ಅನುದಿನದ ಮನ್ನಾ
3
2
112
ದೇವರ ಮುಂದಾಗಿ ಅಲ್ಲ, ಆತನೊಂದಿಗೆ ನಡೆಯುವುದನ್ನು ಕಲಿಯುವುದು
Friday, 2nd of January 2026
ವರ್ಷದ ಮೊದಲ ದಿನದಂದು, ಗುಡಾರವನ್ನು ನಿರ್ಮಿಸಲಾಯಿತು. ದೇವರ ಸಾನಿಧ್ಯವನ್ನು ಸ್ಥಾಪಿಸಲಾಯಿತು. ಆದರೆ ಧರ್ಮಗ್ರಂಥವು ಸ್ಪಷ್ಟಪಡಿಸುವುದೇನೆಂದರೆ - ದೇವರು ತನ್ನ ಜನರ ನಡುವೆ ವಾಸಿಸಿದ್ದರಿಂದಲೇ ಅವರು ಸ್ಥಿರವಾಗಿರಲು ಸಾಧ್ಯವಾಯಿತು.
ಆತನ ಸಾನಿಧ್ಯವು ಉದ್ದೇಶ, ಮಾರ್ಗದರ್ಶನ ಮತ್ತು ಚಲನೆಯೊಂದಿಗೆ ಬಂದಿತ್ತು. ಗುಡಾರವನ್ನು ಸ್ಥಾಪಿಸಿದ ನಂತರ, ಸತ್ಯವೇದವು ಇಸ್ರೇಲ್ ಪ್ರಯಾಣಕ್ಕೆ ದೊರೆತ ಅಗತ್ಯವಾದ ಮಾದರಿಯನ್ನು ದಾಖಲಿಸುತ್ತದೆ:
“ ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಾಯೇಲ್ಯರು ಮುಂದೆ ಪ್ರಯಾಣ ಮಾಡುವರು; ಆ ಮೇಘವು ಬಿಡದೆ ಇರುವಾಗ ಅದು ಬಿಡುವ ತನಕ ಪ್ರಯಾಣಮಾಡದೆ ಇರುವರು.” (ವಿಮೋಚನಕಾಂಡ 40:36–37).
ಇದು ನಮಗೆ ಒಂದು ನಿರ್ಣಾಯಕ ಸತ್ಯವನ್ನು ಕಲಿಸುತ್ತದೆ: ಅದೇನೆಂದರೆ ದೇವರ ಸಾನಿಧ್ಯವು ದೇವರ ವೇಗವನ್ನು ನಿರ್ಧರಿಸುತ್ತದೆ.
ಮೇಘದ ಮಾರ್ಗದರ್ಶನ ಇಲ್ಲದೆ ಚಲಿಸುವುದರಲ್ಲಿ ಇರುವ ಅಪಾಯ
ಇಸ್ರೇಲ್‌ನ ಅತ್ಯಂತ ದೊಡ್ಡ ವೈಫಲ್ಯಗಳು ಅದ್ಭುತಗಳ ಕೊರತೆಯಿಂದಾಗಿ ಆದದಲ್ಲ, ಆದರೆ ದೇವರ ಸಮಯಕ್ಕೆ ಮೀರಿ ವರ್ತಿಸಿದರಿಂದ ಬಂದವು. ಅವರು ಆತನ ಸೂಚನೆಯಿಲ್ಲದೆ ಮುನ್ನಡೆದಾಗ, ಅದರ ಅಡ್ಡ ಪರಿಣಾಮಗಳು ಅವರನ್ನು ಹಿಂಬಾಲಿಸಿತು.(ಅರಣ್ಯಕಾಂಡ 14:40–45).
ಅನೇಕ ಕ್ರೈಸ್ತರು ವರ್ಷವನ್ನು ಪ್ರಾರ್ಥನೆ ಮತ್ತು ಸಮರ್ಪಣೆಯೊಂದಿಗೆ ಪ್ರಾರಂಭಿಸುತ್ತಾರೆ, ಆದರೆ ಬೇಗನೆ ಸಲಿಗೆಯ ಬಲೆಗೆ ಬೀಳುತ್ತಾರೆ - ಅದೇನೆಂದರೆ ಯೋಜನೆಗಳನ್ನು ಮಾಡುವುದರಲ್ಲಿ, ಆತುರದ ನಿರ್ಧಾರಗಳನ್ನು ಕೈಗೊಳ್ಳುವುದರಲ್ಲಿ ಬದ್ಧತೆಗಳನ್ನು ಸ್ವೀಕರಿಸುವುದರಲ್ಲಿ, ಎಲ್ಲದರಲ್ಲೂ ಮೇಘವು ಮುಂದೆ ಹೋಗುತ್ತಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸದೆಯೇ ದೇವರಿಗಿಂತ ಮುಂದಾಗಿ ದೌಡಯಿಸುವಂತದ್ದು.
“ಮನುಷ್ಯನಿಗೆ ಸರಿಯಾಗಿ ತೋರುವ ಒಂದು ಮಾರ್ಗವಿದೆ, ಆದರೆ ಅದರ ಅಂತ್ಯವು ಮರಣದ ಮಾರ್ಗವಾಗಿದೆ” (ಜ್ಞಾನೋಕ್ತಿ 14:12) ಎಂದು ಸೊಲೊಮೋನನು ನಮಗೆ ಎಚ್ಚರಿಸುತ್ತಾನೆ.
ಎಲ್ಲಾ ಒಳ್ಳೆಯ ವಿಚಾರಗಳು ಯಾವಾಗಲೂ ದೇವರ ಸಮಯಕ್ಕೆ ಅನುಗುಣವಾಗಿರುವುದಿಲ್ಲ.
ತಾಳ್ಮೆಯಿಂದ ಕಾಯುವಂತದ್ದು ಕೂಡ ವಿಧೇಯತೆಯೇ ಆಗಿದೆ.
ಕೆಲವೊಮ್ಮೆ ಮೇಘವು ಗುಡಾರದ ಮೇಲೆ ದಿನಗಳು ತಿಂಗಳುಗಳು ಅಥವಾ ಒಂದು ವರ್ಷದವರೆಗೂ ಇರುತಿತ್ತು ಎಂಬುದಾಗಿ ಧರ್ಮಗ್ರಂಥವು ನಮಗೆ ಹೇಳುತ್ತದೆ (ಅರಣ್ಯಕಾಂಡ 9:22). ಇಸ್ರೇಲ್ ತಾಳ್ಮೆಯನ್ನು ಕಲಿಯಬೇಕಾಗಿತ್ತು - ನಿಷ್ಕ್ರಿಯತೆಯಲ್ಲ, ಆದರೆ ಗಮನ ನೀಡುತ್ತಾ ಸಿದ್ಧವಾಗಿರುವಂತದ್ದು. "ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಎಂದು ಪ್ರವಾದಿಯಾದ ಯೆಶಾಯನು ಘೋಷಿಸುತ್ತಾನೆ.(ಯೆಶಾಯ 40:31).
ಕಾಯುವುದು ದೌರ್ಬಲ್ಯವಲ್ಲ. ಅದು ಆತ್ಮನಿಗ್ರಹದಲ್ಲಿ ತೋರುವ ಬಲ. ಫಲಿತಾಂಶಗಳನ್ನು ಈಗಲೇ ಆಗಬೇಕೆಂದು ಒತ್ತಾಯಿಸದೇ ದೇವರನ್ನು ನಂಬುವುದಾಗಿದೆ.
ಸಮರ್ಪಣೆಯ ನಂತರ ವಿವೇಚನೆ ಬರಬೇಕು ಎಂದು ಜನವರಿ 2 ನಮಗೆ ನೆನಪಿಸುತ್ತದೆ.
ಕರ್ತನಾದ ಯೇಸು ಕೂಡ ತಂದೆಯನ್ನು ಬಿಟ್ಟು ಸ್ವತಂತ್ರವಾಗಿ ಏನನ್ನೂ ಮಾಡಲಿಲ್ಲ.
“ಅದಕ್ಕೆ ಯೇಸು ಅವರಿಗೆ - ನಿಮಗೆ ನಿಜನಿಜವಾಗಿ ಹೇಳುತ್ತೇನೆ, ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ." (ಯೋಹಾನ 5:19).
ಶಕ್ತಿಯಿಂದ ತುಂಬಿದ್ದರೂ, - ಶಿಷ್ಯರನ್ನು ಆರಿಸಿಕೊಳ್ಳುವುದಕ್ಕಾಗಲೀ ಅದ್ಭುತಗಳನ್ನು ಮಾಡುವುದಕ್ಕಾಗಲೀ ಅಥವಾ ಶಿಲುಬೆಗೆ ಹೋಗುವುದಕ್ಕಾಗಲೀ ಕರ್ತನಾದ ಯೇಸು ದೈವಿಕ ನಿರ್ದೇಶನಕ್ಕಾಗಿ ಕಾಯುತ್ತಿದ್ದನು. ಪ್ರಸನ್ನತೆಯು ಕಾರ್ಯಕ್ಕೆ ಮುಂಚಿತವಾಗಿರುತ್ತದೆ; ವಿಧೇಯತೆಯು ಆ ಚಲನೆಯನ್ನು ನಿಯಂತ್ರಿಸುತ್ತದೆ.
ನಿಮಗಾಗಿ ಒಂದು ಪ್ರವಾದನೆ ಮಾತು.
2026 ತೆರೆದುಕೊಳ್ಳುತ್ತಿದ್ದಂತೆ, ದೇವರು ನಿಮ್ಮನ್ನು ವೇಗವಾಗಿ ಓಡಿರಿ ಎಂದು ಹೇಳುತ್ತಿಲ್ಲ - ಆತನು ನಿಮ್ಮನ್ನು ತನ್ನ ಸಾಮಿಪ್ಯಾದಲ್ಲಿ ನಡೆಯಬೇಕೆಂದು ಹೇಳುತ್ತಿದ್ದಾನೆ.
ಕೆಲವು ಬಾಗಿಲುಗಳು ಬೇಗನೆ ತೆರೆದುಕೊಳ್ಳುತ್ತವೆ.ಕೆಲವಕ್ಕೆ ಸಂಯಮದ ಅಗತ್ಯವಿರುತ್ತದೆ. ಮೇಘವು ಚಲಿಸುತ್ತದೆ - ಆದರೆ ಯಾವಾಗಲೂ ನಿಮ್ಮ ವೇಳಾಪಟ್ಟಿಯಂತೆ ಅಲ್ಲ.
ದಾವೀದನು ಈ ಅಭಿವ್ಯಕ್ತಿಯನ್ನು ಸಂಪೂರ್ಣವಾಗಿ ಸೆರೆಹಿಡಿದನು:
“ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು.” (ಕೀರ್ತನೆ 25:4).
ನೀವು ಮೇಘದೊಂದಿಗೆ ಚಲಿಸುವಾಗ, ನೀವು ಎಂದಿಗೂ ದಾರಿ ತಪ್ಪುವುದಿಲ್ಲ.
ಪ್ರಾರ್ಥನೆಗಳು
ತಂದೆಯೇ, ನೀವು ನನ್ನೊಂದಿಗೆ ಮಾತ್ರ ಇರಬೇಕೆಂದು ನಾನು ಬಯಸದೇ - ನೀವು ಸ್ಥಳಾಂತರಗೊಳ್ಳುವಾಗ ನಾನು ಸಹ ನಿಮ್ಮ ಜೊತೆಗೇ ಸ್ಥಳಾಂತರಗೊಳ್ಳಲು ಬಯಸುತ್ತೇನೆ, ನೀವು ನಿಂತಾಗ ನಿಂತು, ನೀವು ಇರುವ ಸ್ಥಳದಲ್ಲಿಯೇ ನಾನೂ ಇರಲು ಬಯಸುತ್ತೇನೆ.
Join our WhatsApp Channel
Most Read
● ನಿಮ್ಮ ಹೃದಯವನ್ನು ಪರೀಕ್ಷಿಸಿಕೊಳ್ಳಿ● ಏಳು ಪಟ್ಟು ಆಶೀರ್ವಾದ
● ನಂಬಿಕೆಯ ಮೂಲಕ ಕೃಪೆಯನ್ನು ಪಡೆದುಕೊಳ್ಳುವುದು
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ದೇವರ ಸಾನಿಧ್ಯವನ್ನು ಸಲಿಗೆಯಾಗಿ ತೆಗೆದಕೊಳ್ಳುವುದು.
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ಅಗ್ನಿಯು ಸುರಿಯಲ್ಪಡಬೇಕು
ಅನಿಸಿಕೆಗಳು
