ಅನುದಿನದ ಮನ್ನಾ
ದೇವರಿಗಾಗಿ ಮತ್ತು ದೇವರೊಂದಿಗೆ.
Monday, 12th of February 2024
2
2
373
Categories :
ದೇವರೊಂದಿಗೆ ಆತ್ಮೀಯತೆ (Intimacy with God)
ದೇವರನ್ನು ಅರಿತುಕೊಂಡು ಕರೆಯನ್ನು ತಿಳಿದುಕೊಳ್ಳುವುದು.
"ನನ್ನ ಮಗನಾದ ಸೊಲೊಮೋನನೇ, ನೀನಂತೂ ನಿನ್ನ ತಂದೆಯ ದೇವರನ್ನು ಅರಿತುಕೊಂಡು ಸಂಪೂರ್ಣಹೃದಯದಿಂದಲೂ ಮನಸ್ಸಂತೋಷದಿಂದಲೂ ಆತನನ್ನೇ ಸೇವಿಸು; ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವದಾದರೆ ಆತನು ನಿನಗೆ ಸಿಕ್ಕುವನು. ಆತನನ್ನು ಬಿಟ್ಟರೆ ನಿನ್ನನ್ನು ಶಾಶ್ವತವಾಗಿ ತಳ್ಳಿಬಿಡುವನು."(1 ಪೂರ್ವಕಾಲವೃತ್ತಾಂತ 28:9 )
ತನ್ನ ಮಗನಾದ ಸೋಲೋಮನನೊಂದಿಗೆ ದಾವೀದನ ಈ ಸಮಾಲೋಚನೆಯೂ ದಾವೀದನು ಸೋಲೋಮನನಿಗೆ ದೇವರ ಪರಿಚಯ ಮಾಡುವುದಕ್ಕಿಂತಲೂ ಮೀರಿ ಪರಾತ್ಪರನಾದ ದೇವರೊಂದಿಗೆ ವೈಯಕ್ತಿಕ ಸಂಬಂಧ ಹೊಂದುವುದಕ್ಕೆ ಪ್ರಾಶಸ್ತ್ಯ ಕೊಡಬೇಕೆಂಬ ಕರೆಯಾಗಿದೆ.
"ನಿನ್ನ ತಂದೆಯ ದೇವರನ್ನು ಅರಿತುಕೋ..." ಎಂದು ನಿರ್ದೇಶಿಸುವಂತದ್ದು ಒಂದು ಬರಿ ಮಾತಿನ ಸಲಹೆ ಆಗಿರದೆ ದೇವರೊಂದಿಗೆ ಅನ್ಯೋನ್ಯವಾದಂತ ಸಂಬಂಧವನ್ನು ಹೊಂದಲೇಬೇಕು ಎಂದು ತಾಕೀತು ಮಾಡುವಂತಹ ಸೂಚನೆಯಾಗಿದೆ. ಯೋಹಾನ 17:3 ರಲ್ಲಿ "ತಂದೆಯನ್ನು ಮತ್ತು ಯೇಸು ಕ್ರಿಸ್ತನನ್ನು ಅರಿಯುವುದೇ ನಿತ್ಯಜೀವ" ಎಂಬ ಪ್ರಮುಖ ಸತ್ಯಕ್ಕೆ ಸಮಾನವಾದ ಅಂಶವನ್ನು ಹೊಂದಿರುವ ಸಲಹೆ ಇದಾಗಿದೆ. 'ಅರಿತುಕೊಳ್ಳುವುದು' ಎಂಬ ಪದವು ಕೇವಲ ಹೊರ ತೋರಿಕೆಯ ಸಂಬಂಧವಾಗಿರದೆ ಆಳವಾದ ಅರ್ಥಗರ್ಭಿತವಾದಂತಹ ಅನ್ಯೋನ್ಯವಾದ ಸಂಬಂಧದ ಒಂದು ಅನುಭವವಾಗಿದೆ.
ಬಾದ್ಯತೆಯಾಗಿ ಬಂದ ನಂಬಿಕೆಗೆ ಮೀರಿದಂತ ವೈಯಕ್ತಿಕ ಸಂಬಂಧ
ದಾವಿದನು ತನ್ನ ಮಗನಾದ ಸೋಲೊಮನನಿಗೆ ಒಂದು ನಿರ್ಣಾಯಕವಾದ ನಿಯಮವನ್ನು ಒತ್ತಿ ಹೇಳುತ್ತಿದ್ದಾನೆ. ನಂಬಿಕೆ ಮತ್ತು ದೇವರೊಂದಿಗಿನ ಅನ್ಯೋನ್ಯತೆಯು ಬಾಧ್ಯತೆಯಾಗಿ ಬರುವಂತಹ ಆಸ್ತಿಯಲ್ಲ, ಬದಲಾಗಿ ಪ್ರತಿಯೊಬ್ಬರೂ ಸಹ ದೇವರೊಂದಿಗೆ ಮತ್ತು ತಮ್ಮ ಕೌಟುಂಬಿಕ ಸದಸ್ಯರೊಂದಿಗೆ ಒಂದು ವೈಯಕ್ತಿಕವಾದ ಅನ್ಯೂನ್ಯತೆಯ ಸಂಬಂಧವನ್ನು ಸ್ವಂತವಾಗಿ ಗಳಿಸಿಕೊಳ್ಳಬೇಕು. ಇದರ ಅರ್ಥ ನೀವು ನಿಮ್ಮ ತಂದೆ ತಾಯಿಗಳು ದೇವರೊಂದಿಗೆ ಅನ್ಯೋನ್ಯವಾಗಿದ್ದರೆ ನೀವು ಅವರಂತೆ ಅನ್ಯೋನ್ಯವಾಗಿರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ. ದಾವಿದನು ಅತ್ಯಂತ ಅಪ್ಯಾಯಮಾನವಾದ ಅನ್ಯೋನ್ಯತೆಯನ್ನು ಅವನ ಕಾಲದಲ್ಲಿ ದೇವರೊಂದಿಗೆ ಹೊಂದಿದ್ದನು. ಆದರೆ ಈಗ ಸೋಲೋಮನನ ಕಾಲ ಸೋಲೊಮನನು ದೇವರೊಂದಿಗೆ ಈ ಅನ್ಯೋನ್ಯತೆಯನ್ನು ಸ್ವಂತವಾಗಿ ಬೆಳೆಸಿಕೊಳ್ಳಬೇಕ.
ಇಂದು ಅನೇಕ ಜನರು ಯಾವಾಗಲೂ ತಮ್ಮ ತಂದೆ ತಾಯಿಗಳನ್ನು, ತಮ್ಮ ಸಂಗಾತಿಯನ್ನು ಮತ್ತು ಅವರ ಸಭಾ ನಾಯಕರನ್ನು ಅವರಿಗಾಗಿ ಪ್ರಾರ್ಥಿಸಲು ಕೇಳಿಕೊಳ್ಳುತ್ತಾರೆ. ಆದರೆ ಅವರದರೋ ತಮಗಾಗಿ ಪ್ರಾರ್ಥಿಸುವುದೂ ಇಲ್ಲ, ಆರಾಧಿಸುವುದೂ ಇಲ್ಲ,ದೇವರ ವಾಕ್ಯವನ್ನು ಧ್ಯಾನಿಸುವುದೂ ಇಲ್ಲ.
ತಮಗಾಗಿ ಪ್ರಾರ್ಥಿಸುವಂತೆ ತಮ್ಮ ಪ್ರೀತಿ ಪಾತ್ರದಲ್ಲಿ ಕೇಳಿಕೊಳ್ಳುವುದು ಖಂಡಿತವಾಗಿ ತಪ್ಪಲ್ಲ. ಆದರೆ ನಮಗಾಗಿ ನಾವೇ ಪ್ರಾರ್ಥಿಸಬೇಕಾದ ಸಮಯವೂ ಬರುತ್ತದೆ ಅದಕ್ಕಾಗಿ ನಾನಾಗಲೀ -ನೀವಾಗಲಿ ಪ್ರಾರ್ಥಿಸಲು ಮೊದಲು ದೇವರನ್ನು ಅರಿತಿರಬೇಕು.
ಬಾಹ್ಯ ತೋರಿಕೆಗೆ ಮಾತ್ರ ಆತ್ಮಿಕವಾಗಿ ಉಳಿಯದೆ ಅದಕ್ಕೆ ಮೀರಿ ದೇವರೊಂದಿಗೆ ನೇರವಾದ ವೈಯಕ್ತಿಕವಾದ ಸಂಬಂಧವನ್ನು ಹೊಂದಿಕೊಂಡಿರಬೇಕು ಎಂಬ ನಿಯಮವು ಪ್ರಸ್ತುತ ಇಂದಿಗೂ ಅನ್ವಯ ವಾಗುತ್ತದೆ.
ಸಂಬಂಧ ಮತ್ತು ಸೇವೆಯ ಅನುಕ್ರಮ
ದಾವೀದನು ತನ್ನ ಮಗನಾದ ಸೋಲೋಮನನಿಗೆ ದೇವರನ್ನು ನಿಷ್ಠೆಯಿಂದಲೂ ಪೂರ್ಣ ಮನಸ್ಸಿನಿಂದಲೂ ಸೇವಿಸುವಂತೆ ಬುದ್ಧಿ ಮಾತನ್ನು ಹೇಳುತ್ತಾ, ಕರ್ತನ ಸೇವೆಯಲ್ಲಿರುವ ಆನಂದ ಮತ್ತು ಸೌಭಾಗ್ಯವನ್ನು ಒತ್ತಿ ಹೇಳುತ್ತಾನೆ.
ಸೇವೆ ಎಂಬುದು ಆರಾಧನೆಯ ರೂಪವಾಗಿದ್ದು ಅದು ಪ್ರೀತಿಯ ಬಾಹುಗಳನ್ನು ವಿಸ್ತರಿಸುವ, ಕ್ರಿಸ್ತನ ಸಂದೇಶವನ್ನು ಇತರರಿಗೆ ತಲುಪಿಸುವ, ಇತರರಲ್ಲಿ ನಿರೀಕ್ಷೆಯನ್ನು ಹುಟ್ಟಿಸಿ ಅವರನ್ನು ಸಂತೈಸುವ ಕಾರ್ಯಗಳನ್ನು ಒಳಗೊಂಡಿದೆ.
ದೇವರಿಗೆ ಮಾಡುವ ಯಾವುದೇ ಸೇವೆಯಾಗಿರಲಿ ಅದಕ್ಕೆ ಅಡಿಪಾಯ ಆತನೊಂದಿಗೆ ಬೆಸೆದುಕೊಂಡಿರುವಂತಹ ವೈಯಕ್ತಿಕ ಸಂಬಂಧವಾಗಿದೆ. ಈ ಅಡಿಪಾಯವಿಲ್ಲದೆ ಸೇವೆ ಮಾಡುವಂಥದ್ದು ಹತಾಶೆಗೂ ಮನಗುಂದುವಿಕೆಗೂ ಕಾರಣವಾಗುತ್ತದೆ. ಆಮೇಲೆ ನೀವು ಬೇಸರದಿಂದಲೂ ಹೃದಯ ಮುರಿಯುವಿಕೆಯಿಂದಲೂ ನಿಮ್ಮ ಸೇವಾ ಕಾರ್ಯವನ್ನು ನಿಲ್ಲಿಸಿ ಬಿಡಬೇಕಾಗಿ ಬರಬಹುದು.
ಕರ್ತನೊಂದಿಗೆ ನಿಕಟವಾದ ಸಂಬಂಧ ಹೊಂದದೆ ಮಾಡುವ ಸೇವೆಯು ನಿಮಗೆ ಆತ್ಮಿಕ ಹೊರೆಯೆಂದು ಎನಿಸಿಬಿಡುತ್ತದೆ. ಈ ರೀತಿಯ ಸವಾಲುಗಳನ್ನು ನೀವು ಎದುರಿಸುತ್ತಿದ್ದರೆ, ನೀವು ದೇವರೊಂದಿಗೆ ನಿಮ್ಮ ಸಂಬಂಧವನ್ನು ಪುನಸ್ತಾಪಿಸಿಕೊಳ್ಳಬೇಕು ಉಜ್ಜೀವಿಸಿಕೊಳ್ಳಬೇಕು ಎಂಬುದಕ್ಕೆ ಇದು ಒಂದು ಸೂಚನಾ ದೀಪವಾಗಿರುತ್ತದೆ.
ನಿಮ್ಮ ಸೇವೆ ಮತ್ತು ನಿಮ್ಮ ಆತ್ಮಿಕ ಪೋಷಣೆ ಎರಡರಲ್ಲೂ ಸಮತೋಲನ ಕಾಯ್ದುಕೊಳ್ಳಲು ನೀವು ಪ್ರಾರ್ಥನೆಯಲ್ಲಿಯೂ ವಾಕ್ಯ ಧ್ಯಾನದಲ್ಲಿಯೂ ಆತನ ವಾಕ್ಯದ ಅಧ್ಯಯನ ಮಾಡುವುದರಲ್ಲಿಯೂ ಕಾಲ ಕಳೆಯುವಂತದ್ದು ನಿರ್ಣಾಯಕ ಕಾರ್ಯವಾಗಿದೆ.
ಪ್ರೀತಿಸಬೇಕೆಂಬ ಆಜ್ಞೆ.
ನಮ್ಮ ದೇವರಾಗಿರುವ ಕರ್ತನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು (ಮತ್ತಾಯ 23:37) ಎಂಬ ಆಜ್ಞೆಯು ನಮ್ಮ ನಂಬಿಕೆಯ ಪ್ರಯಾಣವನ್ನು ಆವರಿಸಿರುವ ಅಂಶವಾಗಿದ್ದು, ನಮ್ಮ ಜೀವಿತದ ಎಲ್ಲಾ ಆಯಾಮಗಳಲ್ಲೂ ನಾವು ಪ್ರೀತಿಯಿಂದ ಕಾರ್ಯ ಮಾಡುವಂತೆ ನಮ್ಮನ್ನು ಮಾರ್ಗದರ್ಶಿಸುತ್ತದೆ. ಇದು ದೇವರನ್ನು ಆಳವಾಗಿ ಪ್ರೀತಿಸುವುದರಲ್ಲಿ ಅಡಕವಾಗಿದ್ದು ಆತನನ್ನು ಪರಿಣಾಮಕಾರಿಯಾಗಿ ಆನಂದಕರವಾಗಿಯೂ ಸೇವಿಸಲು ಇದೇ ನಮಗೆ ಬಲವನ್ನು ಪ್ರೇರಣೆಯನ್ನು ನೀಡುವಂತಾದ್ದಾಗಿದೆ
ಪ್ರಾರ್ಥನೆಗಳು
1. ಕರ್ತನೇ, ನಿನ್ನ ಮಾರ್ಗದರ್ಶನ ಮತ್ತು ಜೀವದಬುಗ್ಗೆಯೂ ಆಗಿರುವ,,ಜ್ಞಾನಕ್ಕೆ ಮೂಲವಾಗಿರುವಂತಹ ನಿನ್ನ ಭಯವನ್ನು ನನ್ನಲ್ಲಿ ಹುಟ್ಟಿಸು ಇದರಿಂದ ನಾನು ಮರಣದ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
2. ನಿನ್ನ ನಾಮಕ್ಕೆ ಭಯ ಪಡುವಂತೆ ನನ್ನ ಹೃದಯವನ್ನು ನಿನ್ನಲ್ಲಿ ಒಗ್ಗೂಡಿಸು, ಇದರಿಂದ ನನ್ನ ಜೀವಮಾನ ಕಾಲದಲ್ಲೆಲ್ಲಾ ನಿನ್ನ ಆಜ್ಞೆಗಳಿಗೆ ಒಳಪಟ್ಟು ನಾನು ನಡೆಯಲು ಸಾಧ್ಯವಾಗುತ್ತದೆ. ಯೇಸು ನಾಮದಲ್ಲಿ ಈ ಪ್ರಾರ್ಥನೆಯನ್ನು ಬೇಡಿ ಹೊಂದಿದ್ದೇನೆ ತಂದೆಯೇ.ಆಮೆನ್
Join our WhatsApp Channel
Most Read
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ● ಬೀಜದಲ್ಲಿರುವ ಶಕ್ತಿ -3
● ನಿರುತ್ಸಾಹದ ಬಾಣಗಳನ್ನು ಗೆಲ್ಲುವುದು -II
● ದೇವರ ಎಚ್ಚರಿಕೆಗಳನ್ನು ಕಡೆಗಣಿಸಬೇಡಿರಿ
● ಸರಿಪಡಿಸಿಕೊಳ್ಳಿರಿ
● ದೇವರು ನಿಮ್ಮ ಶರೀರದ ಕುರಿತು ಚಿಂತಿಸುತ್ತಾನಾ?
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
ಅನಿಸಿಕೆಗಳು