ಅನುದಿನದ ಮನ್ನಾ
ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
Tuesday, 2nd of January 2024
0
0
302
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಬಲಶಾಲಿ ವ್ಯಕ್ತಿಯನ್ನು ಕಟ್ಟಿ ಹಾಕುವುದು.
"ಇದಲ್ಲದೆ ಒಬ್ಬನು ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ ಅ ಬಲಿಷ್ಠನ ಮನೆಯನ್ನು ಹೊಕ್ಕು ಅವನ ಸೊತ್ತನ್ನು ಸುಲುಕೊಳ್ಳುವದು ಹೇಗೆ? ಕಟ್ಟಿಹಾಕಿದ ಮೇಲೆ ಅವನ ಮನೆಯನ್ನು ಸುಲುಕೊಂಡಾನು."(ಮತ್ತಾಯ 12:29).
ಬಲಶಾಲಿಯಾದ ವ್ಯಕ್ತಿ ಎಂಬ ಪದವನ್ನು ಬಹಳ ಆಳವಾದ ಆತ್ಮಿಕರಹಸ್ಯವನ್ನು ಇಲ್ಲಿ ಪ್ರಕಟಿಸಿದ್ದಾನೆ.ಆತನನ್ನು ಆಗ ಆಲಿಸುತ್ತಿದ್ದ ಜನರಿಗೆ ಅದು ಹೊಸದಾದ ಉಪದೇಶವಾಗಿತ್ತು. ಆತನು ಬಹುಶ ಈ ವಿಚಾರವನ್ನು ಆಗ ಎತ್ತಿ ತೋರಿಸದಿದ್ದರೆ ನಮಗೆ ಇಂದು ಮನುಷ್ಯರ ಕೆಲವು ಪರಿಸ್ಥಿತಿಗಳನ್ನು ಗೆಲ್ಲುವಂತದ್ದು ಮನುಷ್ಯರ ವಿವರಣೆಗೆ ನಿಲುಕಲಾರದಂತ ವಿಚಾರವಾಗಿ ಬಿಡುತಿತ್ತು.
ಬಲಶಾಲಿ ವ್ಯಕ್ತಿ ಎಂಬುವವನು ಆತ್ಮಿಕ ಜೀವಿಯಾಗಿದ್ದು ಅವನು ಮನುಷ್ಯರಿಂದ ಆಶೀರ್ವಾದಗಳನ್ನು ಸದ್ಗುಣಗಳನ್ನು ಕಸಿದುಕೊಳ್ಳುವ ಅದಕ್ಕಾಗಿ ಹೋರಾಡುವ ಶಕ್ತಿಯುಳ್ಳ ಸೈತಾನನಾಗಿದ್ದಾನೆ. ಈ ಬಲಶಾಲಿ ವ್ಯಕ್ತಿಯು ಇನ್ನೊಂದಷ್ಟು ತನಗಿಂತ ಕಡಿಮೆ ಶಕ್ತಿಯುಳ್ಳ ದುರಾತ್ಮಗಳನ್ನು ಒಬ್ಬ ವ್ಯಕ್ತಿಯ ಜೀವಿತಕ್ಕೆ ಪ್ರವೇಶಿಸಲು ಬಾಗಿಲು ತೆರೆಯುವ ವ್ಯಕ್ತಿಯಾಗಿದ್ದಾನೆ.
ಅನೇಕ ಮಂದಿ ವಿಶ್ವಾಸಿಗಳು ಅವರ ಜೀವಿತದಲ್ಲಿ ನಡೆಯುತ್ತಿರುವ ಈ ಬಲಶಾಲಿ ವ್ಯಕ್ತಿಯ ಕಾರ್ಯಾಚರಣೆಯನ್ನು ಇನ್ನು ನಂಬದಿರುವಂಥದ್ದು ಅರಿಯದೆ ಇರುವಂತದ್ದು ಬಹಳ ನೋವಿನ ಸಂಗತಿಯಾಗಿದೆ. ಅವರು ಒಳ್ಳೆಯ ಹಾಗೂ ನಂಬಿಗಸ್ತ ವಿಶ್ವಾಸಿಗಳಾಗಿದ್ದಾರೆ ಆದರೆ ಆತ್ಮಿಕ ಹೋರಾಟದ ಬಗ್ಗೆ ಜ್ಞಾನಹೀನರಾಗಿದ್ದಾರೆ. ಅವರಿಗೆ ಶತ್ರು ಅವರ ಮೇಲೆ ಆತ್ಮಿಕವಾಗಿ ಹೋರಾಡುತ್ತಲೇ ಇರುತ್ತಾನೆ ಎಂಬುದು ತಿಳಿದೇ ಇಲ್ಲ. ಇದರಿಂದಾಗಿ ಅವರ ಜೀವಿತದ ನಿಗೂಢವಾದ ಪರಿಸ್ಥಿತಿಗಳೊಂದಿಗೆ ವ್ಯವಹರಿಸುವುದು ಅವರಿಗೆ ಬಹು ಕಷ್ಟಕರವಾಗಿದೆ.
ಈ ಬಲಶಾಲಿ ವ್ಯಕ್ತಿಯು ನಡೆಸುವ ಕೆಲವು ಕ್ರಿಯೆಗಳಾಗುವುವು?
1. ಈ ಬಲಶಾಲಿ ವ್ಯಕ್ತಿಯು ಜನರ ಆಶೀರ್ವಾದಗಳನ್ನು ಕಸಿದುಕೊಂಡು ಅವನ ಆತ್ಮಿಕ ಬೊಕ್ಕಸಗಳಲ್ಲಿ ಕೂಡಿಟ್ಟು ಕೊಂಡಿರುತ್ತಾನೆ. ಯೇಸು ಸ್ವಾಮಿಯು ಬಲಶಾಲಿ ವ್ಯಕ್ತಿಗೆ ಒಂದು ಮನೆ ಇದೆ ಮತ್ತು ಆ ಮನೆಯೊಳಗೆ ವಸ್ತುಗಳು ಇವೆ ಎಂದು ಇಲ್ಲಿ ನಮೂದಿಸಿರುವುದನ್ನು ನಾವು ನೋಡಬಹುದು. ಈ ವಸ್ತುಗಳು ಬಲಶಾಲಿ ವ್ಯಕ್ತಿಯದ್ದಲ್ಲ ಬದಲಾಗಿ ಅವು ಕದ್ದು ಕೊಟ್ಟಂತವು ಕಳ್ಳಮಾಲು. (ಮತ್ತಾಯ 12:29). ಸೈತಾನನ ಉದ್ದೇಶ ಕದ್ದುಕೊಳ್ಳುವುದು ಕೊಲ್ಲುವುದು ನಾಶಪಡಿಸುವುದೇ ಎಂಬುದು ನಮಗೆ ಗೊತ್ತು. (ಯೋಹಾನ 10:10). ಬಲಶಾಲಿಯ ವ್ಯಕ್ತಿ ಬಳಿ ಇರುವ ಸ್ವತ್ತೆಲ್ಲಾ ಜನರಿಂದ ಕದ್ದುಕೊಂಡ ವಸ್ತುಗಳಾಗಿವೆ.
ಅನೇಕ ಜನರು ಇಂದು ಬಡವರಾಗಿದ್ದಾರೆ ಅಥವಾ ಯಾವುದೇ ಸಹಾಯವಾಗಲೀ ಆಶೀರ್ವಾದಗಳಾಗಲಿ ದೊರಕದ ನಿರ್ಗತಿಕ ಸ್ಥಿತಿಯಲ್ಲಿದ್ದಾರೆ. ಕೆಲವರು ನಿರುದ್ಯೋಗಿಗಳಾಗಿದ್ದಾರೆ,ಇನ್ನು ಕೆಲವರು ಮದುವೆಯೇ ಇಲ್ಲದೆ ಅನೇಕ ವರ್ಷಗಳಿಂದ ಒಬ್ಬಂಟಿಗರಾಗಿಯೇ ಉಳಿದಿದ್ದಾರೆ ಮತ್ತು ಕೆಲವರು ಬಹಳ ವರ್ಷಗಳಿಂದ ಬಂಜೆಗಳಾಗಿ ಉಳಿದಿದ್ದಾರೆ. ಇಂಥವರೆಲ್ಲರ ಕೆಲವು ಆಶೀರ್ವಾದಗಳನ್ನು ಈ ಬಲಶಾಲಿ ವ್ಯಕ್ತಿಯು ಕದ್ದು ತನ್ನ ಮನೆಯಲ್ಲಿ ತನ್ನ ಸ್ವತ್ತಿನಂತೆ ಕೂಡಿಟ್ಟು ಕೊಂಡಿದ್ದಾನೆ.
ಈ ದಿನ ನಮ್ಮ ಪ್ರಾರ್ಥನೆಯಲ್ಲಿ ಕೇಂದ್ರೀಕರಿಸುವ ವಿಚಾರವು ಈ ಎಲ್ಲಾ ಆಶೀರ್ವಾದಗಳನ್ನು ಕದ್ದುಕೊಂಡು ಕೂಡಿಸಿರುವ ಬಲಶಾಲಿಯ ಮನೆಯಿಂದ ಹಿಂದಿರುಗಿ ಪಡೆದುಕೊಳ್ಳಲು ಸಹಾಯ ಮಾಡುತ್ತದೆ.
2. ನಮ್ಮ ಜೀವಿತದಲ್ಲಿ ಯಾವುದಾದರೂ ಹಠಮಾರಿಯಂತೆ ಕೂತಿರುವ ಸಮಸ್ಯೆ ಆಗಲಿ ಹೋರಾಟವಾಗಲಿ ಇದ್ದರೆ, ಅದರ ಹಿಂದೆ ಬಲಶಾಲಿ ವ್ಯಕ್ತಿಯ ಕೈವಾಡವಿದೆ. 'ಬಲ' ಎಂಬ ಪದದ ಅರ್ಥ 'ಶಕ್ತಿ'ಅಂದರೆ ಒಂದು ಮಹತ್ತಾದ ಪರಿಣಾಮ ಅಥವಾ ತೂಕ.ಅನೇಕ ಮಂದಿ ವಿಶ್ವಾಸಿಗಳು ತಮ್ಮ ಜೀವನದಲ್ಲಿನ ಕೆಲವು ಪರಿಸ್ಥಿತಿಗಳು ಏಕೆ ಮತ್ತೆ ಮತ್ತೆ ಮರುಕಳುಸುತ್ತಿದೆ ಎಂಬುದಕ್ಕೆ ವಿವರಣೆ ಕೊಡಲು ಅಸಮರ್ಥರಾಗುತ್ತಾರೆ. ಅವರು ಅದಕ್ಕಾಗಿ ಪ್ರಾರ್ಥಿಸುತ್ತಿದ್ದರೂ ಅದಕ್ಕೆ ಉತ್ತರ ಹೊಂದದವರಾಗಿ ಕಂಡುಬರುತ್ತಾರೆ. ಕೆಲವರು ಪ್ರಾರ್ಥಿಸುತ್ತಾರೆ ಮತ್ತು ಹೊರತೋರಿಕೆಗೆ ಗೆದ್ದವರಂತೆ ಕಾಣುತ್ತಾರೆ. ಯಾವುದೇ ಮತ್ತೆ ಮತ್ತೆ ಮರುಕಳಿಸುವ ಸಮಸ್ಯೆಗಳಾಗಲಿ ಮತ್ತು ಹೋರಾಟಗಳಾಗಲಿ ಅದರ ಹಿಂದೆ ಈ ಬಲಶಾಲಿ ವ್ಯಕ್ತಿ ಇದ್ದೇ ಇರುತ್ತಾನೆ.ನೀವು ಈ ಬಲಶಾಲಿ ವ್ಯಕ್ತಿಯನ್ನು ಕಟ್ಟಿ ಹಾಕದಿದ್ದರೆ ನೀವು ಮಾಡಿದ್ದೆ ಪ್ರಾರ್ಥನೆಯನ್ನು ಎಷ್ಟೇ ವರ್ಷ ಮಾಡುತ್ತಿದ್ದರೂ ಆ ಸಮಸ್ಯೆ ಮಾತ್ರ ಬಗೆಹರಿಯುವುದೇ ಇಲ್ಲ.
3. ನಾಶಕರವಾದಂತ ದುರಭ್ಯಾಸಗಳು ಮತ್ತು ಚಟಗಳ ಹಿಂದೆ ಬಲಶಾಲಿ ವ್ಯಕ್ತಿಯ ಪ್ರಭಾವ ಇದ್ದೇ ಇರುತ್ತದೆ. ಇದರಿಂದಲೇ ಆ ದುಷ್ಟ ದುರಭ್ಯಾಸಗಳ ಬಂಧನದಲ್ಲಿ ಸಿಕ್ಕಿಹಾಕಿಕೊಂಡಂತ ಅನೇಕರಿಗೆ ಅವುಗಳನ್ನು ಬಿಡಲು ಕಷ್ಟಕರವೆನಿಸುತ್ತದೆ. ಅವರು ಬಿಡಬೇಕೆಂದು ಬಯಸಿದರೂ ಸಹ ಅವುಗಳನ್ನು ಬಿಡುವುದಕ್ಕೆ ಅವರಿಗೆ ಸಾಧ್ಯವಾಗುವುದಿಲ್ಲ. ಏಕೆಂದರೆ ದುರಾತ್ಮ ಬಲವು ಅವರು ಪ್ರತಿರೋಧಿಸುವ ಬಲಕ್ಕಿಂತ ಹೆಚ್ಚಾದ ಪ್ರಭಾವವನ್ನು ಹೊಂದಿದೆ. ಈ ಬಲಶಾಲಿ ವ್ಯಕ್ತಿಯು ಅವನ ಮನಬಂದಂತೆ ನಿರ್ಧರಿಸಿಕೊಂಡು ಅಂತಹ ವ್ಯಕ್ತಿಗಳು ಕೆಟ್ಟ ಕೃತ್ಯಗಳನ್ನು ಎಸುಗುವಂತೆ ಕಾರ್ಯ ಮಾಡುತ್ತಿರುತ್ತಾನೆ.
ಒಬ್ಬ ವಿಶ್ವಾಸಿಯಾಗಿ ನಮಗೆ ಆ ಬಲಶಾಲಿ ವ್ಯಕ್ತಿಯ ಮೇಲೆ ಅಧಿಕಾರವಿದೆ. ಯೇಸು ಸ್ವಾಮಿಯು ನಮಗೆ ಆತನ ಹೆಸರನ್ನು ದಯಪಾಲಿಸಿರುವುದರಲ್ಲಿ ಮತ್ತು ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟಿರುವುದರಿಂದ ಆ ಬಲಶಾಲಿ ವ್ಯಕ್ತಿಯನ್ನು ಕಟ್ಟಿ ಹಾಕಿ ನಮ್ಮ ಸ್ವತ್ತುಗಳನ್ನು ಆ ಬಲಶಾಲಿ ವ್ಯಕ್ತಿಯಿಂದ ತಿರುಗಿ ಸುಲುಕೊಳ್ಳಬಹುದು
ನಾವು ಏನನ್ನು ಕಟ್ಟಿ ಹಾಕಬೇಕು?
ನೀವು ಮತ್ತಾಯ 12:29ರ ವಾಕ್ಯವನ್ನು ನೋಡುವುದಾದರೆ ನಿಮಗೆ ಇದಕ್ಕೆ ಉತ್ತರ ಸಿಗುತ್ತದೆ. ಕಟ್ಟಿ ಹಾಕು ಎನ್ನುವ ಪದವನ್ನೇ ಯೇಸು ಸ್ವಾಮಿಯು ಇಲ್ಲಿ ಬಳಸಿದ್ದಾನೆ.ನಾವು ಇಲ್ಲಿ ಪ್ರಾರ್ಥನೆಯ ಮೂಲಕ ಈ ಬಲಶಾಲಿ ವ್ಯಕ್ತಿಯನ್ನು ಕಟ್ಟಿ ಹಾಕಿ ನಮ್ಮ ಸ್ವತ್ತನ್ನು ಅವನಿಂದ ಸ್ವಾಧೀನ ಪಡಿಸಿಕೊಳ್ಳದಿದ್ದರೆ ಪರಲೋಕದಲ್ಲಿಯೂ ಸಹ ಏನೂ ನಡೆಯುವುದಿಲ್ಲ.
ಈಗ ನೀವು ಈ ಬಲಶಾಲಿ ವ್ಯಕ್ತಿಯನ್ನು ಕಟ್ಟಿ ಹಾಕಲು ಸಿದ್ದರಿದ್ದೀರಾ?
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ನನ್ನ ಮೇಲೆ ದಾಳಿ ಮಾಡುವ ನನ್ನ ಸ್ವತ್ತನ್ನು ಸೂರೆ ಮಾಡುವ ಈ ಬಲಶಾಲಿಯ ಕ್ರಿಯೆಗಳನ್ನು ಕಟ್ಟಿ ಹಾಕುತ್ತಿದ್ದೇನೆ. ಇಂದಿನಿಂದ ಏ ಬಲಶಾಲಿ ವ್ಯಕ್ತಿಯೇ,ನನ್ನ ಜೀವನ ಕುಟುಂಬ ವ್ಯವಹಾರ ಮತ್ತು ನನಗೆ ಸಂಬಂಧಿಸಿದ ಯಾವುದರ ಮೇಲೂ ನಿನ್ನ ಕ್ರಿಯೆಗಳು ನಡೆಯುವುದಿಲ್ಲ. (ಲೂಕ 10:19)
2. ನನ್ನ ಜೀವಿತದಲ್ಲಿ ಮತ್ತೆ ಮರುಕಳಿಸುವ ಯಾವುದೇ ಹೋರಾಟಗಳು ಮತ್ತು ಸಮಸ್ಯೆಗಳ ಹಿಂದೆ ಇರುವ ಈ ಬಲಶಾಲಿ ವ್ಯಕ್ತಿಯನ್ನು ಯೇಸುವಿನ ರಕ್ತದ ಮೂಲಕ ಜಯಸಿದ್ದೇನೆ. ಇಂದಿನಿಂದ ನನ್ನ ಜೀವನದಲ್ಲಿ ಎದ್ದಿರುವ ಬಿರುಗಾಳಿಗಳು ಯೇಸುನಾಮದಲ್ಲಿ ಎಲ್ಲಾ ತೀರಿತು . (ಪ್ರಕಟಣೆ 12:11)
3. ನನ್ನ ಜೀವನ ಕುಟುಂಬ ಮತ್ತು ನನ್ನ ಹಣಕಾಸಿನ ಸ್ಥಿತಿಯನ್ನು ಬಾಧಿಸುತ್ತಿರುವ ಬಲಶಾಲಿ ವ್ಯಕ್ತಿಯನ್ನು ದೇವರ ಬೆಂಕಿ ಇಳಿದು ಯೇಸು ನಾಮದಲ್ಲಿ ಸುಟ್ಟು ಬೂದಿ ಮಾಡಲಿ. (ಇಬ್ರಿಯ 12:29)
4. ಬಲಶಾಲಿ ವ್ಯಕ್ತಿಯ ಬಳಿ ಇರುವ ನನ್ನೆಲ್ಲ ಸ್ವತ್ತುಗಳನ್ನು ಮತ್ತು ಆಶೀರ್ವಾದಗಳನ್ನು ಯೇಸುವಿನ ಪರಿಶುದ್ಧ ನಾಮದಲ್ಲಿ ಈಗಲೇ ಹಿಂಪಡೆಯುತ್ತಿದ್ದೇನೆ. (ಯೋವೇಲ 2:25)
5. ನನ್ನ ಜೀವಿತಕ್ಕೆ ವಿರುದ್ಧವಾಗಿ ಬಲಶಾಲಿ ವ್ಯಕ್ತಿಯಿಂದ ನಿಯೋಜಿಸಲಾಗಿರುವ ಮರಣ ಮತ್ತು ಪಾತಾಳದ ಕ್ರಿಯೆಗಳನ್ನು ಬಂದಿಸಿ ನಿಷ್ಕ್ರಿಯಗೊಳಿಸುತ್ತೇನೆ. (ಮತ್ತಾಯ 16:19)
6. ನನ್ನ ಜೀವಿತಕ್ಕೆ ವಿರೋಧವಾಗಿ ವ್ಯಾಧಿಗಳನ್ನು ಬಡತನವನ್ನು ಭಯ ಆತಂಕಗಳನ್ನು ಕಲ್ಪಿಸುವ ಬಲಶಾಲಿ ವ್ಯಕ್ತಿಯನ್ನು ಯೇಸು ನಾಮದಲ್ಲಿ ಕಟ್ಟಿಹಾಕಿ ನಿಷ್ಕ್ರಿಯಗೊಳಿಸುತ್ತೇನೆ. (2 ತಿಮೊತಿ 1:7)
7. ನನ್ನ ಜೀವಿತ ಆರೋಗ್ಯ ಕುಟುಂಬ ಹಣಕಾಸು ಮತ್ತು ನನ್ನ ಪ್ರೀತಿ ಪಾತ್ರರ ವಿರುದ್ಧವಾಗಿ ನಿಯೋಜಿಸಿರುವ ಬಲಶಾಲಿ ವ್ಯಕ್ತಿಯ ಎಲ್ಲಾ ಕ್ರಿಯೆಗಳನ್ನು ಯೇಸು ನಾಮದಲ್ಲಿ ಬಂಧಿಸಿ ಅವನಿಂದ ಸುಲುಕೊಂಡು ಅವನಿಗೆ ಪ್ರತಿಕಾರ ತೀರಿಸುತ್ತೇನೆ. (ಯೆಶಾಯ 54:17)
8. ಈ ಬಲಶಾಲಿ ವ್ಯಕ್ತಿಯ ಮನೆಯಿಂದ ಯೇಸು ನಾಮದಲ್ಲಿ ನನ್ನ ಹಣವನ್ನು ಬಿಡುಗಡೆ ಮಾಡುತ್ತಿದ್ದೇನೆ. (ಜ್ಞಾನೋಕ್ತಿ 6:31)
9. ನನಗೆ ವಿರೋಧವಾಗಿ ಕಾರ್ಯ ಮಾಡುತ್ತಿರುವ ಈ ಬಲಶಾಲಿ ವ್ಯಕ್ತಿಯನ್ನು ಅವನ ಮನೆಯನ್ನು ಯೇಸು ನಾಮದಲ್ಲಿ ದೇವರ ಕೈಗಳು ಸರ್ವನಾಶ ಮಾಡಲಿ. (ವಿಮೋಚನಾ ಕಾಂಡ 8:19)
10. ನನ್ನ ಜೀವಿತದಲ್ಲಿರುವ ಈ ಬಲಶಾಲಿ ವ್ಯಕ್ತಿಯು ಯೇಸುನಾಮದಲ್ಲಿ ಕೆಳಗೆ ಬಿದ್ದು ನಾಶವಾಗಲಿ (ಲೂಕ 10:19)
Join our WhatsApp Channel
Most Read
● ಯೇಸು ನಿಜವಾಗಿ ಖಡ್ಗ ಹಾಕಲೆಂದು ಬಂದನೇ?● ಆತ್ಮನಿಂದ ನಡೆಸಲ್ಪಡುವುದು ಎಂಬುದರ ಅರ್ಥವೇನು?
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?- 2
● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಯಹೂದವು ಮುಂದಾಗಿ ಹೊರಡಲಿ
● ಕಾಮದ ದುರಿಚ್ಛೆಗಳಿಂದ ಹೊರಬರುವುದು
ಅನಿಸಿಕೆಗಳು