ಅನುದಿನದ ಮನ್ನಾ
1
4
143
ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 7
Friday, 16th of January 2026
“ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋಧಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವುದು, ಆದರೆ ಅದು ಸತ್ತರೆ ಬಹಳ ಫಲಕೊಡುವುದು.” (ಯೋಹಾನ 12:24)
ನೀವು ನಿಮಗಾಗಿ ಏನನ್ನು ಸಂರಕ್ಷಿಸುತ್ತೀರೋ ಅದು ಅಂತಿಮವಾಗಿ ಕಡಿಮೆಯಾಗುತ್ತದೆ, ಆದರೆ ನೀವು ದೇವರಿಗೆ ಯಾವುದನ್ನು ಸಲ್ಲಿಸುತ್ತೀರೋ ಅದು ವೃದ್ಧಿಯಾಗುತ್ತದೆ ಎಂದು ಹೆಚ್ಚು ಪರಿಣಾಮಕಾರಿ ಜನರು ಅರ್ಥಮಾಡಿಕೊಂಡಿರುತ್ತಾರೆ.
ಶಾಶ್ವತವಾದ ಪ್ರಭಾವವು ಎಂದಿಗೂ ಸೌಕರ್ಯದಿಂದ ಹುಟ್ಟುವುದಿಲ್ಲ, ಆದರೆ ಪವಿತ್ರೀಕರಣದಿಂದ ಹುಟ್ಟುತ್ತದೆ ಎಂಬುದನ್ನು ಧರ್ಮಗ್ರಂಥವು ಪ್ರಕಟ ಪಡಿಸುತ್ತದೆ. ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಕರೆಯು ಬೆಳೆಯುವುದಿಲ್ಲ - ಬದಲಾಗಿ ತನ್ನನ್ನು ತಾನು ಎಲ್ಲಿ ನೆಡಬೇಕಾಗಿದೆಯೋ ಅಲ್ಲಿಗೆ ಒಪ್ಪಿಸಿಕೊಡುವಾಗ ಅದು ಬೆಳೆಯುತ್ತದೆ.
ತ್ಯಾಗವು ನಷ್ಟವಲ್ಲ; ಅದು ಹೂಡಿಕೆ.
1. ಶರಣಾಗತಿಯ ಮೂಲಕ ದೇವರ ರಾಜ್ಯವು ಮುನ್ನಡೆಯುತ್ತದೆ.
ಆದಿಕಾಂಡದಿಂದ ಪ್ರಕಟನೆಯವರೆಗೆ, ಏನನ್ನಾದರೂ ತ್ಯಜಿಸಲು ಸಿದ್ಧರಿರುವ ಜನರ ಮೂಲಕವೇ ದೇವರು ತನ್ನ ಉದ್ದೇಶಗಳನ್ನು ಮುನ್ನಡೆಸಿದ್ದಾನೆ. ಅಬ್ರಹಾಮನು ಇಸಾಕನನ್ನು ಬಲಿಪೀಠದ ಮೇಲೆ ಇಟ್ಟನು (ಆದಿಕಾಂಡ 22). ಹನ್ನಳು ಸಮುವೇಲನನ್ನು ಬಿಟ್ಟುಕೊಟ್ಟಳು (1 ಸಮುವೇಲ 1). ಕರ್ತನಾದ ಯೇಸು ತನ್ನನ್ನು ತಾನೇ ಅರ್ಪಿಸಿಕೊಂಡನು (ಫಿಲಿಪ್ಪಿ 2:5–8).
ರೋಮನ್ನರು 12:1 ಈ ಆಡಳಿತ ತತ್ವವನ್ನು ಸೆರೆಹಿಡಿಯುತ್ತದೆ: “ನಿಮ್ಮ ದೇಹಗಳನ್ನು ಸಜೀವ ಯಜ್ಞವಾಗಿ ಅರ್ಪಿಸಿರಿ ಇದೇ ನಿಮ್ಮ ವಿವೇಕ ಪೂರ್ವಕ ವಾದ ಆರಾಧನೆ " ಗಮನಿಸಿ—ದೇವರು ಅನುಕೂಲವನ್ನು ಕೇಳುವುದಿಲ್ಲ; ಆತನು ಶರಣಾಗತಿಯನ್ನು ಕೇಳುತ್ತಾನೆ. ಹೆಚ್ಚು ಪರಿಣಾಮಕಾರಿ ಜನರು “ನಾನು ಏನನ್ನು ಇಟ್ಟುಕೊಳ್ಳಬಹುದು?” ಎಂದು ಕೇಳುವುದಿಲ್ಲ, ಆದರೆ “ದೇವರ ಚಿತ್ತವನ್ನು ಪೂರೈಸಲು ನಾನು ಏನನ್ನು ತ್ಯಜಿಸಬೇಕು?” ಎಂದು ಕೇಳುತ್ತಿದ್ದಾರೆ.
2. ಜನಸಮೂಹದಿಂದ ಕರೆಯುವಿಕೆಯನ್ನು ತ್ಯಾಗವು ಪ್ರತ್ಯೇಕಿಸುತ್ತದೆ.
ಅನೇಕರು ಯೇಸುವನ್ನು ಮೆಚ್ಚಿದರು, ಆದರೆ ಶಿಲುಬೆಯವರೆಗೆ ಆತನನ್ನು ಹಿಂಬಾಲಿಸಿದ್ದು ಕೆಲವರು ಮಾತ್ರವೇ. ಅವರು ತಮ್ಮನ್ನೇ ತಾವು ತ್ಯಜಿಸಬೇಕು ಎಂಬುದನ್ನು ಕುರಿತು ಮಾತನಾಡಿದಾಗ, ಜನಸಮೂಹ ಕಡಿಮೆಯಾಯಿತು (ಯೋಹಾನ 6:66).
ತ್ಯಾಗವು ಯಾವಾಗಲೂ ತಮ್ಮ ಕರೆಯ ಕುರಿತು ಯಾರು ಗಂಭೀರರಾಗಿದ್ದಾರೆ ಮತ್ತು ಯಾರು ಕೇವಲ ಕುತೂಹಲ ಹೊಂದಿದ್ದಾರೆ ಎಂಬುದನ್ನು ಪ್ರಕಟ ಪಡಿಸುತ್ತದೆ.
" ಯೇಸು ಅವರೆಲ್ಲರಿಗೆ: “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ನಿರಾಕರಿಸಿ ತಮ್ಮ ಶಿಲುಬೆಯನ್ನು ಪ್ರತಿದಿನ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ. ಎಂದು ಕರ್ತನಾದ ಯೇಸು ಸ್ಪಷ್ಟವಾಗಿ ಹೇಳಿದನು.(ಲೂಕ 9:23).
ನಿಜವಾದ ಶಿಷ್ಯತ್ವವು ಒಂದು ಬೆಲೆಯನ್ನು ಬೇಡುತ್ತದೆ ಎಂಬುದನ್ನು ಹೆಚ್ಚು ಪರಿಣಾಮಕಾರಿ ಜನರು ಒಪ್ಪಿಕೊಳ್ಳುತ್ತಾರೆ. ದೇವರಲ್ಲಿ ಪ್ರತಿಯೊಂದು ಉನ್ನತಿಗೂ ಸ್ವಯಂ ಮರಣದ ಅಗತ್ಯವಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ.
3. ತ್ಯಾಗವು ಆತ್ಮೀಕ ಅಧಿಕಾರವನ್ನು ಉಂಟುಮಾಡುತ್ತದೆ
ಧರ್ಮಗ್ರಂಥದಲ್ಲಿ ಅಧಿಕಾರವನ್ನು ಶೀರ್ಷಿಕೆಯಿಂದ ನೀಡಲಾಗುವುದಿಲ್ಲ; ಅದು ಶರಣಾಗತಿಯ ಮೂಲಕ ರೂಪಿಸಲ್ಪಟ್ಟಿದೆ. ಅಪೊಸ್ತಲ ಪೌಲನು, "ನಾನು ಪ್ರತಿದಿನ ಸಾಯುತ್ತಿದ್ದೇನೆ" ಎಂದು ಘೋಷಿಸಿದನು (1 ಕೊರಿಂಥ 15:31).
ಈ ದೈನಂದಿನ ಸಾಯುವಿಕೆಯು ಅಸಾಮಾನ್ಯ ಅಧಿಕಾರ, ಸಹಿಷ್ಣುತೆ ಮತ್ತು ಫಲಪ್ರದತೆಯನ್ನು ಉಂಟುಮಾಡಿತು. ಅನೇಕರು "ದಹನ" ಎಂದು ಕರೆಯುವುದನ್ನು, ಧರ್ಮಗ್ರಂಥವು ಅಪೂರ್ಣ ಶರಣಾಗತಿ ಎಂದು ಕರೆಯುತ್ತದೆ. ನಾನು ಎನ್ನುವಂತದ್ದು ಇನ್ನೂ ಸಿಂಹಾಸನದಲ್ಲಿದ್ದಾಗ, ಒತ್ತಡವು ಆವರಿಸುತ್ತದೆ. ಆದರೆ ಕ್ರಿಸ್ತನು ಆಳ್ವಿಕೆ ನಡೆಸುವಾಗ, ಕೃಪೆಯು ಕಾಪಾಡುತ್ತದೆ.
ಹೆಚ್ಚು ಪರಿಣಾಮಕಾರಿಯಾದ ಜನರು ಶತ್ರುಗಳಿಗೆ ಅಪಾಯಕಾರಿ ಏಕೆಂದರೆ ಅವರು ಈಗಾಗಲೇ ಖ್ಯಾತಿ, ಸಾಂತ್ವನ ಮತ್ತು ಚಪ್ಪಾಳೆಗಳಿಗೆ ಸತ್ತು ಹೋಗಿದ್ದಾರೆ.
4. ತನ್ನ ತಾನು ಸಂರಕ್ಷಣೆ ಮಾಡಿಕೊಳ್ಳಲು ಪ್ರಯತ್ನಿಸುವುದು ಕರೆಯ ಗುಪ್ತ ಶತ್ರು
ಪೇತ್ರನು ಯೇಸುವನ್ನು ದುಃಖದಿಂದ ರಕ್ಷಿಸಲು ಪ್ರಯತ್ನಿಸಿದನು ಅದಕ್ಕಾಗಿ ಅವನನ್ನು ಕಟುವಾಗಿ ಗದರಿಸಲಾಯಿತು (ಮತ್ತಾಯ 16:22–23). ಏಕೆ?
ಏಕೆಂದರೆ ಆತ್ಮ ಸಂರಕ್ಷಣೆ ಹೆಚ್ಚಾಗಿ ಬುದ್ಧಿವಂತ ಕಾರ್ಯ ವೆನಿಸುತ್ತದೆ, ಆದರೆ ಅದು ದೇವರ ವಿಮೋಚನಾ ಯೋಜನೆಯನ್ನು ವಿರೋಧಿಸಬಹುದು. "ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಬಯಸುವವನು ಅದನ್ನು ಕಳೆದುಕೊಳ್ಳುವನು" (ಲೂಕ 17:33) ಎಂದು ಕರ್ತನಾದ ಯೇಸು ನಮಗೆ ಎಚ್ಚರಿಸಿದನು.
ಹೆಚ್ಚು ಪರಿಣಾಮಕಾರಿಯಾದ ವಿಶ್ವಾಸಿಗಳು ತಮ್ಮ ಸ್ವಂತ ಸಂರಕ್ಷಣೆಯನ್ನು ಅವಿಧೇಯತೆ ಎಂದು ಗ್ರಹಿಸುತ್ತಾರೆ. ಅವರು ಸುರಕ್ಷತೆಗಿಂತ ವಿಧೇಯತೆಯನ್ನು ಆರಿಸಿಕೊಳ್ಳುತ್ತಾರೆ, ಸೌಕರ್ಯಕ್ಕಿಂತ ಕರೆಯನ್ನು, ಆದ್ಯತೆಗಿಂತ ಉದ್ದೇಶವನ್ನು ಆರಿಸಿಕೊಳ್ಳುತ್ತಾರೆ.
5. ತ್ಯಾಗವು ವೃದ್ದಿಯ ಬಾಗಿಲನ್ನು ತೆರೆಯುತ್ತದೆ.
ಶಿಲುಬೆಯು ಸೋಲಿನಂತೆ ಕಾಣುತ್ತದೆ - ಆದರೆ ಅದು ಲೋಕಕ್ಕೆ ರಕ್ಷಣೆಯನ್ನು ಹುಟ್ಟುಹಾಕಿತು. ಇದು ರಾಜ್ಯದ ನಿಯಮ: ವೃದ್ಧಿಗೆ ಮುಂಚಿತವಾಗಿ ಮರಣ ಸಂಭವಿಸುತ್ತದೆ.
ಪೌಲನು ಸಹ ಈ ನಿಯಮವನ್ನು ದೃಢಪಡಿಸಿದನು: “ ಯೇಸುವಿನ ಜೀವವು ನಮ್ಮ ಶರೀರದಲ್ಲಿ ಪ್ರಕಟವಾಗುವಂತೆ, ನಾವು ಯಾವಾಗಲೂ ನಮ್ಮ ಶರೀರದಲ್ಲಿ ಯೇಸುವಿನ ಮರಣವನ್ನು ಧರಿಸುವವರಾಗಿರುತ್ತೇವೆ. (2 ಕೊರಿಂಥ 4:10).
ಹೆಚ್ಚು ಪರಿಣಾಮಕಾರಿ ಜನರು ತ್ಯಾಗವನ್ನು ಸ್ವೀಕರಿಸುತ್ತಾರೆ ಏಕೆಂದರೆ ಅವರು ವಾಗ್ದಾನವನ್ನು ಸಂಕಟಗಳಿಂತ ಮೀರಿ ನೋಡುತ್ತಾರೆ. ದೇವರು ಎಂದಿಗೂ ಶರಣಾದ ಜೀವನಗಳನ್ನು ವ್ಯರ್ಥ ಮಾಡುವುದಿಲ್ಲ ಎಂಬುದು ಅವರಿಗೆ ತಿಳಿದಿದೆ.
ಇದು ಅಭ್ಯಾಸ ಸಂಖ್ಯೆ 7. ತನ್ನನ್ನು ರಕ್ಷಿಸಿಕೊಳ್ಳಲು ಬದುಕುವವರು ಬದುಕುಳಿಯಬಹುದು - ಆದರೆ ಶರಣಾಗಿ ಬದುಕುವವರು ತಲೆಮಾರುಗಳನ್ನೇ ಪರಿವರ್ತಿಸುವವರಾಗಿರುತ್ತಾರೆ.
ಪ್ರಾರ್ಥನೆಗಳು
ತಂದೆಯೇ, ನಾನು ನನ್ನ ಜೀವನವನ್ನು ನಿನ್ನ ಕರಗಳಿಗೆ ಹೊಸದಾಗಿ ಒಪ್ಪಿಸುತ್ತೇನೆ. ಸ್ವಯಂ ಸಂರಕ್ಷಣೆಯ ಹಿಡಿತವನ್ನು ಮುರಿದು ಪ್ರತಿದಿನ ಶರೀರದಲ್ಲಿ ಸಾಯಲು ನನಗೆ ಬಲ ನೀಡಿ, ಮತ್ತು ನನ್ನ ತ್ಯಾಗವು ನಿನ್ನ ಮಹಿಮೆಗಾಗಿ ನನ್ನ ಪೀಳಿಗೆಯ ಪರಿಣಾಮವನ್ನು ಯೇಸುನಾಮದಲ್ಲಿ ಉಂಟುಮಾಡಲಿ. ಆಮೆನ್!!
Join our WhatsApp Channel
Most Read
● ದಿನ 13:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ದೀನತೆ ಎಂಬುದು ಬಲಹೀನತೆ ಎನ್ನುವುದಕ್ಕೆ ಸಮನಾದುದಲ್ಲ.
● ಇಂತಹ ಪರಿಶೋಧನೆಗಳು ಏಕೆ?
● ನಿಮ್ಮ ನಂಬಿಕೆಯ ಸಾಮರ್ಥ್ಯವನ್ನು ವಿಸ್ತರಿಸುವುದು ಹೇಗೆ?
● ಪ್ರತಿಫಲಿಸಲು ಸಮಯ ತೆಗೆದುಕೊಳ್ಳುವುದು.
● ನಾನು ಧೈರ್ಯಗೆಡುವುದಿಲ್ಲ.
● ದಿನ 05: 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು
