ಇಂದಿನ ವೇಗವಾಗಿ ಓಡುತ್ತಿರುವ ನಮ್ಮ ಆಧುನಿಕ ಲೋಕದಲ್ಲಿ ಸುಖ-ಸುಮ್ಮನೆ ಪ್ರಾರ್ಥನೆಗೆ ಕೂಡಿಬರುವಂತದ್ದು ಬಹಳ ಸುಲಭವೇ. ಅದೂ ಸಹ ನಮ್ಮ ದೈನಂದಿನ ಚಟುವಟಿಕೆಗಳ ಪಟ್ಟಿಯಲ್ಲಿ ಒಂದನ್ನುವಂತೆ ಮುಗಿಸಿ ಗೆರೆ ಎಳೆಯುವಂತೆ ಇಂದು ಆಗಿಬಿಟ್ಟಿದೆ. ಅದಾಗಿಯೂ,ಇದುವೇ ತುರ್ತುಪರಿಸ್ಥಿತಿ ಎಂಬಂತೆ ಮಾಡುವಂತಹ ಪ್ರಾರ್ಥನೆಯಲ್ಲಿ ಒಂದು ಪ್ರಚಂಡ ಶಕ್ತಿ ಇದೆ ಎಂದು ಸತ್ಯವೇದ ನಮಗೆ ಬೋಧಿಸುತ್ತದೆ. 1ಪೇತ್ರ 4:7 ಹೇಳುವಂತೆ" "ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ; ಆದದರಿಂದ ನೀವು ಜಿತೇಂದ್ರಿಯರಾಗಿಯೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರ್ರಿ."
ತುರ್ತಾದ ಪ್ರಾರ್ಥನೆ ಎಂಬುದು ಭಾವೊನ್ಮಾದದಿಂದ ಹೇಳುವುದನ್ನೇ ಹೇಳುವ ಮಾತುಗಳಾಗಲೀ ಅಥವಾ ದೇವರ ಕೈಗಳನ್ನು ತಿರುಚಿಯಾದರೂ ಬೇಡಿದ್ದನ್ನು ಪಡೆದುಕೊಳ್ಳುವ ಕಾರ್ಯವಾಗಲಿ ಅಲ್ಲ. ಬದಲಾಗಿ ಅದೊಂದು ನಮ್ಮ ಅತ್ಯಂತ ಅಗತ್ಯ ಇರುವ ಕೊರತೆಗಳನ್ನು ಮತ್ತು ಬಯಕೆಗಳನ್ನು ದೇವರ ಸಮ್ಮುಖಕ್ಕೆ ತರುವಂತ ಪ್ರಾರ್ಥನೆಯಾಗಿದೆ.
"ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ." ಎಂದು ಯಾಕೋಬನು ತನ್ನ ಪತ್ರಿಕೆಯ 5:16 ರಲ್ಲಿ ನಮಗೆ ನೆನಪಿಸುತ್ತಾನೆ.
ಇಡೀ ಸತ್ಯವೇದದಲ್ಲಿ ಯಾರೆಲ್ಲ ತಮಗೆ ಅತ್ಯಗತ್ಯವಾದದ್ದನ್ನು ಹೊಂದಿಕೊಳ್ಳಲು ತುರ್ತಾದ ಅವಶ್ಯಕತೆ ಇದೆ ಎನ್ನುವ ಭಾವನೆಯಲ್ಲಿ ಪ್ರಾರ್ಥಿಸಿದರೋ ಅವರೆಲ್ಲರೂ ಅದ್ಭುತವಾದ ಬಿಡುಗಡೆಯನ್ನು ಅನುಭವಿಸಿದ್ದನ್ನು ನಾವು ಕಾಣಬಹುದು.ಈ ರೀತಿ ಮಾಡಿದ ಒಬ್ಬ ವ್ಯಕ್ತಿಯೆಂದರೆ ಹನ್ನಳು. ಆಕೆಯ ಕಥೆಯನ್ನು 1 ಸಮುವೇಲ 1:1-20ರಲ್ಲಿ ನಾವು ಕಾಣಬಹುದು.ಹನ್ನಳು ಬಂಜೆತನದಿಂದ ಬಾದಿಸಲ್ಪಟ್ಟ ಸ್ತ್ರೀಯರಾಗಿದ್ದಳು. ಇದರಿಂದ ಆಕೆಯು ತನ್ನ ಹೃದಯದ ಭಾರವನ್ನೆಲ್ಲಾ ಕರ್ತನ ಮುಂದೆ ಬಂದು ಹೋಯಿದು ಬಿಟ್ಟಳು.
"ಬಹು ದುಃಖದಿಂದ ಕಣ್ಣೀರು ಸುರಿಸುತ್ತಾ ಯೆಹೋವನನ್ನು ಕುರಿತು -... "(1 ಸಮುವೇಲನು 1:10).
ಹನ್ನಳು ತುರ್ತೆಂದು ಪರಿಗಣಿಸಿದ ಈ ವಿಜ್ಞಾಪನೆಯು ಒಂದು ಮಾಮೂಲಿಯ ಬೇಡಿಕೆಯಂತೆ ಇರಲಿಲ್ಲ. ತನ್ನ ಪರಿಸ್ಥಿತಿಯನ್ನು ಬದಲಾಯಿಸಲು ಶಕ್ತನಾಗಿರುವ ಏಕೈಕ ವ್ಯಕ್ತಿಯ ಬಳಿ ಅಂಗಲಾಚುವಂತೆ ಆಕೆಯು ಕರ್ತನಲ್ಲಿ ಬೇಡಿಕೊಂಡಳು. ತನ್ನ ಪರಿಸ್ಥಿತಿಯನ್ನು ಬದಲಾಯಿಸಲು ಯಾವ ಒಬ್ಬ ಮನುಷ್ಯನಿಗೂ ಸಾಧ್ಯವಿಲ್ಲ ಎಂಬುದನ್ನು ಆಕೆ ಗ್ರಹಿಸಿಕೊಂಡಿದ್ದಳು. ಹಾಗಾಗಿ ಆಕೆಯು ತನ್ನ ಹೃದಯವನ್ನು ಕರ್ತನ ಕಡೆಗೆ ತಿರುಗಿಸಿದಳು. ಅದರ ಪ್ರತಿಫಲವಾಗಿ ದೇವರು ಅವಳ ಮೊರೆಯನ್ನು ಕೇಳಿ ಆಕೆಗೆ ಸಮವೇಲನೆಂಬ ಮಗನನ್ನು ಕೊಟ್ಟನು. ಈ ಒಬ್ಬ ಮಗನೇ ಮುಂದೆ ಬೆಳೆದು ಇಸ್ರಾಯೆಲ್ಯರಲ್ಲಿಯೇ ದೊಡ್ಡ ಪ್ರವಾದಿಯಾದನು.
ನಾವು ನಮ್ಮಲ್ಲಿರುವ ಸ್ವಂತ ಬಲದ ಮೇಲೆ ಸ್ವಂತ ಸಂಪನ್ಮೂಲಗಳ ಮೇಲೆ ಇಟ್ಟಿರುವ ಎಲ್ಲಾ ನಂಬಿಕೆಗಳು ವ್ಯರ್ಥ ಎನ್ನುವ ಪರಿಸ್ಥಿತಿ ಬಂದಾಗ ಆ ತುರ್ತು ಪ್ರಾರ್ಥನೆಯ ಬಲವನ್ನು ನಾವು ಅನುಭವಿಸಲು ಸಾಧ್ಯವಾಗುತ್ತದೆ ಎಂಬುದನ್ನು ಹನ್ನಳ ಜೀವನ ಚರಿತ್ರೆಯಿಂದ ನಾವು ತಿಳಿದುಕೊಳ್ಳಬಹುದು.
"ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು." ಎಂದು ಮತ್ತಾಯ 5:3 ರಲ್ಲಿ ಕರ್ತನಾದ ಯೇಸು ಹೇಳಿದ ಪ್ರಕಾರ ಯಾವಾಗ ನಾವು ನಮ್ಮ ಆತ್ಮಿಕತೆಯಲ್ಲಿನ ಬಡತನವನ್ನು ಅರಿತುಕೊಳ್ಳುತ್ತೇವೋ, ದೇವರ ಉಪಸ್ಥಿತಿಯ ಬಯಕೆಯನ್ನು ಹಂಬಲಿಸಲಾರಂಭಿಸುತ್ತೇವೋ ಆಗ ಕರ್ತನಿಗೆ ನಮ್ಮ ಜೀವಿತದಲ್ಲಿ ಅದ್ಭುತವಾದ ಕಾರ್ಯಗಳನ್ನು ಮಾಡಲು ನಾವು ಬಾಗಿಲನ್ನು ತೆರೆದುಕೊಡುತ್ತೇವೆ.
ತುರ್ತು ಪ್ರಾರ್ಥನೆಗೆ ಇನ್ನೊಂದು ಉದಾಹರಣೆ ಎಂದರೆ ಅರಸನಾದ ಹಿಜ್ಕೀಯನ ಜೀವನ ಚರಿತ್ರೆ. (2 ಅರಸು 19:14-19)ಹಿಜ್ಕಿಯನ್ನು ತನ್ನ ಮೇಲೆ ದಂಡೆತ್ತಿ ಬಂದಿರುವ ಶತ್ರುವನ್ನು ನೋಡಿ ಆ ಶತ್ರು ಕಳುಹಿಸಿಕೊಟ್ಟ ಭಯವನ್ನುಂಟು ಮಾಡುವ ಪತ್ರವನ್ನು ತೆಗೆದುಕೊಂಡು ಹೋಗಿ ಆ ಪತ್ರವನ್ನು ಕರ್ತನ ಮುಂದೆ ಇಟ್ಟು ಕರ್ತನ ಸಹಾಯಕ್ಕಾಗಿ ಹೀಗೆ ಮೊರೆ ಇಟ್ಟನು "ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್‍ದೇವರೇ, ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ; ಪರಲೋಕ ಭೂಲೋಕಗಳನ್ನುಂಟು ಮಾಡಿದವನು ನೀನೇ.
16ಯೆಹೋವನೇ, ಕಿವಿಗೊಟ್ಟು ಕೇಳು; ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪದೇವರಾದ ನಿನ್ನನ್ನು ನಿಂದಿಸುವದಕ್ಕೋಸ್ಕರ ಹೇಳಿಕಳುಹಿಸಿದ ಮಾತುಗಳನ್ನು ಮನಸ್ಸಿಗೆ ತಂದುಕೋ.17 ಯೆಹೋವನೇ, ಅಶ್ಶೂರದ ಅರಸರು ದೇಶಜನಾಂಗಗಳನ್ನು ಹಾಳುಮಾಡಿ18ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದ್ದು ನಿಜ. ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ; ಆದದರಿಂದಲೇ ಅವುಗಳನ್ನು ಹಾಳು ಮಾಡುವದು ಅವರಿಗೆ ಸಾಧ್ಯವಾಯಿತು.19 ಯೆಹೋವನೇ, ನಮ್ಮ ದೇವರೇ, ನೀನೊಬ್ಬನೇ ದೇವರೆಂಬದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು".ಹಿಜ್ಕಿಯನ ಈ ತುರ್ತು ಪ್ರಾರ್ಥನೆಗೆ ಸ್ಪಂದಿಸಿದ ಕರ್ತನು ಎದ್ದು ಅಶೂರ್ಯರ ಸೈನ್ಯದ ಕೈಯಿಂದ ಯೆರುಸಲೆಮನ್ನು ಬಿಡಿಸಿದನು.(2 ಅರಸು 19:15-19)
ತುರ್ತು ಪ್ರಾರ್ಥನೆಯು ಕೇವಲ ಸತ್ಯವೇದದಲ್ಲಿರುವ ನಂಬಿಕೆಯ ವೀರರಿಗೆ ಮಾತ್ರ ಸೀಮಿತವಾಗಿಲ್ಲ. ಇಂದೂ ಸಹ ಈ ಒಂದು ಬಲವಾದ ಸಾಧನವನ್ನು ಪ್ರತಿ ವಿಶ್ವಾಸಿಯೂ ಬಳಸಿಕೊಳ್ಳಬಹುದು. ನಾವು ನಮಗೆ ಅಸಾಧ್ಯವೆನಿಸುವಂತಹ ಸವಾಲುಗಳನ್ನು, ಸಮಸ್ಯೆಗಳನ್ನು ಪರಿಸ್ಥಿತಿಗಳನ್ನು ಎದುರಿಸುವಾಗ ನಾವೂ ಸಹ ಹನ್ನಾಳ ಹಾಗೂ ಹಿಜ್ಕೀಯರ ಹೆಜ್ಜೆ ಜಾಡನ್ನು ಹಿಂಬಾಲಿಸಿ, ಕರ್ತನ ಸಾನಿಧ್ಯದಲ್ಲಿ ನಮ್ಮ ತುರ್ತು ಎನಿಸುವಂತಹ ಅಗತ್ಯಗಳನ್ನು ಅರಿಕೆ ಮಾಡಬೇಕು. ಫಿಲಿಪ್ಪಿ 4:6-7ರಲ್ಲಿ ಹೇಳಿರುವಂತೆ
"ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ.7 ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.
ನಮ್ಮ ಜೀವಿತದಲ್ಲಿ ನಾವು ಈ ರೀತಿಯ ತುರ್ತು ಪ್ರಾರ್ಥನೆಯ ಅಭ್ಯಾಸವನ್ನು ಇಟ್ಟುಕೊಂಡಾಗ ದೇವರೊಂದಿಗಿನಾ ನಮ್ಮ ಸಂಬಂಧ ಹಾಗೂ ನಮ್ಮ ಸುತ್ತಲಿನ ಜಗತ್ತು ಎರಡು ಕೂಡ ಮಾರ್ಪಡುತ್ತದೆ.
ನಾವು ಎಲ್ಲದಕ್ಕೂ ಚಿಂತೆವುದನ್ನೂ, ಭಯಪಡುವುದನ್ನೂ ನಮ್ಮ ಸ್ವಬುದ್ಧಿಯ ಮೇಲೆ ಆಧಾರಗೊಳ್ಳುವುದನ್ನೂ ಬಿಟ್ಟು ಕರ್ತನೇ ನಮ್ಮ ಪರಿಹಾರದ ಆಧ್ಯ ಮತ್ತು ಏಕೈಕ ಮೂಲ ಎಂದು ಕರ್ತನೆಡೆಗೆ ತಿರುಗಿಕೊಳ್ಳುವುದನ್ನು ಕಲಿಯಬಹುದು.
ನಾವು ಹೀಗೆ ಮಾಡುವಾಗ ನಮ್ಮ ಮೊರೆಯನ್ನು ಕೇಳಿ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದಲ್ಲಿ ನಮಗೆ ಸದುತ್ತರವನ್ನು ದಯಪಾಲಿಸುವ ಆತನ ನಂಬಿಗಸ್ಥಿಕೆಯನ್ನು ನಾವು ಕಂಡುಕೊಳ್ಳಬಹುದು.
ಆದ್ದರಿಂದ ಬೆಟ್ಟಗಳನ್ನು ಕದಲಿಸುವಂತಹ ನಮ್ಮ ಜೀವಿತದ ಪರಿಸ್ಥಿತಿಗಳನ್ನು ಮಾರ್ಪಡಿಸಲು ಸಾಧ್ಯವಾಗುವಂತ ಪ್ರಾರ್ಥನೆಯೊಂದಿಗೆ ಕರ್ತನ ಕೃಪಾಸನದ ಮುಂದೆ ಧೈರ್ಯವಾಗಿ ತುರ್ತಾಗಿ ಬರೋಣ. ಯೋಹಾನ 16:24ರಲ್ಲಿ ಕರ್ತನಾದ ಯೇಸುವೇ ಹೇಳಿರುವಂತೆ "ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ; ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು."ನಾವು ಈ ತುರ್ತು ಪ್ರಾರ್ಥನೆಯ ಬಲವನ್ನು ಅಪ್ಪಿಕೊಂಡು ಹೃದಯಪೂರ್ವಕವಾಗಿ ದೇವರ ಮೇಲೆಯೇ ಆಧಾರಗೊಳ್ಳುವುದರಿಂದ ದೊರಕುವ ಅದ್ಭುತವಾದ ಆಶೀರ್ವಾದಗಳ ಹರಿವಿಕೆಯನ್ನು ಅನುಭವಿಸೋಣ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ತುರ್ತು ಪ್ರಾರ್ಥನೆಯನ್ನು ಹೇಗೆ ಮಾಡಬೇಕೆಂದು ನಮಗೆ ಕಲಿಸಿಕೊಡು.ನಮ್ಮ ಹೃದಯದಿಂದ ಹೊರಡುವ ಮೊರೆಯು ನಿನ್ನ ಬಲವನ್ನು ಬಿಡುಗಡೆಗೊಳಿಸಿ ಅದ್ಭುತವಾದ ಬಿಡುಗಡೆಗಳನ್ನು ನಮಗೆ ತರಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇವೆ ತಂದೆಯೇ ಆಮೆನ್.
Join our WhatsApp Channel
Most Read
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು● ದಿನ 29:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಆತ್ಮಿಕ ಶಕ್ತಿಯನ್ನು ನವೀಕರಿಸಿಕೊಳ್ಳುವುದು ಹೇಗೆ -3
● ಮಹಾತ್ತಾದ ಕಾರ್ಯಗಳು
● ಅಂತ್ಯಕಾಲದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು : #1
● ನೀವು ಎಷ್ಟು ವಿಶ್ವಾಸಾರ್ಹರು?
● ಪ್ರಾರ್ಥನಾ ಹೀನತೆ ಎಂಬ ಪಾಪ
ಅನಿಸಿಕೆಗಳು