english हिंदी मराठी తెలుగు മലയാളം தமிழ் Contact us ನಮ್ಮನ್ನು ಸಂಪರ್ಕಿಸಿ ಸ್ಪೋರ್ಟಿಫೈ ನ್ನು ಆಲಿಸಿರಿ ಸ್ಪೋರ್ಟಿಫೈ ನ್ನು ಆಲಿಸಿರಿ Download on the App StoreiOS ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ Get it on Google Play ಆಂಡ್ರಾಯ್ಡ್ ನಲ್ಲಿ ಆಪ್ ನ್ನು ಡೌನ್ಲೋಡ್ ಮಾಡಿ
 
ಲಾಗಿನ್
ಆನ್ಲೈನ್ ಮೂಲಕ ಕಾಣಿಕೆ ನೀಡಲು
ಲಾಗಿನ್
  • ಮೂಲತಾಣ
  • ಕಾರ್ಯಕ್ರಮಗಳು
  • ನೇರಪ್ರಸಾರ
  • ದೂರದರ್ಶನ
  • ನೋಹಾಟ್ಯೂಬ್
  • ಸ್ತೋತ್ರಗಳು
  • ಸುದ್ದಿಗಳು
  • ಮನ್ನಾ
  • ಪ್ರಾರ್ಥನೆಗಳು
  • ಅರಿಕೆಗಳು
  • ಕನಸುಗಳು
  • ವಿದ್ಯುನ್ಮಾನ -ಪುಸ್ತಕಗಳು
  • ವ್ಯಾಖ್ಯಾನ
  • ಶ್ರದ್ದಾಂಜಲಿ
  • ಓಯಸಿಸ್
  1. ಮೂಲತಾಣ
  2. ಅನುದಿನದ ಮನ್ನಾ
  3. ಬೇರಿನೊಂದಿಗೆ ವ್ಯವಹರಿಸುವುದು
ಅನುದಿನದ ಮನ್ನಾ

ಬೇರಿನೊಂದಿಗೆ ವ್ಯವಹರಿಸುವುದು

Friday, 18th of September 2026
1 0 26
Categories : ಬಿಡುಗಡೆ (Deliverance)
"ಅವನ ಬುಡವು ಕೆಳಗೆ ಒಣಗುವದು, ಅವನ ರೆಂಬೆಯು ಮೇಲೆ ಬಾಡುವದು."(‭ಯೋಬನು 18:16)

ಒಂದು ಮರದಲ್ಲಿ ಬೇರು ಎಂಬುದು ಕಣ್ಣಿಗೆ ಕಾಣಿಸುವಂತಹ ಹಾಗೂ ಕೊಂಬೆಗಳು ಕಣ್ಣಿಗೆ ಕಾಣುವಂತಹ ಭಾಗಗಳಾಗಿವೆ.

ಅದೇ ರೀತಿ ನಿಮ್ಮ ಆತ್ಮೀಕ ಜೀವಿತದಲ್ಲೂ (ಕಣ್ಣಿಗೆ ಕಾಣದಂತ )ನೀವು ಸಮೃದ್ಧಿ ಹೊಂದದೇ ಹೋದರೆ ನೀವು ಏನೇ ಕೆಲಸ ಮಾಡಿದರೂ (ಗೋಚರ) ಅದರಲ್ಲಿ ಜೀವಂತಿಕೆ ಇರುವುದಿಲ್ಲ.

 ಅನೇಕರು ಕಾಣಿಸುವ ಸಂಗತಿಗಳಿಗೆ ಹೆಚ್ಚಾಗಿ ಗಮನ ಕೊಡುವವರಾಗಿದ್ದಾರೆ- ಅದೂ ಬೇಕಾದದ್ದೇ. ಆದಾಗಿಯೂ ಸತ್ಯವೇದವು ನಮ್ಮ ಜೀವಿತದ ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿರುವಂತ ಮೂಲವನ್ನು, ಆಗರವನ್ನು ಮತ್ತು ಬೇರನ್ನು ಕುರಿತು ಅರಿತುಕೊಳ್ಳ ಬೇಕಾದ ಮಹತ್ವವನ್ನು ಕಾಣಲು ನಮಗೆ ಸಹಾಯ ಮಾಡುತ್ತದೆ.

"ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿದೆ; ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕುವರು."(‭ಮತ್ತಾಯ 3:10)

ಕರ್ತನಾದ ಯೇಸುಕ್ರಿಸ್ತನು ಸ್ನಾನಿಕನಾದ ಯೋಹಾನನ ಸೇವೆಯನ್ನು ಕುರಿತು ವಿವರಿಸುವಾಗ ಮರದ ಬೇರಿಗೆ ಹಾಕುವ ಕೊಡಲಿಯ ಉಪಮೇಯವನ್ನು ಹೇಳುತ್ತಾನೆ. ನಾವು ಸಮಸ್ಯೆಗಳ ಸೂಚನೆಗಳು, ಚಿಹ್ನೆಗಳ ಮೇಲೇ ಮಾತ್ರ ನಮ್ಮ ಗಮನ ಹರಿಸದೇ ಸಮಸ್ಯೆಯ ಮೂಲಕ್ಕೆ ದಾಳಿ ಇಟ್ಟು ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸುವ ಕಡೆಗೆ ಲಕ್ಷ್ಯ ಕೊಡಬೇಕು ಎಂದು ಆತನು ಬಯಸುತ್ತಾನೆ.

ಚಿಹ್ನೆಗಳು ಮತ್ತು ಲಕ್ಷಣಗಳೊಡನೆ ವ್ಯವರಿಸುವಂಥದ್ದು ನಿಮಗೆ ತಾತ್ಕಾಲಿಕವಾದ ಪರಿಹಾರವನ್ನು ನೀಡಬಹುದು. ಆದರೆ ನಾವು ಸೈತಾನನ ಸುಳ್ಳುಗಳನ್ನು ನಂಬಲು ಆರಂಭಿಸಿದಂತೆ ಆ ಸಮಸ್ಯೆಗಳು ಮತ್ತೆ ಮತ್ತೆ ನಮ್ಮ ಜೀವಿತದಲ್ಲಿ ತಲೆದೋರುತ್ತವೆ.

ಇನ್ನೊಂದು ಕಡೆ, ಸಮಸ್ಯೆಯ ಮೂಲದೊಂದಿಗೆ ವ್ಯವಹರಿಸುವಂಥದ್ದು ನೋವಿನ ಹಾಗೂ ದೀರ್ಘಕಾಲಿಕ ಪ್ರಕ್ರಿಯೆ ಎನಿಸಬಹುದು. ಆದರೆ ವಾಸ್ತವವಾಗಿ ಅದು ನಿತ್ಯವಾದ ವ್ಯತ್ಯಾಸವನ್ನು ತರುವಂತಹ ಬದಲಾವಣೆಯನ್ನು ಉಂಟುಮಾಡುವಂತವುಗಳಾಗಿವೆ.

"ಆಹಾ, ಅವರಿಗೆ ಎದುರಾಗಿ ನಿಂತ ಅಮೋರಿಯರನ್ನು ನಾನೇ ಧ್ವಂಸಮಾಡಿದೆನು; ಆ ಶತ್ರುವು ದೇವದಾರು ಮರದಷ್ಟು ಎತ್ತರವಾಗಿ ಅಲ್ಲೋನ್ ಮರದ ಹಾಗೆ ದೃಢವಾಗಿ ಇದ್ದರೂ ಮೇಲೆ ಅದರ ಫಲವನ್ನು, ಕೆಳಗೆ ಅದರ ಬುಡವನ್ನು ನಾಶಪಡಿಸಿದೆನು. " ಎಂದು ಕರ್ತನು ಹೇಳುತ್ತಾನೆ. (ಆಮೋಸ 2:9)

ನೀವು ನಿಮ್ಮ ಜೀವಿತದ ಸಮಸ್ಯೆಗಳ ಬೇರಿನೊಂದಿಗೆ ವ್ಯವಹರಿಸುವಂತೆ ದೇವರನ್ನು ಅನುಮತಿಸುವುದಾದರೆ ಅದರ ಫಲಗಳು ಸಹ ನಾಶವಾಗುತ್ತವೆ. ಆಗ ಅದು ನಿಮಗೆ ನಿತ್ಯವಾದ ಬಿಡುಗಡೆಯನ್ನು ಕೊಡುತ್ತದೆ.

Bible Reading: Ezekiel 45 -46
ಪ್ರಾರ್ಥನೆಗಳು
1.ತಂದೆಯಾದ ದೇವರೇ ನಾನು ಹಾದು ಹೋಗುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ಬೇರನ್ನು ಕಂಡುಕೊಳ್ಳುವಂತೆ ಯೇಸು ನಾಮದಲ್ಲಿ ನನ್ನ ಕಣ್ಣುಗಳನ್ನು ತೆರೆಮಾಡು.

2.ತಂದೆಯಾದ ದೇವರೇ ನಾನು ಹಾದು ಹೋಗುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿರುವ ಬೇರಿನೊಂದಿಗೆ ವ್ಯವಹರಿಸುವ ಬಲವನ್ನು ಮತ್ತು ಕೃಪೆಯನ್ನು ಯೇಸುನಾಮದಲ್ಲಿ ಅನುಗ್ರಹಿಸು.

3.ಓ ಕರ್ತನೇ, ನನ್ನ ಜೀವನದ ಅಸ್ಥಿವಾರಕ್ಕೆ ನಿನ್ನ ಪವಿತ್ರಾತ್ಮನ ಬೆಂಕಿ ಎಂಬ ಕೊಡಲಿಯನ್ನು ಕಳುಹಿಸಿ ಅಲ್ಲಿರುವ ಎಲ್ಲ ದುಷ್ಟತ್ವವನ್ನು ಯೇಸು ನಾಮದಲ್ಲಿ ನಾಶ ಮಾಡು.

4.ನನ್ನ ಹಾಗೂ ನನ್ನ ಕುಟುಂಬದ ಸದಸ್ಯರ ಜೀವಿತದಲ್ಲಿ ಸಮಸ್ಯೆಯನ್ನು ಉಂಟು ಮಾಡುತ್ತಿರುವ ಎಲ್ಲಾ ದುಷ್ಟನ ಬೇರುಗಳು ಯೇಸು ನಾಮದಲ್ಲಿ ಪವಿತ್ರಾತ್ಮನ ಬೆಂಕಿಯ ಕೊಡಲಿಯ ಪೆಟ್ಟಿನಿಂದ ನಿರ್ಮೂಲವಾಗಲಿ.


Join our WhatsApp Channel


Most Read
● ಅಗಾಪೆ ಪ್ರೀತಿಯಲ್ಲಿ ಬೆಳೆಯುವುದು ಹೇಗೆ?
● ನಿಮ್ಮ ಆತ್ಮಗಳ ಪುನಃಸ್ಥಾಪನೆ
● ದುರಾತ್ಮಗಳ ಪ್ರವೇಶವನ್ನು ಮುಚ್ಚುವ ಅಂಶಗಳು- I
● ಸುತ್ತಲೂ ಚಾಲ್ತಿಯಲ್ಲಿರುವ ಅನೈತಿಕತೆಯ ನಡುವೆಯೂ ದೃಢವಾಗಿ ಉಳಿಯುವುದು
● ನೀವು ಅವರ ಮೇಲೆ ಪ್ರಭಾವ ಬೀರಬೇಕು
● ಭೂಮಿಗೆ ಉಪ್ಪೋ ಅಥವಾ ಉಪ್ಪಿನ ಸ್ತಂಭವೋ
● ಮನುಷ್ಯರ ಸಂಪ್ರದಾಯಗಳು
ಅನಿಸಿಕೆಗಳು
ನಮ್ಮನ್ನು ಸಂಪರ್ಕಿಸಿ
Phone: +91 8356956746
+91 9137395828
WhatsApp: +91 8356956746
ಇಮೇಲ್ ವಿಳಾಸ: [email protected]
ವಿಳಾಸ :
10/15, First Floor, Behind St. Roque Grotto, Kolivery Village, Kalina, Santacruz East, Mumbai, Maharashtra, 400098
ಸ್ಪೋರ್ಟಿಫೈ ನ್ನು ಆಲಿಸಿರಿ
Download on the App Store
Get it on Google Play
JOIN MAILING LIST
EXPLORE
ಕಾರ್ಯಕ್ರಮಗಳು
ನೇರಪ್ರಸಾರ
ನೋಹಾಟ್ಯೂಬ್
ದೂರದರ್ಶನ
Donation
ಮನ್ನಾ
ಸ್ತೋತ್ರಗಳು
ಅರಿಕೆಗಳು
ಕನಸುಗಳು
ಸಂಪರ್ಕ
© 2026 Karuna Sadan, India.
➤
ಲಾಗಿನ್
ಈ ಜಾಲದಲ್ಲಿರುವ ವಿಷಯದ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಲು ಲೈಕ್ ಮಾಡಲು ದಯಮಾಡಿ ನಿಮ್ಮ ನೋಹ ಖಾತೆಗೆ ಲಾಗಿನ್ ಆಗಿರಿ
ಲಾಗಿನ್