ಕಳೆದ ತಿಂಗಳುಗಳು ಅನೇಕ ಜನರಿಗೆ ತುಂಬಾ ಸವಾಲುಗಳಿಂದಲೂ ಒತ್ತಡದಿಂದಲೂ ತುಂಬಿದ ತಿಂಗಳುಗಳಾಗಿತ್ತು. ಪ್ರತಿಬಾರಿ ನಾನು ಜನರಿಗೆ ಅವರ ನೋವಿನ ಪರಿಸ್ಥಿತಿಗಳಿಗಾಗಿ ಸಾಂತ್ವಾನವನ್ನು ಹೇಳುವಾಗ ಸಹಾನುಭೂತಿ ತೋರಿಸುವಾಗ ನನ್ನ ಅಂತರ್ಯದಲ್ಲಿ ಅಲಗು ನೆಟ್ಟಂತಾಗುತ್ತಿತ್ತು. ಆಗ ಪವಿತ್ರಾತ್ಮನು "ಮಗನೇ, ಇವರಿಗಾಗಿ ಆಸಕ್ತಿಯಿಂದ ಪ್ರಾರ್ಥಿಸು" ಎಂದು ಭಾರ ಕೊಡುತ್ತಿದ್ದನು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಪ್ರಾರ್ಥನಾ ಮನವಿಗಳ ಸಂಖ್ಯೆಯನ್ನು ನೋಡಿ ನನಗೆ ತುಂಬಾ ಭಾರವೆನಿಸುತ್ತಿತ್ತು. ಆದರೂ ನಾನು ಆತನ ಸ್ವರಕ್ಕೆ ವಿಧೇಯನಾಗಬೇಕೆಂದು ನಿರ್ಧರಿಸಿಕೊಂಡಿದ್ದೆನು.
"ಯೇಸುಸ್ವಾಮಿಯು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವ ಮತ್ತು ರೋಗಗಳನ್ನು ವಾಸಿಮಾಡುವ ಶಕ್ತಿ ಅಧಿಕಾರಗಳನ್ನು ಕೊಟ್ಟು 2ದೇವರ ರಾಜ್ಯದ ವಿಷಯವನ್ನು ಸಾರುವದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವದಕ್ಕೂ ಅವರನ್ನು ಕಳುಹಿಸಿದನು."(ಲೂಕ 9:1-2 )
ಯೇಸು ಸ್ವಾಮಿಯು ತನ್ನ ಶಿಷ್ಯರನ್ನು ಆತನ ಹೆಸರಿನಲ್ಲಿ ರೋಗಗಳನ್ನು ವಾಸಿ ಮಾಡುವುದಕ್ಕಾಗಿ ನೇಮಿಸಿದ್ದನು. ಸರಳವಾಗಿ ಹೇಳಬೇಕೆಂದರೆ ಪ್ರತಿಯೊಬ್ಬ ಶಿಷ್ಯರೂ ಆತನು ತನ್ನ ಶಿಷ್ಯರಿಗೆ ಹೇಳಿದ್ದನ್ನು ತಾವೂ ಮಾಡುವ ದೈವೀಕ ಅಧಿಕಾರವನ್ನು ಹೊಂದಿದ್ದಾರೆ.
"ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸಭಾಷೆಗಳಿಂದ ಮಾತಾಡುವರು; ಹಾವುಗಳನ್ನು ಎತ್ತುವರು; ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ; ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವದು ಎಂದು ಹೇಳಿದನು."(ಮಾರ್ಕ 16:17-18 )
ಈ ಒಂದು ದಿನಮಾನಗಳಲ್ಲಿ ಜನರ ಮೇಲೆ ಕೈ ಇಟ್ಟು ಪ್ರಾರ್ಥಿಸಲು ನಿರ್ದಿಷ್ಟವಾದ ನಿರ್ಬಂಧಗಳಿವೆ. ಅದಾಗಿಯೂ ನೀವು ಜನರಿಗಾಗಿ ಮಧ್ಯಸ್ತಿಕೆ ಪ್ರಾರ್ಥನೆ ಮಾಡದಂತೆ ಅವು ನಿಮ್ಮನ್ನು ತಡೆಯಬಾರದು. ನೀವು ಜನರ ರೋಗಗಳ ಬಗ್ಗೆ ತೊಂದರೆಗಳ ಬಗ್ಗೆ ಸುದ್ದಿ ಕೇಳಿದೊಡನೆಯೇ ನೀವು ಮಧ್ಯಸ್ಥಿಕೆ ಪ್ರಾರ್ಥನೆ ಮಾಡಬೇಕು. ಕೇವಲ ಸಹಾನುಭೂತಿ ತೋರುವ ಬದಲು ಅವರಿಗೆ ನಾವು ನಿಮಗಾಗಿ ಪ್ರಾರ್ಥಿಸುತ್ತೇವೆ ಎಂದು ಹೇಳಬೇಕು.
ಅವರಿಗೆ ಯೇಸು ಸ್ವಾಮಿಯ ಈಗಲೂ ತನ್ನ ಸಿಂಹಾಸನದಲ್ಲಿ ಆಸೀನನಾಗಿದ್ದಾನೆ ಮತ್ತು ಆತನು ಅವರನ್ನು ಬಿಟ್ಟು ಬಿಡುವುದಿಲ್ಲ ತೊರೆಯುವುದಿಲ್ಲ ಎಂದು ಹೇಳಿರಿ. ನೀವು ಈ ರೀತಿಯ ದೇವರ ವಾಕ್ಯದಾರಿತ ನಡವಳಿಕೆಗಳನ್ನು ಬೆಳೆಸಿಕೊಂಡಾಗ ಅದರಿಂದಾಗುವ ಪ್ರತಿಫಲ ನೋಡಿ ನೀವೇ ಆಶ್ಚರ್ಯ ಚರಿತರಾಗುತ್ತೀರಿ. ದೇವರ ಅದ್ಭುತ ಹಸ್ತಕ್ಷೇಪದಿಂದ ಆದಂತಹ ಸಾಕ್ಷಿಗಳು ಎಲ್ಲಾ ಸ್ಥಳಗಳಿಂದಲೂ ನಿಮಗೆ ಹರಿದುಬರಲಾರಂಭಿಸುತ್ತವೆ. ಇದರಿಂದ ಯೇಸು ನಾಮಕ್ಕೆ ಮಹಿಮೆಯಾಗುತ್ತದೆ.
ಒಂದು ದೊಡ್ಡ ಸಂಖ್ಯೆಯ ಆತ್ಮಗಳಿಗಾಗಿ ನೀವು ಆಶೀರ್ವಾದಕರವಾಗಬೇಕೆಂದಿದ್ದರೆ ನೀವು ನೋಹ ಆಪ್ ನಲ್ಲಿ ಪ್ರಾರ್ಥನೆ ವೀರರಾಗಬಹುದು. ಯಾರಿಗಾಗಿ ನಾನಿಂದು ಪ್ರಾರ್ಥಿಸಬೇಕು ಎಂದು ನೀವು ಅರಸಿ ಹೋಗುವ ಪ್ರಮೇಯವಿರುವುದಿಲ್ಲ. ಪ್ರಾರ್ಥನಾ ಮನವಿಗಳು ನೋಹಾ ಆಪ್ ನಲ್ಲಿ ಎದ್ದು ಕಾಣುತ್ತವೆ. ನೀವು ಮಾಡಬೇಕದದಿಷ್ಟೇ ಕೆಎಸ್ಎಂ ಕಚೇರಿಗೆ ಕರೆ ಮಾಡಿ ನಾವು ಪ್ರಾರ್ಥನಾ ಮನವಿ ಗಾಗಿ ಪ್ರಾರ್ಥಿಸಬೇಕೇಂದಿದ್ದೇವೆ ಎಂದು ಹೇಳಿದರಾಯಿತು. ಅವರು ಅದನ್ನು ಪರಿಶೀಲಿಸಿ ನಿಮ್ಮನ್ನು ಆ ಕಾರ್ಯಗಳಿಗಾಗಿ ದಾಖಲಿಸಿಕೊಳ್ಳುವರು (ಮತ್ತೆ ಇವೆಲ್ಲವೂ ಉಚಿತ) ನೀವು ಪ್ರಾರ್ಥನಾ ಮನವಿಗಳಿಗಾಗಿ ಪ್ರಾರ್ಥಿಸಿದಾಗ ಆ ಮನವಿಗಳಿಗಾಗಿ ಯಾರು ಯಾರು ಪ್ರಾರ್ಥಿಸಿದರು ಎಂಬೆಲ್ಲಾ ಜಾಗೃತಿಗಂಟೆಯೂ ಬರುತ್ತಿರುತ್ತದೆ.
"ಪಾಸ್ಟರ್ ಮೈಕಲ್ ರವರೇ ಇದರಲ್ಲಿ ನನಗೇನಿದೆ?" ಎಂದು ನೀವು ಹೇಳಬಹುದು. ಒಳ್ಳೆಯ ಪ್ರಶ್ನೆ! ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವವರು ದೇವರ ಹೃದಯಕ್ಕೆ ಹತ್ತಿರರಾದವರು ಎಂಬುದು ನಿಮಗೆ ಗೊತ್ತೇ? ಪ್ರವಾದಿಗಳು ದೇವರ ಬಾಯಿ ಯಾಗಿದ್ದಾರೆ ಮತ್ತು ಸುವಾರ್ತಿಕರು ಆತನ ಪಾದಗಳಾಗಿದ್ದಾರೆ. ಆದರೆ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವವರು ಆತನ ಹೃದಯವೇ ಆಗಿರುತ್ತಾರೆ. ಇತರರಿಗಾಗಿ ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವ ಕೃಪೆಯನ್ನು ಅನುಗ್ರಹಿಸಬೇಕೆಂದು ದೇವರಲ್ಲಿ ಬೇಡಿಕೊಳ್ಳಿರಿ.
ನೋಡಿರಿ ದೇವರ ರಾಜ್ಯದಲ್ಲಿ ಮೇಲೇ ಹೋಗುವಂತದ್ದೆಲ್ಲಾ ಕೆಳಗೆ ಕರೆತರುವ ಮಾರ್ಗಗಳಾಗಿರುತ್ತವೆ. ಪಡೆದುಕೊಳ್ಳಲು ನಾವು ಕೊಡಬೇಕಾಗುತ್ತದೆ. ನಿಮ್ಮ ಸಮಸ್ಯೆ ತೀರಬೇಕಾದರೆ ನೀವು ಇನ್ನೊಬ್ಬರ ಸಮಸ್ಯೆಯನ್ನು (ದೇವರ ಸಹಾಯದೊಂದಿಗೆ) ತೀರಿಸಬೇಕಾಗುತ್ತದೆ. ನೀವು ಯೋಬನ ಕಥೆಯನ್ನು ಓದಲಿಲ್ಲವೇ? ಅವನಿಗೆ ನಮ್ಮೆಲ್ಲರಿಗಿಂತಲೂ ಅಧಿಕವಾದ ಸಮಸ್ಯೆಗಳು ಇದ್ದವು. ಆದರು ಅವನು ಮತ್ತೊಬ್ಬರಿಗಾಗಿ ಪ್ರಾರ್ಥಿಸಲೇಬೇಕೆಂದು ನಿರ್ಧರಿಸಿಕೊಂಡಾಗ ಆ ಸಮಯದಲ್ಲಿ ಮುಂದೇನಾಯಿತೆಂದು ನೋಡಿ
"ಯೋಬನು ತನ್ನ ಸ್ನೇಹಿತರಿಗೋಸ್ಕರ ಪ್ರಾರ್ಥಿಸಿದ ಬಳಿಕ ಯೆಹೋವನು ಅವನ ದುಸ್ಥಿತಿಯನ್ನು ಹೋಗಲಾಡಿಸಿ ಅವನ ಸೊತ್ತನ್ನು ಮೊದಲಿಗಿಂತ ಎರಡರಷ್ಟಾಗಿ ಹೆಚ್ಚಿಸಿದನು."(ಯೋಬನು 42:10)
ಪ್ರಾರ್ಥನೆಗಳು
ತಂದೆಯೇ, ಮಧ್ಯಸ್ಥಿಕೆ ಪ್ರಾರ್ಥನೆ ಮಾಡುವ ಹೃದಯವನ್ನು ಯೇಸುನಾಮದಲ್ಲಿ ಬೇಡುತ್ತೇನೆ. ತಂದೆಯೇ ನಿನ್ನೊಂದಿಗೆ ಅನ್ಯೋನ್ಯವಾಗಿರುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಮೆನ್.
Join our WhatsApp Channel
Most Read
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.
● ದೈವೀಕ ಶಿಸ್ತಿನ ಸ್ವರೂಪ: 2
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದಿನ 22:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನೀವು ಯಾರೊಂದಿಗೆ ನಡೆಯುತ್ತಿದ್ದೀರಿ?
● ಕೊಡುವ ಕೃಪೆ - 1
ಅನಿಸಿಕೆಗಳು