ಮನಸ್ತಾಪದ ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ಅದು ನಮ್ಮ ಭಾವನೆಗಳಿಗೆ ಏನು ಮಾಡುತ್ತದೆ ಎಂಬುದರಲ್ಲ, ಬದಲಿಗೆ ಅದು ನಮ್ಮ ದೃಷ್ಟಿಕೋನಕ್ಕೆ ಏನು ಮಾಡುತ್ತದೆ ಎಂಬುದಾಗಿದೆ.
ನೊಂದ ಹೃದಯವು ಸ್ಪಷ್ಟವಾಗಿ ನೋಡುವಂತದ್ದು ಬಹಳ ಅಪರೂಪ. ಅದು ಸತ್ಯಕ್ಕಿಂತ ಹೆಚ್ಚಾಗಿ ನೋವಿನ ಮಸೂರದ ಮೂಲಕವೇ ವಾಕ್ಯಗಳನ್ನು, ಕಾರ್ಯಗಳನ್ನು ಮತ್ತು ದೇವರ ವ್ಯವಹಾರಗಳನ್ನು ಅರ್ಥೈಸಿಕೊಳ್ಳಲು ಪ್ರಾರಂಭಿಸುತ್ತದೆ. ಕರ್ತನಾದ
ಯೇಸು ಈ ತತ್ವದ ಬಗ್ಗೆ ಎಚ್ಚರಿಸುತ್ತಾ ಆತನು ಹೀಗೆ ಹೇಳಿದನು:
"ಕಣ್ಣು ದೇಹಕ್ಕೆ ದೀಪವಾಗಿದೆ; ಹೀಗಿರುವಲ್ಲಿ ನಿನ್ನ ಕಣ್ಣು ನೆಟ್ಟಗಿದ್ದರೆ ನಿನ್ನ ದೇಹವೆಲ್ಲಾ ಬೆಳಕಾಗಿರುವದು. ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ ನಿನ್ನ ದೇಹವೆಲ್ಲಾ ಕತ್ತಲಾಗಿರುವದು. ಹಾಗಾದರೆ ನಿನ್ನೊಳಗಿರುವ ಬೆಳಕೇ ಕತ್ತಲಾದರೆ ಆ ಕತ್ತಲು ಎಷ್ಟೆನ್ನಬೇಕು!"(ಮತ್ತಾಯ 6:22–23).
ಮನಸ್ತಾಪವು ಹೃದಯವನ್ನು ಪ್ರವೇಶಿಸಿದಾಗ, ಅದು ಒಳಗಿನ ಕಣ್ಣನ್ನು ಮಬ್ಬುಗೊಳಿಸುತ್ತದೆ. ಸಮಸ್ಯೆ ಇನ್ನು ಮುಂದೆ ಪರಿಸ್ಥಿತಿಯದ್ದಾಗಿರುವುದಿಲ್ಲ - ಅದು ನೋಡುವ ದೃಷ್ಟಿಕೋನದ್ದಾಗಿರುತ್ತದೆ.
ವಿವೇಚನೆಯಿಂದ ಅನುಮಾನದವರೆಗೆ
ವಿವೇಚನೆಯು ಆತ್ಮನ ವರವಾಗಿದೆ; ಅನುಮಾನವು ಮನಸ್ತಾಪದ ಉತ್ಪನ್ನವಾಗಿದೆ. ನೋವು ಪರಿಹರಿಸಲಾಗದಿದ್ದಾಗ, ಹೃದಯವು ಏನೂ ಇಲ್ಲದಿದ್ದರೂ ತಪ್ಪು ಉದ್ದೇಶಗಳನ್ನು ನಿಯೋಜಿಸಲು ಪ್ರಾರಂಭಿಸುತ್ತದೆ. ತಟಸ್ಥ ಕ್ರಿಯೆಗಳನ್ನೂ ಸಹ ವೈಯಕ್ತಿಕವೆಂದು ಭಾವಿಸುತ್ತವೆ. ಮೌನವು ಪ್ರತಿಕೂಲವೆಂದು ಭಾವಿಸುತ್ತದೆ.
ತಿದ್ದುಪಡಿ ನಿರಾಕರಣೆಯಂತೆ ಭಾಸವಾಗುತ್ತದೆ.
" ಸೈತಾನನು ನಮ್ಮನ್ನು ವಂಚಿಸಿ ನಷ್ಟಪಡಿಸಬಾರದು; ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ." ಎಂದು ಅಪೊಸ್ತಲ ಪೌಲನು ವಿಶ್ವಾಸಿಗಳಿಗೆ ಎಚ್ಚರಿಕೆ ನೀಡುತ್ತಾನೆ. (2 ಕೊರಿಂಥ 2:11).
ಶತ್ರುವಿನ ಅತ್ಯಂತ ಪರಿಣಾಮಕಾರಿ ಸಾಧನವೆಂದರೆ ವಿವೇಚನೆಯಿಂದ ನೋಡಬೇಕಾದ ಕಾರ್ಯವನ್ನು ಅನುಮಾನದಿಂದ ನೋಡುವಂತೆ ಬದಲಾಯಿಸಲು ಮನಸ್ತಾಪವನ್ನು ಬಳಸುವುದು - ನಿಧಾನವಾಗಿ ಸಹವಾಸದಿಂದ ದೂರವಾಗಿ ಒಂಟಿಯಾಗಿ ಮಾಡಿ ಪ್ರತ್ಯೇಕವಾಗಿ ಇರುವಂತೆ ಪರಿವರ್ತಿಸುವುದು.
ಮನನೊಂದ ಪ್ರವಾದಿ
ಸ್ನಾನಿಕ ಯೋಹಾನನು ಇದಕ್ಕೆ ಒಂದು ಗಂಭೀರ ಉದಾಹರಣೆ. ಅವನು ಧೈರ್ಯದಿಂದ ಯೇಸುವನ್ನು ದೇವರ ಕುರಿಮರಿ ಎಂದು ಘೋಷಿಸಿದವನು (ಯೋಹಾನ 1:29),
ಆದರೆ ಅವನು ಸೆರೆಗೆ ಬಿದ್ದ ನಂತರ, :
“ಬರಬೇಕಾದವನು ನೀನೋ ಅಥವಾ ನಾವು ಇನ್ನೊಬ್ಬನನ್ನು ಎದುರು ನೋಡಬೇಕೋ?” ಎಂಬ ಸಂದೇಶವನ್ನು ಕಳುಹಿಸಿದನು(ಮತ್ತಾಯ 11:3).
ಇಲ್ಲಿ ಬದಲಾದದ್ದು ಯಾವುದು? ಸ್ನಾನಿಕ ಯೋಹಾನನ ಪರಿಸ್ಥಿತಿ. ಯಾಕೆಂದರೆ ಅವನ ನಿರೀಕ್ಷೆಗಳು ಈಡೇರಲಿಲ್ಲ, ಅದು ಮನಸ್ತಾಪಕ್ಕೆ ಅವಕಾಶ ಮಾಡಿಕೊಟ್ಟು ಮನಸ್ತಾಪವು ಅವನಿಗಿದ್ದ ಕರ್ತನ ಕುರಿತ ಪ್ರಕಟಣೆಯನ್ನು ಮಸುಕಾಗಿಸಿತು.
ಒಮ್ಮೆ ಸ್ಪಷ್ಟವಾಗಿ ನೋಡಿದ ಅದೇ ವ್ಯಕ್ತಿ ಈಗ ಆಳವಾಗಿ ಪ್ರಶ್ನಿಸಲ್ಪಟ್ಟನು. ಕರ್ತನಾದ ಯೇಸು ಯೋಹಾನನನ್ನು ಕಠೋರವಾಗಿ ಖಂಡಿಸಲಿಲ್ಲ - ಆದರೆ ಯೋಹಾನನು ಅನುಭವಿಸುತ್ತಿರುವುದನ್ನು ಸರಿಪಡಿಸದೆ ದೇವರು ಏನನ್ನು ಮಾಡುತ್ತಿದ್ದಾನೆಂದು ಎಂಬುದನ್ನು ಅವನಿಗೆ ತೋರಿಸುವ ಮೂಲಕ ಅವನ ದೃಷ್ಟಿಕೋನವನ್ನು ಸರಿಪಡಿಸಿದನು. (ಮತ್ತಾಯ 11:4–6).
ಮನಸ್ತಾಪವು ದೇವರನ್ನು ನಂಬಿಕೆಗೆ ಅರ್ಹನಲ್ಲದವನು ಎಂದು ತೋರಿಸುತ್ತದೆ
“ದೇವರು ನಿಜವಾಗಿಯೂ ಕಾಳಜಿ ವಹಿಸಿದ್ದರೆ, ಹೀಗೆ ಸಂಭವಿಸುತ್ತಿರಲಿಲ್ಲ” ಎಂಬ ಸೂಕ್ಷ್ಮ ಸುಳ್ಳುಗಳಲ್ಲಿ ಒಂದು ಮನಸ್ತಾಪದಲ್ಲಿ ಕೇಳುವ ಪಿಸುಮಾತು: ಕಾಲಾನಂತರದಲ್ಲಿ, ಮನಸ್ತಾಪವು ದೇವರವಾಕ್ಯಗಳನ್ನು ತಿರುಚಬಹುದು, ನಂಬಿಕೆಯನ್ನು ನಿರಾಶೆಯಾಗಿ ಮತ್ತು ವಿಶ್ವಾಸವನ್ನು ಮೌನ ಅಸಮಾಧಾನವಾಗಿ ಪರಿವರ್ತಿಸಬಹುದು.
ಕೀರ್ತನೆಗಾರನು ಈ ಉದ್ವೇಗದೊಂದಿಗೆ ಪ್ರಾಮಾಣಿಕವಾಗಿ ಹೋರಾಡಿದನು:
“ಆದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡು ಸೊಕ್ಕಿನವರ ಮೇಲೆ ಉರಿಗೊಂಡೆನು. ನನ್ನ ಕಾಲುಗಳು ಜಾರಿದವುಗಳೇ; ನನ್ನ ಹೆಜ್ಜೆಗಳು ತಪ್ಪಿದವುಗಳೇ." (ಕೀರ್ತನೆ 73:2–3).
ಆದರೆ ಅವನು ದೇವರ ಸನ್ನಿಧಿಯನ್ನು ಪ್ರವೇಶಿಸಿದಾಗ ಮಾತ್ರ ಸ್ಪಷ್ಟತೆ ಮರಳಿ ಸಿಕ್ಕಿತು. ದೃಷ್ಟಿಕೋನವನ್ನು ಬೇಸರಿಕೆಯನ್ನು ಮರುಪ್ರಸಾರ ಮಾಡುವ ಮೂಲಕ ಪುನಃಸ್ಥಾಪಿಸಲಾಗುವುದಿಲ್ಲ, ಆದರೆ ಸತ್ಯದೊಂದಿಗೆ ಮರುಜೋಡಿಸುವ ಮೂಲಕ ಪುನಃಸ್ಥಾಪಿಸಿಕೊಳ್ಳಬಹುದು.
ಶಿಲುಬೆಯಲ್ಲಿ, ಮನಸ್ತಾಪವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಕರ್ತನಾದ ಯೇಸುವನ್ನು ಪರಲೋಕ ಮತ್ತು ಭೂಮಿಯ ನಡುವೆ ಶಿಲುಬೆಯಲ್ಲಿ ತೂಗಿಹಾಕಲ್ಪಟ್ಟಾಗ,
"ಯೇಸು - ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು ಎಂದು ಪ್ರಾರ್ಥಿಸಿದನು (ಲೂಕ 23:34).
ಕ್ಷಮೆ ಎಂದರೆ ಬೇಸರಿಕೆಯನ್ನು ನಿರಾಕರಿಸುವುದಲ್ಲ - ಬದಲಾಗಿ ಆ ಬೇಸರಿಕೆಯನ್ನು ಬೇರೆಲ್ಲ ಗ್ರಹಿಕೆಯನ್ನು ವ್ಯಾಖ್ಯಾನಿಸಲು ಬಿಡಲು ನಿರಾಕರಿಸುವುದು. ವಿಷಯಗಳು ಅನ್ಯಾಯ, ವಿಳಂಬ ಅಥವಾ ತಪ್ಪಾಗಿ ಅರ್ಥೈಸಿಕೊಂಡಾಗಲೂ ದೇವರು ತನ್ನ ಕಾರ್ಯಮಾಡಲು ಸಾಧ್ಯನು ಎಂದು ಶಿಲುಬೆ ನಮಗೆ ನೆನಪಿಸುತ್ತದೆ.
"ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾಗಿರುವ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ." ಎಂದು ಅಪೊಸ್ತಲ ಪೌಲನು ಘೋಷಿಸುತ್ತಾನೆ: (2 ಕೊರಿಂಥ 4:17).
ಮನಸ್ತಾಪವು ಆ ಕ್ಷಣವನ್ನು ವರ್ಧಿಸುತ್ತದೆ; ಆದರೆ ನಂಬಿಕೆಯು ಫಲಿತಾಂಶವನ್ನು ನೋಡುತ್ತದೆ.
ನಿಮಗೆ ಒಂದು ಪ್ರಶ್ನೆ
ನಾವು ಈ ಪ್ರಯಾಣವನ್ನು ಮುಂದುವರಿಸುತ್ತಿರುವಾಗ, ನಾವು ಒಂದು ಪ್ರಾಮಾಣಿಕ ಪ್ರಶ್ನೆಯನ್ನು ಕೇಳಿಕೊಳ್ಳೋಣ:
ನಾನು ದೇವರನ್ನು, ಜನರನ್ನು ಅಥವಾ ನನ್ನನ್ನು ನೋಡುವ ವಿಧಾನವನ್ನು ಮನಸ್ತಾಪವು ಬದಲಾಯಿಸಿದೆಯೇ?
Bible Reading : Genesis 19-21
ಪ್ರಾರ್ಥನೆಗಳು
ಕರ್ತನೇ, ನನ್ನ ಆತ್ಮೀಕ ದೃಷ್ಟಿಕೋನವನ್ನು ಶುದ್ಧೀಕರಿಸು. ಮನಸ್ತಾಪದ ಪ್ರತಿಯೊಂದು ಮಸೂರವನ್ನು ತೆಗೆದುಹಾಕಿ ನನ್ನ ಹೃದಯದಲ್ಲಿ ಸ್ಪಷ್ಟತೆ, ಸತ್ಯ ಮತ್ತು ಶಾಂತಿಯನ್ನು ಯೇಸುವಿನ ಹೆಸರಿನಲ್ಲಿ ಪುನಃಸ್ಥಾಪಿಸು. ಆಮೆನ್!
Join our WhatsApp Channel
Most Read
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1● ಜೀವನದ ದೊಡ್ಡ ಬಂಡೆಗಳನ್ನು ಗುರುತಿಸುವುದು ಮತ್ತು ಆದ್ಯತೆ ನೀಡುವುದು
● ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
● ದೇವರು ಹೇಗೆ ಒದಗಿಸುತ್ತಾನೆ #1
● ದೇವರು ತಾಯಂದಿರನ್ನು ವಿಶೇಷವಾಗಿ ಇರಿಸಿದ್ದಾನೆ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಹಿನ್ನಡೆಯಿಂದ ಪುನರಾಗಮನದವರೆಗೆ
ಅನಿಸಿಕೆಗಳು
