ಅನುದಿನದ ಮನ್ನಾ
ಪರಿಸ್ಥಿತಿಯ ದಯೆಯಲ್ಲಿ ಇರಬೇಡಿರಿ
Wednesday, 14th of February 2024
3
3
356
Categories :
ಪ್ರಾರ್ಥನೆ (prayer)
"ಅಹರ್ಹೇಲನು ಹಾರುಮನ ಮಗನು; ಯಾಬೇಚನು ತನ್ನ ಅಣ್ಣತಮ್ಮಂದಿರಲ್ಲಿ ಘನವಂತನಾಗಿದ್ದನು; ಇವನನ್ನು ಬಹುವೇದನೆಯಿಂದ ಹೆತ್ತೆನೆಂದು ಹೇಳಿ ಇವನ ತಾಯಿ ಇವನಿಗೆ ಯಾಬೇಚೆಂದು ಹೆಸರಿಟ್ಟಳು."(1 ಪೂರ್ವಕಾಲವೃತ್ತಾಂತ 4:9)
ಯಾಬೇಚನು ಬೆಳೆದು ಬಂದ ಹಾದಿ ಅವನಿಗೆ ಅಷ್ಟೇನೂ ಸುಲಭವಾಗಿರಲಿಲ್ಲ. ಅವನಿಗೆ ಅನೇಕ ಮಂದಿ ಸಹೋದರರಿದ್ದರು. ಅವರೆಲ್ಲರೂ ಅವನನ್ನು ಅವನಿಗಿದ್ದ 'ಯಾಬೇಚ' ಎಂಬ ಹೆಸರಿಗಾಗಿ ಎಷ್ಟು ಬಾರಿ ಅವನನ್ನು ಅಪಹಾಸ್ಯ ಮಾಡಿ ನೋಯಿಸಿದ್ದರೋ ಏನೋ.
ಯಾಬೇಚನು ಯಾಕೋಬನ ಜೀವನದಿಂದ ಪ್ರೇರೇಪಿಸಲ್ಪಟ್ಟಿದ್ದನು ಎಂದು ನಾನು ನಂಬುತ್ತೇನೆ. ಏಕೆಂದರೆ ಯಾಕೋಬನ ತಂದೆ ತಾಯಿಗಳು ಸಹ ಯಾಕೋಬನಿಗೆ 'ಯಾಕೋಬ' ಅಂದರೆ 'ಯಾಮಾರಿಸುವವನು' ಎಂದು ಹೆಸರಿಟ್ಟಿದ್ದರು. ಈ ಒಂದು ಕಳಂಕವನ್ನೇ ತನ್ನ ಜೀವನದುದ್ದಕ್ಕೂ ಯಾಕೋಬನು ಹೊತ್ತು ಬಂದಿದ್ದನು. ಆದರೆ ಒಂದು ದಿನ ಯಾಕೋಬನು ಇಡೀ ರಾತ್ರಿ ಪ್ರಾರ್ಥನೆಯಲ್ಲಿ ದೇವರೊಂದಿಗೆ ಗುದ್ದಾಡಿದನು. ಅಲ್ಲಿ ಅವನ ಜೀವನವು ತಿರುಗಿಕೊಂಡಿತು. ಕರ್ತನು ತಾನೇ ಅವನ ಹೆಸರನ್ನು 'ಯಾಕೋಬ' ಎನ್ನುವುದನ್ನು ತೆಗೆದು 'ಇಸ್ರಾಯೆಲ' ಎಂದು ಹೆಸರಿಟ್ಟನು. ಅದರ ಅರ್ಥ "ದೇವರ ರಾಜಕುಮಾರ" ಎಂದು ಅಂದಿನ ದಿನವು ಮೊದಲುಗೊಂಡು ಯಾಕೋಬನ ಜೀವಿತವು ಮೊದಲಿದ್ದಂತೆ ಇರದೆ ಎಲ್ಲವೂ ಬದಲಾಗಿ ಹೋಯಿತು (ಆದಿಕಾಂಡ 32)
ಪ್ರಾಯಶಃ ಯಾಬೇಚನಿಗೆ 'ಯಾಕೋಬನ ಜೀವಿತವನ್ನು ಬದಲಾಯಿಸಿದ ಅದೇ ದೇವರು ತನ್ನ ಜೀವಿತವನ್ನು ಬದಲಾಯಿಸಲು ಶಕ್ತನು' ಎಂಬ ಪ್ರಕಟಣೆ ಸಿಕ್ಕಿತೆಂದು ಕಾಣುತ್ತದೆ. ಯಾಕೆಂದರೆ ದೇವರು ಪಕ್ಷ ಪಾತಿಯಲ್ಲ. (ಯೋಬ 34:19).ನೀವು ಮತ್ತು ನಾನು ಸಹ ಈ ಸತ್ಯವನ್ನು ಇಂದು ನಮ್ಮ ಆತ್ಮದ ಆಳದಲ್ಲಿ ಸಮೀಕರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ
ಒಂದು ದಿನ ಯಾಬೇಚನು ಇನ್ನು ಇಷ್ಟು ದಿನ ನಡೆದದ್ದು ಸಾಕು ಸಾಕಾಯಿತು ಎಂದು ನಿರ್ಧರಿಸಿಕೊಂಡನು.ಅವನಿಗೆ ಒಂದು ಸಂಗತಿ ಮನದಟ್ಟಾಗಿ ಹೋಗಿತ್ತು ಅದೇನೆಂದರೆ ತಾನು ತನ್ನ ಜೀವಿತದಲ್ಲಿ ಇನ್ನು ಬದಲಾವಣೆಯನ್ನು ನೋಡ ಬೇಕೆಂದರೆ ಆ ಬದಲಾವಣೆಯನ್ನು ದೇವರು ಮಾತ್ರ ಮಾಡಲು ಸಾಧ್ಯ ಎಂದು
ಹಾಗಾಗಿ ಯಾಬೇಚನು ಇಸ್ರಾಯೇಲಿನ ದೇವರನ್ನು ಕರೆದನು. (1ಪೂರ್ವ ಕಾಲ ವೃತ್ತಾಂತ 4:10)
- ಅವನು ಪ್ರಾರ್ಥನೆಯಲ್ಲಿ ಕರ್ತನನ್ನು ಕರೆದನು
- ಅವನು ಪ್ರಾರ್ಥನೆಯಲ್ಲಿ ದೇವರೊಂದಿಗೆ ಅನ್ಯೋನ್ಯತೆಯಲ್ಲಿದ್ದನು
- ಅವನು ಪ್ರಾರ್ಥನೆಯಲ್ಲಿ ದೇವರೊಂದಿಗೆ ಐಕ್ಯತೆಯಲ್ಲಿದ್ದನು.
"ನನ್ನನ್ನು ಕೇಳಿಕೋ, ನಾನು ನಿನಗೆ ಸದುತ್ತರವನ್ನು ದಯಪಾಲಿಸಿ ನಿನಗೆ ತಿಳಿಯದ ಮಹತ್ತಾದ ಗೂಢಾರ್ಥಗಳನ್ನು ಗೋಚರಪಡಿಸುವೆನು."(ಯೆರೆಮೀಯ 33:3)
ನಿಜವಾಗಿ ಯಥಾರ್ಥವಾಗಿ ಮಾಡಿದಂತ ಪ್ರಾರ್ಥನೆಯು ನೀವು ಹಿಂದೆದೂ ಕಂಡರಿಯದಂತಹ ಮಹತ್ತರವಾದ ಉನ್ನತವಾದ ಕಾರ್ಯಗಳನ್ನು ಪ್ರಕಟಿಸುತ್ತದೆ. ಯಾಬೇಚನು ತಾನು ಬಿಡುಗಡೆ ಹೊಂದಲು ಮಾಡಬೇಕಾದ ಪ್ರಾರ್ಥನೆಯ ಮಹತ್ವವನ್ನು ಅರಿತುಕೊಂಡನು. ನಾವು ಸಹ ಇದನ್ನೇ ಮಾಡಬೇಕು
ಪ್ರಾರ್ಥನೆ ಎಂಬುದು ದೈವೀಕತೆಯ ಮತ್ತು ಮಾನವೀಯತೆಯ ಸಂಗಮ ಕೇಂದ್ರ. ಪ್ರಾರ್ಥಿಸುವ ಸ್ತ್ರೀ ಅಥವಾ ಪುರುಷರು ಇದ್ದಾರೆ ಎಂದರೆ ಅದಕ್ಕೆ ಉತ್ತರಿಸುವ ದೇವರು ಸಹ ಇದ್ದಾನೆ. ನಾವು ಯುದ್ಧ ರಂಗದಲ್ಲಿ ನೋಡುವುದಕ್ಕಿಂತಲೂ ಹೆಚ್ಚಾದ ಜಯಶಾಲಿಗಳನ್ನು ಮೊಣಕಾಲೂರಿ ಪ್ರಾರ್ಥಿಸುವಂತಹವರಲ್ಲಿ ನೋಡಬಹುದು.
" ಹೀಗಿರುವದರಿಂದ - ಏನು ಊಟಮಾಡಬೇಕು, ಏನು ಕುಡಿಯಬೇಕು, ಏನು ಹೊದ್ದುಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ. 32ಇವೆಲ್ಲವುಗಳಿಗಾಗಿ ಅಜ್ಞಾನಿಗಳು ತವಕಪಡುತ್ತಾರೆ. ಇದೆಲ್ಲಾ ನಿಮಗೆ ಬೇಕಾಗಿದೆ ಎಂದು ಪರಲೋಕದಲ್ಲಿರುವ ನಿಮ್ಮ ತಂದೆಗೆ ತಿಳಿದದೆಯಷ್ಟೆ. 33ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು."(ಮತ್ತಾಯ 6:31-33)
ಗಮನಿಸಿ : ದಯಮಾಡಿ ಈ ದೈನಂದಿನ ಮನ್ನದ ಪುಟವನ್ನು ಶೇರ್ ಗುಂಡಿಯನ್ನು ಒತ್ತುವ ಮೂಲಕ ಅನೇಕರಿಗೆ ಹಂಚಿ ನೀವು ಹೀಗೆ ಮಾಡಿದರೆ ಅವರು ಸಹ ಅವರಿಗೆ ಅಗತ್ಯವಾದ ಅದ್ಭುತ ಬಿಡುಗಡೆಗಳನ್ನು ಹೊಂದುಕೊಳ್ಳುವರೆಲ್ಲವೇ?.
ಪ್ರಾರ್ಥನೆಗಳು
1.ತಂದೆಯೇ, ನಿನ್ನ ವಾಕ್ಯವನ್ನು ಅನುದಿನವೂ ಅಪ್ಪಿಕೊಂಡು ನಡೆಯುವ ಕೃಪೆಯನ್ನು ಯೇಸು ನಾಮದಲ್ಲಿ ಅನುಗ್ರಹಿಸು.
2.ದೇವರ ವಾಕ್ಯ ಏನು ಹೇಳುತ್ತದೆಯೋ ಅದೇ ನಾನಾಗಿರುತ್ತೇನೆ. ನಾನು ಈ ಭೂಮಿಯ ಮೇಲೆ ಯೇಸುವಿನ ಪ್ರತಿರೂಪವಾಗಿ ಇರುವೆನು. ನಾನು ಪ್ರತಿದಿನವೂ ಕರ್ತನೊಂದಿಗೆ ಐಕ್ಯತೆಯಲ್ಲಿ ಬೆಳೆಯುವೆನು
3.ತಂದೆಯೇ, ಯೇಸುವಿನ ನಾಮದಲ್ಲಿ ನನ್ನ ಸಂಪೂರ್ಣವನ್ನು ನಿನ್ನ ಸಂಪೂರ್ಣತೆಯಿಂದ ತುಂಬಿಸಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ. (ಎಫೆಸೆ 31:9).
Join our WhatsApp Channel
Most Read
● ದೇವರವಾಕ್ಯವನ್ನು ನಿಮ್ಮ ಹೃದಯದಾಳದಲ್ಲಿ ಬಿತ್ತಿರಿ.● ಮಹಾತ್ತಾದ ಕಾರ್ಯಗಳು
● ನಿಮ್ಮ ಸಮಸ್ಯೆಗಳು ಮತ್ತು ನಿಮ್ಮ ನಡವಳಿಕೆಗಳು
● ಅದ್ಭುತಗಳಲ್ಲಿ ಕಾರ್ಯ ಮಾಡುವುದು - ಕೀಲಿಕೈ #1
● ದಿನ 27:40 ದಿನಗಳ ಉಪವಾಸ ಪ್ರಾರ್ಥನೆ.
● ಪುರಾತನ ಮಾರ್ಗಗಳನ್ನು ವಿಚಾರಿಸಿ
● ನಿಮ್ಮನ್ನು ಅಡ್ಡಿಪಡಿಸುವ ನಂಬಿಕೆಗಳನ್ನು ಸೀಮಿತಗೊಳಿಸುವುದು
ಅನಿಸಿಕೆಗಳು