ಅನುದಿನದ ಮನ್ನಾ
ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
Tuesday, 13th of February 2024
2
2
433
Categories :
ಭವಿಷ್ಯ (Future)
ಹಿಂದಿನ (Past)
"ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು." (1ಪೂರ್ವಕಾಲವೃತ್ತಾಂತ 4:9)
ಈ ದೇವರ ವಾಕ್ಯದಲ್ಲಿ ನಾವು ಓದಿದಂತೆ ಯಾಬೇಚನ ತಾಯಿಯು ತಾನು ಬಹಳ ವೇದನೆ ಅನುಭವಿಸಿ ಆ ಮಗನನ್ನು ಹೆತ್ತನೆಂದು ಅವನಿಗೆ ವೇದನೆ (ನೋವು ತರುವವನು)ಎಂದು ಹೆಸರಿಟ್ಟಳು ಬಹುಶಹಃ ಆಕೆಯು ತನ್ನ ಹೆರಿಗೆಯ ಸಮಯದಲ್ಲಿ ಆದಂತ ಸನ್ನಿವೇಶವು ಬಹುವೇದನೆಯನ್ನು ಆಕೆಗೆ ಕೊಟ್ಟಿರುವುದರಿಂದ ಆಕೆ ಆ ರೀತಿ ಹೆಸರಿಟ್ಟಿರಬಹುದು
"ಎಫ್ರಾಯಿಮನು ತನ್ನ ಹೆಂಡತಿಯನ್ನು ಕೂಡಲು ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತಳು. ಇದು ಅವನ ಕುಟುಂಬಕ್ಕೊದಗಿದ ಆಪತ್ತಿನಲ್ಲಿ ಸಂಭವಿಸಿದದರಿಂದ ಆ ಮಗನಿಗೆ ಬೆರೀಯ ಎಂದು ಹೆಸರಿಟ್ಟನು."(1 ಪೂರ್ವಕಾಲವೃತ್ತಾಂತ 7:23)
ಯಾಬೆಚನ ತಾಯಿಯಂತೆ ಎಫ್ರಾಯಿಮನು ಸಹ ತನ್ನ ಮಗನನ್ನು ಬೆರೀಯ (ಆಪತ್ತು ಅಥವಾ ನತದೃಷ್ಟ) ಎಂದು ಹೆಸರಿಟ್ಟನು.ಏಕೆಂದರೆ ಇದು ಅವನ ಕುಟುಂಬಕ್ಕೆ ಆಪತ್ತು ಒದಗಿದ ಸಂದರ್ಭದಲ್ಲಿ ಜರುಗಿದರಿಂದ ಎಫ್ರಾಯಿಮನು ಹೀಗೆ ಹೆಸರಿಟ್ಟನು
ಹಲವು ವರ್ಷಗಳ ಹಿಂದೆ ನಾನು ಒಬ್ಬ ಪೋಷಕರು ಬಹಳ ಗರ್ವದಿಂದ "ಪಾಸ್ಟರ್, ಈ ನನ್ನ ಮಗುವು ನನಗೆ ಬಹಳ ಅದೃಷ್ಟವನ್ನು ತಂದಿದೆ ಆದರೆ ಇನ್ನೊಂದು ಮಗು ಇದೆ ಅದು ಹುಟ್ಟಿದಾಗ ನಾವು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು, ಆದರಿಂದ ಆ ಮಗುವು ನಮಗೆ ಅದೃಷ್ಟಕರವಾದುದಲ್ಲ ಎಂದರು." ದಯವಿಟ್ಟು ಈ ರೀತಿ ಮಾತಾಡುವುದನ್ನು ನಿಲ್ಲಿಸಿರಿ. ನೀವು ದೇವರ ವಾಕ್ಯವು ಏನು ಹೇಳುತ್ತದೆಯೋ ಅದನ್ನೇ ಹೇಳಬೇಕು. ದೇವರ ವಾಕ್ಯವು ಪುತ್ರ ಸಂತಾನವು ಯಹೋವನಿಂದ ಬಂದ ಸ್ವಾಸ್ಥ್ಯವು ಗರ್ಭಫಲವೂ ಆತನ ಬಹುಮಾನವೇ ಎಂದು ಹೇಳುತ್ತದೆ"
ಸ್ವಲ್ಪ ಯೋಚಿಸಿ ನೋಡಿರಿ ಪ್ರತಿ ಸಲ ಈ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕರೆಯುವಾಗ ಅದು ಅವರಿಗೆ ಅವರ ಗತಕಾಲದ ವೇದನೆಯ ಅಥವಾ ದುಃಖದ ನೆನಪನ್ನು ತರುತ್ತದೆ. ಇದು ಮತ್ತೆ ಅದೇ ಗತಕಾಲಕ್ಕೆ ಅವರನ್ನು ಕೊಂಡೊಯ್ಯುತ್ತಿರುತ್ತದೆ.
ಹಾಗಾಗಿ ನಿಮ್ಮ ಗತಕಾಲದ ಅಥವಾ ಈಗಿನ ಸನ್ನಿವೇಶಗಳು ನಿಮ್ಮ ಭವಿಷ್ಯತ್ತಿನ ಮೇಲೆ ಪ್ರಭಾವ ಬೀರಲು ಅವಕಾಶ ಕೊಡಬೇಡಿರಿ. ನಿಮ್ಮ ಗತಕಾಲವು ನಿಮ್ಮ ಇಂದಿನ ದಿನಗಳ ಮೇಲೆ ಪ್ರಭಾವ ಬೀರಲು ಅವಕಾಶ ಕೊಡಬೇಡಿರಿ. ನೀವು ಮುಂದಿನವುಗಳ ಮೇಲೆ ಲಕ್ಷವಿಡಿರಿ.
ಅಪೋಸ್ತಲನಾದ ಪೌಲನು ಫಿಲಿಪ್ಪಿಯವರಿಗೆ ಪತ್ರವನ್ನು ಬರೆಯುವಾಗ ಹೀಗೆ ಬರೆಯುತ್ತಾನೆ "ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆ ಬೊಗ್ಗಿದವನಾಗಿ [14] ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ."(ಫಿಲಿಪ್ಪಿಯವರಿಗೆ 3:13-14).
ಕೆಲವು ಸಮಯದಲ್ಲಿ ನಮ್ಮ ಗತಕಾಲದ ಅನುಭವಗಳನ್ನು ಲೆಕ್ಕಿಸಿ ಅವುಗಳಿಂದ ಕಲಿತ ಪಾಠಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಕಾರ್ಯವು ಇರುತ್ತದೆ. ಆದಾಗಿಯೂ ಜನರು ತಮ್ಮ ಗತಕಾಲದ ನೆನಪುಗಳಲ್ಲಿ ಮುಳುಗಿ ಹೋಗಿ ಮುಂದೆ ತಮ್ಮ ಭವಿಷ್ಯದಲ್ಲೂ ಸಹ ಹಾಗೆಯೇ ಆಗುತ್ತದೆ ಎಂದು ನಿರೀಕ್ಷಿಸಿಕೊಂಡು ಭವಿಷ್ಯವನ್ನು ಸಹ ಅದೇ ರೀತಿ ರೂಪಿಸಿಕೊಂಡು ಬಿಡುತ್ತಾರೆ.
ನೀವು ಗತಕಾಲದಲ್ಲಿ ಮಾಡಿದ ಕಾರ್ಯಗಳಾವುವೂ ಸಹ ನಿಮ್ಮ ಭವಿಷ್ಯತ್ತಿನ ಪ್ರತಿಫಲವನ್ನು ಸೂಚಿಸಲಾರವು. ಇದು ಹೂಡುವುದಕ್ಕೆ ಮುಂಚೆಯೇ ಅದರಿಂದ ಬರುವ ಆದಾಯವನ್ನು ನಿರೀಕ್ಷೆ ಮಾಡುವಂತೆ.ಇದೇ ನಿಯಮ ನಿಜ ಜೀವನಕ್ಕೂ ಅನ್ವಯಿಸುತ್ತದೆ
ಯಾಬೇಚ್ಚನು ಬೆಳೆದ ಮೇಲೆ ಪ್ರಾಯಶಹಃ ಎಲ್ಲರೂ ಅವನನ್ನು ನೋವು,ವೇದನೆ ಎಂದೇ ಕರೆಯುತ್ತಿದ್ದಾರೇನೋ .. ಆದರೆ ಅವನಿದ್ದ ಸನ್ನಿವೇಶದಲ್ಲಿ ಅವನ ಬಾಲ್ಯನೋಡಿದ್ದ ಯಾರೂ ಸಹ ಯಾಬೇಚನು ತನ್ನ ಜೀವನದಲ್ಲಿ ಅಷ್ಟು ಅದ್ಭುತವಾಗಿ ಆಶೀರ್ವಾಧಿಸಲ್ಪಡುತ್ತಾನೆ ಎಂದು ನೆನೆಸಲು ಸಾಧ್ಯವೇ ಇರಲಿಲ್ಲ. ಹಾಗೆಯೇ ನಿಮ್ಮ ಇಂದಿನ ಸನ್ನಿವೇಶಗಳು ನಿಮ್ಮ ಗತಿಯನ್ನು ನಿರ್ಧಾರಿಸಲಾರದು ಎಂದು ನಾನು ದೇವರನ್ನು ಕೊಂಡಾಡುತ್ತೇನೆ.
ಇಂದು ಯಾರಾದರೂ ನಿಮ್ಮನ್ನು ನಿಮ್ಮ ಪ್ರಸ್ತುತ ಪರಿಸ್ಥಿತಿ ನೋಡಿ ನೀವು ಎಲ್ಲಿಂದ ಬೆಳೆದು ಬಂದಿರೋ ಎಂದು ನಿಮ್ಮನ್ನು ತೀರ್ಪು ಮಾಡುತ್ತಿದ್ದರೆ, ಆ ವ್ಯಕ್ತಿಯು ದೊಡ್ಡ ತಪ್ಪನ್ನು ಮಾಡುತ್ತಿದ್ದಾನೆ ಏಕೆಂದರೆ ನಮ್ಮ ಕರ್ತನು ಜೀವದಿಂದ್ದಾನೆ.
"ನಿನ್ನ ಮೊದಲನೆಯ ಸ್ಥಿತಿಯು ಅಲ್ಪವಾಗಿದ್ದರೂ ನಿನ್ನ ಕಡೆಯ ಸ್ಥಿತಿಯು ಬಹಳ ವೃದ್ಧಿಹೊಂದುವದು. "(ಯೋಬನು 8:7)
ನೀವು ಅಲ್ಪವಾಗಿ ಆರಂಭಿಸಲ್ಪಟ್ಟಿದ್ದರೂ ನೀವು ಅಧಿಕವಾಗಿ ಅದನ್ನು ಮುಗಿಸುವಿರಿ. ನಿಮ್ಮ ಮುಂದಿನ ದಿನಗಳ ಮಹಿಮೆಯು ಇಂದು ನೀವು ಹೊಂದಿರುವುದಕ್ಕಿಂತಲೂ ಹೆಚ್ಚಾಗಿರುವುದು.
ನೀವು ಬಂದ ಹಾದಿ ಗಿಂತಲೂ ನೀವು ಮುಂದೆ ಹೋಗುವ ಹಾದಿಯು ಉತ್ತಮವಾಗಿರುತ್ತದೆ. ಯಾರಾದರೂ ಸರಿಯೇ ಈ ವಾಕ್ಯಗಳನ್ನು ಹೊಂದಿಕೊಳ್ಳಿರಿ.
ಅರಿಕೆಗಳು
(ದಿನವೆಲ್ಲಾ ಇದನ್ನು ಹೇಳುತ್ತಲೇ ಇರಿ)
ನನ್ನ ಆರಂಭವು ಅಲ್ಪವಾಗಿದ್ದರೂ ನನ್ನ ಮುಂದಿನ ದಿನಗಳು ಯೇಸುನಾಮದಲ್ಲಿ ಸಮೃದ್ಧಿಯಾಗಿ ಅಭಿವೃದ್ಧಿ ಹೊಂದುತ್ತದೆ.ನಾನು ಅಲ್ಪದರಲ್ಲಿ ಆರಂಭಿಸಿದ್ದರೂ ನನ್ನ ಅಂತ್ಯವು ಯೇಸುನಾಮದಲ್ಲಿ ಅಧಿಕವಾಗಿರುತ್ತದೆ.
Join our WhatsApp Channel
Most Read
● ಅನಂತವಾದ ಕೃಪೆ● ಯುದ್ಧಕ್ಕಾಗಿ ತರಬೇತಿ.
● ನೆಪ ಹೇಳುವ ಕಲೆ
● ನೀವು ಎಷ್ಟು ವಿಶ್ವಾಸಾರ್ಹರು?
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು