ಅನುದಿನದ ಮನ್ನಾ
1
0
9
ಇದಕ್ಕಾಗಿ ಸಿದ್ಧರಾಗಿರಿ!
Sunday, 5th of April 2026
Categories :
ನಿಜ ಸಾಕ್ಷಿ (True witness)
ಹಿಂಸೆ ( Persecution)
"ಆತನ ಪುನರುತ್ಥಾನದ ಸಾಕ್ಷಿಯಾಗುವುದು ಹೇಗೆ" ಎಂಬ ನಮ್ಮ ಸರಣಿಯನ್ನು ನಾವು ಮುಂದುವರಿಸುತ್ತಿದ್ದೇವೆ. ಕರ್ತನ ಕಡೆಗೆ ತಿರುಗುವ ಮೊದಲು, ಕೆಲವು ಪರಿಸ್ಥಿತಿಗಳಿಂದಾಗಿ ನಾನು ಟೆರೇಸ್‌ನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಅಂಚಿನಲ್ಲಿದ್ದೆ.
ನಾನು ಇದನ್ನು ನನ್ನ "ಟೇಕ್ ಆಲ್ ಆಫ್ ಮಿ" ಹಾಡಿನಲ್ಲಿ ಚಿತ್ರಿಸಿದ್ದೇನೆ. ಒಬ್ಬರು ನನಗೆ ಸುವಾರ್ತೆಯನ್ನು ಹೇಳಿ ಪ್ರಾರ್ಥನಾ ಸೇವೆಗೆ ಆಹ್ವಾನಿಸಿದಾಗ ಈ ವಿಷಯಗಳು ಸಂಭವಿಸಿದವು. ಆ ಸೇವೆಯಲ್ಲಿ, ನನ್ನ ಪರಿಸ್ಥಿತಿ ಎಲ್ಲವೂ ಬದಲಾಗಿ ಹೋಯಿತು.
ಒಂದು ಗೋಚರವಾಗುವಂತ ಬದಲಾವಣೆ.ನಾನು ಒಬ್ಬ ಗಿಟಾರ್ ವಾದಕನಾಗಿದ್ದು ಹೆವಿ ಮೆಟಲ್ ಸಂಗೀತದಲ್ಲಿ ನನ್ನನ್ನು ನಾನು ತುಂಬಾ ತೊಡಗಿಸಿಕೊಂಡಿದ್ದೆ. ಅಸಹ್ಯಕರ ಭಾಷೆಯನ್ನು ಬಳಸುವುದು ನನಗೆ ಸಾಮಾನ್ಯ ರೂಢಿಯಾಗಿತ್ತು.
ಆ ದಿನದ ಮರುದಿನದಲ್ಲಿ, ನಾನು ಇನ್ನೊಂದು ಬ್ಯಾಂಡ್‌ನ ಕೆಲವು ಜನರನ್ನು ಭೇಟಿಯಾದಾಗ, ಅವರು ತಮ್ಮ ಸಾಮಾನ್ಯ ಭಾಷೆಯಲ್ಲಿ ನನ್ನನ್ನು ಸ್ವಾಗತಿಸಿದರು. ಆದರೆ ನಾನು ಸಾಮಾನ್ಯವಾಗಿ ಪ್ರತಿಕ್ರಿಯಿಸಿದೆ. ಆದರೆ ನನ್ನ ಭಾಷೆ ಬದಲಾಗಿರುವುದನ್ನು ಅವರು ಶೀಘ್ರದಲ್ಲೇ ಗಮನಿಸಿ ನಿನಗೆ ಏನಾಯಿತು?ಎಂದು ಅವರು ನನ್ನನ್ನು ಕೇಳಿದರು. ಆಗ ನಾನು ಅವರಿಗೆ ನಾನು ಯೇಸುವನ್ನು ಭೇಟಿಯಾಗಿದ್ದೇನೆ ಎಂದು ಹೇಳಿದೆ. ಅವರು ನನ್ನನ್ನು ಗೇಲಿ ಮಾಡುತ್ತಾ ಅನೇಕ ಅಡ್ಡ ಹೆಸರುಗಳಿಂದ ನನ್ನನ್ನು ಕರೆದರು. ನಾನು ವಾಸಿಸುತ್ತಿದ್ದ ಪ್ರದೇಶದಲ್ಲಿಯೂ ಸಹ, ನಾನು ಲೌಕಿಕ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದಾಗ, ಅವರು ನನ್ನನ್ನು ಒಳ್ಳೆಯ ವ್ಯಕ್ತಿ ಎಂದು ಕರೆಯುತ್ತಿದ್ದರು. ಆದರೆ ನಾನು ನನ್ನ ಬೈಬಲ್ ಮತ್ತು ಗಿಟಾರ್ ಅನ್ನು ಹೊತ್ತುಕೊಂಡು ಪ್ರಾರ್ಥನೆ ಸೇವೆಗಳಿಗೆ ಹೋಗುವುದನ್ನು ನೋಡಿದಾಗ, ಅವರು ನನ್ನನ್ನು ಗೇಲಿ ಮಾಡಲಾರಾಂಭಿಸಿದರು.ಲೋಕವು ಇರುವುದು ಹೀಗೆಯೇ. ನೀವು ಅವರಲ್ಲಿ ಒಬ್ಬರಾಗದೇ ಹೋದರೆ ಅವರು ನಿಮ್ಮನ್ನು ತಿರಸ್ಕರಿಸುತ್ತಾರೆ.
ಶಾಸ್ತ್ರವು ನಮಗೆ ಸ್ಪಷ್ಟವಾಗಿ ಹೇಳುವುದೇನೆಂದರೆ ,
" ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸುಮಾಡುವವರೆಲ್ಲರೂ ಹಿಂಸೆಗೊಳಗಾಗುವರು. (2 ತಿಮೊಥೆಯ 3:12).
ಇದು ನ್ಯಾಯಯುತವಾಗಿ ಕಾಣುವುದಿಲ್ಲ ಎಂಬುದು ನನಗೆ ತಿಳಿದದೆ. ಆದರೆ ಕರ್ತನಾದ ಯೇಸು ಏನು ಹೇಳಿದನೆಂದು ನೋಡೋಣ,
" ನನ್ನ ನಿವಿುತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ."( ಮತ್ತಾಯ 5:10-11)
ದುಪ್ಪಟ್ಟು ಆಶೀರ್ವಾದ
ಇತರ ಎಲ್ಲಾ ಆಶೀರ್ವಾದಗಳಲ್ಲಿ, "ಆಶೀರ್ವಾದ" ಎಂಬ ಪದವನ್ನು ಒಮ್ಮೆ ಮಾತ್ರ ಬಳಸಲಾಗಿದೆ. ಆದರೆ ಈ ನಿರ್ದಿಷ್ಟ ಆಶೀರ್ವಾದದಲ್ಲಿ, ಕಿರುಕುಳಕ್ಕೊಳಗಾದವರಿಗೆ ದೇವರು ನೀಡಿದ ಉದಾರ ಆಶೀರ್ವಾದವನ್ನು ಒತ್ತಿಹೇಳಲು ಯೇಸು "ಆಶೀರ್ವಾದ" ಎಂಬ ಪದವನ್ನು ಎರಡೆರಡು ಬಾರಿ ಬಳಸಿದ್ದಾನೆ.
ನಾನು ಇದನ್ನು ನಿಮ್ಮನ್ನು ನಿರುತ್ಸಾಹಗೊಳಿಸಲು ಬರೆಯುತ್ತಿಲ್ಲ, ಬದಲಾಗಿ ನಿಮ್ಮನ್ನು ಸಿದ್ಧಪಡಿಸಲು ಮತ್ತು ನಿಮ್ಮ ದೈವಭಕ್ತಿಯ ಹಾದಿಯಲ್ಲಿ ನಿಮ್ಮನ್ನು ಪ್ರೋತ್ಸಾಹಿಸಲು ಬರೆಯುತ್ತಿದ್ದೇನೆ. ಆತನ ಪುನರುತ್ಥಾನಕ್ಕೆ ಸಾಕ್ಷಿಯಾಗಿರುವುದಕ್ಕಾಗಿ ನೀವು ಹಿಂಸೆಗೆ ಒಳಗಾಗುತ್ತಿರುವುದರಿಂದ ಹಿಂಜಾರಬೇಡಿರಿ.
ಹಿಂಸಕರ ಕಡೆಯಿಂದ ಪ್ರಚಾರಕರ ಕಡೆಗೆ
ಇದೀಗ ಉತ್ತಮ ನಡತೆಗಾಗಿ: ಮೊದಲು ನನ್ನನ್ನು ಅಪಹಾಸ್ಯ ಮಾಡಿದ ಅನೇಕರು ಈಗ ಕರ್ತನ ಕಡೆಗೆ ತಿರುಗಿದ್ದಾರೆ. ಇನ್ನೂ ಕೆಲವರು ಕರ್ತನ ಕಡೆಗೆ ಇನ್ನೂ ತಿರುಗಿಲ್ಲ, ಆದರೆ ಅವರೂ ಸಹ ಸದ್ದಿಲ್ಲದೆ ಗುಪ್ತವಾಗಿ ನನಗೆ ತಮ್ಮ ಪ್ರಾರ್ಥನೆ ವಿನಂತಿಗಳನ್ನು ನೀಡಿ ಪ್ರಾರ್ಥನೆ ಮಾಡಬೇಕೆಂದು ಕೇಳಿಕೊಳ್ಳುತ್ತಾರೆ. ನಾನು ಪ್ರವಾದಿಸುವುದೇನೆಂದರೆ "ನಿಮಗೆ ಹಿಂಸೆ ನೀಡುವವರೇ ನಿಮ್ಮ ಅತ್ಯುತ್ತಮ ಪ್ರಚಾರಕರಾಗುತ್ತಾರೆ." ನೀರಿನ ಪ್ರವಾಹದೊಡನೆ ಸತ್ತ ಮೀನು ಸಹ ಹೋಗಬಹುದು, ಆದರೆ ಪ್ರವಾಹದ ವಿರುದ್ಧ ಹೋಗಬೇಕೆಂದರೆ ಅದು ಜೀವಂತ ಮೀನೇ ಆಗಿರಬೇಕು. ಏಳಿ -ಎದ್ದೇಳಿ! ನೀವು ಆತನ ಪುನರುತ್ಥಾನಕ್ಕೆ ದೊಡ್ಡ ಸಾಕ್ಷಿಯಾಗಲಿದ್ದೀರಿ.
ಪ್ರಾರ್ಥನೆಗಳು
ಕರ್ತನಾದ ಯೇಸುವೇ, ನಿಮ್ಮ ಪುನರುತ್ಥಾನಕ್ಕೆ ಸಾಕ್ಷಿಯಾಗುವಾಗ ಎದುರಾಗುವ ಎಲ್ಲ ಪರೀಕ್ಷೆಗಳು ಮತ್ತು ಸಂಕಟಗಳನ್ನು ನಂಬಿಗಸ್ತಿಕೆಯಿಂದ ಸಹಿಸಿಕೊಳ್ಳಲು ಅನುಗ್ರಹವನ್ನು ನಾನು ನಿಮ್ಮಲ್ಲಿ ಬೇಡುತ್ತೇನೆ. ಆಮೆನ್.
Join our WhatsApp Channel
Most Read
● ಗತಕಾಲದ ಸಮಾಧಿಯಲ್ಲಿಯೇ ಹೂತುಹೋಗಬೇಡಿರಿ● ಮುಂದಿನ ಹಂತಕ್ಕೆ ಹೋಗುವುದು
● ಸಮಾಧಾನದ ಮೂಲ :ಕರ್ತನಾದ ಯೇಸು
● ಆತ್ಮೀಕ ಚಾರಣ
● ಇದು ನಿಜಕ್ಕೂ ಮುಖ್ಯವಾದ ಸಂಗತಿಯಾ?
● ನಿಮ್ಮ ಮನೆಯ ವಾತಾವರಣವನ್ನು ಬದಲಾಯಿಸುವುದು -5
● ಆತನ ಆವರ್ತನಕ್ಕೆ ಅನುಗುಣವಾಗಿ ನಮ್ಮನ್ನು ಹೊಂದಿಸಿಕೊಳ್ಳುವುದು.
ಅನಿಸಿಕೆಗಳು
