ಅನುದಿನದ ಮನ್ನಾ
ಆತ್ಮೀಕ ನಿಯಮ : ಸಹವಾಸ ನಿಯಮ
Saturday, 28th of September 2024
4
1
371
Categories :
ಸಹವಾಸ (Association)
ನಿಮ್ಮ ಜೀವತ ಎಣಿಕೆಯಲ್ಲಿ ಮೌಲ್ಯಯುತವಾಗಿರಬೇಕೆಂದು ನೀವು ಬಯಸುವುದಾದರೆ ನೀವು ಆತ್ಮಿಕ ನಿಯಮಗಳಲ್ಲಿ ಒಂದಾದ ಸಹವಾಸ ನಿಯಮ ಎಂಬ ನಿಯಮವನ್ನು ಗುರುತಿಸಿಕೊಳ್ಳಲೇಬೇಕು. ಈ ಒಂದು ನಿಯಮಗಳು ಎಲ್ಲರಲ್ಲಿಯೂ ಕಾರ್ಯ ಮಾಡಿದಂತದ್ದಾಗಿದೆ. ಈ ನಿಯಮವನ್ನು ಅಳವಡಿಸಿಕೊಂಡಾಗ ನಿಮ್ಮನ್ನು ಅದು ಶ್ರೇಷ್ಠತೆ ಮತ್ತು ಫಲಪ್ರಧತೆ ಕ್ಷೇತ್ರಗಳಲ್ಲಿ ಇರುವಂತೆ ಮಾಡುತ್ತದೆ ಎಂದು ಹೇಳಬೇಕಾದ ಅವಶ್ಯಕತೆಯೇ ಇಲ್ಲ.
"ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು."(ಜ್ಞಾನೋಕ್ತಿಗಳು 13:20)
ಈ ಮೇಲಿನ ಸತ್ಯವೇದ ವಾಕ್ಯವು ಸಹವಾಸದ ನಿಯಮವನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಸರಳವಾಗಿ ಹೇಳಬೇಕೆಂದರೆ ನೀವು ನಿಮಗಿಂತ ಬುದ್ಧಿವಂತರಾದ ಜನರೊಂದಿಗೆ ಸಹವಾಸದಲ್ಲಿ ಇರುವಾಗ ಅವರ ಜ್ಞಾನವು ನಿಮ್ಮನ್ನು ಹರಿತ ಮಾಡುತ್ತದೆ. ನಿಮ್ಮ ಜೀವಿತವನ್ನು ಕಟ್ಟುತ್ತದೆ. ಮತ್ತೊಂದೆಡೆ ನೀವು ಮೂರ್ಖರ ಸಹವಾಸದಲ್ಲಿರುವುದನ್ನು ಆರಿಸಿಕೊಂಡಾಗ ನಿಮ್ಮ ಜೀವಿತ ಛಿದ್ರ ಛಿದ್ರವಾಗಿ ನಾಶವಾಗುತ್ತದೆ.
"ಮೋಸ ಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ." ಎಂದು ಸತ್ಯವೇದ ನಮ್ಮನ್ನು ಎಚ್ಚರಿಸುತ್ತದೆ (1 ಕೊರಿಂಥದವರಿಗೆ 15:33)
"ಇದಲ್ಲದೆ ಕುಗ್ಗಿದವರೂ ಸಾಲಗಾರರೂ ಮನನೊಂದವರೂ ಆಗಿರುವ ಸರ್ವಜನರೂ ಬಂದು ಅವನನ್ನು ಆಶ್ರಯಿಸಿಕೊಳ್ಳಲು ಅವನು ಸುಮಾರು ನಾನೂರು ಜನರಿಗೆ ನಾಯಕನಾದನು." ಎಂದು ದಾವೀದನ ಸಮಯವನ್ನು ವಿವರಿಸುತ್ತದೆ (1 ಸಮುವೇಲನು 22:2)
ಈ ಮೂರು ಮುಖ್ಯ" ಸ "ಗಳನ್ನು ಗಮನಿಸಿ.
1) ಸಂಕಟ
2) ಸಾಲ
3) ಸಂತೃಪ್ತಿರಾಹಿತ್ಯ
ಲೋಕಾರೂಡಿಯಾಗಿ ಹೇಳುವುದಾದರೆ ಯಾವುದೇ ವ್ಯಕ್ತಿಯು ಈ ಮೂರು ವಿಚಾರಗಳನ್ನು ತನ್ನ ಜೀವಿತದಲ್ಲಿ ಹೊಂದಿದ್ದರೆ ಆ ವ್ಯಕ್ತಿಯ ಜೀವಿತ ಮುಗಿದು ಹೋದಂತೆಯೇ. ಯಾವೊಬ್ಬ ವ್ಯಕ್ತಿಯ ಜೀವಿತದಲ್ಲಿ ಈ ಮೂರು ವಿಚಾರಗಳು ಇರುತ್ತವೆಯೋ ಆ ವ್ಯಕ್ತಿಯು ಏಳಿಗೆ ಹೊಂದಲು ಸಾಧ್ಯವಿಲ್ಲ. ಆದರೂ ಅಂತಹ ವ್ಯಕ್ತಿಗಳು ಅಭಿಷಿಕ್ತ ಮನುಷ್ಯನಾದ ದಾವಿದನೊಂದಿಗೆ ಸಹವಾಸವನ್ನು ಹೊಂದಿಕೊಂಡಾಗ ಅವರ ಜೀವಿತದಲ್ಲಿ ಎಲ್ಲವೂ ಬದಲಾಯಿತು. ಅವರನ್ನು 1 ಪೂ. ಕಾ. ವೃ 12:8 ವಿವರಿಸಿದ ರೀತಿಯ ಪುರುಷರನ್ನಾಗಿ ಮಾಡಿತು. ಅವರುಗಳು
"ರಣವೀರರೂ ಯುದ್ಧನಿಪುಣರೂ ಗುರಾಣಿಬರ್ಜಿಗಳಲ್ಲಿ ಪ್ರವೀಣರೂ ಸಿಂಹಮುಖರೂ ಬೆಟ್ಟದ ಜಿಂಕೆಯಂತೆ ಪಾದತ್ವರಿತರೂ ಆಗಿದ್ದರು.."
ಈ ಒಂದು ನಿಯಮವು ಯಾರಲ್ಲಿಯಾದರೂ ಕಾರ್ಯ ಮಾಡುತ್ತದೆ. ದೈವೀಕಾ ಹಾಗೂ ಲೋಕದ ಮಾರ್ಗಗಳಲ್ಲಿ ನಮಗಿಂತ ಹೆಚ್ಚು ಪ್ರಭುದ್ಧರಾಗಿರುವ ಜನರೊಂದಿಗೆ ನಾವು ಸೇರಿದರೆ ಅದು ನಮ್ಮನ್ನು ಹೆಚ್ಚಿಸಿ ಆಶೀರ್ವದಿಸಲ್ಪಡುವಂತೆ ಮಾಡುತ್ತದೆ.
"ಪೇತ್ರ ಯೋಹಾನರು ಧೈರ್ಯದಿಂದ ಮಾತಾಡುವದನ್ನು ಆ ಸಭಿಕರು ನೋಡಿ ಅವರು ಶಾಸ್ತ್ರಾಭ್ಯಾಸ ಮಾಡದ ಸಾಧಾರಣರೆಂದು ತಿಳಿದು ಆಶ್ಚರ್ಯಪಟ್ಟರು. ಇವರು ಯೇಸುವಿನ ಸಂಗಡ ಇದ್ದವರೆಂದು ಗುರುತು ಹಿಡಿದರು; ಮತ್ತು ಕ್ಷೇಮಹೊಂದಿದ ಆ ಮನುಷ್ಯನು ಅವರ ಕೂಡ ನಿಂತಿರುವದನ್ನು ನೋಡಿ ಪ್ರತಿಯಾಗಿ ಏನೂ ಮಾತಾಡಲಾರದೆ ಇದ್ದರು."(ಅಪೊಸ್ತಲರ ಕೃತ್ಯಗಳು 4:13-14)
ಪುನರುತ್ಥಾನಗೊಂಡ ಕರ್ತನನ್ನು ಎದುರುಗೊಂಡ ನಂತರ ಹಾಗೂ ಮೇಲಂತಸ್ತಿನಲ್ಲಿ ಪವಿತ್ರಾತ್ಮನನ್ನು ಸ್ವೀಕರಿಸಿ ಕೊಂಡ ಮೇಲೆ ಯೇಸುವಿನ ಶಿಷ್ಯರು ತಮಗೆ ತಿಳಿದ ಲೋಕವನ್ನೇ ಬುಡಮೇಲು ಮಾಡುವಂತವರರಾದರು. ಅವರ ಸಮಕಾಲೀನರಾಗಿದ್ದವರಲ್ಲಿ ಬಲಾಡ್ಯರೆಂದು ಮತ್ತು ಬುದ್ಧಿವಂತರೆಂದು ಕರೆಯಲ್ಪಡುತ್ತಿದ್ದವರು ಇವರನ್ನು ನೋಡಿ ಆಘಾತಗೊಂಡು ಆಶ್ಚರ್ಯ ಚಕಿತರಾದರು. ಆದರೆ ಯೇಸುವಿನೊಂದಿಗೆ ಇದ್ದ ಸಹವಾಸದಿಂದಲೇ ಇದೆಲ್ಲವೂ ಸಾಧ್ಯವಾಯಿತು ಎಂಬ ಸತ್ಯವನ್ನು ಶೀಘ್ರವಾಗಿ ಅವರು ಅರಿತುಕೊಂಡರು. ಆ ಕಾಲದ ಫರಿಸಾಯರು ಮತ್ತು ಸದ್ದುಕಾಯರು ಸಹವಾಸದ ಈ ನಿಯಮವನ್ನು ಅರ್ಥ ಮಾಡಿಕೊಂಡರು. ಅದರಂತೆ ನಾವು ಸಹ ಈ ನಿಯಮವನ್ನು ಅಳವಡಿಸಿಕೊಳ್ಳಲು ಇದುವೇ ಸಕಾಲವಾಗಿದೆ.
ಯೇಸುವಿನೊಂದಿಗಿದ್ದ ಒಡಂಬಡಿಕೆಯ ಸಂಬಂಧದಿಂದ ಸಾಮಾನ್ಯರಾಗಿದ್ದ ಶಿಷ್ಯರು ಇಡಿ ಲೋಕವನ್ನೇ ಬದಲಾಯಿಸುವಂತವರಾದರೆ ನೀವು ಮತ್ತು ನಾನು ಕೂಡ ಅದನ್ನು ಮಾಡಬಹುದಾಗಿದೆ.
ಜ್ಞಾನಿಗಳು ಮತ್ತು ಯಶಸ್ವಿಯಾದ ಜನರೊಂದಿಗೆ ಪಾಲುಗಾರರಾಗುವ ಮೂಲಕ ನಾವು ಸಹ ಯಶಸ್ಸು, ಅಭಿಷೇಕ ಹಾಗೂ ನಮ್ಮ ಪ್ರಾರ್ಥನಾ ಜೀವಿತದ ಮಟ್ಟ ಇತ್ಯಾದಿಗಳನ್ನು ತ್ವರಿತ ಗೊಳಿಸಬಹುದು
ಅರಿಕೆಗಳು
ನಾನು ಜ್ಞಾನಿಗಳ ಸಹವಾಸದಿಂದ ಜ್ಞಾನಿಯಾಗುತ್ತೇನೆ.ಪ್ರಭುದ್ಧ ಹಾಗೂ ಆತ್ಮಿಕ ಜನರೊಂದಿಗೆ ಸಂಪರ್ಕ ಹೊಂದುವಂತೆ
ನನ್ನ ಕರ್ತನು ನನಗೆ ಸಹಾಯ ಮಾಡುವನು. ಯೇಸು ನಾಮದಲ್ಲಿ ಆತನ ಪ್ರಸನ್ನತೆಯೊಂದಿಗೆ ಸಂಪರ್ಕದಲ್ಲಿರುವ ಅಭಿಷೇಕವನ್ನು ನಾನು ಹೊಂದಿದ್ದೇನೆ. ಆಮೆನ್.
ನನ್ನ ಕರ್ತನು ನನಗೆ ಸಹಾಯ ಮಾಡುವನು. ಯೇಸು ನಾಮದಲ್ಲಿ ಆತನ ಪ್ರಸನ್ನತೆಯೊಂದಿಗೆ ಸಂಪರ್ಕದಲ್ಲಿರುವ ಅಭಿಷೇಕವನ್ನು ನಾನು ಹೊಂದಿದ್ದೇನೆ. ಆಮೆನ್.
Join our WhatsApp Channel
Most Read
● ಕಳೆದು ಹೋದ ರಹಸ್ಯ● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ಆತನಿಗೆ ಯಾವುದೇ ಮಿತಿಯಿಲ್ಲ.
● ಕಟ್ಟಬೇಕಾದ ಬೆಲೆ
● ಮಾತಿನಲ್ಲಿರುವ ಶಕ್ತಿ
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?
● ಉದ್ಯೋಗದ ಸ್ಥಳದಲ್ಲಿ ಮಿಂಚುವ ತಾರೆಯಾಗುವುದು-ll
ಅನಿಸಿಕೆಗಳು