ಅನುದಿನದ ಮನ್ನಾ
4
4
54
ಇತರರಿಗೆ ಕೃಪೆಯನ್ನು ವಿಸ್ತರಿಸಿ
Monday, 2nd of February 2026
Categories :
ಅನುಗ್ರಹ (Grace)
ಕರ್ತನು ನಮಗೆ ಮೇಲಿಂದ ಮೇಲೆ ಅದ್ಭುತವಾದ ಕೃಪೆಯನ್ನು ತೋರಿಸಿದ್ದಾನೆ. ನಾವು ಅದನ್ನು ಗಳಿಸಲಿಲ್ಲ, ಮತ್ತು ನಾವು ಅದಕ್ಕೆ ಅರ್ಹರಾಗಿರಲಿಲ್ಲ - ಆದರೂ ಆತನು ಅದನ್ನು ನಮಗೆ ಉಚಿತವಾಗಿ ಅದನ್ನು ಅನುಗ್ರಹಿಸಿದನು. ನಾವು ದೇವರಿಂದ ಅಧಿಕವಾಗಿ ಕೃಪೆಯನ್ನು ಪಡೆದಿರುವುದರಿಂದ, ಈಗ ಆತನು ಅದೇ ಕೃಪೆಯನ್ನು ನಾವು ಇತರರಿಗೂ ವಿಸ್ತರಿಸಬೇಕೆಂದು ನಮ್ಮನ್ನು ಕರೆಯುತ್ತಾನೆ.
ಕೃಪೆಯು ಕೇವಲ ಆತ್ಮೀಕ ಕಲ್ಪನೆಯಲ್ಲ. ಅದು ನಾವು ಪ್ರತಿದಿನ ನಮ್ಮ ಮಾತುಗಳಲ್ಲಿ, ನಮ್ಮ ಪ್ರತಿಕ್ರಿಯೆಗಳಲ್ಲಿ ಮತ್ತು ನಮ್ಮ ಕ್ರಿಯೆಗಳಲ್ಲಿ ಜೀವಿಸಬೇಕಾದ ಸಂಗತಿ.
1. ಕೃಪೆಯನ್ನು ಹೊಂದಿರುವ ಮಾತುಗಳು
ನಮ್ಮ ಮಾತುಗಳು ಶಕ್ತಿಯುತಯಾದವುಗಳು. ಅವು ಹೃದಯಗಳನ್ನು ಗುಣಪಡಿಸಬಹುದು ಅಥವಾ ಆಳವಾಗಿ ಗಾಯಗೊಳಿಸಬಲ್ಲವು. ಅದಕ್ಕಾಗಿಯೇ ಅಪೊಸ್ತಲ ಪೌಲನು ನಮಗೆ ಈ ಸೂಚನೆಯನ್ನು ನೀಡುತ್ತಾನೆ:
"ನಿಮ್ಮ ಸಂಭಾಷಣೆಯು ಯಾವಾಗಲೂ ಕೃಪೆಯುಳ್ಳದ್ದಾಗಿಯೂ, ಉಪ್ಪಿನಂತೆ ರುಚಿಕರವಾಗಿಯೂ ಇರಲಿ. ಹೀಗೆ ನೀವು ಪ್ರತಿಯೊಬ್ಬರಿಗೂ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು ಎಂಬುದನ್ನು ತಿಳಿದುಕೊಳ್ಳುವಿರಿ."(ಕೊಲೊಸ್ಸೆಯವರಿಗೆ 4:6)
“ಕೃಪೆಯಿಂದ ತುಂಬಿರುವುದು” ಎಂದರೆ ಸಂಭಾಷಣೆಗಳು ಕಷ್ಟಕರವಾಗಿದ್ದರೂ ಸಹ ನಮ್ಮ ಮಾತುಗಳು ದಯೆ, ಚಿಂತನಶೀಲ ಮತ್ತು ಸಹಾಯಕವಾಗಿರಬೇಕು . “ಉಪ್ಪಿನಂತೆ ರುಚಿಕರವಾಗಿರಲಿ ” ಎಂದರೆ ನಮ್ಮ ಮಾತುಗಳು ಜ್ಞಾನವನ್ನೂ ಮತ್ತು ಸತ್ಯವನ್ನು ಹೊಂದಿರಬೇಕೇ ವಿನಃ ಕಹಿ ಅಥವಾ ಕೋಪದಿಂದಲ್ಲ.
ಅಪೊಸ್ತಲ ಪೌಲನು ಇದನ್ನು ಮತ್ತಷ್ಟು ವಿವರಿಸುತ್ತಾ ಹೀಗೆ ಹೇಳುತ್ತಾನೆ:
"ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತು ಹೊರಡಬಾರದು. ಭಕ್ತಿಯನ್ನು ವೃದ್ಧಿ ಮಾಡುವಂತಹ ಸಮಯೋಚಿತವಾದ ಮಾತನ್ನು ಆಡಿದರೆ ಕೇಳುವವರಿಗೆ ಹಿತವಾಗಿ ತೋರುವುದು. ” (ಎಫೆಸ 4:29)
ನಮ್ಮ ದೈನಂದಿನ ಭಾಷೆಯು ಕೃಪೆಯನ್ನು ಪ್ರತಿಬಿಂಬಿಸುವಾಗ ನಮ್ಮ ಪ್ರಾರ್ಥನೆಗಳು ಹೆಚ್ಚು ಶಕ್ತಿಯುತವಾಗಿ ದೇವರ ಸಾನ್ನಿಧ್ಯಕ್ಕೆ ನಮ್ಮ ಸಂವೇದನೆ ಹೆಚ್ಚಾಗುತ್ತದೆ. ಕೃಪೆಯಿಂದ ತುಂಬಿದ ಬಾಯಿ ಕೃಪೆಯಿಂದ ತುಂಬಿದ ಹೃದಯವನ್ನು ಸೃಷ್ಟಿಸುತ್ತದೆ.
2. ನೀವು ನಿರಾಶೆಗೊಂಡಾಗ ಕ್ಷಮೆ.
ಜನರು ನಮ್ಮನ್ನು ಅನ್ಯಾಯವಾಗಿ ನಡೆಸಿಕೊಳ್ಳುವಂಥ ಕ್ಷಣಗಳನ್ನು ನಾವೆಲ್ಲರೂ ಎದುರಿಸುತ್ತೇವೆ. ಯಾರಾದರೂ ಕಠೋರವಾಗಿ ಮಾತನಾಡಬಹುದು, ಅಸಭ್ಯವಾಗಿ ವರ್ತಿಸಬಹುದು ಅಥವಾ ತಮ್ಮ ಹತಾಶೆಯನ್ನು ನಮ್ಮ ಮೇಲೆ ಹೊರಿಸಬಹುದು. ಸಾಮಾನ್ಯವಾಗಿ ನಮ್ಮ ನೈಸರ್ಗಿಕ ಪ್ರತಿಕ್ರಿಯೆಯು ಅದೇ ರೀತಿಯಲ್ಲಿ ಪ್ರತಿಕ್ರಿಯಿಸುವುದಾಗಿರುತ್ತದೆ. ಆದರೆ ಕೃಪೆಯು ಉನ್ನತ ಮಾರ್ಗವನ್ನು ಆಯ್ಕೆ ಮಾಡು ಎನ್ನುತ್ತದೆ.
ಬೈಬಲ್ ಹೇಳುತ್ತದೆ:
ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ, ಪರರ ದೋಷವನ್ನು ಲಕ್ಷಿಸದಿರುವುದು ಅವನಿಗೆ ಭೂಷಣ.(ಜ್ಞಾನೋಕ್ತಿ 19:11)
ಮನಸ್ಸಿಗಾದ ನೋವನ್ನು ನಿರ್ಲಕ್ಷಿಸುವುದು ಎಂದರೆ ನೋವೇ ಅಸ್ತಿತ್ವದಲ್ಲಿಲ್ಲ ಎಂದು ನಟಿಸುವುದು ಎಂದಲ್ಲ. ಇದರರ್ಥ ಸೇಡಿನ ಬದಲು ಶಾಂತಿಯನ್ನು ಆರಿಸಿಕೊಳ್ಳುವುದು ಎಂದರ್ಥ. ಕೋಪದಲ್ಲಿ ಪ್ರತಿಕ್ರಿಯಿಸುವ ಬದಲು ನೀವು ಶಾಂತವಾಗಿ ವರ್ತಿಸುವಾಗ, ದೇವರು ನಿಮಗೆ ಪ್ರತಿದಿನ ತೋರಿಸುವ ಅದೇ ಕೃಪೆ. ನೀವು ಇತರರಿಗೆ ಕೃಪೆಯನ್ನು ವಿಸ್ತರಿಸುತ್ತೀರಿ.
ಇದು ಕಷ್ಟಕರವಾಗಿದ್ದರೂ, ಈ ರೀತಿಯ ಕರುಣೆಯು ಆತ್ಮೀಕ ಪರಿಪಕ್ವತೆಯನ್ನು ಬೆಳೆಸುತ್ತದೆ ಮತ್ತು ಆಂತರಿಕ ಶಾಂತಿಯನ್ನು ತರುತ್ತದೆ.
3. ಪ್ರಸನ್ನತೆ ಮತ್ತು ಪ್ರೋತ್ಸಾಹದ ಮೂಲಕ ಕೃಪೆ
ಸರಳ ಕಾಳಜಿಯ ಕ್ರಿಯೆಗಳ ಮೂಲಕವೂ ಕೃಪೆಯನ್ನು ತೋರಿಸಲಾಗುತ್ತದೆ. ಒಂದು ಫೋನ್ ಕರೆ, ಸಂದೇಶ ಅಥವಾ ಭೇಟಿಯು ವಿಶೇಷವಾಗಿ ಜೀವನದ ಕಠಿಣ ಸಮಯಗಳಲ್ಲಿ ಬಹಳ ಸಾಂತ್ವನವನ್ನು ತರುತ್ತದೆ.
ಸತ್ಯವೇದ ನಮ್ಮನ್ನು ಪರಸ್ಪರ ಅನ್ಯೋನ್ಯತೆಯಲ್ಲಿ ನಡೆಯಲು ಪ್ರೋತ್ಸಾಹಿಸುತ್ತದೆ:
"ಸಂತೋಷಪಡುವವರೊಂದಿಗೆ ಆನಂದಿಸಿ; ದುಃಖಿಸುವವರೊಂದಿಗೆ ದುಃಖಿಸಿ." (ರೋಮನ್ನರು 12:15)
ಜನರು ಸಂತೋಷವಾಗಿರುವಾಗ ಅವರೊಂದಿಗೆ ಸಂಭ್ರಮಿಸಿ. ಅವರು ದುಃಖ ಪಡುವಾಗ ಅವರ ಜೊತೆಗೆ ನಿಲ್ಲಿ. ಅವರು ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಕೇಳಿ - ಮತ್ತು ಅದನ್ನು ಅರ್ಥೈಸಿಕೊಳ್ಳಿ. ದಯೆಯ ಸಣ್ಣ ಕಾರ್ಯಗಳು ಸಹ ಭಾರವಾದ ಹೃದಯಗಳನ್ನು ಎತ್ತಬಹುದು. ಈ ಭಾನುವಾರ, ಸಭೆ ಮುಗಿದ ಕೂಡಲೇ ಆವರಣದಿಂದ ಕಣ್ಮರೆಯಾಗಬೇಡಿ; ಜನರನ್ನು ಭೇಟಿ ಮಾಡಿ, ಆಗ ದೇವರ ಕೃಪೆಯನ್ನು ವಿಸ್ತರಿಸಲು ನೀವು ಅನೇಕ ಅವಕಾಶಗಳನ್ನು ಕಾಣಬಹುದು.
ಕೃಪೆಯನ್ನು ಹೆಚ್ಚಾಗಿ ದೊಡ್ಡ ಕ್ರಿಯೆಗಳ ಮೂಲಕ ಅಲ್ಲ, ಆದರೆ ಶಾಂತ ನಂಬಿಕೆಯ ಮೂಲಕ ತೋರಿಸಲಾಗುತ್ತದೆ. ತನ್ನ ಮಕ್ಕಳು ತನ್ನ ಕೃಪೆಯನ್ನು ಪ್ರತಿಬಿಂಬಿಸುವಾಗ ಕರ್ತನು ಸಂತೋಷಪಡುತ್ತಾನೆ.
ನಾವು ದಯೆಯಿಂದ ಮಾತನಾಡುವಾಗ, ಮುಕ್ತವಾಗಿ ಕ್ಷಮಿಸುವಾಗ ಮತ್ತು ನಿಜವಾಗಿಯೂ ಕಾಳಜಿ ವಹಿಸುವಾಗ, ನಾವು ಆತನ ಪ್ರೀತಿಯ ಜೀವಂತ ಉದಾಹರಣೆಗಳಾಗುತ್ತೇವೆ. ಸಣ್ಣ ಅಭಿವ್ಯಕ್ತಿಯನ್ನೂ ಎಂದಿಗೂ ಕಡಿಮೆ ಅಂದಾಜು ಮಾಡಬೇಡಿ.
ಒಂದು ಸೌಮ್ಯವಾದ ಮಾತು, ತಾಳ್ಮೆಯ ಪ್ರತಿಕ್ರಿಯೆ ಅಥವಾ ಕಾಳಜಿಯುಳ್ಳ ಉಪಸ್ಥಿತಿಯು ಜೀವನವನ್ನೇ ಬದಲಾಯಿಸಬಹುದು - ಮತ್ತು ಈ ಜಗತ್ತನ್ನು, ಒಂದೇ ಹೃದಯವುಳ್ಳವರನ್ನಾಗಿ ಮಾಡಬಹುದು.
Bible Reading: Leviticus 1- 4
ಪ್ರಾರ್ಥನೆಗಳು
ತಂದೆಯೇ, . ನಾನು ಅದಕ್ಕೆ ಯೋಗ್ಯನ್ನಾಗಿರದೇ ಇರುವಾಗಲೂ, ನೀನು ನನ್ನ ಮೇಲೆ ಇಷ್ಟೊಂದು ಸುಲಭವಾಗಿ ಸುರಿಸಿದ ನಿನ್ನ ಅದ್ಭುತ ಕೃಪೆಗೆ ನಾನು ಸ್ತೋತ್ರ ಸಲ್ಲಿಸುತ್ತೇನೆ. ಕರ್ತನೇ, ಈ ಕೃಪೆಯನ್ನು ಇತರರಿಗೂ ವಿಸ್ತರಿಸುವಂತೆ ನನಗೆ ಯೇಸುನಾಮದಲ್ಲಿ ಬಲ ನೀಡು.ಆಮೆನ್.
Join our WhatsApp Channel
Most Read
● AI ಎಂಬುದು ಕ್ರಿಸ್ತವಿರೋಧಿಯ ಆತ್ಮವೇ?● ರೂಪಾಂತರ ಹೊಂದಲು ಇರುವ ಸಾಮರ್ಥ್ಯ.
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಸ್ತ್ರೀ ಪುರುಷರು ಏಕೆ ಪತನಗೊಳ್ಳುವರು- 5
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -3
● ಕರ್ತನಿಗೆ ಮೊರೆಯಿಡಿರಿ.
ಅನಿಸಿಕೆಗಳು
