"ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನು ಅನುಭವಿಸುವುದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನೂ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವುದು ದೇವರ ಅನುಗ್ರಹವೇ ಎಂದು ನನಗೆ ಗೊತ್ತಿದೆ."(ಪ್ರಸಂಗಿ 3:12-13)
'ಉಲ್ಲಾಸಿಸು ' ಎಂಬ ಪದವು ಸಂತೋಷ ಎಂಬ ಪದವನ್ನು ಒಳಗೊಂಡಿರುತ್ತದೆ ಎಂಬುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ನಿಮ್ಮ ವೈವಾಹಿಕ ಜೀವನವನ್ನೂ ಮತ್ತು ಮಕ್ಕಳೊಂದಿಗೆ ಆನಂದಿಸಲು, ನಿಮ್ಮ ಹೃದಯದಲ್ಲಿ ಆನಂದ ಇರಬೇಕು. ಆನಂದವು ಬಹುಮುಖ್ಯವಾಗಿದೆ. ಇದು ಪವಿತ್ರಾತ್ಮನ ಫಲವಾಗಿದೆ ಮತ್ತು ಸರ್ವಶಕ್ತ ದೇವರ ಪ್ರಸನ್ನತೆಯಿಂದ ಇದು ಹರಿದು ಬರುತ್ತದೆ. ಸಂತೋಷಕ್ಕಿಂತ ಆನಂದ ಎಂಬುದು ತುಂಬಾ ಉನ್ನತವಾದದ್ದಾಗಿದೆ. ಸಂತೋಷವು ಒಳ್ಳೆಯ ಘಟನೆಗಳಿಂದ ಬರುತ್ತದೆ, ಆದರೆ ಆನಂದವು ಇನ್ನೂ ಹೆಚ್ಚಾದ ಆಳತ್ವ ಹೊಂದಿದೆ . ನೀವು ಕ್ರಿಸ್ತ ಯೇಸುವಿನ ಮೂಲಕ ಆತನೊಂದಿಗೆ ಸಂಬಂಧವನ್ನು ಹೊಂದಿಕೊಂಡಿರುವುದರಿಂದ ನೀವು ದೇವರೊಂದಿಗೆ ಸಮಾಧಾನ ಹೊಂದಿದ್ದೀರಿ ಎಂಬುದನ್ನು ನೀವು ತಿಳಿದು ಕೊಂಡಾಗ, ನೀವು ಕಷ್ಟದ ಸಮಯದಲ್ಲಿಯೂ ಆನಂದವನ್ನು ಅನುಭವಿಸಬಹುದು. ಆನಂದ ಎನ್ನುವವಂಥದ್ದು ನಾವು ಏನಾಗಿದ್ದೆವೋ ಅದಕ್ಕಿಂತಲೂ "ಉನ್ನತವಾದದ್ದು " ಎಂಬುದಕ್ಕೆ ನಮ್ಮನ್ನು ಸಂಪರ್ಕಿಸುವ ಅನುಭವವಾಗಿದೆ.
"ಹತಾಶೆಗೊಳಗಾದ ಮತ್ತು ಪೀಡಿತರ ದಿನಗಳೆಲ್ಲಾ [ಆತಂಕದ ಆಲೋಚನೆಗಳು ಮತ್ತು ಮುನ್ಸೂಚನೆಗಳನ್ನು ಯೋಚಿಸುತ್ತಾ] ಕೆಟ್ಟದಾಗಿ ಮಾಡಲ್ಪಡುತ್ತವೆ, ಆದರೆ ಹರ್ಷದ ಹೃದಯವನ್ನು ಹೊಂದಿರುವವರು [ಸಂದರ್ಭಗಳನ್ನು ಲೆಕ್ಕಿಸದೆ].ನಿರಂತರವಾಗಿ ಔತಣ ಅನುಭವಿಸುವವರಾಗಿರುತ್ತಾರೆ (ಜ್ಞಾನೋಕ್ತಿ 15:15)
ಜ್ಞಾನೋಕ್ತಿ 15:15 ರ ಪ್ರಕಾರ, ನಿಮ್ಮ ಹೃದಯದಲ್ಲಿ ನೀವು ಆನಂದವನ್ನು ಹೊಂದಿರುವಾಗ ಜೀವನವು ನಿರಂತರ ಔತಣದಂತೆ ಇರುತ್ತದೆ! ಹಾಗೆಂದರೆ ನೀವು ಗುಲಾಬಿ ಬಣ್ಣದ ಕನ್ನಡಕವನ್ನು ಹಾಕಿಕೊಂಡು ಯಾವಾಗಲೂ ಆಕಾಶದಲ್ಲಿ ಓಲಾಡುವವರಂತೆ ನಿಮ್ಮ ಜೀವನವನ್ನು ನಡೆಸುತ್ತೀರಿ ಎಂದು ಇದರ ಅರ್ಥವಲ್ಲ. ಇದರರ್ಥ ನೀವು ಸಮಸ್ಯೆಗಳನ್ನು ಎದುರಿಸುತ್ತಿರುವಾಗಲೂ ದೇವರು ಒಳ್ಳೆಯವನು ಮತ್ತು ಆತನು ನಿಮ್ಮ ಪಕ್ಷವಾಗಿದ್ದಾನೆ ಎಂದು ತಿಳಿದುಕೊಳ್ಳುವ ಮೂಲಕ ನೀವು ಆನಂದದ ಮತ್ತು ಕೃತಜ್ಞತೆಯ ಆಳವಾದ ಅರ್ಥವನ್ನು ಗ್ರಹಿಸಿಕೊಂಡಿರುತ್ತೀರಿ ಎಂದರ್ಥ . "ದೇವರು ನನ್ನ ಪರವಾಗಿದ್ದರೆ, ನಮ್ಮನ್ನು ಎದುರಿಸುವವರಾರು ?" (ರೋಮ 8:31) ಎನ್ನುವಂತದ್ದು ನಿಮ್ಮ ನಿರಂತರವಾದ ಬಾಯ ಅರಿಕೆಯಾಗಿರುತ್ತದೆ. ನೀವು ಕಷ್ಟದ ಸಮಯದಲ್ಲಿ ಹಾದು ಹೋದಂತೆಲ್ಲಾ ನೀವು ಆತನಲ್ಲಿ ನಿಮ್ಮ ನಂಬಿಕೆಯನ್ನು ಸ್ಥಿರವಾಗಿಕಾದುಕೊಳ್ಳುವವರಾಗಿರುತ್ತೀರಿ.
ಹರ್ಷವು ನಿಮ್ಮ ದೇಹದ ಮೇಲೆಯೂ ದೈಹಿಕ ಪರಿಣಾಮವನ್ನು ಬೀರುತ್ತದೆ.
"ಹರ್ಷಹೃದಯವು ಒಳ್ಳೆಯ ಔಷಧ; ಆದರೆ ಕುಗ್ಗಿದ ಮನಸ್ಸು ಎಲುಬುಗಳನ್ನು ಒಣಗಿಸುತ್ತದೆ." ಎಂದು ಜ್ಞಾನೋಕ್ತಿಗಳು 17:22 ಹೇಳುತ್ತದೆ. ನೀವು ನಿಮ್ಮ ಜೀವನವನ್ನು ಆನಂದದಿಂದಲೂ ಮತ್ತು ನಗುವಿನಿಂದಲೂ ಜೀವಿಸಬೇಕೆಂಬುದಾಗಿ ಆಯ್ಕೆ ಮಾಡಿ ಕೊಳ್ಳುವುದರಿಂದ ನೀವು ಸ್ವಸ್ತವಾಗಿರಲು ಮತ್ತು ಆರೋಗ್ಯವಾಗಿರಲು ಅದು ನಿಮಗೆ ಸಹಾಯ ಮಾಡುತ್ತದೆ!
ನಿಮ್ಮ ಜೀವನದಲ್ಲಿ ನೀವು ಆನಂದವನ್ನು ಹೊಂದಲು ಕೆಲವು ಪ್ರಾಯೋಗಿಕ ಮಾರ್ಗಗಳನ್ನು ಹಂಚಿಕೊಳ್ಳಲು ನನಗೆ ಅನುಮತಿಸಿ:
1. ಚಿಕ್ಕ ಚಿಕ್ಕ ವಿಷಯಗಳನ್ನು ಶ್ಲಾಘಿಸಿ:
ನೀವು ನಿಮ್ಮ ಜೀವನದಲ್ಲಿನ ಸಣ್ಣ ಸಣ್ಣ ವಿಷಯಗಳನ್ನು ಪ್ರಶಂಸಿಸಲು ಪ್ರಾರಂಭಿಸಿದಾಗ ಮತ್ತು ಅವುಗಳಿಗಾಗಿ ದೇವರಿಗೆ ಧನ್ಯವಾದ ಹೇಳಲು ಪ್ರಾರಂಭಿಸಿದಾಗ, ನಿಮ್ಮ ಆತ್ಮವು ಆನಂದದಿಂದ ತುಂಬಿರುವುದನ್ನು ನೀವು ನೋಡುತ್ತೀರಿ.
2. ಧನಾತ್ಮಕ ಜನರೊಂದಿಗೆ ಬೆರೆತಿರ್ರಿ.
ಆನಂದ ಎಂಬುದು ಸಾಂಕ್ರಾಮಿಕವಾಗಿದೆ, ಹಾಗೆಯೇ ನಕಾರಾತ್ಮಕತೆಯೂ ಸಹ. ಪ್ಲೇಗ್ನಂತಹ ನಕಾರಾತ್ಮಕ ಜನರಿಂದ ತಪ್ಪಿಸಿಕೊಳ್ಳಿ. ನಿಮ್ಮಲ್ಲಿ ಭಕ್ತಿವೃದ್ಧಿ ಮಾಡುವ ಮತ್ತು ನಿಮ್ಮನ್ನು ಗೊಂದಲಗೊಳಿಸದಂತ ವೀಡಿಯೊಗಳನ್ನು ಮಾತ್ರ ವೀಕ್ಷಿಸಿ. ಹೀಗೆ ಇಂದು, ನಗಲು, ಪ್ರಶಂಸಿಸಲು ಅಥವಾ ಆನಂದಿಸಲು
ಏನನ್ನಾದರೂ ಕಂಡುಕೊಳ್ಳಿ. ನಿಮ್ಮ ಸಂಬಂಧಗಳಿಗೆ ಮತ್ತು ನಿಮ್ಮ ದೇಹಕ್ಕೆ ಉತ್ತಮ ಪ್ರಮಾಣದ ನಗು ಎಂಬ ಔಷಧಿಯನ್ನು ನೀಡಿ!
ಈ ಜೀವನ ಎಂಬುದು ಮನುಷ್ಯನಿಗೆ ದೇವರ ಕೊಡುಗೆಯಾಗಿದೆ. ದೇವರು ಅನುಗ್ರಹಿಸಿರುವ ಈ ಜೀವನದಲ್ಲಿ ನಾವು ಏನು ಮಾಡುತ್ತೇವೆಯೋ ಅದು ದೇವರಿಗೆ ನಮ್ಮ ಕೊಡುಗೆಯಾಗಿದೆ.
ಪ್ರಾರ್ಥನೆಗಳು
ಕರ್ತನ ಆನಂದವೇ ಯೇಸುನಾಮದಲ್ಲಿ ನನಗೆ ಬಲ.
Join our WhatsApp Channel
Most Read
● ಪುರುಷರು ಏಕೆ ಪತನಗೊಳ್ಳುವರು -6● ದಿನ 23:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಕ್ರಿಸ್ತನ ಮೂಲಕ ಜಯಶಾಲಿಗಳು
● ದಿನ 03:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
ಅನಿಸಿಕೆಗಳು