ಅನುದಿನದ ಮನ್ನಾ
ಎರಡು ಸಾರಿ ಸಾಯಬೇಡಿರಿ
Wednesday, 7th of February 2024
4
3
330
Categories :
ಗುಣ(character)
"ಎಲೀಷನು ಮೃತಿಹೊಂದಲು ಅವನ ಶವವನ್ನು ಸಮಾಧಿಮಾಡಿದರು. ಮೋವಾಬ್ಯರು ಪ್ರತಿವರುಷದ ಪ್ರಾರಂಭದಲ್ಲಿ ಸುಲಿಗೆ ಮಾಡುವದಕ್ಕೋಸ್ಕರ ಗುಂಪು ಗುಂಪಾಗಿ ಬರುತ್ತಿದ್ದರು. 21ಒಂದು ದಿವಸ ಜನರು ಒಬ್ಬ ಸತ್ತವನನ್ನು ಸಮಾಧಿಮಾಡುವದಕ್ಕೆ ಹೋದಾಗ ಮೋವಾಬ್ಯರ ಗುಂಪು ಬರುತ್ತಿರುವದನ್ನು ಕಂಡು ಶವವನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿ ಓಡಿ ಹೋದರು. ಸತ್ತ ಮನುಷ್ಯನು ಎಲೀಷನ ಎಲುಬುಗಳಿಗೆ ತಗುಲಿದ ಕೂಡಲೆ ಉಜ್ಜೀವಿಸಿ ಎದ್ದು ನಿಂತನು."(2 ಅರಸುಗಳು 13:20-21)
ಪ್ರವಾದಿಯಾದ ಎಲೀಯನು ತನ್ನ ಜೀವಿತದ ಸೇವ ಕಾರ್ಯದಲ್ಲಿ ಆತನ ಮೇಲೆ ನೆಲೆಗೊಂಡಿದ್ದ ದೇವರ ಬಲದ ಮೂಲಕ 14 ಅದ್ಭುತ ಕಾರ್ಯಗಳನ್ನು ಮಾಡಿದ್ದನು.
ಪ್ರವಾದಿಯಾದ ಎಲೀಷನು ಪ್ರವಾದಿಯಾದ ಎಲೀಯನ ಆತ್ಮದ ಎರಡು ಪಾಲು ಆತ್ಮವನ್ನು ಹೊಂದಿದ್ದರೆ ಕನಿಷ್ಠ ಪಕ್ಷ 28 ಅದ್ಭುತಗಳನ್ನಾದರೂ ಪ್ರವಾದಿಯಾದ ಎಲೀಷನು ಮಾಡಬೇಕಷ್ಟೆ. ಆದಾಗಿಯೂ ಎಲೀಷನು ಸಾಯುವಾಗ ಕೇವಲ 27 ಅದ್ಭುತ ಕಾರ್ಯಗಳನ್ನು ಮಾತ್ರ ಮಾಡಲು ಸಾಧ್ಯವಾಗಿತ್ತು. ಇವನು ಸತ್ತ ಮೇಲೆ ಇವನ ಎಲುಬುಗಳು ತಾಕಿ ಸತ್ತ ಒಬ್ಬ ಮನುಷ್ಯನು ಜೀವಂತವಾಗಿ ಎದ್ದ ಅದ್ಭುತ ಕಾರ್ಯವು 28ನೆಯದಾಗಿದೆ.
ಕೆಲವು ಸತ್ಯವೇದ ಪಂಡಿತರು ಈ ಎಲ್ಲಾ ಅದ್ಬುತಗಳನ್ನು ಎಲೀಯನ ಮೇಲೆ ನೆಲೆಗೊಂಡಿದ್ದ ಆತ್ಮದ ಎರಡು ಪಟ್ಟು ಆತ್ಮದ ಪಾಲು ಎಲೀಷನ ಮೇಲೆ ಇಳಿದು ಬಂದಿದ್ದ ಕಾರಣ ನಿಖರವಾಗಿ ನೆರವೇರಿದ ಪ್ರವಾದನಾ ಕಾರ್ಯ ಎಂದು ಮಾತ್ರ ನೋಡುತ್ತಾರೆ.
ಬನ್ನಿ ಈ ಚರಿತ್ರೆಯನ್ನು ಒಮ್ಮೆ ತಿರುಗಿ ನೋಡೋಣ.
ಇಸ್ರಾಯೆಲ್ಯರಲ್ಲಿ ಒಬ್ಬ ಮನುಷ್ಯನು ಸತ್ತು ಹೋಗಿದ್ದು ಅವನ ದೇಹವನ್ನು ಹೂಳಲು ಪಟ್ಟಣದಿಂದ ಹೊರಗೆ ತರಲಾಗಿತ್ತು. ಇನ್ನೇನು ಉತ್ತರ ಕ್ರಿಯೆಗಳು ನೆರವೇರಿಸಬೇಕೆನ್ನುವಾಗ ಮೋವಾಬ್ಯಾರ ದರೋಡೆ ಮಾಡುವ ಗುಂಪು ಅಲ್ಲಿಗೆ ಬಂತು. ಪಟ್ಟಣದ ಕೋಟೆಯ ಒಳಗಾದರೆ ಅವರಿಗೆ ಸುರಕ್ಷತೆ ಭದ್ರತೆ ದೊರಕುತ್ತದೆ. ಆದರೆ ಈಗ ಆ ಮನುಷ್ಯರಿಗೆ ಈ ಸಮಾಧಿ ಕಾರ್ಯ ಮುಗಿಸಿ ತಮ್ಮ ಪಟ್ಟಣಕ್ಕೆ ಓಡಿ ಹೋಗುವುದು ಅಸಾಧ್ಯವೆನಿಸಿತು. ಈಗ ಅವರು ಒಂದು ಧರ್ಮ ಸಂಕಟಕ್ಕೆ ಸಿಲುಕಿಬಿಟ್ಟರು. ಅವರು ಈಗ ಏನು ಮಾಡುತ್ತಾರೆ? ಸತ್ತವನ ದೇಹವನ್ನು ಸಮಾಧಿ ಮಾಡಬೇಕೆಂದು ತಂದಿದ್ದನ್ನು ಅವರು ಏನು ಮಾಡಬೇಕು? ಅವರಿಗೆ ಅದನ್ನು ಸರಿಯಾದ ಕ್ರಮದಲ್ಲಿ ಹೂಳಬೇಕೆಂಬ ಯೋಚನೆ ಮಾಡಲು ಕೂಡ ಪುರುಸೊತ್ತು ಇಲ್ಲದೆ ಹೋಯಿತು. ಅದನ್ನು ಹಾಗೆಯೇ ಬಿಸಾಡಿ ಪಟ್ಟಣದೊಳಗೆ ಓಡಿ ಹೋಗೋಣ ಎಂದು ನಿರ್ಧರಿಸಿ ಬಿಟ್ಟರು.
ಅವರು ಆ ಅವಸರದಲ್ಲಿ ಅಕ್ಷರಶಃ ಆ ದೇಹವನ್ನು ಪ್ರವಾದಿಯಾದ ಎಲೀಷನ ಸಮಾಧಿ ಒಳಗೆ ಬಿಸಾಡಿ ಬಿಟ್ಟರು. ಎಲೀಷನ ಎಲುಬನ್ನು ಆ ದೇಹವು ತಾಕಿದ ಕೂಡಲೇ ಆ ಸತ್ತ ವ್ಯಕ್ತಿಯು ಉಜ್ಜೀವಿಸಿ ಎದ್ದು ತನ್ನ ಕಾಲುಗಳ ಮೇಲೆ ನಿಂತನು.
ಜೀವಿದಿಂದೆದ್ದ ವ್ಯಕ್ತಿಯು ಸಹ ಮೊವಾಬ್ಯರ ಗುಂಪನ್ನು ನೋಡಿ ಹೆದರಿರುತ್ತಾನೆ ಮತ್ತು ಪಟ್ಟಣದೊಳಗೆ ಓಡಿ ಹೋಗುವ ಪ್ರಯತ್ನ ಮಾಡಿರುತ್ತಾನೆ ಎಂದು ನಾನು ನಂಬುತ್ತೇನೆ
ಇಲ್ಲಿ ಆಸಕ್ತಿಕರ ವಿಷಯವೇನೆಂದರೆ, ಸಮಾಧಿ ಮಾಡಲು ಯಾರೆಲ್ಲಾ ಬಂದಿದ್ದರೋ ಅವರು ಕೂಡ ಪಟ್ಟಣದ ಕಡೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಓಡುತ್ತಿದ್ದಾರೆ. ಈ ಸತ್ತು ಜೀವಂತವಾಗಿ ಎದ್ದ ಮನುಷ್ಯನು ಸಹ ತನ್ನನ್ನು ರಕ್ಷಿಸಿಕೊಳ್ಳಲು ಓಡುತ್ತಿದ್ದಾನೆ. ಪ್ರಾಯಶಃ ಈ ಸತ್ತು ಜೀವಂತವಾಗಿ ಎದ್ದ ವ್ಯಕ್ತಿಯು ಅವರೆಲ್ಲರಿಗಿಂತಲೂ ವೇಗವಾಗಿ ಪಟ್ಟಣದ ಕಡೆಗೆ ಓಡಿ ಹೋಗಿರುತ್ತಾನೆ ಎಂದು ನಾನು ನಂಬುತ್ತೇನೆ. ಏಕೆಂದರೆ ಆ ವ್ಯಕ್ತಿಗೆ ಇನ್ನೊಂದು ಸಾರಿ ಸಾಯಲು ಇಷ್ಟವಿರುವುದಿಲ್ಲ.
ಸಮಾಧಿ ಮಾಡಲು ಬಂದ ಜನರು ಸತ್ತು ಜೀವಂತವಾಗಿ ಎದ್ದು ಬಂದವನು ಸಹ ಅವರ ಮುಂದೆ ಓಡಿ ಬರುತ್ತಿರುವುದನ್ನು ನೋಡಿದಾಗ ಆ ಸಮಾಧಿ ಮಾಡಲು ಬಂದ ಆ ಜನರ ಪ್ರತಿಕ್ರಿಯೆ ಹೇಗಿರಬಹುದು ಎಂಬುದನ್ನು ನೀವು ಸ್ವಲ್ಪ ಕಲ್ಪಿಸಿಕೊಳ್ಳ ಬಲ್ಲಿರಾ?
ಎಲೀಷನ ಎಲುಬುಗಳನ್ನು ತಾಕಿ ಜೀವದಿಂದೆದ್ದ ಈ ಸಂಗತಿಯ ಸಂದೇಶವು ಬಹಳ ಸರಳವಾಗಿದೆ. ದೇವರು ನಿಮ್ಮನ್ನು ಮುಟ್ಟಿದ ಮೇಲೆ, ನೀವು ರಕ್ಷಣೆಯ ಅನುಭವವನ್ನು ಹೊಂದಿದ ಮೇಲೆ, ನೀವು ದೇವರ ಸಾಕ್ಷಾತ್ಕಾರವನ್ನು ಹೊಂದಿದ ಮೇಲೆ, ನೀವು ಸುಮ್ಮನೆ ಹಾಗೆ ನಿಲ್ಲುವುದಕ್ಕಾಗುವುದಿಲ್ಲ. ದೇವರು ಕರೆದ ನಿಮ್ಮ ಓಟವನ್ನು ನೀವು ಓಡಲೇಬೇಕು
ಪ್ರಾರ್ಥನೆಗಳು
1. ತಂದೆಯೇ, ನೀನು ನನಗಾಗಿ ನೇಮಿಸಿದ ಓಟವನ್ನು ಪರಿಣಾಮಕಾರಿಯಾಗಿ ಓಡಿ ಮುಗಿಸುವಂತೆ ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ನನಗೆ ಅನುಗ್ರಹಿಸು
2. ನನ್ನನ್ನು ವಂಚಿಸುವ ನನ್ನ ದಿಕ್ಕು ತಪ್ಪಿಸುವ ಎಲ್ಲ ಚಿತ್ತ ವಿಕಲ್ಪಗಳು ಯೇಸು ನಾಮದಲ್ಲಿ ನಿನ್ನ ಪರಿಶುದ್ಧ ಬೆಂಕಿಯಿಂದ ಸುಟ್ಟು ಬೂದಿಯಾಗಲಿ
3. ನಾನು ಪಾಪದ ಪಾಲಿಗೆ ಸತ್ತು, ನೀತಿಗಾಗಿ ಜೀವಿಸುವೆನು ಎಂದು ಯೇಸು ನಾಮದಲ್ಲಿ ಅರಿಕೆ ಮಾಡುತ್ತೇನೆ.
2. ನನ್ನನ್ನು ವಂಚಿಸುವ ನನ್ನ ದಿಕ್ಕು ತಪ್ಪಿಸುವ ಎಲ್ಲ ಚಿತ್ತ ವಿಕಲ್ಪಗಳು ಯೇಸು ನಾಮದಲ್ಲಿ ನಿನ್ನ ಪರಿಶುದ್ಧ ಬೆಂಕಿಯಿಂದ ಸುಟ್ಟು ಬೂದಿಯಾಗಲಿ
3. ನಾನು ಪಾಪದ ಪಾಲಿಗೆ ಸತ್ತು, ನೀತಿಗಾಗಿ ಜೀವಿಸುವೆನು ಎಂದು ಯೇಸು ನಾಮದಲ್ಲಿ ಅರಿಕೆ ಮಾಡುತ್ತೇನೆ.
Join our WhatsApp Channel
Most Read
● ಕರ್ತನು ಹೃದಯವನ್ನೇ ಶೋಧಿಸುವವನಾಗಿದ್ದಾನೆ.● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪುರುಷರು ಯಾಕೆ ಪತನಗೊಳ್ಳುವರು -2
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ಯೇಸುವನ್ನು ನೋಡುವ ಬಯಕೆ
● ಸಿಟ್ಟಿನ ಬಲೆಯಿಂದ ದೂರ ಉಳಿಯುವುದು
● ದುಷ್ಟ ಮಾದರಿಗಳಿಂದ ಹೊರಬರುವುದು.
ಅನಿಸಿಕೆಗಳು