english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 5
ಅನುದಿನದ ಮನ್ನಾ

ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 5

Wednesday, 14th of January 2026
2 2 193
Categories : ಹೆಚ್ಚು ಪರಿಣಾಮಕಾರಿ ಜನರ 9 (9 Habit of Highly Effective people)
“ಇದಲ್ಲದೆ, ಮನೆವಾರ್ತೆಯವನು ಅಧಿಕಾರದಲ್ಲಿ ನಂಬಿಗಸ್ತರಾಗಿ ಕಂಡುಬರುವುದು ಕಡ್ಡಾಯವಾಗಿದೆ.” (1 ಕೊರಿಂಥ 4:2) 

ಹೆಚ್ಚು ಪರಿಣಾಮಕಾರಿ ಜನರು ಬಂದು ಹೋಗುವ ಅಲ್ಪಾವಧಿಯ ಉತ್ಸಾಹಕ್ಕೆ ಹೆಸರುವಾಸಿಯಾಗುವುದಿಲ್ಲ. ಅವರು ಬಹುಕಾಲಾವಧಿಯ ಸ್ಥಿರವಾದ ನಿಷ್ಠೆಗೆ ಹೆಸರುವಾಸಿಯಾಗಿದ್ದಾರೆ.

ಬೈಬಲ್ ಇಂದಿನ ಸಂಸ್ಕೃತಿಗಿಂತ ಬಹಳ ಭಿನ್ನವಾದದ್ದನ್ನು ಕಲಿಸುತ್ತದೆ: ದೇವರು ಪ್ರತಿಭೆಗಿಂತ ಸ್ಥಿರಚಿತ್ತತೆಯಿಂದ ಕಾರ್ಯಮಾಡುವವರಲ್ಲಿ ಹೆಚ್ಚು ಸಂತೋಷಪಡುತ್ತಾನೆ ಮತ್ತು ಆತನು ಉತ್ಸಾಹದ ಕಾರ್ಯಕ್ಕಿಂತ ಸಹಿಷ್ಣುತೆಯನ್ನು ಹೆಚ್ಚು ಗೌರವಿಸುತ್ತಾನೆ. ಅನೇಕ ಜನರು ತಮ್ಮ ಪ್ರಯಾಣವನ್ನು ಹೆಚ್ಚಿನ ಉತ್ಸಾಹ ಮತ್ತು ಶಕ್ತಿಯಿಂದ ಪ್ರಾರಂಭಿಸುತ್ತಾರೆ. ಅವರು ಪ್ರೇರಿತರಾಗಿ, ಸ್ಫೂರ್ತಿಯಿಂದ ದೊಡ್ಡ  ದೊಡ್ಡ ಕೆಲಸಗಳನ್ನು ಮಾಡಲು ಸಿದ್ಧರಾಗಿದ್ದಾರೆ. ಆದರೆ ಸಮಯ ಕಳೆದಂತೆ, ಆ ಉತ್ಸಾಹವು ಮಸುಕಾಗುತ್ತದೆ. ವಿಷಯಗಳು ನಿಧಾನವಾಗುತ್ತಿದೆ ಅಥವಾ ಸಾಮಾನ್ಯವಾದವೆಂದು ಭಾವಿಸಿದರೂ ಸಹ ಕೆಲವರು ಮಾತ್ರ ಶಿಸ್ತಿನಿಂದ ಮುಂದುವರಿಯುತ್ತಾರೆ.

ನಿಜವಾದ ಪರಿಣಾಮಕಾರಿತ್ವವು ಒಂದು ಪ್ರಬಲ ಕ್ಷಣದಲ್ಲಿ ನಿರ್ಮಿಸಲ್ಪಟ್ಟಿಲ್ಲ. ಇದು ದೈನಂದಿನ ಅಭ್ಯಾಸಗಳು, ಪುನರಾವರ್ತಿತ ವಿಧೇಯತೆ ಮತ್ತು ಕಾಲಾನಂತರದಲ್ಲಿ ನಿಷ್ಠೆಯಿಂದ ರೂಪುಗೊಳ್ಳುತ್ತದೆ. ನೀವು ಸ್ಥಿರವಾಗಿ ಏನು ಮಾಡುತ್ತೀರಿ ಎಂಬುದೇ ಅಂತಿಮವಾಗಿ ನೀವು ಯಾರಾಗುತ್ತೀರಿ ಎಂಬುದನ್ನು ವ್ಯಾಖ್ಯಾನಿಸುತ್ತದೆ.

1. ದೇವರು ನಂಬಿಕಸ್ತಿಕೆಗೆ ಪ್ರತಿಫಲ ನೀಡುತ್ತಾನೆ ಹೊರತು ಮಿಂಚಿ ಮಾಯವಾಗುವವರಿಗಲ್ಲ.

ದೇವರ ರಾಜ್ಯದಲ್ಲಿ, ನಂಬಿಕಸ್ಥಿಕೆಯೇ ಮೌಲ್ಯಯುತವಾಗಿದೆ. ಒಮ್ಮೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ ಸೇವಕನನ್ನು ಯೇಸು ಪ್ರಶಂಸಿಸಲಿಲ್ಲ, ಬದಲಾಗಿ ಬಹುಕಾಲದವರೆಗೂ ನಂಬಿಗಸ್ತನಾಗಿದ್ದವನನ್ನು “ಭಲಾ ನೀನು ಒಳ್ಳೆಯ ನಂಬಿಗಸ್ತ ಸೇವಕ, ” ಎಂದು ಶ್ಲಾಘಿಸಿದನು: (ಮತ್ತಾಯ 25:21). ಒಳ್ಳೆಯ ಎಂಬ ಪದವು ನಂಬಿಗಸ್ತನೊಂದಿಗೆ ಜೋಡಿಯಾಗಿದೆ,ಹೊರತು ಪ್ರತಿಭಾನ್ವಿತ ಅಥವಾ ಪ್ರಸಿದ್ಧ ಎಂಬ ಪದಗಳ ಜೊತೆಗಲ್ಲ ಎಂಬುದನ್ನು ಗಮನಿಸಿ. 

ದೇವರೊಂದಿಗಿನ ದೀರ್ಘಾಯುಷ್ಯವು ಮನುಷ್ಯರ ಮುಂದೆ ಗೋಚರವಾಗುವುದಕ್ಕಿಂತ ಮುಖ್ಯವಾಗಿದೆ ಎಂಬುದನ್ನು ದೇವರವಾಕ್ಯವು ಸ್ಥಿರವಾಗಿ ಕಲಿಸುತ್ತದೆ. ದಾವೀದನು ಒಂದು ದಿನ  ಮಾತ್ರ ಇದ್ದಕ್ಕಿದ್ದಂತೆ ಎದ್ದು ಹೋಗಿ ಗೋಲಿಯಾತನನ್ನು ಸೋಲಿಸಲಿಲ್ಲ. ಅವನು ಇದಕ್ಕೆ ಮೊದಲಿಂದಲೇ ಕುರಿಗಳನ್ನು ಮೇಯಿಸುವಾಗ, ಸಿಂಹಗಳು ಮತ್ತು ಕರಡಿಗಳನ್ನು ಕೊಲ್ಲುವುದು, ಪ್ರತ್ಯೇಕವಾಗಿ ಆರಾಧಿಸುವುದು ಖಾಸಗಿ ಜೀವನದಲ್ಲೂ ಸ್ಥಿರತೆಯನ್ನು ಬೆಳೆಸಿಕೊಂಡಿದ್ದನು. ” (1 ಸಮುವೇಲ 17:34–37). ಸಾರ್ವಜನಿಕ ಗೆಲುವು ಆಂತರ್ಯದಲ್ಲಿ  ತೋರುವ ನಂಬಿಕಸ್ಥಿಕೆಯ ಹೊರ ಹರಿಯುವಿಕೆಯಾಗಿತ್ತು.

2. ಸಣ್ಣ ಸಣ್ಣ ಶಿಸ್ತುಗಳು ದೊಡ್ಡ ಗತಿಗಳನ್ನು ಉಂಟುಮಾಡುತ್ತವೆ.

“ಅಲ್ಪ ಕಾರ್ಯಗಳ ದಿನವನ್ನು ಯಾರು ತಿರಸ್ಕರಿಸಿದ್ದಾರೆ?” ಎಂದು ಜೆಕರಾಯಾ 4:10 ಕೇಳುತ್ತದೆ. ಹೆಚ್ಚು ಪರಿಣಾಮಕಾರಿ ಜನರು ಸಣ್ಣ  ಸಣ್ಣ ಆರಂಭಗಳನ್ನೂ ಸಹ ಗೌರವಿಸುತ್ತಾರೆ. ಅದು ಸಾಮಾನ್ಯವೆಂದು ಭಾವಿಸಿದಾಗ ಅವರು ಪ್ರಾರ್ಥಿಸುತ್ತಾರೆ. ಅದು ಒಣಗಿಹೋಗುವಾಗ ಅವರು ದೇವರವಾಕ್ಯವನ್ನು ಓದುತ್ತಾರೆ. ಯಾವುದೇ ಚಪ್ಪಾಳೆ ಸಿಗದಿದ್ದರೂ ಅವರು ವಿಧೇಯರಾಗುತ್ತಾರೆ. ದೇವರು ಸಂಕ್ಷಿಪ್ತ ಮಾರ್ಗಗಳ ಮೂಲಕ ಅಲ್ಲ, ಸಂಗ್ರಹಣೆಯ ಮೂಲಕ ಕಾರ್ಯ ಮಾಡುತ್ತಾನೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ.

ದೇವರ ರಾಜ್ಯವು ನಿಧಾನವಾಗಿ, ಯಾರಿಗೂ ಕಾಣದಂತೆ, ಆದರೆ ಯಾರಿಂದಲೂ ತಡೆಯಲಾಗದ ಬೀಜದಂತೆ ಬೆಳೆಯುತ್ತದೆ ಎಂಬ ತತ್ವವನ್ನು ಕರ್ತನಾದ ಯೇಸು ಬೋದಿಸಿದನು 

30ಇನ್ನೂ ಆತನು ಹೇಳಿದ್ದು - ದೇವರ ರಾಜ್ಯವನ್ನು ಯಾವದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ? 31 ಅದು ಸಾಸಿವೆ ಕಾಳಿನಂತಿರುತ್ತದೆ. ಭೂವಿುಯಲ್ಲಿ ಬಿತ್ತುವಾಗ ಅದು ಭೂವಿುಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ. 32 ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಕಾಯಿಪಲ್ಯದ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡ ದೊಡ್ಡ ಕೊಂಬೆಗಳನ್ನು ಬಿಡುವದರಿಂದ ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅದರ ನೆರಳಿನಲ್ಲಿ ವಾಸಮಾಡುವದಕ್ಕಾಗುತ್ತದೆ ಅಂದನು. (ಮಾರ್ಕ 4:30–32)

ಸ್ಥಿರತೆಯು ಆತ್ಮೀಕ ಆವೇಗವನ್ನು ಸೃಷ್ಟಿಸುತ್ತದೆ. ನೀವು ಪ್ರತಿದಿನ ಏನು ಮಾಡುತ್ತಿದ್ದೀರಿ ಎಂಬುದೇ ಅಂತಿಮವಾಗಿ ನೀವು ಯಾರಾಗುತ್ತೀರಿ ಎಂಬುದನ್ನು ವ್ಯಾಖ್ಯಾನಿಸುತ್ತದೆ.

3. ಸ್ಥಿರತೆಯು ಆತ್ಮೀಕ ಅಧಿಕಾರವನ್ನು ನಿರ್ಮಿಸುತ್ತದೆ.

ದೇವರವಾಕ್ಯದಲ್ಲಿ ಎಲ್ಲೂ ಅಧಿಕಾರವನ್ನು ಯಾದೃಚ್ಛಿಕವಾಗಿ ಪಡೆಯುವುದನ್ನು ನಿಗದಿಪಡಿಸಲಾಗಿಲ್ಲ; ಅದನ್ನು ನಂಬಿಕೆಯ ಮೂಲಕ ಗಳಿಸಲಾಗುತ್ತದೆ. 

“ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿದ್ದಾನೆ”ಎಂದು ಯೇಸು ಹೇಳಿದನು, (ಲೂಕ 16:10). 

ಅನೇಕರು ಶಿಸ್ತು ಇಲ್ಲದೆ ಪ್ರಭಾವವನ್ನು ಬಯಸುತ್ತಾರೆ, ಪ್ರಕ್ರಿಯೆ ಇಲ್ಲದೆ ಫಲಿತಾಂಶವನ್ನು ಪಡೆಯಲು ಬಯಸುತ್ತಾರೆ. ಆದರೆ ದೇವರು ಅದನ್ನು ಹೊರಬಲ್ಲವರಿಗೆ ಮಾತ್ರ ಅದರ ತೂಕವನ್ನು ವಹಿಸುತ್ತಾನೆ. ಅಪೊಸ್ತಲ ಪೌಲನು ಇದನ್ನು ಅರ್ಥಮಾಡಿಕೊಂಡು "ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು... ಬಿರುದನ್ನು ಗುರಿ ಮಾಡಿಕೊಂಡು  ಎದೆಬೊಗ್ಗಿದವನಾಗಿ ಓಡುತ್ತಿದ್ದೇನೆ" (ಫಿಲಿಪ್ಪಿ 3:13–14) ಎಂದು ಹೇಳಿದನು. ಇದು ಭಾವನಾತ್ಮಕ ಪ್ರೇರಣೆಯಾಗಿರಲಿಲ್ಲ -ಬದಲಾಗಿ ಇದು ಶಿಸ್ತಿನ ಅನ್ವೇಷಣೆಯಾಗಿತ್ತು. ಭಾವನೆಗಳು ಏರಿಳಿತಗೊಂಡಾಗಲೂ ಹೆಚ್ಚು ಪರಿಣಾಮಕಾರಿ ಜನರು ಕಾಣಿಸಿಕೊಳ್ಳುತ್ತಾರೆ. ಅವರು ಅನುಕೂಲದಿಂದಲ್ಲ, ದೃಢವಿಶ್ವಾಸದಿಂದ ನಿಯಂತ್ರಿಸಲ್ಪಡುತ್ತಾರೆ.

4. ಅಸ್ಥಿರತೆಯು ಮೌನ ಕರೆ ಹಂತಕ

"ಸಂದೇಹ ಪಡುವ ಮನುಷ್ಯನು ತನ್ನ ಎಲ್ಲಾ ಮಾರ್ಗಗಳಲ್ಲಿ ಅಸ್ಥಿರನಾಗಿರುತ್ತಾನೆ" (ಯಾಕೋಬ 1:8) 

ಎಂದು ಯಾಕೋಬನು ಎಚ್ಚರಿಸುತ್ತಾನೆ. ಅಸ್ಥಿರತೆಯು ಯಾವಾಗಲೂ ದಂಗೆಯಂತೆ ಕಾಣುವುದಿಲ್ಲ; ಕೆಲವೊಮ್ಮೆ ಅದು ಅಸಂಗತತೆಯಂತೆ ಕಾಣುತ್ತದೆ - ಪ್ರಾರಂಭಿಸುವುದು ಮತ್ತು ನಿಲ್ಲಿಸುವುದು, ಬದ್ಧವಾಗುವುದು ಮತ್ತು ಹಿಂದೆ ಸರಿಯುವುದು, ಮುಂದುವರಿಯುವುದು ಮತ್ತು ಹಿಂಜಾರುವುದು. ಈ ಚಕ್ರವು ಆತ್ಮೀಕ ಶಕ್ತಿಯನ್ನು ಬರಿದಾಗಿಸುತ್ತದೆ. ಎಲೀಯನು ಒಂದು ದಿನ ಕುದುರೆಗಳನ್ನು ಮೀರಿಸಿ  ಓಡಿದನು ಮರುದಿನ ಒಂದು ಮರದ ಕೆಳಗೆ ಕುಸಿದುಬಿದ್ದನು (1 ಅರಸುಗಳು 18–19). ಅವನ ವಿಷಯವು ಕರೆಯ ಕುರಿತಾದ್ದಾಗಿರಲಿಲ್ಲ - ಅದು ಸುಸ್ಥಿರತೆಗೆ ಸಂಬಂಧಿಸಿದ್ದಾಗಿತ್ತು.

ಹೆಚ್ಚು ಪರಿಣಾಮಕಾರಿ ಜನರು ದೀರ್ಘಕಾಲ ರಕ್ಷಿಸುವ ಪ್ರಾರ್ಥನೆ, ವಿಶ್ರಾಂತಿ, ಶಿಸ್ತು ಮತ್ತು ಹೊಣೆಗಾರಿಕೆಯ ದಿನಚರಿಗಳನ್ನು ನಿರ್ಮಿಸುತ್ತಾರೆ. ನೀವು ಪ್ರಭಾವಶಾಲಿ ವ್ಯಕ್ತಿಯಾಗಲು ಬಯಸಿದರೆ ನೀವು ಮಾಡಬೇಕಾದದ್ದು ಅದನ್ನೇ. 

ಇದು ಅಭ್ಯಾಸ ಸಂಖ್ಯೆ 5.
ಸಾಂದರ್ಭಿಕ ತೀವ್ರತೆಯು ಸ್ಫೂರ್ತಿ ನೀಡಬಹುದು, ಆದರೆ ಸ್ಥಿರವಾದ ನಿಷ್ಠೆಯು ಜೀವನವನ್ನು ಪರಿವರ್ತಿಸುತ್ತದೆ ಮತ್ತು ಕರೆಯನ್ನು ಪೂರೈಸುತ್ತದೆ.

Bible Reading: Genesis 40-41
ಪ್ರಾರ್ಥನೆಗಳು
ತಂದೆಯೇ, ದಯವಿಟ್ಟು ನಾನು ಸ್ಥಿರವಾಗಿರಲು ಅನುಗ್ರಹವನ್ನು ನೀಡು. ನನ್ನ ಜೀವನದಲ್ಲಿರುವ ಪ್ರತಿಯೊಂದು ರೀತಿಯ ಅಸ್ಥಿರತೆಯನ್ನು ತೆಗೆದುಹಾಕು. ನನ್ನ ಶಿಸ್ತನ್ನು ಬಲಪಡಿಸು, ಮತ್ತು ಯಾರೂ ನೋಡದಿದ್ದರೂ ಸಹ, ಫಲಿತಾಂಶಗಳು ಗೋಚರಿಸುವ ಸರಿಯಾದ ಸಮಯದವರೆಗೂ ಸಹ ನಾನು ನಂಬಿಗಸ್ತನಾಗಿರುವಂತೆ ಯೇಸುನಾಮದಲ್ಲಿ ಸಹಾಯ ಮಾಡು.



Join our WhatsApp Channel


Most Read
● ದೈನಂದಿನ ಮನ್ನಾ
● ಆತನ ನೀತಿಯ ವಸ್ತ್ರದಿಂದ ಭೂಷಿತರಾಗುವುದು
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
● ನಿಮ್ಮ ಗತಿಯನ್ನು ಹಾಳು ಮಾಡಿಕೊಳ್ಳಬೇಡಿರಿ!
● ಗುಪ್ತ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕೋಪದ ಸಮಸ್ಯೆ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್