english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಉದಾರತೆಯ ಬಲೆ
ಅನುದಿನದ ಮನ್ನಾ

ಉದಾರತೆಯ ಬಲೆ

Sunday, 15th of February 2026
1 1 14
Categories : ಕೊಡುವ (Giving) ಬಿಡುಗಡೆ (Deliverance) ಹಣ (Money) ಹಣ ನಿರ್ವಹಣೆ ( Money Management)
ನಮ್ಮ ಚರ್ಚುಗಳು ಮತ್ತು ಸೇವೆಗಳಲ್ಲಿ, ಉದಾರತೆ, ಉಸ್ತುವಾರಿ ಮತ್ತು ವಿಶ್ವಾಸದ ಕುರಿತು ನಮ್ಮ ತಿಳುವಳಿಕೆಯನ್ನು ಪ್ರಶ್ನಿಸುವ ಸಂದರ್ಭಗಳನ್ನು ನಾವು ಹೆಚ್ಚಾಗಿ ಎದುರಿಸುತ್ತೇವೆ. ಅಂತಹ ಒಂದು ಸನ್ನಿವೇಶವೆಂದರೆ ಸಹ ವಿಶ್ವಾಸಿಗಳು ಆರ್ಥಿಕ ಸಹಾಯವನ್ನು ಕೇಳುವುದು. 

ನಮ್ಮ ಹೃದಯಗಳು ನಮ್ಮನ್ನು ದಾನ ಮಾಡುವಂತೆ ಒತ್ತಾಯಿಸಬಹುದಾದರೂ, ಈ ಕ್ಷಣಗಳಲ್ಲಿ ಜ್ಞಾನ ಮತ್ತು ವಿವೇಚನೆ ಅತ್ಯಗತ್ಯ. 
ಜ್ಞಾನೋಕ್ತಿ 19:17 ರಲ್ಲಿ ಕಂಡುಬರುವಂತೆ, ಸತ್ಯವೇದ ನಮಗೆ ಉದಾರವಾಗಿಯೂ ಮತ್ತು ದಯೆಯುಳ್ಳವರಾಗಿಯೂ ಇರಬೇಕೆಂದು ಕಲಿಸುತ್ತದೆ, 

"ಬಡವರಿಗೆ ದಯೆತೋರಿಸುವವನು ಯೆಹೋವನಿಗೆ ಸಾಲಕೊಡುವವನು; ಆ ಉಪಕಾರಕ್ಕೆ ಯೆಹೋವನೇ ಪ್ರತ್ಯುಪಕಾರ ಮಾಡುವನು." ಆದಾಗ್ಯೂ, ವರ್ಷಗಳಲ್ಲಿ, ಚರ್ಚ್ ಒಳಗೆ ಸಾಮಾನ್ಯವಾಗಿ ಸಾಲ ಪಡೆಯುವಂತದ್ದು ಸಂಕೀರ್ಣ ಸಂದರ್ಭಗಳಿಗೆ ಕಾರಣವಾಗಬಹುದು ಎಂಬುದನ್ನು ನಾನು ನೋಡಿದ್ದೇನೆ. 
ದುರದೃಷ್ಟವಶಾತ್ ಕೆಲವು ವ್ಯಕ್ತಿಗಳು,ಸಹ ವಿಶ್ವಾಸಿಗಳ ದಯೆಯನ್ನು ಬಳಸಿಕೊಂಡು  ಮರುಪಾವತಿ ಮಾಡದೇ ಪದೇ ಪದೇ ಸಾಲ ಪಡೆಯುವುದಲ್ಲದೆ, ಘರ್ಷಣೆ ಮತ್ತು ನೋವನ್ನು ಉಂಟುಮಾಡುತ್ತಾರೆ. ಈ ನಡವಳಿಕೆಯು ಸಂಬಂಧಗಳನ್ನು ಕೆಡಿಸುತ್ತದೆ ಮಾತ್ರವಲ್ಲದೆ ಚರ್ಚ್ ಒಳಗೆ ಸಾಮರಸ್ಯವನ್ನು ಅಡ್ಡಿಪಡಿಸುತ್ತದೆ.

ಈ ವಿಷಯದ ಕುರಿತು ದೇವರವಾಕ್ಯವು ನಮಗೆ ಮಾರ್ಗದರ್ಶನ ನೀಡುತ್ತದೆ.
"ದುಷ್ಟನು ಸಾಲಮಾಡಿಕೊಂಡು ತೀರಿಸಲಾರದೆ ಹೋಗುವನು; ನೀತಿವಂತನು ಪರೋಪಕಾರಿಯಾಗಿ ಧರ್ಮಕೊಡುವನು" ಎಂದು ಕೀರ್ತನೆ 37:21 ಹೇಳುತ್ತದೆ. ಈ ವಚನವು ದಾನ ಮಾಡುವ ಕ್ರಿಯೆ ಮತ್ತು ಸಾಲ ನೀಡುವ ಕ್ರಿಯೆಯ ನಡುವಿನ ಮೂಲಭೂತ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. 

ಸಾಲ ನೀಡುವುದು ಮರುಪಾವತಿಯನ್ನು ನಿರೀಕ್ಷಿಸಿ ಬಾಧ್ಯತೆಯ ಬಂಧನವನ್ನು ಸೃಷ್ಟಿಸಬಹುದು, ಆದರೆ ದಾನವು ಪ್ರತಿಫಲದ ನಿರೀಕ್ಷೆಯಿಲ್ಲದೆ ಸ್ವತಂತ್ರ ಇಚ್ಛೆಯ ಕ್ರಿಯೆಯಾಗಿದೆ. 

ಉದಾರಿಯಾಗಿರುವುದು ಎಂದರೆ ನಮಗೆ ಸಾಮಾನ್ಯ ಜ್ಞಾನದ ಕೊರತೆಯಿರಬೇಕು ಎಂದಲ್ಲ. 
ಯಾಕೋಬ 1:5 ಸಲಹೆ ನೀಡಿದಂತೆ " ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ. " 

ಜ್ಞಾನಕ್ಕಾಗಿ ಪ್ರಾರ್ಥಿಸುವುದು ಅತ್ಯಗತ್ಯ. ಯಾವಾಗ ನೀಡಬೇಕು, ಎಷ್ಟು ನೀಡಬೇಕು ಮತ್ತು ಯಾರಿಗೆ ನೀಡಬೇಕು ಎಂಬುದನ್ನು ವಿವೇಚಿಸಲು ಈ ಜ್ಞಾನವು ನಮಗೆ ಸಹಾಯ ಮಾಡುತ್ತದೆ. 
ಇದು ದೇವರು ನಮಗೆ ವಹಿಸಿಕೊಟ್ಟಿರುವ ಸಂಪನ್ಮೂಲಗಳ ಉಸ್ತುವಾರಿಯೊಂದಿಗೆ ಸಹಾಯ ಮಾಡುವ ನಮ್ಮ ಬಯಕೆಯನ್ನು ಸಮತೋಲನಗೊಳಿಸುವ ಕುರಿತಾದ್ದಾಗಿದೆ.

ಆಗ ಚರ್ಚ್‌ನ ಸದಸ್ಯರಾಗಿ, ಅದರ ಐಕ್ಯತೆ ಮತ್ತು ಶಾಂತಿಯನ್ನು ಕಾಪಾಡುವಲ್ಲಿ ನಾವು ಪಾತ್ರವಹಿಸುತ್ತೇವೆ.  
ಎಂದು ಎಫೆಸ 4:3 ನಮ್ಮನ್ನು ಒತ್ತಾಯಿಸುತ್ತದೆ. "ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ." 

ಪದೇ ಪದೇ ಸಾಲ ಪಡೆಯುವ ಸಂದರ್ಭಗಳನ್ನು ಎದುರಿಸುವಾಗ, ಅವರನ್ನು ಪ್ರೀತಿಯಿಂದ, ಜ್ಞಾನದಿಂದ ತಿಳುವಳಿಕೆ ಹೇಳುವುದು ಮತ್ತು ಬಹುಶಃ ಚರ್ಚ್‌ನ ಸಾಮರಸ್ಯವನ್ನು ಕಾಪಾಡಿಕೊಳ್ಳುವ ಪರಿಹಾರವನ್ನು ಕಂಡುಹಿಡಿಯಲು ಚರ್ಚ್ ನಾಯಕತ್ವವನ್ನು ಒಳಗೊಳ್ಳುವುದು ಮುಖ್ಯವಾಗುತ್ತದೆ. ಪದೇ ಪದೇ ಸಾಲ ಪಡೆಯುತ್ತಿರುವ ವ್ಯಕ್ತಿಗಳನ್ನು ನೀವು ಕಂಡುಕೊಂಡರೆ, ಪಾಸ್ಟರ್ ಗೆ  ಗೌಪ್ಯವಾಗಿ ವರದಿ ಮಾಡುವುದು ನಿಮ್ಮ ಕರ್ತವ್ಯ. 

ನಿಮ್ಮ ತ್ವರಿತ ಕ್ರಮವು ಬಹಳಷ್ಟು ತೊಂದರೆಗಳಿಂದ ರಕ್ಷಿಸುತ್ತದೆ.

ನಮ್ಮ ನಂಬಿಕೆಯ ಪ್ರಯಾಣವು ನಮ್ಮನ್ನು ಉದಾರವಾಗಿರಲೂ ಮತ್ತು ಬುದ್ಧಿವಂತರಾಗಿರಲು ಕರೆಯುತ್ತದೆ. ನಾವು ಈ ನೀರಿನಲ್ಲಿ ಸಂಚರಿಸುವಾಗ, ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ದೇವರ ಮೇಲೆ ನಮ್ಮ ಅಂತಿಮ ನಂಬಿಕೆ ಮತ್ತು ಅವಲಂಬನೆ ಇದೆ ಎಂಬುದನ್ನು ನೆನಪಿನಲ್ಲಿಡೋಣ.

[ಕೆಳಗಿನ ಕಾಮೆಂಟ್‌ಗಳ ವಿಭಾಗದಲ್ಲಿ ನಿಮ್ಮ ಆಲೋಚನೆಗಳನ್ನು ನನಗೆ ತಿಳಿಸಿ👇]

Bible Reading: Number 4-6
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಮ್ಮ ಕೊಡುವಿಕೆಯಲ್ಲಿ ನಮಗೆ ಮಾರ್ಗದರ್ಶನ ನೀಡಿ ಮತ್ತು ಜ್ಞಾನದೊಂದಿಗೆ ಉದಾರತೆಯ ಮನೋಭಾವವನ್ನು ನಮ್ಮಲ್ಲಿ ತುಂಬಿರಿ. ನಮ್ಮ ಕಾರ್ಯಗಳಲ್ಲಿ ನಿಮ್ಮ ಪ್ರೀತಿ ಮತ್ತು ಅನುಗ್ರಹವನ್ನು ಪ್ರತಿಬಿಂಬಿಸಲು ನಮಗೆ ಸಹಾಯ ಮಾಡಿ. ನಮ್ಮ ವರಗಳು ನಿಮ್ಮ ಆಶೀರ್ವಾದದ ಬೀಜಗಳಾಗಿದ್ದು, ಇತರರ ಹೃದಯಗಳಲ್ಲಿ ಬೆಳೆಯಲಿ. ಯೇಸುನಾಮದಲ್ಲಿ. ಆಮೆನ್.

Join our WhatsApp Channel


Most Read
● ಶಾಂತಿಯು ನಿಮ್ಮನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅರಿತುಕೊಳ್ಳಿ.
● ಪ್ರತಿಫಲ ನೀಡುವವನು ದೇವರೇ
● ಹೊಗಳಿಕೆವಂಚಿತ ನಾಯಕರು
● ಮನಸ್ತಾಪವು ಆತ್ಮೀಕ ದೃಷ್ಟಿಕೋನವನ್ನು ವಿರೂಪಗೊಳಿಸುತ್ತದೆ
● ಪರ್ವತಗಳನ್ನೇ ಕದಲಿಸಬಲ್ಲ ಗಾಳಿ
● ಆಲೋಚನೆಗಳ ಸಂಚಾರದಲ್ಲಿ ಸಾಗುವುದು
● ಆತ್ಮೀಕ ಚಾರಣ
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್