ಅನುದಿನದ ಮನ್ನಾ
1
1
49
ಮನಸ್ತಾಪವು ಆತ್ಮೀಕ ಬೆಳವಣಿಗೆ ಮತ್ತು ಕರೆಗೆ ತಡೆಯನ್ನೋಡ್ಡುತ್ತದೆ.
Thursday, 8th of January 2026
Categories :
ಅಪರಾಧ (offence)
ಆತ್ಮೀಕ ಬೆಳವಣಿಗೆಯನ್ನು ದೇವರು ಪ್ರಗತಿಪರವಾಗಿ ವಿನ್ಯಾಸಗೊಳಿಸಿದ್ದಾನೆ. ವಿಶ್ವಾಸಿಯ ಜೀವನವನ್ನು ಮಹಿಮೆಯಿಂದ ಮಹಿಮೆಗೆ, ಬಲದಿಂದ ಬಲಕ್ಕೆ, ನಂಬಿಕೆಯಿಂದ ನಂಬಿಕೆಗೆ ಚಲಿಸುವ ಪ್ರಯಾಣ ಎಂದು ದೇವರವಾಕ್ಯವು ಪದೇ ಪದೇ ವಿವರಿಸುತ್ತದೆ. (2 ಕೊರಿಂಥ 3:18, ರೋಮನ್ನರು 1:17)
ಆದರೂ ಅನೇಕ ಪ್ರಾಮಾಣಿಕ ವಿಶ್ವಾಸಿಗಳು ನಿಶ್ಚಲತೆಯನ್ನು ಅನುಭವಿಸುತ್ತಾರೆ. ಅವರು ದೇವರನ್ನು ಪ್ರೀತಿಸುತ್ತಾರೆ, ಚರ್ಚ್‌ಗೆ ಹೋಗುತ್ತಾರೆ ಮತ್ತು ಹೆಚ್ಚಿನದನ್ನು ಮಾಡಲು ಬಯಸುತ್ತಾರೆ, ಆದರೆ ಅಂತರ್ಯದಲ್ಲಿನ ಏನೋ ಒಂದು ಅವರನ್ನು ಮುಂದಕ್ಕೆ ಚಲಿಸದಂತೆ ಪ್ರತಿರೋಧಿಸುತ್ತಿರುತ್ತದೆ.
ಸಾಮಾನ್ಯವಾಗಿ, ಕಾಣದ ಈ ಭಾರವೇ ಮನಸ್ತಾಪವಾಗಿದೆ.
"ಚೆನ್ನಾಗಿ ಓಡುತ್ತಾ ಇದ್ದಿರಿ; ನೀವು ಸತ್ಯವನ್ನು ಅನುವರ್ತಿಸದಂತೆ ಯಾರು ನಿಮ್ಮನ್ನು ತಡೆದರು? ಎಂದು ಅಪೊಸ್ತಲ ಪೌಲನು ಬರೆಯುತ್ತಾನೆ.(ಗಲಾತ್ಯ 5:7)
ಪ್ರಶ್ನೆಯು ನಿಮ್ಮನ್ನು ಯಾವುದು ತಡೆಯಿತು ಎಂಬುದಲ್ಲ, ಯಾರು ಎಂಬುದನ್ನು ಗಮನಿಸಿ. ಬೆಳವಣಿಗೆಯು ಹೆಚ್ಚಾಗಿ ಸೈದ್ಧಾಂತಿಕವಾಗಿ ಅಲ್ಲ, ಸಂಬಂಧಿಕವಾಗಿ ಅಡ್ಡಿಪಡಿಸುತ್ತದೆ. ಮನಸ್ತಾಪವು ಆಂತರಿಕ ಪ್ರತಿರೋಧವನ್ನು ಸೃಷ್ಟಿಸುತ್ತದೆ ಅದು ವಿಧೇಯತೆಯನ್ನು ನಿಧಾನಗೊಳಿಸುತ್ತದೆ, ಹಸಿವನ್ನು ಮಂದಗೊಳಿಸುತ್ತದೆ ಮತ್ತು ದೇವರ ಧ್ವನಿಗೆ ಸ್ಪಂದಿಸುವಿಕೆಯನ್ನು ದುರ್ಬಲಗೊಳಿಸುತ್ತದೆ.
ಬೆಳವಣಿಗೆಗೆ ಕಲಿತುಕೊಳ್ಳುವ ಹೃದಯ ಬೇಕು.
ಆತ್ಮೀಕ ಪರಿಪಕ್ವತೆಯು ನಮ್ರತೆಯನ್ನು ಬಯಸುತ್ತದೆ. ಆದಾಗ್ಯೂ, ಮನಸ್ತಾಪವು ಸೂಕ್ಷ್ಮವಾಗಿ ಹೃದಯವನ್ನು ಕಠಿಣಗೊಳಿಸುತ್ತದೆ, ತಿದ್ದುಪಡಿಯನ್ನು ಆಕ್ರಮಣದಂತೆ ಮತ್ತು ಮಾರ್ಗದರ್ಶನವನ್ನು ನಿಯಂತ್ರಣದಂತೆ ಭಾಸವಾಗಿಸುತ್ತದೆ.
ಶಾಸ್ತ್ರವು ಎಚ್ಚರಿಸುತ್ತದೆ,
"ನಾಶಕ್ಕೆ ಮೊದಲು ಮನುಷ್ಯನ ಹೃದಯದಲ್ಲಿ ಅಹಂಕಾರ ಮತ್ತು ಗೌರವಕ್ಕೆ ಮೊದಲು ನಮ್ರತೆ ಇರುತ್ತದೆ" (ಜ್ಞಾನೋಕ್ತಿ 18:12).
ಮನಸ್ತಾಪ ಹೊಂದಿದ ಹೃದಯವು ಕಲಿತುಕೊಳ್ಳಲು ಹೆಣಗಾಡುತ್ತದೆ. ಅದು ಗ್ರಹಿಸುವ ಬದಲು ಸಮರ್ಥನೆಯ ಸಾಧನವಾಗುತ್ತದೆ. ಕಲಿಯಬಹುದಾದ ಸಾಮರ್ಥ್ಯ ಕಳೆದುಹೋದಾಗ, ಬೆಳವಣಿಗೆ ನಿಂತು ಹೋಗುತ್ತದೆ - ಇದಾದದ್ದು ದೇವರು ಮಾತನಾಡುವುದನ್ನು ನಿಲ್ಲಿಸಿದ್ದರಿಂದ ಅಲ್ಲ, ಆದರೆ ಹೃದಯವು ತಗ್ಗಿಸಿಕೊಳ್ಳುವುದನ್ನು ನಿಲ್ಲಿಸಿರುವುದರಿಂದ.
ಸಂಬಂಧಗಳ ಮೂಲಕ ದೈವೀಕ ಕರೆ ತೆರೆದುಕೊಳ್ಳುತ್ತದೆ
ದೇವರು ಆಗಾಗ್ಗೆ ಜನರು - ನಾಯಕರು, ಮಾರ್ಗದರ್ಶಕರು, ಕುಟುಂಬ ಮತ್ತು ಕಷ್ಟಕರ ಸಂಬಂಧಗಳ ಮೂಲಕವೂ ಕರೆಯಲ್ಲಿ ಮುನ್ನಡೆಸುತ್ತಾನೆ.
ಮನಸ್ತಾಪವು ಪ್ರವೇಶಿಸಿದಾಗ, ಅದು ಹಿಂಜಾರಿವಿಕೆ, ಅಪನಂಬಿಕೆ ಅಥವಾ ಪ್ರತ್ಯೇಕತೆಗೆ ಕಾರಣವಾಗಿ, ದೇವರು ಬಳಸಲು
ಉದ್ದೇಶಿಸಿರುವ ಮಾರ್ಗಗಳನ್ನು ಕತ್ತರಿಸಿ ಹಾಕುತ್ತದೆ.
" ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನಿಲ್ಲದಿದ್ದರೆ ಅವನ ಗತಿ ದುರ್ಗತಿಯೇ." ಎಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 4:9–10).
ಮನಸ್ತಾಪವು ನಮ್ಮನ್ನು ಏಕಾಂಗಿಯಾಗಿ ನಡೆಯಲು ಮನವೊಲಿಸುತ್ತದೆ, ಆದರೆ ಕರೆಯು ಪ್ರತ್ಯೇಕವಾಗಿರುವಾಗ ನೆರವೇರುವಂತದ್ದು ಅಪರೂಪ. ಮನಸ್ತಾಪದಲ್ಲಿ ನಾವು ದೂರ ತಳ್ಳಲ್ಪಡುವುದನ್ನು ದೇವರು ನಮ್ಮ ಉನ್ನತಿಗಾಗಿ ಬಳಸಲು ಉದ್ದೇಶಿಸಿರಬಹುದು.
ವಿಳಂಬಿತ ಬೆಳವಣಿಗೆಯು ಪುನರಾವರ್ತಿತ ಸಮಯವನ್ನು ಉಂಟುಮಾಡುತ್ತದೆ.
ಹನ್ನೊಂದು ದಿನಗಳ ಪ್ರಯಾಣವನ್ನು ಇಸ್ರೇಲ್ ನಲವತ್ತು ವರ್ಷಗಳ ಕಾಲ ಅಲೆದಾಡಿತು (ಧರ್ಮೋಪದೇಶಕಾಂಡ 1:2).
ಅವರಿಗಾದ ವಿಳಂಬವು ವಿಶ್ವಾಸದ ಕೊರತೆಯಿಂದಾಗಿ ಅಲ್ಲ, ಬದಲಾಗಿ ದೂರುವಿಕೆ, ಅಪನಂಬಿಕೆ ಮತ್ತು ಕಠಿಣ ಹೃದಯವೆಂಬ ಆಂತರಿಕ ಪ್ರತಿರೋಧದಿಂದ.
"ಆದದರಿಂದ ನಿರ್ಜೀವಕರ್ಮಗಳ ಮೇಲಣ ನಂಬಿಕೆಯನ್ನು ಬಿಟ್ಟುಬಿಟ್ಟು ದೇವರಲ್ಲಿಯೇ ನಂಬಿಕೆಯಿಡಬೇಕಾದದ್ದು,.. " ಎಂದು ಪೌಲನು ವಿಶ್ವಾಸಿಗಳನ್ನು ಎಚ್ಚರಿಸುತ್ತಾನೆ. (ಇಬ್ರಿಯ 6:1)
ಮನಸ್ತಾಪವು ಜನರನ್ನು ಆತ್ಮೀಕ ಪುನರಾವರ್ತನೆಯಲ್ಲಿ ಸಿಲುಕಿಸುತ್ತದೆ - ಈಗಾಗಲೇ ಪ್ರಬುದ್ಧತೆಯನ್ನು ಉತ್ಪಾದಿಸಬೇಕಾದ ಪಾಠಗಳನ್ನು ಪುನರ್ವಿಮರ್ಶಿಸುವಂತೆ ಮಾಡುತ್ತದೆ.
ಒಳ್ಳೆಯ ಸುದ್ದಿ ಇದು: ಮನಸ್ತಾಪವು ಶರಣಾಗಿಸಿದ ಕ್ಷಣದಲ್ಲಿ ಬೆಳವಣಿಗೆ ಪುನರಾರಂಭಿಸಬಹುದು. ದೇವರು ಸ್ಥಗಿತಗೊಂಡ ಭಕ್ತರನ್ನು ನಾಚಿಕೆಪಡಿಸುವುದಿಲ್ಲ; ಆತನು ಅವರನ್ನು ಮುಂದೆ ಬರಲು ಆಹ್ವಾನಿಸುತ್ತಾನೆ.
"ಕರ್ತನಿಗಾಗಿ ಕಾಯುವವರು ತಮ್ಮ ಶಕ್ತಿಯನ್ನು ನವೀಕರಿಸಿಕೊಳ್ಳುವರು” ಎಂದು ಪ್ರವಾದಿಯಾದ ಯೆಶಾಯ ಘೋಷಿಸುತ್ತಾನೆ. (ಯೆಶಾಯ 40:31).
ಗಾಯಗಳನ್ನು ಸಮರ್ಥಿಸಿಕೊಳ್ಳುವುದಲ್ಲಿ ನವೀಕರಣ ಕಂಡುಬರುವುದಿಲ್ಲ, ಆದರೆ ಅವುಗಳನ್ನು ಬಿಟ್ಟುಬಿಡುವುದರಲ್ಲಿ ಕಂಡುಬರುತ್ತದೆ.
Bible Reading: Genesis 25-26
ಪ್ರಾರ್ಥನೆಗಳು
ಕರ್ತನೇ, ನನ್ನ ಬೆಳವಣಿಗೆಯನ್ನು ನಿಧಾನಗೊಳಿಸಿದ ಯಾವುದೇ ಮನಸ್ತಾಪವನ್ನು ಬಹಿರಂಗಪಡಿಸು. ನನ್ನ ಹೃದಯವನ್ನು ಗುಣಪಡಿಸು, ನಮ್ರತೆಯನ್ನು ಪುನಃಸ್ಥಾಪಿಸು ಮತ್ತು ನಿನ್ನ ಉದ್ದೇಶಗಳೊಂದಿಗೆ ನನ್ನನ್ನು ಮರುಹೊಂದಿಸು. ನಾನು ಅಸಮಾಧಾನದಲ್ಲಿರುವುದಕ್ಕಿಂತ ಪ್ರಬುದ್ಧತೆಯಲ್ಲಿ ನಡೆಯುವುದನ್ನು ಆರಿಸಿಕೊಳ್ಳುತ್ತೇನೆ. ಯೇಸುನಾಮದಲ್ಲಿ ಆಮೆನ್!
Join our WhatsApp Channel
Most Read
● ಯಾವುದೂ ಮರೆಯಾಗಿಲ್ಲ● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ಒಂದು ಹೊಸ ಪ್ರಭೇದ
● ಮಧ್ಯಸ್ತಿಕೆ ಪ್ರಾರ್ಥನೆಗಾರರಿಗೆ ಒಂದು ಪ್ರವಾದನಾ ಸಂದೇಶ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಂಬಿಕೆ ಎಂದರೇನು ?
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು
