english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ನಿಮ್ಮ ಭವಿಷ್ಯಕ್ಕಾಗಿ ದೇವರ ಕೃಪೆ ಮತ್ತು ಉದ್ದೇಶವನ್ನು ಅಳವಡಿಸಿಕೊಳ್ಳುವುದು
ಅನುದಿನದ ಮನ್ನಾ

ನಿಮ್ಮ ಭವಿಷ್ಯಕ್ಕಾಗಿ ದೇವರ ಕೃಪೆ ಮತ್ತು ಉದ್ದೇಶವನ್ನು ಅಳವಡಿಸಿಕೊಳ್ಳುವುದು

Tuesday, 4th of November 2025
1 1 81
Categories : ಅನುಗ್ರಹ (Grace) ನಡವಳಿಕೆಯ (Attitude) ಬದಲಾವಣೆ (Change)
"ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ, ಪುರಾತನ ಕಾರ್ಯಗಳನ್ನು ಮರೆತುಬಿಡಿರಿ. ಇಗೋ, ಹೊಸ ಕಾರ್ಯವನ್ನು ಮಾಡುವೆನು, ಈಗ ತಲೆದೋರುತ್ತಲಿದೆ. ಇದು ನಿಮಗೆ ಕಾಣುವುದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಏರ್ಪಡಿಸಿ, ಅರಣ್ಯದಲ್ಲಿ ನದಿಗಳನ್ನು ಹರಿಸುವೆನು".(ಯೆಶಾಯ 43:18-19) 

ನಮ್ಮ ಕರೆಯು ಸಾಂತ್ವನದ ಸಮಯಗಳಿಗಿಂತ ಸಂಘರ್ಷಣೆಯ ಸಮಯಗಳಲ್ಲಿ ಪ್ರಕಟಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಬೈಬಲ್ ಇತಿಹಾಸವನ್ನು ಅವಲೋಕನ ಮಾಡುವಾಗ, ಈ ಹೇಳಿಕೆಗೆ ಪ್ರತಿಧ್ವನಿಸುವ ಸತ್ಯವನ್ನು ನಾವು ಕಂಡುಕೊಳ್ಳುತ್ತೇವೆ. ಮೋಶೆ ಫರೋಹನನ್ನು ಎದುರಿಸಿದನು, ದಾವೀದನು ಗೋಲಿಯಾತನನ್ನು ಎದುರಿಸಿದನು ಮತ್ತು ಕರ್ತನಾದ ಯೇಸು ನರಕದ ಕೋಪವನ್ನು ನೇರವಾಗಿ ಎದುರಿಸಿದನು.

 ಈ ಸಂಘರ್ಷಣೆಯ ಪ್ರತಿಯೊಂದು ಕ್ಷಣವೂ ಅವರ ಜೀವನಕ್ಕೆ ಇರುವ ಒಂದು ದೊಡ್ಡ ಯೋಜನೆ ಮತ್ತು ಉದ್ದೇಶವನ್ನು ಬಹಿರಂಗಪಡಿಸಿತು, ಇದು ದೈವಿಕ ಕರೆಯನ್ನು ಗೊಟ್ಟುಪಡಿಸಿತು. ಆದರೆ ಮುಂದೆ ಏನೆಲ್ಲಾ ಇದೆ ಎಂಬುದನ್ನು ನಾವು ನಿಜವಾಗಿಯೂ ತಿಳಿದುಕೊಂಡು ಅಳವಡಿಸಿಕೊಳ್ಳುವ ಮೊದಲು, ನಾವು ನಮ್ಮ ಹಿಂದಿನದನ್ನು ಒಪ್ಪಿಕೊಳ್ಳಬೇಕು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳೋಣ. ನಮ್ಮ ಹಿಂದಿನ ತಪ್ಪುಗಳು, ವೈಫಲ್ಯಗಳು ಅಥವಾ ತಪ್ಪಿದ ಅವಕಾಶಗಳು ನಮ್ಮನ್ನು ಕಾಡುವ ಪರಿ ಅಸಾಮಾನ್ಯವೇನಲ್ಲ. 

ಮತ್ತು, ಅನೇಕ ಬಾರಿ, ನಾವೇ ನಮಗೆ ಕೆಟ್ಟ ವಿಮರ್ಶಕರಾಗಿ, ಹಿಂದಿನ ವೈಫಲ್ಯತೆಗೆ  ನಮ್ಮ ದೌರ್ಬಲ್ಯಗಳೆ ಕಾರಣ ಎಂದು ನಾವು ಗ್ರಹಿಸಿದ್ದಕ್ಕಾಗಿ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುತ್ತೇವೆ.
ಕೆಲವೊಮ್ಮೆ, ನಾವು ಇತರರನ್ನು ದೂಷಿಸುತ್ತೇವೆ. ಒಳ್ಳೆಯ ಸುದ್ದಿ ಏನೆಂದರೆ ದೇವರು ನಮ್ಮ ಹಿಂದಿನ ಮಸೂರದ ಮೂಲಕ ನಮ್ಮನ್ನು ನೋಡುವುದಿಲ್ಲ

"ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ, ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ." ಎಂದು "ಫಿಲಿಪ್ಪಿ 3:13-14 ರಲ್ಲಿ, ಅಪೊಸ್ತಲ ಪೌಲನು ಬರೆಯುತ್ತಾನೆ. 

ನಾವು ನಮ್ಮ ನಿನ್ನೆಗಳ ನೆನಪುಗಳಲ್ಲಿ ಸಿಲುಕಿಕೊಂಡಾಗ, ದೇವರು ನಮ್ಮ ಜೀವನದಲ್ಲಿ ಮಾಡಲು ಪ್ರಯತ್ನಿಸುತ್ತಿರುವ ಹೊಸ ವಿಷಯವನ್ನು ಗ್ರಹಿಸಲು ಅದು ಅಡ್ಡಿ ಮಾಡುತ್ತದೆ. ದೇವರ ಪ್ರತಿರೂಪದಲ್ಲಿ ರಚಿಸಲಾದ ನಮ್ಮ ನಿಜವಾದ ಗುರುತನ್ನು ನೋಡುವುದು ಕಷ್ಟವಾಗುತ್ತದೆ. ಇದು ದೇವರು ನಾವು  ನಮ್ಮ ಜೀವಿತವನ್ನು ಸಾಗಿಸಲು ಬಯಸುವ ದೃಷ್ಟಿಯಲ್ಲ. ಆತನ ಕೃಪೆ ಮತ್ತು ಕರುಣೆಯಿಂದ ಚಿತ್ರಿಸಲಾದ ಭವಿಷ್ಯಕ್ಕೆ ಹೆಜ್ಜೆ ಹಾಕಲು ನಾವು ಅವಮಾನದ ಸಂಕೋಲೆಗಳಿಂದ ಮುಕ್ತರಾಗಬೇಕೆಂದು ಆತನು ಬಯಸುತ್ತಾನೆ.

ಯೋಹಾನ 8 ರಲ್ಲಿ ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಯೇಸು ಸಂಧಿಸಿದಾಗ, ಧರ್ಮಶಾಸ್ತ್ರವು ಅವಳನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿದ್ದರೂ ಸಹ, ಆತನು ಅವಳನ್ನು ಖಂಡಿಸಲಿಲ್ಲ. ಬದಲಾಗಿ, ಆತನು ಅವಳಿಗೆ, “ನಾನೂ ನಿನ್ನನ್ನು ಖಂಡಿಸುವುದಿಲ್ಲ; ಹೋಗು, ಮತ್ತು ಇಂದಿನಿಂದ ಪಾಪ ಮಾಡಬೇಡ” ಎಂದು ಹೇಳಿದನು. ಯೇಸು ಅವಳಿಗೆ ಕೃಪೆಯನ್ನು ನೀಡಿದನು, ಹೊಸ ಆರಂಭಕ್ಕೆ ಒಂದು ಅವಕಾಶ ನೀಡಿದನು.ಒಬ್ಬರ ಭೂತಕಾಲವು ಅವರ ಭವಿಷ್ಯಕ್ಕೆ ಅವಮಾನವನ್ನುಂಟುಮಾಡಲು ಬಿಡಬಾರದು ಎಂಬುದಕ್ಕೆ ಇದು ಒಂದು ಆಳವಾದ ಉದಾಹರಣೆಯಾಗಿದೆ. 

ಈಗ, ನೀವು ಯೋಚಿಸುತ್ತಿರಬಹುದು, 'ಅದೆಲ್ಲವೂ ಒಳ್ಳೆಯದು ಮತ್ತು ಉತ್ತಮವೇ, ಆದರೆ ನಾನು ಹೇಗೆ ಬಿಡಲಿ?' ಇದು ಒಂದು ಮಾನ್ಯವಾದ ಪ್ರಶ್ನೆ, ಮತ್ತು ಉತ್ತರವು ಸರಳವಾಗಿದ್ದರೂ, ಶರಣಾಗತಿ ಮತ್ತು ನಂಬಿಕೆಯನ್ನು ಇದು ಬೇಡುತ್ತದೆ.

1 ಪೇತ್ರ 5:7 "ನಿಮ್ಮ ಎಲ್ಲಾ ಚಿಂತೆಗಳನ್ನು ಆತನ ಮೇಲೆ ಹಾಕಿರಿ" ಎಂದು ನಮ್ಮನ್ನು ಪ್ರೋತ್ಸಾಹಿಸುತ್ತದೆ ಏಕೆಂದರೆ ಆತನು ನಿಮ್ಮ ಕಾಳಜಿ ವಹಿಸುತ್ತಾನೆ. ನಿಮ್ಮ ಹಿಂದಿನದನ್ನು ಆತನ ಪಾದಗಳಲ್ಲಿ ಇಡುವ ಮೂಲಕ ಪ್ರಾರಂಭಿಸಿ. 

ದೇವರು ನಿಮ್ಮನ್ನು ಶಾಶ್ವತ ಪ್ರೀತಿಯಿಂದ ಪ್ರೀತಿಸುತ್ತಾನೆ. ನಮ್ಮ ಎಲ್ಲಾ ಪಾಪಗಳು, ತಪ್ಪುಗಳು ಮತ್ತು ನ್ಯೂನತೆಗಳನ್ನು ಮುಚ್ಚಲು ಆತನ ಕೃಪೆಯೇ ಸಾಕು. ಪ್ರತಿದಿನ ಬೆಳಿಗ್ಗೆ ಹೊಸದಾಗಿರುವ ಆತನ ಕರುಣೆಗಳಲ್ಲಿ ನಂಬಿಕೆ ಇರಿಸಿ ಆರಂಭಿಸಿ.

ನೀವು ಮುಂದುವರಿಯುತ್ತಿದ್ದಂತೆ, ನಿಮ್ಮ ಜೀವನಕ್ಕಾಗಿ ದೇವರ ಯೋಜನೆಯು ನಿಮಗೆ ಹಾನಿ ಮಾಡುವುದಕ್ಕಾಗಿ ಅಲ್ಲ, ಬದಲಾಗಿ ನಿಮಗೆ ಭರವಸೆ ಮತ್ತು ಭವಿಷ್ಯವನ್ನು ನೀಡುವುದಕ್ಕಾಗಿ ಇದೆ ಎಂಬುದನ್ನು ನೆನಪಿಡಿ (ಯೆರೆಮೀಯ 29:11). ಆತನು ತನ್ನ ಆಶೀರ್ವಾದಗಳಿಂದ ತುಂಬಿದ ಗಮ್ಯಸ್ಥಾನಕ್ಕಾಗಿ ನಿಮ್ಮನ್ನು ಸಿದ್ಧಪಡಿಸುತ್ತಿದ್ದಾನೆ ಮತ್ತು ಪ್ರತಿಯೊಂದು ಸಂಘರ್ಷಣೆಯ ಋತುವೂ ನಿಮ್ಮನ್ನು ರೂಪಿಸುತ್ತಾ, ಚಿತ್ರಿಸುತ್ತಿದೆ ಮತ್ತು ಆ ದೈವಿಕ ಕರೆಗಾಗಿ ನಿಮ್ಮನ್ನು ಪರಿಷ್ಕರಿಸುತ್ತಿದೆ.

Bible Reading: Luke 17-19
ಪ್ರಾರ್ಥನೆಗಳು
ಪ್ರೀತಿಯ ಪರಲೋಕದ ತಂದೆಯೇ, ನನ್ನ ಹಿಂದಿನದನ್ನು ಬಿಟ್ಟು ಕೊಟ್ಟು, ನಿಮ್ಮ ಕೃಪೆಯನ್ನು ಸ್ವೀಕರಿಸಲು ಮತ್ತು ನೀವು ನನಗಾಗಿ ಸಿದ್ಧಪಡಿಸಿರುವ ಗಮ್ಯಸ್ಥಾನಕ್ಕೆ ಹೆಜ್ಜೆ ಹಾಕಲು ನನಗೆ ಸಹಾಯ ಮಾಡಿ. ನಾನು ನಿಮ್ಮ ಉದ್ದೇಶದಲ್ಲಿ ನಡೆಯುವಾಗ ನನ್ನಲ್ಲಿ ಧೈರ್ಯ, ಭರವಸೆ ಮತ್ತು ಪ್ರೀತಿಯನ್ನು ಯೇಸುನಾಮದಲ್ಲಿ ತುಂಬಿಸಿ. ಆಮೆನ್.

Join our WhatsApp Channel


Most Read
● ಎರಡು ಸಾರಿ ಸಾಯಬೇಡಿರಿ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
● ಕರ್ತನೊಂದಿಗೆ ನಡೆಯುವುದು
● ವಾಗ್ದತ್ತ ದೇಶವನ್ನು ಸುತ್ತುವರೆದಿರುವ ಕೋಟೆಗಳೊಂದಿಗೆ ವ್ಯವಹರಿಸುವುದು.
● ಪರಲೋಕ ಎಂದು ಕರೆಯಲ್ಪಡುವ ಸ್ಥಳ
● ಪಾಪದ ವಿರುದ್ಧದ ಹೋರಾಟ.
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2025 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್