ಅನುದಿನದ ಮನ್ನಾ
"ಆತನಿಗೆ ಎಲ್ಲವನ್ನೂ ತಿಳಿಸಿರಿ"
Friday, 16th of February 2024
2
1
400
Categories :
ಪ್ರಾರ್ಥನೆ (prayer)
"ಅಲ್ಲಿ ಸೀಮೋನನ ಅತ್ತೆ ಜ್ವರ ಬಂದು ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು."(ಮಾರ್ಕ 1:30).
"ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು" ಎಂದು ದೇವರವಾಕ್ಯವು ಇಲ್ಲಿ ಹೇಳುವುದನ್ನು ಗಮನಿಸಿರಿ.
ಒಬ್ಬ ದೇವಸೇವಕರಿದ್ದರು. ಅವರು ಅನೇಕ ಹಾಡುಗಳನ್ನು ರಚಿಸಿದ್ದರು. ಅವರ ಹಾಡುಗಳೆಲ್ಲವೂ ಅವರ ಅನುಭವದ ಸ್ಪೂರ್ತಿಯಿಂದ ಬರೆದಂತಹ ಹಾಡುಗಳಾಗಿತ್ತು. ಅವರೊಮ್ಮೆ ಜನರನ್ನು ಸಂಧಿಸುವಂತಹ ವೇಳೆಯಲ್ಲಿ ಒಂದು ದಿನ ಅತ್ಯಂತ ಕಡುಬಡತನದಲ್ಲಿದ್ದಂತ ಮತ್ತು ಯಾರೂ ಕೂಡ ವಾಸಿ ಮಾಡಲಾಗದಂತಹ ಖಿನ್ನತೆಯಿಂದ ಬಳಲುತ್ತಿದ್ದ ಒಬ್ಬ ಮಹಿಳೆಯನ್ನು ಸಂಧಿಸಿದರು. ಆಕೆಯು ಇವರ ಮುಂದೆ ತನ್ನ ದುಃಖವನ್ನೆಲ್ಲಾ ತೋಡಿಕೊಂಡು ತನ್ನ ವೇದನೆಯನೆಲ್ಲಾ ಅವರ ಮುಂದೆ ಹೊಯ್ದು, "ಈಗ ನಾನು ಏನು ಮಾಡಲಿ.. ನಾನೀಗ ಏನು ಮಾಡಲಿ"ಎಂದು ಜೋರಾಗಿ ಅತ್ತಳು.
ಆಕೆಯು ಹಾದು ಹೋಗುತ್ತಿದ್ದ ಅವಳ ಪರಿಸ್ಥಿತಿಯನ್ನು ಕೇಳಿ ಆ ವೇದನೆಯನ್ನೆಲ್ಲಾ ಕಂಡು ಅವರ ಬಾಯಲ್ಲಿ ಮಾತುಗಳೇ ಹೊರಡಲಿಲ್ಲ. ತಕ್ಷಣವೇ ಪವಿತ್ರಾತ್ಮನು ಅವರಿಗೆ ಒಂದು ಆಲೋಚನೆಯ ವಾಕ್ಯವನ್ನು ಅನುಗ್ರಹಿಸಿದನು. ಆಗ ಅವರು ಆಕೆಗೆ "ಎಲ್ಲವನ್ನೂ ಯೇಸುವಿಗೆ ತಿಳಿಸಿರಿ" ಎಂದು ಮರುತ್ತರವನ್ನು ಕೊಟ್ಟರು.
ಒಂದು ಕ್ಷಣ ಆಕೆಯು ಮೂಕವಿಸ್ಮಿತಳಾಗಿ ಬಿಟ್ಟಳು. ಆಮೇಲೆ ತಕ್ಷಣವೇ ತನ್ನ ತಲೆಯನ್ನು ಎತ್ತಿ "ಹೌದು" ಎಂದು ಅಳುತ್ತಾ "ಅಷ್ಟೇ, ಯೇಸುವಿಗೆ ತಿಳಿಸಬೇಕು" ಎಂದಳು. ಹೀಗೆಯೇ ಅವರ "ಟೆಲ್ ಜೀಸಸ್" ಎಂಬ ಮಹತ್ತರ ಹಾಡು ಹುಟ್ಟಿದ್ದು.
ಪ್ರಾರ್ಥನೆ ಎಂದರೆ ಯೇಸುವಿಗೆ ಎಲ್ಲವನ್ನು ತಿಳಿಸುವುದೇ ಹೊರತು ಮತ್ತೇನಲ್ಲ.ನಿಮಗೆ ಪ್ರೀತಿ ಪಾತ್ರರಾದ, ನಿಮ್ಮ ವಿಶ್ವಾಸಕ್ಕೆ ಯೋಗ್ಯರನಿಸಿದ ಜನರಲ್ಲಿ ನಿಮ್ಮ ವಿಚಾರಗಳನ್ನು ಹಂಚಿಕೊಳ್ಳುವುದು ತಪ್ಪೇನಲ್ಲ. ಆದರೂ ಕೆಲವೊಮ್ಮೆ ಅವರ ಬಳಿ ಸಹ ನೀವು ಎಲ್ಲವನ್ನು ಹೇಳಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದಲೇ ಈ ವಾಕ್ಯವು ನನಗಾಗಿಯೂ ನಿಮಗಾಗಿಯೂ ಇದೆ "ಯೇಸುವಿಗೆ ಎಲ್ಲವನ್ನು ತಿಳಿಸಿರಿ"
ನೀವು ನಂಬುವುದಿಲ್ಲ, ಆದರೂ ಇದು ಸತ್ಯ. ನಾನು ಉಪಾಧ್ಯಾಯನಾಗಿದ್ದಾಗ ನಾನು ಇಬ್ಬರು ಮಕ್ಕಳು ಕಿತ್ತಾಡುವುದನ್ನು ನೋಡಿದೆ. ಒಬ್ಬನು ತುಂಬಾ ಸಣಕಲ ಮತ್ತೊಬ್ಬ ದಷ್ಟಪುಷ್ಟವಾದ ದೇಹವುಳ್ಳವ. ಈ ದಷ್ಟಪುಷ್ಟವಾದ ದೇಹವುಳ್ಳವನು ಆ ಚಿಕ್ಕ ಹುಡುಗನನ್ನು ತಳ್ಳಾಡುತ್ತಿದ್ದನು. ಆ ಸಣಕಲ ಹುಡುಗನು ಅಸಹಾಯಕ ನಾಗಿ "ನಮ್ಮ ದೊಡ್ಡ ಅಣ್ಣನು 8ನೇ ತರಗತಿಯಲ್ಲಿದ್ದಾನೆ ನಾನು ಅವನಿಗೆ ಹೇಳುತ್ತೇನೆ" ಎಂದನು. ಅಷ್ಟೇ, ಹಾಗೆ ಹೇಳಿದ ಕೂಡಲೇ ಆ ದಷ್ಟಪುಷ್ಟನಾದ ಹುಡುಗನು ಅಲ್ಲಿಂದ ಓಡಿ ಹೋದನು.
"ಯೇಸುವು ಅವರಿಗೆ - ನನಗೆ ತಾಯಿಯೂ ತಮ್ಮಂದಿರೂ ಯಾರು? ಎಂದು ಹೇಳಿ [34] ತನ್ನ ಸುತ್ತಲು ಕೂತಿದ್ದವರನ್ನು ನೋಡಿ - ಇಗೋ, ನನ್ನ ತಾಯಿ, ನನ್ನ ತಮ್ಮಂದಿರು.ದೇವರ ಚಿತ್ತದಂತೆ ನಡೆಯುವವನೇ ನನಗೆ ತಮ್ಮನೂ ತಂಗಿಯೂ ತಾಯಿಯೂ ಆಗಬೇಕು ಅಂದನು."(ಮಾರ್ಕ 3:33-35)
ಯೇಸುವನ್ನು ನಂಬುವುದು ಎಂದರೆ ಕೇವಲ ಅದೊಂದು ಮಾನಸಿಕ ಅಭ್ಯಾಸವಲ್ಲ. ಆದರೆ ತಂದೆದೇವರ ಚಿತ್ತದಂತೆ ಮಾಡುವಂತದ್ದೇ ನಮ್ಮನ್ನು ಆತನ ತಮ್ಮಂದಿರೂ -ತಂಗಿಯರೂ ಆಗಲು ಅರ್ಹರನ್ನಾಗಿ ಮಾಡುತ್ತದೆ. ಆಗ ನಾವು ನಮ್ಮ ದೊಡ್ಡಣ್ಣನಾದ - ಕರ್ತನಾದ ಯೇಸುಕ್ರಿಸ್ತನಿಗೆ ಹೇಳಿಕೊಂಡಾಗ ಸ್ವಸ್ಥತೆಯು, ಬಿಡುಗಡೆಯು ಮತ್ತು ಸಮೃದ್ಧಿಯು ನಮ್ಮ ಬಳಿಗೆ ತಾನಾಗೇ ಬರುತ್ತದೆ.ಹಾಗಾಗಿ ಈ ಒಂದು ಅಂಶವನ್ನು ಮನದಟ್ಟು ಮಾಡಿಕೊಳ್ಳಿ "ಆತನಿಗೆ ಎಲ್ಲವನ್ನು ತಿಳಿಸಿರಿ "- ಪ್ರತಿದಿನ
ಅರಿಕೆಗಳು
ಕರ್ತನಾದ ಯೇಸುಕ್ರಿಸ್ತನು ನನ್ನ ವೈಫಲ್ಯತೆಗಳನ್ನೆಲ್ಲಾ ನಾಶ ಮಾಡಿರುವುದರಿಂದ ನಾನು ನನ್ನೆಲ್ಲಾ ಪರಿಸ್ಥಿತಿಗಳ ಮೇಲೆ ಜಯಶಾಲಿಯಾಗಿ ನಡೆಯುವೆನು. ನಾನು ಜಯಶಾಲಿಯಾಗಿ ಕ್ರಿಸ್ತನ ಮೂಲಕ ಎಲ್ಲವನ್ನು ಮಾಡಲು ಶಕ್ತನಾಗಿ/ಳಾಗಿದ್ದೇನೆ. ಯೇಸುವಿನ ನಾಮದಲ್ಲಿ ನನಗೆ ಜಯವಿದೆ. ಆಮೆನ್. (ಫಿಲಿಪಿ 4:13, 1 ಯೋಹಾನ 5:4)
Join our WhatsApp Channel
Most Read
● ದಿನ 31:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಅಗ್ನಿಯು ಸುರಿಯಲ್ಪಡಬೇಕು
● ಎಲ್ಲಾಮನುಷ್ಯರಿಗಾಗಿ ಇರುವ ಕೃಪೆ
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ಕನಸು ಕಾಣುವ ಧೈರ್ಯ
● ಕರ್ತನ ಸೇವೆ ಮಾಡುವುದು ಎಂದರೇನು II
● ದೇವರಿಗೆ ಮೊದಲಸ್ಥಾನ ನೀಡುವುದು #3
ಅನಿಸಿಕೆಗಳು