english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಸಭೆಯ ಎತ್ತಲ್ಪಡುವಿಕೆ ( ರಾಪ್ಚರ್) ಯಾವಾಗ ಸಂಭವಿಸುತ್ತದೆ?
ಅನುದಿನದ ಮನ್ನಾ

ಸಭೆಯ ಎತ್ತಲ್ಪಡುವಿಕೆ ( ರಾಪ್ಚರ್) ಯಾವಾಗ ಸಂಭವಿಸುತ್ತದೆ?

Saturday, 31st of January 2026
2 1 64
Categories : ಎತ್ತಲ್ಪಡುವಿಕೆ (Rapture)
ಅನೇಕ ಜನರು " ಸಭೆಯ ಎತ್ತಲ್ಪಡುವಿಕೆ ಯಾವಾಗ ಸಂಭವಿಸುತ್ತದೆ?" ಎಂದು ಕೇಳುತ್ತಿರುತ್ತಾರೆ. ಸತ್ಯವೇದದ 

ಪ್ರಾಮಾಣಿಕ ಉತ್ತರವೆಂದರೆ: ನಮಗೆ ಅದರ ನಿಖರವಾದ ದಿನ ಅಥವಾ ಸಮಯ ತಿಳಿದಿಲ್ಲ

ಕರ್ತನಾದ ಯೇಸುವೇ ಸ್ವತಃ ಇದನ್ನು ಸ್ಪಷ್ಟಪಡಿಸಿದ್ದಾನೆ: "ಆದರೆ ಆ ದಿನವಾಗಲೀ ಅಥವಾ ಗಳಿಗೆಯಾಗಲಿ ತಂದೆಗೇ ಹೊರತು ಯಾರಿಗೂ ತಿಳಿದಿಲ್ಲ, ಪರಲೋಕದ ದೇವದೂತರಿಗೂ ತಿಳಿದಿಲ್ಲ, ಮಗನಿಗೂ ತಿಳಿದಿಲ್ಲ.." (ಮಾರ್ಕ್ 13:32, ESV)

ದಿನಾಂಕವನ್ನು ನಿಗದಿಪಡಿಸುವ ಅಥವಾ ವಿಶೇಷ ಜ್ಞಾನವನ್ನು ಪ್ರತಿಪಾದಿಸುವ ಯಾರಾದರೂ ಇದ್ದರೆ ಅವರು ದೇವರವಾಕ್ಯವನ್ನು ಅನುಮತಿಸುವದನ್ನು ಮೀರಿ ಹೋಗುತ್ತಿದ್ದಾರೆ ಎಂದು ನಾನು ನಿಮಗೆ ಗೌರವದಿಂದ ಎಚ್ಚರಿಸಲು ಬಯಸುತ್ತೇನೆ. 
ದೇವರು ನಿಖರವಾದ ಸಮಯವನ್ನು ಮರೆಮಾಡಬೇಕೆಂಬುದನ್ನೇ ಆಯ್ಕೆ ಕೊಂಡಿದ್ದಾನೆ, ಆದ್ದರಿಂದ ಆತನ ಜನರು ತಮಗೆ ಬೇಕಂದ ಹಾಗೆ ಬದುಕದೆ, ನಿರಂತರ ಸಿದ್ಧತೆಯಲ್ಲಿ ಬದುಕುತ್ತಾರೆ.


ಎತ್ತಲ್ಪಡುವಿಕೆ ಆಗುವುದಂತೂ ಖಚಿತ 
ಸಮಯ ತಿಳಿದಿಲ್ಲವಾದರೂ, ಎತ್ತಲ್ಪಡುವಿಕೆ ಆಗುವುದರಲ್ಲಿ ಸಂದೇಹವಿಲ್ಲ. ಯೇಸು ತನ್ನ ಜನರಿಗಾಗಿ ಇದ್ದಕ್ಕಿದ್ದಂತೆ ಹಿಂತಿರುಗಿ 

ಬರುತ್ತಾನೆ ಎಂದು ಬೈಬಲ್ ಪದೇ ಪದೇ ಬೋದಿಸುತ್ತದೆ. 
"ಅದುದರಿಂದ ನೀವು ಸಹ ಸಿದ್ಧವಾಗಿರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ”  ಎಂದು ಕರ್ತನಾದ ಯೇಸು ಎಚ್ಚರಿಸಿದನು(ಲೂಕ 12:40, )

ಇದರರ್ಥ ಕ್ರಿಸ್ತನ ಮರಳುವಿಕೆ ಮಾನವ ಕ್ಯಾಲೆಂಡರ್‌ಗಳಿಗೆ ಅಥವಾ ನಿರೀಕ್ಷೆಗಳಿಗೆ ಹೊಂದಿಕೆಯಾಗುವುದಿಲ್ಲ. ಇದು
 ದೇವರವಾಕ್ಯದಲ್ಲಿ ಹೇಳಲ್ಪಟ್ಟ ದೇವರ ಹಿಂದಿನ ಹಠಾತ್ ಕ್ರಿಯೆಗಳಂತೆ ಕೆಲಸ, ಪ್ರಯಾಣ, ದಿನಚರಿಯಂತಹ ಸಾಮಾನ್ಯ ಜೀವನವನ್ನು ಅಡ್ಡಿಪಡಿಸುತ್ತದೆ.

ಸಮಯವನ್ನು ಸೂಚಿಸುವ ಗುರುತುಗಳಿವೆ
ನಮಗೆ ದಿನವಾಗಲೀ ಸಮಯವಾಗಲೀ ತಿಳಿದಿಲ್ಲವಾದರೂ, ಆ ಸಮಯವನ್ನು ಗುರುತಿಸುವುದಕ್ಕೆ ನಮಗೆ ಸಹಾಯ ಮಾಡಲು ಯೇಸು ಕೆಲವು ಗುರುತನ್ನು ನೀಡಿದನು.

ಆತನು ಹೇಳಿದ್ದೇನೆಂದರೆ
"ಇದಲ್ಲದೆ ಯುದ್ಧಗಳಾಗುವುದನ್ನೂ ಯುದ್ಧಗಳಾಗುವ ಸೂಚನೆಯ ಸುದ್ದಿಗಳನ್ನೂ ನೀವು ಕೇಳಬಹುದು. ಕಳವಳಪಡದಂತೆ ನೋಡಿಕೊಳ್ಳಿರಿ; ಏಕೆಂದರೆ ಹೀಗಾಗುವುದು ಅಗತ್ಯ. ಆದರೂ ಇದು ಇನ್ನೂ ಅಂತ್ಯಕಾಲವಲ್ಲ.  ಹೀಗಿರಲಾಗಿ ಜನರಿಗೆ ವಿರುದ್ಧವಾಗಿ ಜನರು, ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಅಲ್ಲಲ್ಲಿ ಭೂಕಂಪಗಳು ಆಗುವವು" (ಮತ್ತಾಯ 24:6–7)

ನಾವು ಇಂದಿನ ಜಗತ್ತನ್ನು ನೋಡಿದಾಗ - ಜಾಗತಿಕ ಸಂಘರ್ಷಗಳು, ಅಸ್ಥಿರತೆ, ನೈಸರ್ಗಿಕ ವಿಕೋಪಗಳು - ಈ ಚಿಹ್ನೆಗಳೆಲ್ಲ ಹೆಚ್ಚಾಗುತ್ತಿರುವುದನ್ನು ನಾವು ಸ್ಪಷ್ಟವಾಗಿ ನೋಡಬಹುದು. ಈ ಚಿಹ್ನೆಗಳು ನಮಗೆ ದಿನಾಂಕವನ್ನು ನೀಡುವುದಿಲ್ಲ, ಆದರೆ ನಾವು ಎಚ್ಚರವಾಗಿರಬೇಕೆಂದು ಅವು ನಮಗೆ ಹೇಳುತ್ತವೆ.

ದೇವರ ಪ್ರವಾದನಾ ಕ್ಯಾಲೆಂಡರ್ 
ದೇವರು ನಿಗದಿತ ಸಮಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಾನೆ ಎಂಬುದನ್ನು ಬೈಬಲ್ ಪ್ರಕಟಿಸುತ್ತದೆ.

 “‘ಯೆಹೋವನಿಂದ ನೇಮಕವಾದ ಹಬ್ಬದ ಕಾಲಗಳು ಇವೇ; ಈ ಕಾಲಗಳಲ್ಲಿ ದೇವಾರಾಧನೆಗಾಗಿ ಸಭೆಸೇರಬೇಕು. ನೇಮಕವಾದ ದಿನಗಳಲ್ಲಿ ಇವುಗಳನ್ನು ಪ್ರಕಟಪಡಿಸಬೇಕು.(ಯಾಜಕಕಾಂಡ 23:4)

 ಕರ್ತನ ಏಳು ಹಬ್ಬಗಳಿವೆ: 
  1. ಪಸ್ಕ ಹಬ್ಬ
  2. ಹುಳಿಯಿಲ್ಲದ ರೊಟ್ಟಿ ಹಬ್ಬ
  3. ಪ್ರಥಮ ಫಲ ಅರ್ಪಿಸುವ ಹಬ್ಬ
  4. ಪಂಚಶತ್ತಾಮ ಹಬ್ಬ
  5. ತುತ್ತೂರಿ ಹಬ್ಬ
  6. ಪ್ರಾಯಶ್ಚಿತ್ತದ ದಿನಗಳು 
  7. ಗುಡಾರದ ಹಬ್ಬ
ಮೊದಲ ನಾಲ್ಕು ಹಬ್ಬಗಳು ನಿಖರವಾಗಿ ದೇವರ ಸಮಯಕ್ಕೆ ನೆರವೇರಿದವು:
  • ಯೇಸು ಪಸ್ಕದಂದು ಸತ್ತನು 
  • ಹುಳಿಯಿಲ್ಲದ ರೊಟ್ಟಿಯ ಸಮಯದಲ್ಲಿ ಆತನನ್ನು ಹೂಣಿಟ್ಟರು
  • ಆತನು ಪ್ರಥಮ ಫಲಗಳ ಅರ್ಪಿಸುವ ದಿನದಲ್ಲಿ ಪುನಃರುತಾನ ಗೊಂಡನು. 
  • ಪವಿತ್ರಾತ್ಮನು ಪಂಚಶತ್ತಾಮ ದಿನದಲ್ಲಿ ಬಂದನು.

ಇದು ದೇವರ ಸಮಯವು ನಿಖರ ಮತ್ತು ಉದ್ದೇಶಪೂರ್ವಕವಾಗಿದೆ ಎಂದು ತೋರಿಸುತ್ತದೆ.

ತುತ್ತೂರಿಹಬ್ಬ ಮತ್ತು ಎತ್ತಲ್ಪಡುವಿಕೆ.
ಮೂರು ಹಬ್ಬಗಳು ಇನ್ನೂ ನೆರವೇರಿಲ್ಲ. ಇವುಗಳಲ್ಲಿ ಮೊದಲನೆಯದು ತುತ್ತೂರಿಗಳ ಹಬ್ಬ, ಇದನ್ನು ಶೋಫರ್ 

ಊದುವಿಕೆಯಿಂದ ಗುರುತಿಸಲಾಗಿದೆ. 

" ನೋಡಿರಿ! ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ, ನಾವೆಲ್ಲರೂ ಸಾಯುವುದಿಲ್ಲ, ಮಾರ್ಪಡುವೆವು.  ಕಡೆ ತುತ್ತೂರಿಯ ಧ್ವನಿಯು ಮೊಳಗುವಲ್ಲಿ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರೊಳಗಾಗಿ ನಾವೆಲ್ಲರೂ ಮಾರ್ಪಡುವೆವು. ಹೌದು, ತುತ್ತೂರಿಯು ಮೊಳಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ರೂಪಾಂತರ ಹೊಂದುವೆವು."ಎಂದು ಅಪೊಸ್ತಲ ಪೌಲನು ಬರೆಯುತ್ತಾನೆ. (1 ಕೊರಿಂಥ 15:51-52) 

ಪ್ರತಿ ವರ್ಷ, ತುತ್ತೂರಿಗಳ ಹಬ್ಬವು ಸಮೀಪಿಸುತ್ತಿದ್ದಂತೆ, ಅದನ್ನು ಆಚರಿಸುವವರಲ್ಲಿ ಈ ನಿರೀಕ್ಷೆ ಬೆಳೆಯುತ್ತದೆ. ಎತ್ತಲ್ಪಡುವಿಕೆಯ ನಿಖರವಾದ ಸಮಯ ನಮಗೆ ತಿಳಿದಿಲ್ಲದಿರಬಹುದು, ಆದರೆ ಒಂದು ವಿಷಯ ಅಂತೂ ಖಚಿತ: ಅದು ತುತ್ತೂರಿಗಳ ಹಬ್ಬದ ದಿನದಂದು ಸಂಭವಿಸುತ್ತದೆ.ಜಾಗರೂಕರಾಗಿರುವುದು ಮತ್ತು ಸಿದ್ಧರಾಗಿರುವುದು ನಮ್ಮ ಕರ್ತವ್ಯ.

Bible Reading: Exodus 36-38
ಪ್ರಾರ್ಥನೆಗಳು
[ಪ್ರತಿಯೊಂದು ಪ್ರಾರ್ಥನಾ ಕ್ಷಿಪಣಿಯನ್ನು ನಿಮ್ಮ ಹೃದಯದಿಂದ ಬರುವವರೆಗೂ ಪುನರಾವರ್ತಿಸಿ. ನಂತರ ಮಾತ್ರವೇ ಮುಂದಿನ ಪ್ರಾರ್ಥನಾ ಕ್ಷಿಪಣಿಗೆ ತೆರಳಿ. ಅದನ್ನು ಪುನರಾವರ್ತಿಸುತ್ತಾ, ಅದನ್ನು  ನಿಮ್ಮ ವೈಯಕ್ತಿಕ ಪ್ರಾರ್ಥನೆ ಯನ್ನಾಗಿಸಿ, ಪ್ರತಿ ಪ್ರಾರ್ಥನಾ ಅಂಶವನ್ನು ಕನಿಷ್ಠ 1 ನಿಮಿಷವಾದರೂ ಪ್ರಾರ್ಥಿಸಿ.] 

1. ತಂದೆಯೇ, ಯಾರೊಬ್ಬರೂ ನಾಶವಾಗುವುದು ನಿಮ್ಮ ಇಚ್ಛೆಯಲ್ಲ ಅದಕ್ಕಾಗಿ ಯೇಸುನಾಮದಲ್ಲಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ. 

2. ತಂದೆಯೇ, ಯೇಸುವಿನ ಹೆಸರಿನಲ್ಲಿ ... (ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ) ನಿಮ್ಮ ಜ್ಞಾನವನ್ನು ತಿಳುವಳಿಕೆಯನ್ನು ಮತ್ತು ಪ್ರಕಟಣೆ ಹೊಂದುವ ಆತ್ಮವನ್ನು ದಯಪಾಲಿಸಿ. 

3. (ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ) ಕರ್ತನನ್ನು ಸ್ವೀಕರಿಸಿ ಕೊಳ್ಳಲು  ಮನಸ್ಸನ್ನು ಆವರಿಸಿ ಅಡ್ಡಿಪಡಿಸುವ ಶತ್ರುವಿನ ಪ್ರತಿಯೊದು ಕೋಟೆಯು ಯೇಸುನಾಮದಲ್ಲಿ ಕೆಡವಲ್ಪಡಲಿ.

 4. ಕರ್ತನೇ, ನಿಮ್ಮ ಬೆಳಕು (ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ) ಮೇಲೆ ಬೆಳಗಲಿ ಅವರನ್ನು ರಕ್ಷಿಸು ಓ ಕರ್ತನೇ.

Join our WhatsApp Channel


Most Read
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ಕ್ರಿಸ್ತನಲ್ಲಿ ನಿಮ್ಮ ದೈವಿಕ ಗಮ್ಯಸ್ಥಾನವನ್ನು ಪ್ರವೇಶಿಸುವುದು
● ಮಾತಿನಲ್ಲಿರುವ ಶಕ್ತಿ
● ನಿಮ್ಮ ಸಂಪರ್ಕವನ್ನು ಕಳೆದುಕೊಳ್ಳಬೇಡಿರಿ
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ
● ನಿಮ್ಮ ರಕ್ಷಣೆಯ ದಿನವನ್ನು ಸಂಭ್ರಮಿಸಿ.
● ಇದು ಕೇವಲ ಸಾಂದರ್ಭಿಕವಾಗಿ ಹೇಳುವ ಶುಭಾಶಯವಲ್ಲ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್