ಅನುದಿನದ ಮನ್ನಾ
2
1
17
ಉನ್ನತ ಪ್ರಭಾವ ಕ್ಷೇತ್ರಗಳಿಗೆ ದಾರಿ
Sunday, 25th of January 2026
Categories :
ನಿಷ್ಠೆ (Faithfulness)
ಶ್ರೇಷ್ಠತೆ (Excellence)
ದೇವರು ನಿಮ್ಮನ್ನು ಒಂದು ಮೊಹರಿಯಷ್ಟು ನಂಬಿದ್ದಾನೆ
ಕರ್ತನಾದ ಯೇಸು ತನ್ನ ಸೇವಕರಿಗೆ ಮೊಹರಿಗಳನ್ನು ನೀಡಿದ ಯಜಮಾನನ ಬಗ್ಗೆ ಒಂದು ಸಾಮ್ಯವನ್ನು ಹೇಳಿದನು.
ಒಂದು ಮೊಹರಿ ಎಂಬುದು ಒಂದು ಸಣ್ಣ ಮೊತ್ತದ ಹಣವಾಗಿತ್ತು. ಅದು ಅಷ್ಟೇನೂ ಹೆಚ್ಚಾಗಿ ಕಾಣದಿದ್ದರೂ ಅದು ಮೌಲ್ಯಯುತವಾಗಿತ್ತು. ಅದೇ ರೀತಿಯಲ್ಲಿ, ದೇವರು ಪ್ರತಿಯೊಬ್ಬ ವಿಶ್ವಾಸಿಯಲ್ಲೂ-ವರಗಳು, ಸಾಮರ್ಥ್ಯಗಳು, ಸಮಯ, ಪ್ರಭಾವ ಅಥವಾ ಅವಕಾಶಗಳು ಇತ್ಯಾದಿ ಅಮೂಲ್ಯವಾದ ಯಾವುದೋ ಒಂದೊಂದನ್ನು ಇರಿಸಿದ್ದಾನೆ.
ಯಜಮಾನ ಹಿಂತಿರುಗಿದಾಗ, ಒಬ್ಬ ಸೇವಕನು,
ಆತನ ಮುಂದೆ ಬಂದು - ದೊರೆಯೇ, ನೀನು ಕೊಟ್ಟ ಮೊಹರಿಯಿಂದ ಹತ್ತು ಮೊಹರಿಗಳು ಸಂಪಾದನೆಯಾದವು ಅಂದನು (ಲೂಕ 19:16)
ಎರಡನೆಯವನು ಬಂದು - ದೊರೆಯೇ,
ನೀನು ಕೊಟ್ಟ ಮೊಹರಿಯಿಂದ ಐದು ಮೊಹರಿಗಳು ದೊರಕಿದವು ಅಂದನು (ಲೂಕ 19:18)
ಇಬ್ಬರೂ ಸೇವಕರು ತಮಗೆ ಕೊಡಲ್ಪಟ್ಟದ್ದನ್ನು
ತೆಗೆದುಕೊಂಡು ಅದರೊಂದಿಗೆ ಕೆಲಸ ಮಾಡಿದ್ದರು. ಸಣ್ಣ ವಿಷಯಗಳಲ್ಲಿ ನಂಬಿಗಸ್ತರಾದ ಆ ಪ್ರತಿ ಸೇವಕನಿಗೆ ಕೇವಲ ತಲಾ ಒಂದು ಮೊಹರಿ ಮಾತ್ರ ಸಿಕ್ಕಿತು, ಯಾರಿಗೇನೂ ಹೆಚ್ಚು ಕೊಡಲ್ಪಟ್ಟಿರಲಿಲ್ಲ.
ಆದರೆ ಇಲ್ಲಿ ಯಜಮಾನನು ಅವರಿಗೆ ಎಷ್ಟು ನೀಡಲಾಗಿತ್ತು ಎಂಬುದರ ಮೇಲೆ ಅವರನ್ನು ನಿರ್ಣಯಿಸದೆ,
ಅವರು ಅದರಲ್ಲಿ ಎಷ್ಟು ನಂಬಿಗಸ್ತರಾಗಿದ್ದಾರೆ ಎಂಬುದರ ಮೇಲೆ ಅವರನ್ನು ನಿರ್ಣಯಿಸಿದನು. (ಲೂಕ 16:10)
ಅಲ್ಪದಲ್ಲಿ ನಂಬಿಗಸ್ತನಾಗಿರುವವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗಿರುತ್ತಾನೆ." ಎಂಬ ಇದೇ ಸತ್ಯವನ್ನು ಯೇಸು ಮತ್ತೊಮ್ಮೆ ಬೋದಿಸುತ್ತಾನೆ.
ನಾವು ದಿನನಿತ್ಯದ ಸಣ್ಣ ಜವಾಬ್ದಾರಿಗಳನ್ನು
ಹೇಗೆ ನಿರ್ವಹಿಸುತ್ತೇವೆ ಎಂಬುದನ್ನು ದೇವರು ಗಮನಿಸುತ್ತಾನೆ. ಸಣ್ಣ ವಿಷಯಗಳಲ್ಲಿಯೂ ನಂಬಿಗಸ್ತರಾಗಿರುವಂತದ್ದು ದೊಡ್ಡ ವಿಷಯಗಳಲ್ಲಿಯೂ ನಮ್ಮನ್ನು ನಂಬಬಹುದೆಂದು ತೋರಿಸಿಕೊಡುತ್ತದೆ.
ಪ್ರತಿಫಲಗಳು ಶಕ್ತಿಯುತವಾಗಿದ್ದಾಗ ನಿಷ್ಠೆಯು ಅಧಿಕಾರಕ್ಕೇರಿಸಲು ಕಾರಣವಾಗುತ್ತದೆ.ಅದಕ್ಕಾಗಿಯೇ ಹತ್ತು ಮೊಹರಿಗಳನ್ನು ಗಳಿಸಿದ ಸೇವಕನಿಗೆ "ಭಲಾ! ನೀನು ಒಳ್ಳೇ ಆಳು; ನೀನು ಬಹು ಸ್ವಲ್ಪವಾದದ್ದರಲ್ಲಿ ನಂಬಿಕೆಯುಳ್ಳವನಾಗಿದ್ದದರಿಂದ ಹತ್ತು ಗ್ರಾಮಗಳ ಮೇಲೆ ಅಧಿಕಾರಿಯಾಗಿರು ಎಂದು. ಹೇಳಲಾಯಿತು.(ಲೂಕ 19:17)
ಐದು ಮೊಹರಿಗಳನ್ನು ಗಳಿಸಿದವನಿಗೆ ಐದು ನಗರಗಳ ಮೇಲೆ ಅಧಿಕಾರ ನೀಡಲಾಯಿತು. ಅದನ್ನು ಊಹಿಸಿ!!
ಇದು ನಮಗೆ ದೇವರ ರಾಜ್ಯದ ತತ್ವವನ್ನು ತೋರಿಸುತ್ತದೆ: ನಿಷ್ಠೆಯು ಅಧಿಕಾರವನ್ನು ಉಂಟುಮಾಡುತ್ತದೆ. ದೇವರು ನಮಗೆ ಕೊಡುವದನ್ನು ನಾವು ಚೆನ್ನಾಗಿ ಬಳಸುತ್ತಿದ್ದೇವೆ ಎಂಬುದನ್ನು ದೇವರು ನೋಡುವಾಗ,
ಆತನು ನಮ್ಮ ಪ್ರಭಾವದ ಪ್ರದೇಶವನ್ನು
ವಿಸ್ತರಿಸುತ್ತಾನೆ. ಶ್ರೇಷ್ಠತೆಯಷ್ಟೇ ದೇವರಿಗೆ ಮುಖ್ಯವಾಗಿದೆ.
“ಅದ್ಭುತ! ನನ್ನ ಶ್ರೇಷ್ಠ ಸೇವಕನೇ, ನೀನು ಚೆನ್ನಾಗಿ ಕಾರ್ಯ ಮಾಡಿದ್ದೀ.” ಎಂದು ಒಂದು ಅನುವಾದ ಹೇಳುತ್ತದೆ:(ಲೂಕ 19:17, TPT)
ಕೇವಲ ಸೇವಕನಾಗಿರುವುದಕ್ಕೂ ಮತ್ತು ಶ್ರೇಷ್ಠ ಸೇವಕನಾಗಿರುವುದಕ್ಕೂ ನಡುವೆ ವ್ಯತ್ಯಾಸವಿದೆ. ಒಬ್ಬ ಶ್ರೇಷ್ಠ ಸೇವಕನು ಹೃತ್ಪೂರ್ವಕ ವಾಗಿ, ಕಾಳಜಿ ವಹಿಸಿ ಮತ್ತು ಬದ್ಧತೆಯಿಂದ ಸೇವೆ ಸಲ್ಲಿಸುತ್ತಾನೆ.
ನೀವು ಏನೇ ಮಾಡಿದರೂ, ಅದನ್ನು ಮಾನವ ಯಜಮಾನರಿಗಾಗಿ
ಅಲ್ಲ, ಆದರೆ ಕರ್ತನಿಗೋಸ್ಕರ ಕೆಲಸ ಮಾಡುವಂತೆ ನಿಮ್ಮ ಪೂರ್ಣ ಹೃದಯದಿಂದ ಕೆಲಸ ಮಾಡಿ.” (ಕೊಲೊಸ್ಸೆ 3:23)
ಎನ್ನುವ ಈ ಮನೋಭಾವವನ್ನು ಸತ್ಯವೇದವು ಪ್ರೋತ್ಸಾಹಿಸುತ್ತದೆ
ದೇವರು ಶ್ರೇಷ್ಠತೆಯನ್ನು ಗೌರವಿಸುತ್ತಾನೆ ಏಕೆಂದರೆ ಅದು ಆತನ
ಸ್ವಭಾವವನ್ನು ಪ್ರತಿಬಿಂಬಿಸಿ ಆತನಿಗೇ ಮಹಿಮೆ ಮತ್ತು ಗೌರವವನ್ನು ತರುತ್ತದೆ. ದೇವರು ನಿಮಗೆ ಕೊಟ್ಟದ್ದನ್ನು ಬಳಸಿಕೊಳ್ಳಿ. ನಮ್ಮಲ್ಲಿ ಪ್ರತಿಯೊಬ್ಬರಿಗೂ ದೇವರು ಏನನ್ನಾದರೂ ನೀಡಿಯೇ ಇರುತ್ತಾನೆ.
"ನೀವೆಲ್ಲರೂ ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ." ಎಂದು ಸತ್ಯವೇದ ಹೇಳುತ್ತದೆ(1 ಪೇತ್ರ 4:10).
ನಿಮ್ಮ ಮೊಹರಿ ಒಂದು ಕೌಶಲ್ಯ, ಸಂಪನ್ಮೂಲ, ನಿಮ್ಮ ಸಮಯ, ನಿಮ್ಮ ಧ್ವನಿ ಅಥವಾ ದಯೆ ಮತ್ತು ಪ್ರೋತ್ಸಾಹವಾಗಿರಬಹುದು. ನೀವು ಅದನ್ನು ಮರೆಮಾಡದೇ ಅದನ್ನು ನೀವು ಬಳಸಬೇಕೆಂದು ದೇವರು ನಿರೀಕ್ಷಿಸುತ್ತಾನೆ. ನಾವು ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುವಾಗ, ನಾವು ಇನ್ನೂ ಹೆಚ್ಚಿನ ಬಳಕೆಗೆ ಸಿದ್ಧರಾಗುತ್ತೇವೆ.
"ಹೀಗಿರಲಾಗಿ ಒಬ್ಬನು ಹೀನ ನಡತೆಯುಳ್ಳವರ ಸಹವಾಸವನ್ನು ಬಿಟ್ಟು ತನ್ನನ್ನು ಶುದ್ಧಮಾಡಿಕೊಂಡರೆ ಅವನು ಉತ್ತಮವಾದ ಬಳಕೆಗೆ ಯೋಗ್ಯನಾಗಿರುವನು; ಅವನು ದೇವರ ಸೇವೆಗೆ ಪ್ರತಿಷ್ಠಿತನಾಗಿಯೂ ಯಜಮಾನನಿಗೆ ಉಪಯುಕ್ತನಾಗಿಯೂ ಸಕಲ ಸತ್ಕ್ರಿಯೆಗಳನ್ನು ಮಾಡುವದಕ್ಕೆ ಸಿದ್ಧನಾಗಿಯೂ ಇರುವನು. (2 ತಿಮೊಥೆಯ 2:21)
ಇಂದು ನಾವು ಮಾಡುತ್ತಿರುವುದೇ ನಿತ್ಯತ್ವಕ್ಕೆ ಮುಖ್ಯವಾದದ್ದು. ನಾವು ಈಗ ಬಿತ್ತುವ ನಂಬಿಕೆಯ ಬೀಜಗಳೇ ದೇವರ ರಾಜ್ಯದಲ್ಲಿ ಪ್ರಭಾವ, ಅಧಿಕಾರ ಮತ್ತು ಸಂತೋಷವಾಗಿ ಬೆಳೆಯುತ್ತವೆ.
ಒಂದು ಸರಳ ಪ್ರಶ್ನೆ
ನಿಮ್ಮಲ್ಲಿರುವ ಮೊಹರಿ ಯಾವುದು?
ದೇವರು ನಿಮ್ಮ ಕೈಯಲ್ಲಿ ಯಾವುದನ್ನು ಇಟ್ಟಿದ್ದಾನೆ - ಅದನ್ನು ಚೆನ್ನಾಗಿ ಬಳಸಿಕೊಳ್ಳಿ. ನೀವು ಸಣ್ಣ ಸಣ್ಣ ವಿಷಯಗಳಲ್ಲಿ ನಂಬಿಗಸ್ತರಾದಾಗ ದೇವರು ನಿಮಗೆ ಇನ್ನೂ ಹೆಚ್ಚಿನದನ್ನು ಕೊಡಲು ನಿಮ್ಮನ್ನು ನಂಬುತ್ತಾನೆ.
ಪ್ರಾರ್ಥನೆಗಳು
ತಂದೆಯೇ, ನೀವು ನಮಗೆ ನೀಡಿರುವ ಮೊಹರಿಗಳ ವಿಷಯದಲ್ಲಿ ನಂಬಿಗಸ್ತನಾದ ಮೇಲ್ವಿಚಾರಕರಾಗಿರುವಂತೆ ನಮಗೆ ಬಲವನ್ನು ಅನುಗ್ರಹಿಸು. ನಮ್ಮ ಕೈಗಳು ಶ್ರದ್ಧೆಯಿಂದ ಕೆಲಸ ಮಾಡಲಿ, ನಮ್ಮ ಹೃದಯಗಳು ಉತ್ಸಾಹದಿಂದ ಸೇವೆ ಸಲ್ಲಿಸಲಿ ಮತ್ತು ನಮ್ಮ ಜೀವನವು ನಿಮ್ಮ ಶ್ರೇಷ್ಠತೆಯನ್ನು ಪ್ರತಿಬಿಂಬಿಸಲಿ. ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ದೇವರ ಆಲಯದಲ್ಲಿರುವ ಸ್ತಂಭಗಳು● ಶ್ರೇಷ್ಠತೆಯನ್ನು ಸಾಧಿಸುವುದು ಹೇಗೆ?
● ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?
● ದಿನ 07 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಮನಸ್ಸನ್ನು ಶಿಸ್ತುಗೊಳಿಸಿ
● ಆರಾಧನೆಯನ್ನು ಜೀವನಶೈಲಿಯನ್ನಾಗಿ ಮಾಡಿಕೊಳ್ಳುವುದು.
● ಮಧ್ಯಸ್ಥಿಕೆಯ ಕುರಿತ ಪ್ರವಾದನಾ ಪಾಠ - 2
ಅನಿಸಿಕೆಗಳು
