ಸಿದ್ಧರಾಗಿ
● ಯುದ್ಧಕ್ಕಾಗಿ ತರಬೇತಿ.
● ಇತರರಿಗೆ ದಾರಿ ತೋರಿಸುವುದು
ಅನಿಸಿಕೆಗಳು
