ಅನುದಿನದ ಮನ್ನಾ
0
0
3
ಆತನ ಪುನರುತ್ಥಾನಕ್ಕೆ ಸಾಕ್ಷಿಯಾಗುವುದು ಹೇಗೆ - II
Saturday, 4th of April 2026
Categories :
ನಿಜ ಸಾಕ್ಷಿ (True witness)
ನಮ್ಮ ಕರ್ತನಾದ ಯೇಸು ಕ್ರಿಸ್ತನ ಪುನರುತ್ಥಾನಕ್ಕೆ ಪರಿಣಾಮಕಾರಿ ಸಾಕ್ಷಿಯಾಗುವುದು ಹೇಗೆ’ ಎಂಬ ನಮ್ಮ ಸರಣಿಯನ್ನು ನಾವು ಮುಂದುವರಿಸುತ್ತಿದ್ದೇವೆ. ಆತನ ಪುನರುತ್ಥಾನಕ್ಕೆ ಪರಿಣಾಮಕಾರಿ ಸಾಕ್ಷಿಯಾಗಲು ಎರಡನೆಯ ಮಾರ್ಗವೆಂದರೆ ಬದಲಾದ ಜೀವನ.
ನೋಡಿ, ಇಂದು ಅನೇಕ ಚತುರ ಮಾತುಗಾರರಿದ್ದಾರೆ. ದೇವರು ನಿಮ್ಮ ಮಾತಿಗಿಂತ ನಿಮ್ಮ ನಡಿಗೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾನೆ. ಜಗತ್ತಿನ ಜನರು ಸಹ ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನ ಈ ನಾಲ್ಕು ಸುವಾರ್ತೆಗಳನ್ನು ಓದುವ ಮೊದಲು ನಿಮ್ಮ ಸುವಾರ್ತೆಯನ್ನು ಓದುತ್ತಾರೆ.
ನಾನು ಹೇಳುತ್ತಿರುವುದರ ಅರ್ಥವೇನು? ಜನರು ನೀವು ಹೇಳುತ್ತಿರುವುದನ್ನು ಸ್ವೀಕರಿಸುವ ಮೊದಲು ನಿಮ್ಮ ಜೀವನದಲ್ಲಿ ಆಗಿರುವ ಬದಲಾವಣೆಯನ್ನು ಮೊದಲು ನೋಡಲು ಬಯಸುತ್ತಾರೆ ಎಂದರ್ಥ.
ವ್ಯಸನಗಳಿಂದ ಮುಕ್ತರಾಗಿರಿ ಬಹುಶಃ ನಿಮಗೆ ಮದ್ಯಪಾನ ಮಾಡುವ ದೌರ್ಬಲ್ಯ, ಸಿಗರೇಟನ್ನು ಸೇದುವ ದೌರ್ಬಲ್ಯ ಇರಬಹುದು. ಆ ವಸ್ತುಗಳನ್ನು ದೂರವಿಟ್ಟು ಮತ್ತೆ ಅವುಗಳ ಬಳಿಗೆ ಹೋಗಬೇಡಿ. ಆ ವ್ಯಸನಗಳಿಂದ ದೂರವಿರಲು ಕರ್ತನಲ್ಲಿ ಬಲವನ್ನು ಕೇಳಿಕೊಳ್ಳಿ. ಆಗ ನಿಮ್ಮ ಸುತ್ತಲಿನ ಜನರು ನಿಮ್ಮನ್ನು ನೋಡಿ, "ಈ ವ್ಯಕ್ತಿಗೆ ಏನಾಯಿತು? ಪ್ರತಿದಿನ ಬೆಳಿಗ್ಗೆ ಅವನು ನಡುಗುತ್ತಿದ್ದನು ಆದರೆ ಈಗ ಅವನು ಪವಿತ್ರಾತ್ಮನಿಂದ ಇತರರನ್ನು ನಡುಗಿಸುತ್ತಿದ್ದಾನೆ. ಅವನಲ್ಲಿರುವಂತದ್ದು ನನಗೂ ಬೇಕು" ಎಂದು ಹೇಳುತ್ತಾರೆ. ಹಲ್ಲೆಲೂಯಾ!
ಇದನ್ನು ಓದುತ್ತಿರುವ ಪ್ರತಿಯೊಬ್ಬರಿಗೂ ನಾನು ಹೇಳಲು ಬಯಸುವುದೇನೆಂದರೆ, "ಸಾಮಾನ್ಯ ಜೀವನವನ್ನು ನಡೆಸಬೇಡಿ, ಕ್ರಿಸ್ತ ಯೇಸುವಿನಲ್ಲಿ ಲಭ್ಯವಿರುವ ಉನ್ನತ ಜೀವನವನ್ನು ಪಡೆಯಿರಿ." ಆಗ ನೀವು ಯೋಸೇಫನಂತೆ, ಎಸ್ತರ್‌ಳಂತೆ ಎದ್ದು ಸಾವಿರಾರು ಜನರಿಗೆ ಆಶೀರ್ವಾದಕರವಾಗುತ್ತೀರಿ. ಬದಲಾದ ಜೀವನವೇ ನಮ್ಮ ಪ್ರಸ್ತುತ ಕಾಲದಲ್ಲಿ ಆತನ ಪುನರುತ್ಥಾನದ ಶಕ್ತಿಯು ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ದೊಡ್ಡ ಪುರಾವೆಯಾಗಿದೆ.
ಇತರರ ತಪ್ಪುಗಳಿಂದ ಕಲಿಯಿರಿಚರ್ಚ್ನಲ್ಲಿ ಇರುವ ಜನರು ಸಹ, ಯಾರಾದರೂ ಅವರಿಗೆ ನೋವುಂಟುಮಾಡಿದಾಗ, ಅವರು ತಕ್ಷಣ ಚರ್ಚುಗಳನ್ನು ಬದಲಾಯಿಸುತ್ತಾರೆ ಏಕೆಂದರೆ ಅವರು ಪ್ರಸ್ತುತ ಇರುವ ಚರ್ಚ್‌ಗಿಂತ ಇನ್ನೊಂದು ಚರ್ಚ್ ಉತ್ತಮವಾಗಿದೆ ಎಂದು ಅವರು ಭಾವಿಸುತ್ತಾರೆ. ಸತ್ಯವೆಂದರೆ, ಮನುಷ್ಯನು ಎಲ್ಲೇ ಹೋದರೂ ಮನುಷ್ಯನೇ ಗಿದ್ದಾನೆ ಮತ್ತು ದೇವರು ಎಲ್ಲೇ ಹೋದರೂ ದೇವರೇ ಆಗಿದ್ದಾನೆ. ಆದ್ದರಿಂದ 2021 ರಲ್ಲಿ, ಅವರು ಒಂದು ಚರ್ಚ್‌ನಲ್ಲಿದ್ದರೆ, 2022 ರಲ್ಲಿ ಅವರು ಬೇರೆ ಯಾವುದಾದರೂ ಚರ್ಚ್‌ನಲ್ಲಿರುತ್ತಾರೆ ಮತ್ತು 2030 ರ ಹೊತ್ತಿಗೆ ಅವರು ಹಿಂದೆ ಇದ್ದ ಅದೇ ಚರ್ಚ್‌ಗೆ ಮರಳಿ ಹೋಗುತ್ತಾರೆ.
ನೀವು ಅವರಂತೆ ಇರಬೇಕಾಗಿಲ್ಲ. ಇತರರ ತಪ್ಪುಗಳಿಂದ ಕಲಿಯಿರಿ - ಅದುವೇ ಬುದ್ಧಿವಂತಿಕೆ. ಜನರು ನಿಮ್ಮನ್ನು ನೋಯಿಸಿದಾಗ, ಅವರನ್ನು ಕ್ಷಮಿಸಿ. "ಯೇಸುವಿನ ಕಾರಣದಿಂದಾಗಿ ನಾನು ನಿಮ್ಮನ್ನು ಕ್ಷಮಿಸುತ್ತೇನೆ" ಎಂದು ಹೇಳಿ ಅವರನ್ನು ಕರ್ತನಲ್ಲಿ ಬಿಡುಗಡೆ ಮಾಡಿ. ಕ್ಷಮಿಸಿ ಮತ್ತು ಮುನ್ನಡೆಯಿರಿ. ನಿಮ್ಮ ಕರೆಯು ನೆರೆವೇರಿಕೆಯಾಗುವುದನ್ನು ವಿಳಂಬ ಮಾಡಬೇಡಿ.
ಸೇಡಿನ ಮನೋಭಾವದ ಅಪಾಯ
ಇತ್ತೀಚಿನ ದಿನಗಳಲ್ಲಿ, ಯಾರೂ ಕ್ಷಮಿಸಲು ಬಯಸುವುದಿಲ್ಲ. ಎಲ್ಲರೂ ಸೇಡು ತೀರಿಸಿಕೊಳ್ಳಲು ಬಯಸುತ್ತಾರೆ. "ನೀನು ನನಗೆ ಹೀಗೆ ಮಾಡಿದೆ, ಈಗ ನಾನು ನನ್ನ ಇನ್ನೊಂದು ಮುಖವನ್ನು ನಿನಗೆ ತೋರಿಸುತ್ತೇನೆ." ಸೇಡು ಎಂದರೆ ಯಾರಾದರೂ ನಿನಗೆ ತಪ್ಪು ಮಾಡಿದಾಗಲೂ ಅದನ್ನು ತೀರಿಸುವ ಬಯಕೆ. "ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಎಂದುಕೊಂಡು ಅದಕ್ಕಾಗಿಯೇ ಈಗ ಅನೇಕ ಜನರು ಹಲ್ಲುರಹಿತರಾಗಿದ್ದಾರೆ."ಸೇಡು ನಿಮ್ಮನ್ನು ಅವರಂತೆಯೇ ಇರಿಸುತ್ತದೆ. ಸೇಡು ಒತ್ತಡವನ್ನು ಹೆಚ್ಚಿಸುತ್ತದೆ. ಅಲ್ಲದೇ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ ಎಂದು ಸಮಕಾಲೀನ ಅಧ್ಯಯನಗಳು ತೋರಿಸಿವೆ. ಒಬ್ಬರು ಒಮ್ಮೆ , "ನೀವು ಸೇಡಿನ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ಎರಡು ಸಮಾಧಿಗಳನ್ನು ಅಗೆಯಿರಿ."ಎಂದು ಪ್ರಬಲವಾಗಿ ಹೇಳಿದ್ದಾರೆ.
Bible Reading: 1 Samuel 10-13

ಸೇಡು ತೀರಿಸಿಕೊಳ್ಳುವುದನ್ನು ದೇವರಿಗೆ ಬಿಡಿ. "ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆಂಬದಾಗಿ ಬರೆದದೆ. (ರೋಮನ್ನರು 12:19)
ಕ್ಷಮಿಸುವಂತದ್ದು ನಾವು ಆತನ ಪುನರುತ್ಥಾನದ ಪರಿಣಾಮಕಾರಿ ಸಾಕ್ಷಿಯಾಗುವ ಮತ್ತೊಂದು ಮಾರ್ಗವಾಗಿದೆ.
Bible Reading: 1 Samuel 10-13
ಪ್ರಾರ್ಥನೆಗಳು
ಪರಿಶುದ್ಧನಾದ ಪವಿತ್ರಾತ್ಮನೇ, ದಯವಿಟ್ಟು ನನ್ನ ಜೀವನದಲ್ಲಿ ಆಳವಾಗಿ ಕಾರ್ಯವನ್ನು ಮಾಡು. ನಾನು ಯೇಸುವಿನ ಹೆಸರಿನಲ್ಲಿ ಬದಲಾವಣೆಯನ್ನು ಸ್ವೀಕರಿಸುತ್ತೇನೆ.
ತಂದೆಯೇ, ನಿಮ್ಮ ಮಗನಾದ ಯೇಸುವಿನ ತ್ಯಾಗದ ಮೂಲಕ ನನ್ನ ಜೀವನದಲ್ಲಿ ಬಿಡುಗಡೆಯಾದ ಕ್ಷಮಿಸುವ ಶಕ್ತಿಗಾಗಿ ನಾನು ನಿಮಗೆ ಸ್ತೋತ್ರ ಸಲ್ಲಿಸುತ್ತೇನೆ . ನನ್ನನ್ನು ನೋಯಿಸಿದ ಪ್ರತಿಯೊಬ್ಬರನ್ನು ಕ್ಷಮಿಸುವುದನ್ನೇ ಯೇಸುನಾಮದಲ್ಲಿ ನಾನು ಆರಿಸಿಕೊಳ್ಳುತ್ತೇನೆ. ಆಮೆನ್

Join our WhatsApp Channel
Most Read
● ಹೆಚ್ಚು ಪರಿಣಾಮಕಾರಿ ಜನರ 9 ಅಭ್ಯಾಸಗಳು: ಅಭ್ಯಾಸ ಸಂಖ್ಯೆ 9● ಪರ್ವತಗಳನ್ನೇ ಕದಲಿಸಬಲ್ಲ ಗಾಳಿ
● ಶರಣಾಗತಿಯ ಸ್ಥಳ
● ಪುರುಷರು ಏಕೆ ಪತನಗೊಳ್ಳುವರು -3
● ನೀವು ನಂಬಿಕೆದ್ರೋಹವನ್ನು ಅನುಭವಿಸಿದ್ದೀರಾ?
● ಕ್ರೈಸ್ತರು ವೈದ್ಯರ ಬಳಿಗೆ ಹೋಗಬಹುದೇ?
● ಪಂಚಶತ್ತಾಮ ದಿನದ ಉದ್ದೇಶ
ಅನಿಸಿಕೆಗಳು