ಅನುದಿನದ ಮನ್ನಾ
ಲಂಬಕೋನ ಹಾಗೂ ಸಮತಲದ ಕ್ಷಮಾಪಣೆ.
Thursday, 1st of February 2024
1
1
421
Categories :
ಕ್ಷಮೆ (Forgiveness)
ಈ ಲೋಕದಲ್ಲಿ ಹಿಂದೆಂದಿಗಿಂತಲೂ ಈಗ ನೋವು ಸಂಕಟ ಮನಮುರಿಯುವಿಕೆ, ಮಾನಸಿಕವಾದ ಭಾವನಾತ್ಮಕವಾದ ಮತ್ತು ಭೌತಿಕವಾದ ಹುಣ್ಣಿಗೆ ಗಾಯ ಕಟ್ಟುವರಾರು ಎಂಬ ಕೂಗು ಹೆಚ್ಚಾಗಿ ಬಿಟ್ಟಿದೆ. ಕ್ರಿಸ್ತನನ್ನು ಅನುಸರಿಸವರಾದ ನಾವು ಈ ಗಾಯಕಟ್ಟುವ ಪಾತ್ರೆಗಳಾಗಿ ಕರೆಯಲ್ಪಟ್ಟು ನಮ್ಮ ಮೇಲೆ ಉದಾರವಾಗಿ ಸುರಿಸಲ್ಪಟ್ಟ ಅದೇ ಪ್ರೀತಿಯನ್ನು ಹೊಂದಾಣಿಕೆಯನ್ನು ಮತ್ತು ಕಾರುಣ್ಯವನ್ನು ಇಂತವರಿಗೆ ವಿಸ್ತರಿಸುವವರಾಗಿದ್ದೇವೆ. ಆದರೂ ನಾವೇ ಕ್ಷಮಿಸಲಾರದಂತ ಮನೋಗುಣದ ಸರಪಳಿಯಿಂದ ಬಂದಿಸಲ್ಪಟ್ಟಿರುವಾಗ ನಾವು ಹೇಗೆ ತಾನೇ ಈ ಸೇವೆಯನ್ನು ಮಾಡಲು ಸಾಧ್ಯ?ಅಪೋಸ್ತಲನಾದ ಪೌಲನು ತಾನು ಎಪೆಸ್ಸೆದವರಿಗೆ ಬರೆದ ಪತ್ರಿಕೆಯಲ್ಲಿ ಕ್ಷಮಾಗುಣದ ಮಹತ್ವವನ್ನು ಒತ್ತಿ ಹೇಳುತ್ತಾನೆ. "ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ."(ಎಫಸ್ಸೆ 4:32). ಈ ವಾಕ್ಯವು ನಾವು ಮನುಷ್ಯ ಮಟ್ಟದಲ್ಲಿ ಮಾತ್ರ ಕ್ಷಮಿಸದೆ ದೈವೀಕ ರೀತಿಯಲ್ಲಿ ನಮ್ಮ ಕ್ಷಮಾ ಗುಣದ ಮಟ್ಟವನ್ನು ಏರಿಸಿಕೊಳ್ಳಬೇಕೆಂದು ಪ್ರಕಾಶ ಪಡಿಸುತ್ತದೆ.
ದೈವಿಕ ಮಾದರಿಯ ಕ್ಷಮಾಪಣೆ
ಎಲ್ಲಾ ರೀತಿಯ ಕ್ಷಮಾ ಗುಣದ ಬೇರು ಪ್ರಮುಖವಾಗಿ ದೇವರು ನಮ್ಮನ್ನು ಕುರಿತು ತೋರಿಸಿದ ವಾಸ್ತವಿಕವಾದ ಕೃಪೆಯಲ್ಲಿಯೇ ಬೇರೂರಿದ್ದು ನಮಗಾಗಿ ಶಿಲುಬೆಯ ಮೇಲೆ ಬಲಿಯಾದ ಕ್ರಿಸ್ತನ ಕಾರ್ಯದಿಂದ ಸಂಗ್ರಹಿಸಲ್ಪಟ್ಟಿದ್ದೇ ಆಗಿದೆ. ಈ ಅಪ್ರತಿಮ ಪ್ರೀತಿಯ ಕಾರ್ಯವೇ ನಮ್ಮ ಕ್ಷಮಿಸುವ ಸಾಮರ್ಥ್ಯಕ್ಕೆ ತಳಹದಿಯನ್ನು ರೂಪಿಸುತ್ತದೆ. ಲಂಬಕೋನಾಕಾರದ ಮರದ ಕಂಬ -ಅಡ್ಡಗೆರೆಯಂತಿರುವ ಮರದ ಕಂಬ ಇವುಗಳಿಂದ ಉಂಟಾದ ಶಿಲುಬೆಯ ವಿನ್ಯಾಸವೇ ಕ್ಷಮಾಪಣೆಯ ಅಳತೆಯನ್ನು ಸೂಚಿಸುತ್ತದೆ. ಪ್ರತಿ ಕಂಬವು ಗಂಭೀರವಾದ ನಮ್ಮ ಕ್ಷಮಾಪಣೆಯ ಪ್ರಯಾಣವನ್ನು ಪ್ರತಿನಿಧಿಸುತ್ತದೆ.
ಲಂಬಕೋನದ ಕ್ಷಮಾಪಣೆ.
ಶಿಲುಬೆಯಲ್ಲಿರುವ ಲಂಬಕೋನದ ಕಂಬವು ನಾವು ಕ್ರಿಸ್ತನ ಮೂಲಕ ದೇವರಿಂದ ಹೊಂದಿಕೊಂಡ ಸಮಾಧಾನವನ್ನು ಎತ್ತಿ ತೋರಿಸುತ್ತದೆ. ಈ ಕ್ಷಮಾಪಣೆಯು ಕ್ರಿಸ್ತನಿಂದ ಆರಂಭಿಸಲ್ಪಟ್ಟು ಕ್ರಿಸ್ತನಿಂದ ಮುಗಿಸಲ್ಪಟ್ಟ ಕಾರ್ಯದಿಂದಾಗಿ ದೇವರಿಂದ ನಾವು ಹೊಂದಿಕೊಂಡ ಕ್ಷಮಾಪಣೆಯನ್ನು ಉಜ್ವಲವಾಗಿ ಪ್ರತಿನಿಧಿಸುತ್ತದೆ. "ಈತನು ನಮಗೋಸ್ಕರ ತನ್ನ ರಕ್ತವನ್ನು ಸುರಿಸಿದ್ದರಿಂದ ನಮ್ಮ ಅಪರಾಧಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. ಇದು ದೇವರ ಕೃಪಾತಿಶಯವೇ."(ಎಫೆಸದವರಿಗೆ 1:7). ಈ ಲಂಬಕೋನದ ಕ್ಷಮಾಪಣೆಯೂ ನಮ್ಮ ಸೃಷ್ಟಿಕರ್ತ ನೊಂದಿಗೆ ನಾವು ಸ್ವಚ್ಛಂದವಾದ ನವೀಕರಿಸಲ್ಪಟ್ಟ ಸಂಬಂಧವನ್ನು ಬೆಸೆದುಕೊಳ್ಳುವ, ಬಿಡುಗಡೆ ಹಾಗೂ ಸ್ವಸ್ಥತೆಯನ್ನೂ ಹೊಂದಿಕೊಳ್ಳಲು ಇರುವ ಪ್ರವೇಶ ದ್ವಾರವಾಗಿದೆ.
ಅಡ್ಡಗೆರೆಯ ಅಥವಾ ಸಮತಲದ ಕ್ಷಮಾಪಣೆ.
ಶಿಲುಬೆಯಲ್ಲಿನ ಅಡ್ಡಗೆರೆಯ ಅಥವಾ ಸಮತಲವಾಗಿರುವ ಕಂಬವು ನಾವು ಒಬ್ಬರಿಗೊಬ್ಬರು ಕ್ಷಮಿಸಿಕೊಳ್ಳ ಬೇಕು ಎಂಬುದನ್ನು ಸೂಚಿಸುತ್ತದೆ ಮತ್ತು ಈ ಕ್ಷಮಾಪಣೆಯು ನಮ್ಮನ್ನು ನಾವು ಕ್ಷಮಿಸಿಕೊಳ್ಳುವುದಕ್ಕೂ ಅನ್ವಯಿಸುತ್ತದೆ.
ಇತರರನ್ನು ಕ್ಷಮಿಸುವ- ನಮ್ಮನ್ನು ನಾವೇ ಕ್ಷಮಿಸಿಕೊಳ್ಳುವ ಈ ದ್ವಿಮುಖ ಮಾರ್ಗಗಳು ಸಂಪೂರ್ಣವಾದ ಸ್ವಸ್ಥತೆಗೆ ಪುನಃ ಸ್ಥಾಪನೆಗೆ ಅತ್ಯಾವಶ್ಯಕ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹೇಳಿಕೊಟ್ಟ ಪ್ರಾರ್ಥನೆ ಈ ಪರಿಕಲ್ಪನೆಯನ್ನು ಬಲಪಡಿಸುತ್ತದೆ. "ನಮಗೆ ತಪ್ಪು ಮಾಡಿದವರನ್ನು ನಾವು ಕ್ಷವಿುಸಿದಂತೆ ನಮ್ಮ ತಪ್ಪುಗಳನ್ನು ಕ್ಷವಿುಸು." (ಮತ್ತಾಯ 6:12). ಈ ವಾಕ್ಯವು ದೇವರಿಂದ ನಾವು ಹೊಂದಿಕೊಳ್ಳಬಹುದಾದ ಕ್ಷಮಾಪಣೆಯ ಪ್ರಮಾಣವು ನಾವು ಇತರರನ್ನು ಕ್ಷಮಿಸುವ ಪ್ರಮಾಣದೊಟ್ಟಿಗೆ ಹೆಣೆದುಕೊಂಡಿದೆ ಎಂಬುದನ್ನು ನಮಗೆ ನೆನಪಿಸುತ್ತದೆ.
ಇಬ್ಬರು ಶಿಷ್ಯರ ಕಥೆ
ಸುವಾರ್ತೆಯು ಪೇತ್ರ ಹಾಗೂ ಯೂದಾನೆಂಬ ಕರ್ತನಾದ ಯೇಸುವಿನ ಶಿಷ್ಯರು ತನ್ನ ಗುರುವಿಗೆ ನಂಬಿಕೆ ದ್ರೋಹ ಮಾಡಬೇಕಾದ ಬಿರುಗಾಳಿಯನ್ನು ಅನುಭವಿಸಿದ, ಆದರೂ ಆ ಪರಿಸ್ಥಿತಿಯಲ್ಲಿ ಈ ಇಬ್ಬರು ವಿವಿಧ ಮಾರ್ಗದಲ್ಲಿ ಸಾಗಿದಂತಹ ಒಂದು ಕಥೆಯನ್ನು ನಮ್ಮ ಮುಂದೆ ಪ್ರಸ್ತುತಪಡಿಸುತ್ತದೆ. ಪೇತ್ರನು,ಯೇಸುವಿನ ನ್ಯಾಯ ವಿಚಾರಣೆಯ ಸಮಯದಲ್ಲಿ ಯೇಸುವನ್ನು ಅಲ್ಲಗಳೆದವನಾಗಿ ಕ್ಷಮಾಪಣೆಯ ಅದ್ಭುತವಾದ ರೂಪಾಂತರ ಪಡಿಸುವ ಬಲವನ್ನು ಪಡೆದುಕೊಂಡ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಅವನು ಬಿದ್ದು ಹೋದವನಾಗಿದ್ದನು. ಯೇಸುವಿನ ಕ್ಷಮೆಯ ಮೂಲಕ ಕೃಪೆಯಿಂದ ಮತ್ತೆ ಪುನಸ್ತಾಪಿಸಲ್ಪಟ್ಟು ನಂತರದಲ್ಲಿ ಆದಿಸಭೆಗೆ ಸ್ತಂಬವಾಗಿ ಮಾರ್ಪಟ್ಟನು. ದೇವರ ಆಪ್ಯಾಯಮಾನವಾದ ಕೃಪೆಯಿಂದ ದೊರಕುವ ನಿರೀಕ್ಷೆಗೂ ನವೀಕರಣಕ್ಕೂ ಇವನ ಚರಿತ್ರೆಯು ಒಂದು ಸಾಕ್ಷಿಯಾಗಿದೆ.
ಇನ್ನೊಂದು ಕಡೆಯಲ್ಲಿ ಯೇಸುವನ್ನು ಹಿಡುಕೊಟ್ಟ ಇಸ್ಕರಿಯೋತ ಯೂದನು, ಕ್ಷಮಾಪಣೆಯನ್ನು ತಿರಸ್ಕರಿಸಿದವನು ಎದುರಿಸಬೇಕಾದ ದುರಂತ ಪರಿಸ್ಥಿತಿಗೆ ಪ್ರದರ್ಶನವಾಗಿದ್ದಾನೆ. ಇವನು ಅಪರಾಧಿ ಮನೋಭಾವದಿಂದ ಹತಾಶೆಯಿಂದ ತುಂಬಿದವನಾಗಿ ಕರುಣೆಯನ್ನು ಎದುರು ನೋಡುವ ಬದಲು ಆತ್ಮಹತ್ಯೆಯನ್ನು ಆಯ್ಕೆ ಮಾಡಿಕೊಂಡನು. ಅವನ ಅಂತ್ಯವು ಈ ಒಂದು ಪ್ರಮುಖ ಸತ್ಯವನ್ನು ಒತ್ತಿ ಹೇಳುತ್ತದೆ: ನಮ್ಮ ಪಾಪವು ನಮ್ಮ ಗತಿಯನ್ನು ನಿರ್ಧರಿಸುವುದಿಲ್ಲ ಆದರೆ ದೇವರು ನಮಗೆ ಅನುಗ್ರಹಿಸಿದ ಕ್ಷಮಾಪಣೆಗೆ ನಾವು ಸ್ಪಂದಿಸುವ ರೀತಿಯು ಅದನ್ನು ನಿರ್ಧರಿಸುತ್ತದೆ ಎಂಬುದೇ (ಮತ್ತಾಯ 27:3-5)
ಕ್ಷಮಾಪಣೆಯನ್ನು ಅಪ್ಪಿಕೊಳ್ಳುವುದು.
ಕ್ಷಮಾಪಣೆ ಎಂಬುದು ಕೇವಲ ಭಾವನಾತ್ಮಕ ತೋರಿಕೆಯಲ್ಲ. ಬದಲಾಗಿ ಅದು ಆತ್ಮಿಕ ಮತ್ತು ಭಾವನಾತ್ಮಕವಾದ ಬಿಡುಗಡೆಗೆ ನಡೆಸುವಂತಹ ಉದ್ದೇಶಪೂರ್ವಕವಾದ ಆಯ್ಕೆಯಾಗಿದೆ. " ನಾನು ಅವರ ಅಪರಾಧವನ್ನು ಕ್ಷವಿುಸಿ ಅವರ ಪಾಪವನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ. ಇದು ಯೆಹೋವನ ನುಡಿ."("ಯೆರೆಮೀಯ 31:34) ಎಂದು ಪ್ರವಾದಿಯಾದ ಯೆರೆಮೀಯನು ಸಾರುತ್ತಾನೆ. 'ದೈವಿಕ ಮರೆವು' ಎಂದು ಕರೆಯಲ್ಪಡುವ ನಮ್ಮ ಅಪರಾಧಗಳನ್ನು ಮರೆತು ಬಿಡುವ ದೇವರ ನಿರ್ಧಾರವು ನಮಗೆ ಆತನ ಕ್ಷಮಾಗುಣದ ವ್ಯಾಪ್ತಿಯು ಒಂದು ಮಿನುಗು ನೋಟವನ್ನು ಕೊಟ್ಟು ನಾವು ಕೂಡ ಹಾಗೆಯೇ ಕ್ಷಮಿಸಲು ಒಂದು ಉದಾಹರಣೆಯಾಗಿ ಕಾರ್ಯ ಮಾಡುತ್ತದೆ.
ಇತರರನ್ನು ಕ್ಷಮಿಸುವ ವ್ಯಾಪ್ತಿಯನ್ನು ವಿಸ್ತರಿಸುವುದು.
ಕ್ಷಮಿಸುವಂತಹ ಕಾರ್ಯ ಬರಿ ಮಾತಿನಲ್ಲಿ ಹೇಳುವಷ್ಟು ಸುಲಭವಲ್ಲ ವಿಶೇಷವಾಗಿ ಅದರಿಂದಾದಂತಹ ನೋವು ಆಳವಾಗಿದ್ದಾಗ ಕ್ಷಮಿಸುವಂತದ್ದು ಇನ್ನೂ ಕಷ್ಟಕರ. ಆದರೂ ಸ್ವಸ್ತತೆ ಹೊಂದಬೇಕಾದರೆ ಈ ಒಂದು ಹೆಜ್ಜೆಯು ನಿರ್ಣಾಯಕವಾಗಿದೆ. ಕ್ಷಮಿಸುವ ಪ್ರಕ್ರಿಯೆಯು ನಮ್ಮನ್ನು ಕಹಿ ಭಾವದಿಂದಲೂ ಅಸಮಾಧಾನದಿಂದಲೂ ನಮ್ಮನ್ನು ಮುಕ್ತಗೊಳಿಸಿ, ಮುರಿದ ಮನಸ್ಸನ್ನು ಸ್ವಸ್ಥ ಪಡಿಸಲು ದೇವರ ಸ್ವಸ್ಥತಾ ಬೆಳಕು ನಮ್ಮಲ್ಲಿ ಹರಿಯುವಂತೆ ಮಾರ್ಗವನ್ನು ಸುಗಮಗೊಳಿಸುತ್ತದೆ.
ಕಠಿಣವಾದ ಕ್ಷಮಾಪಣೆ.
ಬಹುಶಃ ಅತ್ಯಂತ ದೊಡ್ಡ ಸವಾಲೆನಿಸುವ ಕ್ಷಮಾಪಣೆಯ ರೂಪವೆಂದರೆ ಅದು ನಮ್ಮನ್ನೇ ನಾವು ಕ್ಷಮಿಸಿಕೊಳ್ಳುವಂತದ್ದು ಎನ್ನಬಹುದು. ಇದಕ್ಕೆ ನಮ್ಮ ಅಪರಿಪೂರ್ಣತೆಯನ್ನು ಒಪ್ಪಿಕೊಳ್ಳುವಂಥ ಹಾಗೂ ದೈವಿಕ ಕೃಪೆಯನ್ನು ಅಪ್ಪಿಕೊಳ್ಳುವಂತಹ ಮನಸ್ಸು ಅವಶ್ಯವಾದದ್ದು. ನಾವು ಕ್ರಿಸ್ತನಲ್ಲಿ ನೂತನ ಸೃಷ್ಟಿಯಾದ ವ್ಯಕ್ತಿತ್ವವನ್ನು ಅಪ್ಪಿಕೊಂಡು ಯೇಸುವಿನಿಂದ ದೊರೆತ ಕ್ಷಮೆ ಹಾಗೂ ಪ್ರೀತಿಯಿಂದ ನಾವು ಪುನಸ್ತಾಪಿಸಲ್ಪಡಲು ನಮ್ಮನ್ನು ನಾವು ಪೇತ್ರನ ಹಾಗೆ ಬಿಟ್ಟುಕೊಡಬೇಕು. (2ಕೊರಿಯಂತೆ 5:17)
ಹೀಗೆ ನಾವು ದೇವರ ಕ್ಷಮಾ ಗುಣದ ಬೆಳಕಿನಲ್ಲಿ ನಡೆಯುವವರಾಗಿ ಕ್ರಿಸ್ತನಲ್ಲಿ ನಮಗೆ ದೊರಕಿದ ಕ್ಷಮೆಯನ್ನು ನೆನಪಿಸಿಕೊಂಡವರಾಗಿ ಇತರರನ್ನು, ನಮ್ಮನ್ನು ಕ್ಷಮಿಸಿಕೊಳ್ಳುವರಾಗೋಣ. ಹಳೆಯ ಬಂಧನಗಳಿಂದ ಮುಕ್ತರಾಗೋಣ. ಆತನಲ್ಲಿನ ಸ್ವಾತಂತ್ರ್ಯದಲ್ಲಿ ಜೀವಿಸಲು ಕರೆದಂತ ಆತನ ಎತ್ತರದ ಆಳದ ಕ್ಷಮಾಗುಣಕ್ಕೆ ಶಿಲುಬೆಯೇ ನಮಗೆ ನಿಶ್ಚಲವಾದ ಜ್ಞಾಪಕ ಪತ್ರವಾಗಿರಲಿ.
ಪ್ರಾರ್ಥನೆಗಳು
ಪ್ರೀತಿಯುಳ್ಳ ತಂದೆಯೇ, ನಾನು ಎಂದಿಗೂ ನಿನ್ನ ಪ್ರೀತಿಯನ್ನು ಸಂಪಾದಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡಿದ್ದೇನೆ. ನಿನ್ನ ಬೆಲೆಕಟ್ಟಲಾಗದ ಪ್ರೀತಿಗಾಗಿ ನಿನಗೆ ಸ್ತೋತ್ರ. ನೀನು ಅನುಗ್ರಹಿಸಿದ ಕ್ಷಮೆಯನ್ನು ನಾನು ಅಂಗೀಕರಿಸಿಕೊಳ್ಳುತ್ತೇನೆ. ಇದರಿಂದ ನನ್ನೆಲ್ಲಾ ಅಪರಾಧ ಭಾವವೂ ಅವಮಾನಗಳು ಯೇಸುವಿನ ರಕ್ತದ ಮೂಲಕ ತೊಳೆಯಲ್ಪಟ್ಟಿದೆ. ಆಮೆನ್
Join our WhatsApp Channel
Most Read
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು● ದೇವರು ನಿಮ್ಮನ್ನು ಉಪಯೋಗಿಸಲು ಬಯಸುತ್ತಾನೆ.
● ಆತನ ಬೆಳಕಿನಲ್ಲಿ ಸಂಬಂಧಗಳ ಪೋಷಣೆ
● ಆ ಸುಳ್ಳುಗಳನ್ನು ಬಯಲಿಗೆಳೆಯಿರಿ.
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ನಿಮ್ಮ ಮನಸ್ಸಿಗೆ ಉಣಬಡಿಸಿರಿ
● ದಿನ 14:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು