ಪ್ರಕೃತಿಯಲ್ಲಿ, ನಾವು ನಿರಂತರತೆಯ ಶಕ್ತಿಯನ್ನು ನೋಡುತ್ತೇವೆ. ನೀರಿನ ಹರಿವು ಗಟ್ಟಿಯಾದ ಬಂಡೆಯ ಮೂಲಕ ಹರಿದು ಹೋಗುವುದು ಅದು ಶಕ್ತಿಯುತವಾಗಿರುವುದರಿಂದ ಅಲ್ಲ, ಆದರೆ ಅದರ ನಿರಂತರತೆಯಿಂದಾಗಿ. ಇದು ಸಂಪೂರ್ಣ ಶಕ್ತಿಯಿಂದಲ್ಲ, ಆದರೆ ಸ್ಥಿರವಾದ ಪ್ರಯತ್ನ ಮತ್ತು ಪರಿಶ್ರಮದಿಂದ ಹೊರಹೊಮ್ಮುವ ಶಕ್ತಿಗೆ ಆಳವಾದ ಸಾಕ್ಷಿಯಾಗಿದೆ. ನಮ್ಮ ನಂಬಿಕೆಯ ಪ್ರಯಾಣದಲ್ಲಿ, ನಿರಂತರತೆಯು ಇನ್ನಷ್ಟು ಮಹತ್ವದ್ದಾಗಿದೆ.
ಅಪೊಸ್ತಲ ಪೌಲನು ಥೆಸಲೋನಿಕದವರಿಗೆ ಬರೆದ ಪತ್ರದಲ್ಲಿ, "ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಚಿತ್ತವಾಗಿದೆ. " (1 ಥೆಸಲೊನೀಕ 5:16-18) ಎಂದು ಹೇಳಿದರು. ಈ ಮಾತುಗಳ ಮೂಲಕ, ಪೌಲನು ಸಂತೋಷ, ಕೃತಜ್ಞತೆ ಮತ್ತು ದೇವರೊಂದಿಗೆ ನಿರಂತರ ಸಂಭಾಷಣೆಯಲ್ಲಿ ಬೇರೂರುವುದರ ಮೂಲಕ ನಮ್ಮ ನಂಬಿಕೆಯಲ್ಲಿ ದೃಢವಾಗಿರುವುದರ ಮಹತ್ವವನ್ನು ಒತ್ತಿಹೇಳುತ್ತಿದ್ದಾನೆ.
ಜೀವನದ ಸವಾಲುಗಳು ಮತ್ತು ಪರೀಕ್ಷೆಗಳು ಹೆಚ್ಚಾಗಿ ದುಸ್ತರ ಪರ್ವತಗಳಂತೆ ಕಾಣುವುದರಿಂದ, ಅನೇಕರು ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಆದಾಗ್ಯೂ, ನಮ್ಮ ಯುದ್ಧಗಳು ಒಂದು ದಿನದಲ್ಲಿ ಗೆದ್ದು ಮುಗಿಸುವಂತದಲ್ಲ ಎಂದು ದೇವರವಾಕ್ಯವು ನಮಗೆ ನೆನಪಿಸುತ್ತದೆ.
ವಾಗ್ದತ್ತ ದೇಶವನ್ನು ಪ್ರವೇಶಿಸುವ ಮೊದಲು ಇಸ್ರೇಲೀಯರು 40 ವರ್ಷಗಳ ಕಾಲ ಮರುಭೂಮಿಯಲ್ಲಿ ಅಲೆದಾಡುವ ಕಥೆ ಅದಕ್ಕೆ ಸಾಕ್ಷಿಯಾಗಿದೆ.ಅವರ ನಂಬಿಕೆಯಲ್ಲಿ ಚಂಚಲತೆ ಮತ್ತು ಹಲವಾರು ವೈಫಲ್ಯಗಳ ಹೊರತಾಗಿಯೂ, ಅವರು ನಿರಂತರ ಪರಿಶ್ರಮದ ಮೂಲಕ ತಮ್ಮ ಗಮ್ಯಸ್ಥಾನವನ್ನು ತಲುಪಿ ನಿರಂತರವಾಗಿ ದೇವರ ಕಡೆಗೆ ತಿರುಗಿದರು.
ಜ್ಞಾನೋಕ್ತಿ 24:16 ನಮಗೆ ಹೇಳುವುದೇನೆಂದರೆ “ನೀತಿವಂತರು ಏಳು ಬಾರಿ ಬಿದ್ದರೂ ಮತ್ತೆ ಎದ್ದೇಳುತ್ತಾರೆ, ಆದರೆ ದುಷ್ಟರು ವಿಪತ್ತು ಬಂದಾಗ ಎಂದಿಗೂ ಮೇಲೇಳದ ಹಾಗೇ ಬಿದ್ದೇ ಹೋಗುತ್ತಾರೆ.” ಈ ವಚನವು ಕೇವಲ ಮತ್ತೆ ಎದ್ದೇಳುವ ಕ್ರಿಯೆಯ ಕುರಿತಾದಾದಲ್ಲ. ಇದು ಅಳಿಯಲು ಒಪ್ಪದೇ ಛಲಬಿಡದೆ ಭರವಸೆ ಮತ್ತು ನಂಬಿಕೆಯ ಮೂಲಕ ಪುಟಿದೇಳುವ ನಿರಂತರತೆಯ ಮನೋಭಾವದ ಕುರಿತಾದ್ದಾಗಿದೆ.
ಮಹಾನ್ ಸಂಶೋಧಕ ಥಾಮಸ್ ಎಡಿಸನ್ ಒಮ್ಮೆ ಹೇಳಿದ್ದೇನೆಂದರೆ “ಜೀವನದಲ್ಲಿ ಹೆಚ್ಚು ವೈಫಲ್ಯಗಳನ್ನು ಅನುಭವಿಸುವವರು ಯಾರೆಂದರೆ ತಾವು ಬಿಟ್ಟುಕೊಡುವ ಮೊದಲು ಯಶಸ್ಸಿಗೆ ಎಷ್ಟು ಹತ್ತಿರದಲ್ಲಿದ್ದೇವೆಂದು ಅರಿತುಕೊಳ್ಳದ ಜನರಾಗಿರುತ್ತಾರೆ.” ಬೆಳಕಿನ ಬಲ್ಬ್ ಅನ್ನು ರಚಿಸಲು ಎಡಿಸನ್ ಮಾಡಿದ ಸಾವಿರಾರು ಪ್ರಯತ್ನಗಳನ್ನು ಯಾಕೋಬ 1:12 ರ ಅಭಿವ್ಯಕ್ತಿಯಾಗಿ ಕಾಣಬಹುದು: “ಶೋಧನೆಯ ಸಮಯದಲ್ಲಿ ತಾಳ್ಮೆಯಿಂದಿರುವವನು ಧನ್ಯನು ಏಕೆಂದರೆ ಶೋಧನೆಯಲ್ಲಿ ಜಯಿಸಿದ ನಂತರ, ಆ ವ್ಯಕ್ತಿಯು ಕರ್ತನು ತನ್ನನ್ನು ಪ್ರೀತಿಸುವವರಿಗೆ ವಾಗ್ದಾನ ಮಾಡಿದ ಜೀವದ ಕಿರೀಟವನ್ನು ಪಡೆಯುತ್ತಾನೆ.”
ವ್ಯವಹಾರ, ಕುಟುಂಬ ಜೀವನ, ಹಣಕಾಸು ಅಥವಾ ನಮ್ಮ ಆತ್ಮೀಕ ಪ್ರಯಾಣದಲ್ಲಿ ಯಶಸ್ಸು ಕ್ಷಣಿಕವಲ್ಲ, ಅದು ಪರಿಶ್ರಮದ ಕುರಿತ್ತದ್ದಾಗಿದೆ ಎಂದು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಸಮಾಜವು ಸಾಮಾನ್ಯವಾಗಿ ತ್ವರಿತ ಯಶಸ್ಸು ಮತ್ತು ರಾತ್ರೋರಾತ್ರಿ ಸಿಗುವ ಸಂವೇದನೆಗಳನ್ನು ವೈಭವೀಕರಿಸುತ್ತದೆ, ಆದರೆ ಸತ್ಯವೇದ ನಮಗೆ ದೀರ್ಘಕಾಲೀನ ಬದ್ಧತೆ, ಅಚಲ ನಂಬಿಕೆ ಮತ್ತು ನಿರಂತರ ಪ್ರಯತ್ನದ ಮೌಲ್ಯವನ್ನು ಕಲಿಸುತ್ತದೆ.
ಗಲಾತ್ಯ 6:9 ನಮಗೆ ನೆನಪಿಸುವುದೇನೆಂದರೆ, “ಒಳ್ಳೆಯದನ್ನು ಮಾಡುವುದರಲ್ಲಿ ನಾವು ಬೇಸರಗೊಳ್ಳಬೇಡಿ, ಏಕೆಂದರೆ ನಾವು ಧೈರ್ಯಬಿಡದೆ ಹೋದರೆ ತಕ್ಕ ಸಮಯದಲ್ಲಿ ನಾವು ಬೆಳೆಯನ್ನು ಕೊಯ್ಯುತ್ತೇವೆ.”ಎಂದು. ನಂಬಿಕೆಯ ಪ್ರತಿಯೊಂದು ಕ್ರಿಯೆ, ಪ್ರತಿಯೊಂದು ಪ್ರಾರ್ಥನೆ, ಪ್ರತಿ ಹೆಜ್ಜೆಯೂ ಮುಖ್ಯವಾಗುತ್ತದೆ. ಅವು ಸಂಗ್ರಹವಾಗುತ್ತಾ ಹೋಗಿ ಅಂತಿಮವಾಗಿ, ದೇವರ ಕೃಪೆ ಮತ್ತು ಪರಿಶ್ರಮದಿಂದ, ಆಶೀರ್ವಾದಗಳ ಸುಗ್ಗಿಗೆ ಕಾರಣವಾಗುತ್ತವೆ.
ಇಂದು, ನೀವು ಸವಾಲುಗಳನ್ನು ಎದುರಿಸುವಾಗ ಅಥವಾ ದುಸ್ತರವೆಂದು ತೋರುವ ಪರ್ವತಗಳನ್ನು ದಿಟ್ಟಿಸುವಾಗ, ಪರಿಶ್ರಮದ ಶಕ್ತಿಯನ್ನು ನೆನಪಿಡಿ. ನಿಮ್ಮ ಪ್ರಯತ್ನಗಳನ್ನು ದೇವರ ವಾಕ್ಯದೊಂದಿಗೆ ಹೊಂದಿಸಿ. ಆತನ ಸಮಯದಲ್ಲಿ ನಂಬಿಕೆ ಇರಿಸಿ. ನಿಮ್ಮ ನಂಬಿಕೆ, ಪ್ರಾರ್ಥನೆಗಳು ಮತ್ತು ಸೇವೆಯಲ್ಲಿ ಸ್ಥಿರವಾಗಿರಿ. ಬೈಬಲ್‌ನ ವಾಕ್ಯಗಳು ಮತ್ತು ನಿಮ್ಮ ಮುಂದೆ ಪಟ್ಟುಬಿಡದವರ ಉದಾಹರಣೆಗಳು ನಿಮಗೆ ಮಾರ್ಗದರ್ಶಿಯಾಗಿರಲಿ.
Bible Reading: Luke 14 - 16
ಪ್ರಾರ್ಥನೆಗಳು
ಪರಲೋಕದ ತಂದೆಯೇ, ಮಾರ್ಗವು ದೀರ್ಘವಾಗಿದ್ದರೂ ಮತ್ತು ಎದುರುಗಾಳಿ ಬೀಸುತ್ತಿದ್ದರೂ ಸಹ ನಂಬಿಕೆಯಲ್ಲಿ ಧೃಡವಾಗಿ ನಿಲ್ಲಲು ಮತ್ತು ನಮ್ಮ ಪರಿಶೋಧನೆ ಮೂಲಕ ಮುಂದುವರಿಯಲು ನಮಗೆ ಶಕ್ತಿಯನ್ನು ಅನುಗ್ರಹಿಸು. ನಿಮ್ಮೊಂದಿಗೆ ನಡೆಯುವಾಗ, ನಮ್ಮ ಪ್ರಯತ್ನಗಳು ಎಂದಿಗೂ ವ್ಯರ್ಥವಾಗುವುದಿಲ್ಲ ಎಂಬುದನ್ನು ನಮಗೆ ನೆನಪಿಸಿ. ಯೇಸುವಿನ ಹೆಸರಿನಲ್ಲಿ ಬೇಡಿದ್ದೇವೆ. ಆಮೆನ್.
Join our WhatsApp Channel
Most Read
● ಪಾಪದ ಕುಷ್ಠರೋಗದೊಂದಿಗೆ ವ್ಯವಹರಿಸುವುದು.● ನಮ್ಮ ಮಧ್ಯದಲ್ಲಿ ಬೀಡುಬಿಟ್ಟಿರುವ ದೇವದೂತರು
● ದೇವರಿಗೆ ಮೊದಲಸ್ಥಾನ ನೀಡುವುದು #3
● ನಿಮ್ಮ ಗತಿಯನ್ನು ಬದಲಾಯಿಸಿ
● ತಪ್ಪು ಆಲೋಚನೆಗಳು
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ಪಾಪದ ವಿರುದ್ಧದ ಹೋರಾಟ.
ಅನಿಸಿಕೆಗಳು
