ಅನುದಿನದ ಮನ್ನಾ
1
0
130
ನಮ್ಮ ಆತ್ಮೀಕ ಅಲಗುಗಳನ್ನು ರಕ್ಷಿಸುವುದು
Thursday, 30th of October 2025
Categories :
ನಂಬಿಕೆ (Faith)
ಬುದ್ಧಿವಂತಿಕೆ (Wisdom)
"ಉಪ್ಪು ನೀರಿನಲ್ಲಿ ಮುಳುಗಿಸಿದ ಅತ್ಯುತ್ತಮ ಕತ್ತಿಯೂ ಸಹ ಅಂತಿಮವಾಗಿ ತುಕ್ಕು ಹಿಡಿಯುತ್ತದೆ" ಎಂಬ ಒಂದು ದೊಡ್ಡ ಗಾದೆ ಇದೆ. ಇದು ಕೊಳೆಯುವಿಕೆಯನ್ನು ಎತ್ತಿ ತೋರಿಸುವ ಚಿತ್ರಣವನ್ನು ನೀಡುತ್ತಾ ಅತ್ಯಂತ ಬಲಿಷ್ಠವಾದ ವಸ್ತುಗಳ ಮೇಲೂ ಸಮಯ ಮತ್ತು ಪರಿಸರದ ನಿರಂತರವಾಗಿ ಬೀಳುವ ಬಲದ ಪರಿಣಾಮವನ್ನು ನೆನಪಿಸುತ್ತದೆ.
ಅಂಶಗಳು ಪ್ರಬಲವಾದ ಅಲಗುಗಳನ್ನು ಸವೆಯುವಂತೆಯೇ, ಜನರು ಸಾಕಷ್ಟು ಜಾಗರೂಕರಾಗಿಲ್ಲದಿದ್ದರೆ ಲೋಕವು ಅತ್ಯಂತ ದೃಢವಾದ ನಂಬಿಕೆಯುಳ್ಳವರನ್ನು ಸಹ ಸವೆಯಿಸಬಹುದು.
"ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ."(ರೋಮನ್ನರು 12:2)
ನಾವು ಸಂಚರಿಸುವ ಜಗತ್ತು ಆ ಉಪ್ಪುನೀರಿನಂತಿದೆ - ನಮ್ಮ ಆತ್ಮೀಕ ಸಮಗ್ರತೆಯನ್ನು ನಾಶಮಾಡುವ ಬೆದರಿಕೆ ಹಾಕುವ ಪ್ರಲೋಭನೆಗಳು, ಗೊಂದಲಗಳು ಮತ್ತು ಸವಾಲುಗಳಿಂದ ಅದು ತುಂಬಿದೆ. ನಾವು ನಿಷ್ಕ್ರಿಯರಾಗಿರದೆ ನಮ್ಮ ಆತ್ಮೀಕ ತೀಕ್ಷ್ಣತೆಯನ್ನು ಕಾಪಾಡಿಕೊಳ್ಳುವಲ್ಲಿ ಸಕ್ರಿಯರಾಗಿರಲು ಕರೆಯಲ್ಪಟ್ಟಿದ್ದೇವೆ.
ಒಂದು ಕ್ಷಣ ಅಲಗುಗಳನ್ನು ಪರಿಗಣಿಸಿ. ಇದನ್ನು ಒಂದು ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು ಹರಿತಗೊಳಿಸಿದಾಗ, ಅದು ದೊಡ್ಡದನ್ನು ಸಾಧಿಸಬಹುದು. ಅದೇ ರೀತಿ, ನಾವೂ ಸಹ ಒಂದು ನಿರ್ದಿಷ್ಟ ಉದ್ದೇಶದಿಂದ ರಚಿಸಲ್ಪಟ್ಟಿದ್ದು ನಮ್ಮ ಆತ್ಮೀಕ ಅಲಗುಗಳನ್ನು ನಿರ್ವಹಿಸಿದಾಗ, ದೈವಿಕ ಯೋಜನೆಗಳನ್ನು ಸಾಧಿಸಬಹುದು.
"ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇವಿುಸಿದನು." (ಎಫೆಸ 2:10)
ಆದಾಗ್ಯೂ, ಜಾಗರೂಕತೆ ಇಲ್ಲದಿದ್ದರೆ, ಜಗತ್ತಿನ 'ಉಪ್ಪುನೀರು' - ಅಂದರೆ ಹಾನಿಕಾರಕ ಸಂಬಂಧಗಳು, ಹಾನಿಕಾರಕ ಅಭ್ಯಾಸಗಳು ಅಥವಾ ಅತಿಯಾದ ನಕಾರಾತ್ಮಕತೆ - ನಮ್ಮನ್ನು ತುಕ್ಕು ಹಿಡಿಯುವಂತೆ ಮಾಡುತ್ತದೆ. ಇದು ಸೂಕ್ಷ್ಮವಾಗಿ ಪ್ರಾರಂಭವಾಗಬಹುದು, ಆದರೆ ಕಾಲಾನಂತರದಲ್ಲಿ, ಇದು ಗಮನಾರ್ಹವಾದ ಆತ್ಮೀಕ ಕೊಳೆಯುವಿಕೆಗೆ ಕಾರಣವಾಗಬಹುದು.
ಹಾಗಾದರೆ, ನಾವು ನಮ್ಮ ಆತ್ಮೀಕ ಅಲಗನ್ನು ತುಕ್ಕು ಹಿಡಿಯದಂತೆ ಕಾಯ್ದುಕೊಳ್ಳುವುದು ಹೇಗೆ?
1. ನಿಯಮಿತ ಆತ್ಮೀಕ ಹರಿತಗೊಳಿಸುವಿಕೆ:
ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ.(ಇಬ್ರಿಯ 10:24).
ದೇವರವಾಕ್ಯದ ನಿಯಮಿತವಾದ ಅಧ್ಯಯನ, ಆರಾಧನೆ ಮತ್ತು ಸಹೋದರ ಸಹಭಾಗಿತ್ವದಲ್ಲಿ ತೊಡಗಿಸಿಕೊಳ್ಳುವುದರಿಂದ ನಮ್ಮ ಆತ್ಮೀಕ ಅಲಗು ತೀಕ್ಷ್ಣವಾಗಿರುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ದೇವರ ವಾಕ್ಯವು ನಮ್ಮ ಒರೆಗಲ್ಲಾಗಿದ್ದು, ನಮ್ಮ ಉದ್ದೇಶ ಮತ್ತು ನಿರ್ದೇಶನವನ್ನು ಪರಿಷ್ಕರಿಸಿ ಒರೆ ಹಚ್ಚುವಂತದ್ದಾಗಿದೆ .
2. ಹಾನಿಕಾರಕ ಪರಿಸರಗಳಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದನ್ನು ತಪ್ಪಿಸುವುದು:
ಕತ್ತಿಯನ್ನು ಉಪ್ಪುನೀರಿನಲ್ಲಿ ಬಿಡಬಾರದು, ದೇವರಿಂದ ನಮ್ಮನ್ನು ದೂರ ಸೆಳೆಯುವ ಸಂದರ್ಭಗಳಲ್ಲಿ ನಾವು ಮುಳುಗುವ ಕುರಿತು ಜಾಗರೂಕರಾಗಿರಬೇಕು. ಪೌಲನು 1 ಕೊರಿಂಥ 15:33 ರಲ್ಲಿ ನಮಗೆ ನೆನಪಿಸುವುದೇನೆಂದರೆ, "ಮೋಸಹೋಗಬೇಡಿರಿ: 'ದುಷ್ಟಸಹವಾಸವು ಒಳ್ಳೆಯ ನೈತಿಕತೆಯನ್ನು ಹಾಳುಮಾಡುತ್ತದೆ.'ಎಂದು.
ನಮ್ಮ ಪರಿಸರವನ್ನು ಕಾಪಾಡಿಕೊಳ್ಳುವುದು ಆತ್ಮೀಕ ಸಂರಕ್ಷಣೆಗೆ ಬಹಳ ಮುಖ್ಯ. ದೇವ ಸೇವಕರ ವಿರುದ್ಧ ಕೆಟ್ಟದಾಗಿ ಮಾತನಾಡುವ ಚಾಡಿಕೋರರೊಂದಿಗೆ ಸಂಬಂಧ ಹೊಂದಲು ಇಷ್ಟಪಡುವ ಕೆಲವು ವಿಶ್ವಾಸಿಗಳಿದ್ದಾರೆ. ಶೀಘ್ರದಲ್ಲೇ, ಅಂತಹ ವಿಶ್ವಾಸಿಗಳು ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಾರೆ.
3. ದಿನನಿತ್ಯದ ಆತ್ಮೀಕ ನಿರ್ವಹಣೆ:
ಪ್ರತಿಯೊಂದು ಕತ್ತಿಗೂ ನಿಯಮಿತ ಶುಚಿಗೊಳಿಸುವಿಕೆಯ ಮತ್ತು ಆರೈಕೆಯ ಅಗತ್ಯವಿದೆ. ಅದೇ ರೀತಿ, ನಮ್ಮ ಆತ್ಮಗಳಿಗೆ ನಿರಂತರ ವಿಮರ್ಶೆ ಮತ್ತು ಪಶ್ಚಾತ್ತಾಪ ಬೇಕು.
" ದೇವರೇ, ನನ್ನಲ್ಲಿ ಶುದ್ಧಹೃದಯವನ್ನು ನಿರ್ಮಿಸು; ನನಗೆ ಸ್ಥಿರಚಿತ್ತವನ್ನು ಅನುಗ್ರಹಿಸಿ ನನ್ನನ್ನು ನೂತನ ಪಡಿಸು."ಎಂದು ಕೀರ್ತನೆ 51:10 ರಲ್ಲಿ ದಾವೀದನ ಮನವಿಯು ಇದನ್ನು ಸುಂದರವಾಗಿ ಸೆರೆಹಿಡಿಯುತ್ತದೆ: ಶುದ್ಧೀಕರಣ ಮತ್ತು ನವೀಕರಣವನ್ನು ನಿಯಮಿತವಾಗಿ ದೇವರನ್ನು ಹುಡುಕುವುದು ತುಕ್ಕು ಹಿಡಿಯದಂತೆ ತಡೆಯುತ್ತದೆ.
4. ಸಕ್ರಿಯ ಬಳಕೆ:
ಕತ್ತಿಯನ್ನು ಸಕ್ರಿಯವಾಗಿ ಬಳಸಿದಾಗ ಅದು ತುಕ್ಕು ಹಿಡಿಯುವ ಸಾಧ್ಯತೆ ಕಡಿಮೆ. ಅದೇ ರೀತಿ, ದೇವರ ರಾಜ್ಯಕ್ಕಾಗಿ ಸಕ್ರಿಯ ಸೇವೆಯಲ್ಲಿರುವ ಆತ್ಮವು ರೋಮಾಂಚಕವಾಗಿಯೂ ಮತ್ತು ತೀಕ್ಷ್ಣವಾಗಿಯೂ ಇರುತ್ತದೆ. "ಆದ್ದರಿಂದ ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದು" (ಯಾಕೋಬ 2:17).ಸಕ್ರಿಯ ನಂಬಿಕೆಯು ಜೀವಂತವಾಗಿದ್ದು, ತುಕ್ಕು-ನಿರೋಧಕವಾದ ನಂಬಿಕೆಯಾಗಿದೆ.
ಈ ಎಲ್ಲದರಲ್ಲೂ, ತುಕ್ಕು ರೂಪುಗೊಳ್ಳುವುದನ್ನು ನಾವು ಗಮನಿಸಿದರೂ ಅದುವೇ ಅಂತ್ಯವಲ್ಲ ಎಂದು ನೆನಪಿಟ್ಟುಕೊಳ್ಳುವುದು ಸಾಂತ್ವನದಾಯಕವಾಗಿದೆ. ಪುನಃಸ್ಥಾಪನೆ ದೇವರೊಂದಿಗೆ ಯಾವಾಗಲೂ ಸಾಧ್ಯ. ಪ್ರವಾದಿ ಯೋವೇಲನು ದೇವರ ವಾಗ್ದಾನವನ್ನು ತಿಳಿಸುತ್ತಾನೆ: "ಮಿಡತೆಗಳು ತಿಂದುಬಿಟ್ಟ ವರ್ಷಗಳನ್ನು ನಾನು ನಿಮಗೆ ಹಿಂದಿರುಗಿಸಿಕೊಡುತ್ತೇನೆ." (ಯೋವೇಲ 2:25). ನಮ್ಮ ದೇವರು ಪುನಶ್ಚೈತನ್ಯಕಾರಿಯಾಗಿದ್ದು ಯಾವುದೇ ತುಕ್ಕು ಆತನ ದುರಸ್ತಿಗೆ ಮೀರಿದ್ದು ಅಲ್ಲ.
Bible Reading: Luke 7-8
ಪ್ರಾರ್ಥನೆಗಳು
ತಂದೆಯೇ, ನಮ್ಮ ಆತ್ಮಗಳನ್ನು ಲೌಕಿಕ ಕೊಳೆತದಿಂದ ರಕ್ಷಿಸು. ಪ್ರಲೋಭನೆಯ ವಿರುದ್ಧ ನಮ್ಮ ಉದ್ದೇಶವನ್ನು ತೀಕ್ಷ್ಣಗೊಳಿಸಿ. ನಿನ್ನ ಜ್ಞಾನದಲ್ಲಿ, ನಾವು ಜಾಗರೂಕರಾಗಿ ರಕ್ಷಿಸಲ್ಪಟ್ಟು ತುಕ್ಕು ಹಿಡಿದ ಕ್ಷಣಗಳಲ್ಲಿ, ನಿನ್ನ ಪುನಶ್ಚೈತನ್ಯಕಾರಿ ಕೃಪೆಯನ್ನು ಯೇಸುನಾಮದಲ್ಲಿ ನಮಗೆ ನೆನಪಿಸುವಂತಾಗಲಿ . ಆಮೆನ್.
Join our WhatsApp Channel
Most Read
● ಆತನ ಆವರ್ತನಕ್ಕೆ ಅನುಗುಣವಾಗಿ ನಮ್ಮನ್ನು ಹೊಂದಿಸಿಕೊಳ್ಳುವುದು.● ಆರಾಧನೆಯ ಪರಿಮಳ
● ಪ್ರೀತಿಯ ನಿಜವಾದ ಸ್ವರೂಪ
● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ಮನುಷ್ಯ ಸ್ವಭಾವ
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
● ಯೇಸು ಕುಡಿದ ದ್ರಾಕ್ಷಾರಸ
ಅನಿಸಿಕೆಗಳು
