ಅನುದಿನದ ಮನ್ನಾ
ಯಾಬೇಚನ ಪ್ರಾರ್ಥನೆ
Thursday, 15th of February 2024
3
2
460
Categories :
ಪ್ರಾರ್ಥನೆ (prayer)
ಯಾಬೇಚನ ಪ್ರಾರ್ಥನೆ (Prayer of jabez)
ಯಾಬೇಚನು ಯಹೂದ ಕುಲದವನು (ಯಹೂದ ಎಂದರೆ ಉಪಕಾರ ಸ್ತುತಿ) ಯಾಬೇಚನ ಕುರಿತು ನಮಗೆ ಅಷ್ಟೇನೂ ಮಾಹಿತಿ ಲಭ್ಯವಿಲ್ಲ. ಯಾಕೆಂದರೆ ಇಡೀ ಸತ್ಯವೇದದಲ್ಲಿ ಕೇವಲ 1ಪೂರ್ವ ಕಾಲ ವೃತ್ತಾಂತದ 4:9-10 ವಾಕ್ಯದಲ್ಲಿ ಮಾತ್ರ ಇವನ ಬಗ್ಗೆ ಉಲ್ಲೇಖವಿದೆ.
"ಯಾಬೇಚನು ಇಸ್ರಾಯೇಲ್ ದೇವರಿಗೆ - ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ ನನ್ನ ಪ್ರಾಂತವನ್ನು ವಿಸ್ತರಿಸಿ ನಿನ್ನ ಹಸ್ತದಿಂದ ನನ್ನನ್ನು ಹಿಡಿದು ಯಾವ ವೇದನೆಯೂ ಉಂಟಾಗದಂತೆ ನನ್ನನ್ನು ರಕ್ಷಿಸಬಾರದೇ ಎಂದು ಮೊರೆಯಿಡಲು ದೇವರು ಅವನ ಮೊರೆಯನ್ನು ಲಾಲಿಸಿದನು." (ಪೂರ್ವಕಾಲವೃತ್ತಾಂತ 4:10).
ಇಂದು ನಾವು ಯಾಬೇಚನು ಮಾಡಿದ ಈ ಅದ್ಭುತವಾದ ಪ್ರಾರ್ಥನೆಯನ್ನು ವಿವರವಾಗಿ ನೋಡೋಣ. ನೀವು ಸಹ ಈ ಪ್ರಾರ್ಥನೆಯನ್ನು ನಿಮ್ಮ ಪ್ರಾರ್ಥನಾ ಬತ್ತಳಿಕೆಯಲ್ಲಿ ಸೇರಿಸಿಕೊಂಡು ಇತರರಿಗೂ ಈ ಪ್ರಾರ್ಥನೆಯನ್ನು ನೀವು ಕಲಿಸಬಹುದು
ಮನವಿ #1
"ನೀನು ನನ್ನನ್ನು ವಿಶೇಷವಾಗಿ ಆಶೀರ್ವದಿಸಿ"
ಕೆಲವರು "ನಾವು ಈಗಾಗಲೇ ಆಶೀರ್ವಾದ ಹೊಂದಿದವರು" ಎಂದು ಹೇಳಬಹುದು. ಅದು ನಿಜವೇ. ಆದರೆ ಸತ್ಯವೇನೆಂದರೆ ಆಶೀರ್ವಾದಗಳಲ್ಲೂ ಅನೇಕ ಹಂತದ ಆಶೀರ್ವಾದಗಳಿವೆ. ನೀವು ಆಶೀರ್ವಾದ ಹೊಂದಿದವರೇ ಆಗಿದ್ದೀರಿ ಮತ್ತು ಇನ್ನೂ ವಿಶೇಷವಾಗಿ ಸಹ ಆಶೀರ್ವಾದವನ್ನು ನೀವು ಹೊಂಡಿಕೊಳ್ಳಬಹುದು.
"ಆಶೀರ್ವಾದ" ಎಂಬ ಪದವು ಇಬ್ರಿಯ ಭಾಷೆಯ "ಬರಾಕ್" ಎಂಬ ಮೂಲದಿಂದ ಬಂದಿದ್ದು ಅದರರ್ಥ "ಸಾಧಿಸಲು ಬಲ ನೀಡುವಂಥದ್ದು" ಎಂಬುದಾಗಿದೆ
ಯಾಬೇಚನು ಇಲ್ಲಿ "ಓ ಕರ್ತನೆ ನಾನು ಸಾಧಿಸಲು ನನ್ನನ್ನು ಬಲಗೊಳಿಸು" ಎಂದು ಹೇಳುತ್ತಿದ್ದಾನೆ. ದೇವರ ಆಶೀರ್ವಾದವು ಒಬ್ಬರನ್ನು ಐಶ್ವರ್ಯವಂತರನ್ನಾಗಿ ಮಾಡಿ ಅದರಲ್ಲಿ ಯಾವುದೇ ವ್ಯಸನವೂ ಇರದಂತೆ ಮಾಡಬಲ್ಲದು.(ಜ್ಞಾನೋಕ್ತಿ 10:22). ದೇವರು ನಿಮ್ಮನ್ನು ಆಶೀರ್ವದಿಸಬೇಕೆಂದು ನಿರ್ಧರಿಸಿದರೆ ಏನೇ ವಿರೋಧ ಬಂದರೂ ಪ್ರತಿರೋಧ ಬಂದರೂ ಅದನ್ನು ತಡೆಯಲು ಸಾಧ್ಯವಿಲ್ಲ.
ಮನವಿ #2
"ನನ್ನ ಪ್ರಾಂತವನ್ನು ವಿಸ್ತರಿಸು"
ಯಾಬೇಚನು ತನ್ನ ಪ್ರಭಾವ ಬೀರುವ ಹಾಗೆ ತನ್ನ ಪ್ರಾಂತವನ್ನು ವಿಸ್ತರಿಸಬೇಕೆಂದು ಬೇಡುತ್ತಿದ್ದಾನೆ. ಈ ರೀತಿಯಾಗಿ ಪ್ರಾರ್ಥಿಸುವಂತದು ನಿಮಗೆ ಅರಿವೇ ಇಲ್ಲದಂತಹ ಪ್ರಾಂತ್ಯದಲ್ಲೂ ಸಹ ನೀವು ಪ್ರವೇಶಿಸುವಂತೆ ಮಾಡಲು ನಿಮ್ಮನ್ನು ಸಶಕ್ತ ಗೊಳಿಸುತ್ತದೆ.
ಮನವಿ #3
"ನಿನ್ನ ಹಸ್ತದಿಂದ ಕೈಹಿಡಿದು."
ವಿಮೋಚನ ಕಾಂಡ 8:16-19 ವಾಕ್ಯಗಳನ್ನು ನೀವು ಓದಿ ನೋಡಿದರೆ, ಅಲ್ಲಿ ದೇವರು ಐಗುಪ್ತರ ಮೇಲೆ ಹೇನುಗಳನ್ನು ಸುರಿಸಿ ಉಪದ್ರವ ಪಡಿಸಿದಾಗ ಮಂತ್ರವಾದಿಗಳ ಕೈಲಿ ಈ ದೇವರ ಬಲವನ್ನು ನಕಲು ಮಾಡಲು ಸಾಧ್ಯವಾಗಲಿಲ್ಲ. ಅವರು ತಮ್ಮ ಸೋಲನ್ನು ಒಪ್ಪಿಕೊಂಡು ಫರೋಹನಿಗೆ "ಇದು ದೇವರ ಕೈ ಬೆರಳುಗಳಿಂದ ಆದದ್ದೇ" ಎಂದರು.
ಆಸಕ್ತಿಕರ ವಿಷಯವೇನೆಂದರೆ ಮಂತ್ರವಾದಿಗಳು ಇದನ್ನು "ದೇವರ ಕೈ ಬೆರಳುಗಳಿಂದಾದ" ಪ್ರದರ್ಶನ ಎಂದದ್ದು. ದೇವರ ಕೈ ಬೆರಳುಗಳು ಐಗುಪ್ತದ ಮಂತ್ರವಾದಿಗಳ ಮಂತ್ರೋಚ್ಚರವನ್ನು ನಿಲ್ಲಿಸಬಹುದಾದರೆ, ಸ್ವಲ್ಪ ಯೋಚಿಸಿ ನೋಡಿ ಇನ್ನು ದೇವರ ಹಸ್ತವೇ ನಿಮ್ಮ ಜೊತೆಗಿದ್ದರೆ ಏನೆಲ್ಲ ಕಾರ್ಯಗಳು ಸಿದ್ಧಿ ಆಗಬಹುದು?
"ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು."(1 ಅರಸುಗಳು 18:46)
ದೇವರ ಹಸ್ತವೆಂದರೆ ದೇವರ ಬಲ. ಇದು ಅಸಾಧ್ಯವಾದ ಕಾರ್ಯಗಳನ್ನು ಸಾದ್ಯ ಮಾಡುವಂತಹದ್ದಾಗಿದೆ. ( ಲೂಕ 1:33)
ನೀವು ನಿಮ್ಮ ಮುಂದೆ ಇರುವ ಎಲ್ಲಾ ಸ್ಪರ್ದಾಳುಗಳನ್ನು ಜಯಿಸುತ್ತೀರಿ. ದೇವರ ಹಸ್ತವು ನಿಮ್ಮ ಮೇಲೆ ನೆಲೆಗೊಂಡು ನಿಮಗೆ ಆ ವೇಗವನ್ನು ಅನುಗ್ರಹಿಸುತ್ತದೆ. ಯಾವ ಕಾರ್ಯ ಮಾಡಲು ಇತರರಿಗೆ ಅನೇಕ ವರ್ಷಗಳು ಹಿಡಿದವೋ, ಅವುಗಳನ್ನು ಕೆಲವೇ ದಿವಸಗಳಲ್ಲಿ ನಿಮಗೆ ಸಿದ್ಧಿಯಾಗುತ್ತದೆಂದು ನಾನು ನಿಮಗೆ ಪ್ರವಾದನೆ ಹೇಳುತ್ತೇನೆ.
ಮನವಿ #4.
"ಎಲ್ಲಾ ದುಷ್ಟತ್ವದಿಂದಲೂ ನನ್ನನ್ನು ರಕ್ಷಿಸು".
ಯಾಬೇಚನ ಈ ಪ್ರಾರ್ಥನೆಯನ್ನು ಕರ್ತನು ಕಲಿಸಿಕೊಟ್ಟ" ಶೋಧನೆಗೆ ಒಳಗಾಗದಂತೆ ಎಲ್ಲಾ ಶೋಧನೆಗಳಿಂದ ನಮ್ಮನ್ನು ತಪ್ಪಿಸಿ ಕಾಪಾಡು" ಎಂಬ ಪ್ರಾರ್ಥನೆಯೊಂದಿಗೆ ಹೋಲಿಸಬಹುದು.
ಮನವಿ #5
"ಯಾವ ವೇದನೆಯೂ ಉಂಟಾಗಬಾರದು"
ಜೀವನದಲ್ಲಿ ನೀವು ಎರಡು ರೀತಿಯ ಜನರನ್ನು ಸಂಧಿಸುತ್ತೀರಿ. ಒಬ್ಬ ವ್ಯಕ್ತಿಯು ನಿಮಗೆ ಶೋಧನೆ ಆಗಿರಬಹುದು ಇಲ್ಲವೇ ಆಶೀರ್ವಾದ ಕಾರಕವಾಗಿರಬಹುದು. ಇನ್ನು ಯಾವುದೇ ಮಧ್ಯ ರೀತಿಯ ಜನರು ಇಲ್ಲಿರುವುದಿಲ್ಲ.
ಯಾಬೇಚನು ತಾನು ಎಲ್ಲರಿಗೂ ಆಶೀರ್ವಾದ ಕರವಾಗಿರಬೇಕೇ ವಿನಹ ಯಾರಿಗೂ ಸಹ ನೋವು ತರುವವನಾಗಿರಬಾರದು ಎಂದು ಪ್ರಾರ್ಥಿಸಿದನು. ನಾವು ಕೇವಲ ಆಶೀರ್ವಾದ ಹೊಂದಿದವರಷ್ಟೇ ಆಗಿರದೆ,ಇತರರಿಗೆ ಆಶೀರ್ವಾದಕರವಾಗಿಯೂ ಇರಬೇಕು.
ನಾವು ದೇವರ ರಾಜ್ಯವನ್ನು ಕೇಂದ್ರೀಕರಿಸಿಕೊಂಡು ಪ್ರಾರ್ಥಿಸುವಾಗ ಪ್ರಾರ್ಥನೆಗಳು ಆತನ ಚಿತ್ತಕ್ಕನುಗುಣವಾಗಿಯೂ ಆತನ ವಾಕ್ಯಾನುಸಾರವಾಗಿಯೂ ಇರಬೇಕು. ಆಗ ನಾವು ಶೀಘ್ರವಾಗಿ ಉತ್ತರವನ್ನು ಆತನಿಂದ ಪಡೆದುಕೊಳ್ಳುವೆವು. ಹಾಗೆಯೇ "ದೇವರು ಅವನ ಮೊರೆಯನ್ನು ಲಾಲಿಸಿ ಅದರಂತೆ ಅನುಗ್ರಹಿಸಿದನು" ಎಂದು ದೇವರ ವಾಕ್ಯದಲ್ಲಿ ದಾಖಲಿಸಿದೆ.(1ಪೂರ್ವ ಕಾಲ ವೃತ್ತಾಂತ 4:10)
ಅರಿಕೆಗಳು
(ನಿಮಗೆಷ್ಟು ಸಾಧ್ಯವೊ ಅಷ್ಟು ಬಾರಿ ಈ ಅರಿಕೆಗಳನ್ನು ಮಾಡಿರಿ.ನೆನಪಿಡಿ. ನೀವು ಏನನ್ನು ಬಾಯಿಯಿಂದ ಅರಿಕೆ ಮಾಡುತ್ತೀರೋ ಅದನ್ನೇ ಹೊಂದಿಕೊಳ್ಳುವಿರಿ.)
1. ನಾನು ಎಲ್ಲವನ್ನೂ ಸಾಧಿಸಲು ಯೇಸು ನಾಮದಲ್ಲಿ ಬಲಹೊಂದಿದ್ದೇನೆ.
2.ಇತರರು ವಿಫಲರಾದ ಸ್ಥಳದಲ್ಲಿಯೇ ಯೇಸು ನಾಮದಲ್ಲಿ ನಾನು ಸಾಧನೆ ಮಾಡುತ್ತೇನೆ.
3. ಎಲ್ಲಿ ಇತರರು ತಿರಸ್ಕರಿಸಲ್ಪಟ್ಟಿದ್ದಾರೋ ಅಲ್ಲಿಯೇ ಯೇಸು ನಾಮದಲ್ಲಿ ನಾನು ಅಂಗೀಕರಿಸಲ್ಪಡುತ್ತೇನೆ
4. ಎಲ್ಲಿ ಇತರರು ನ್ಯಾಯ ತೀರ್ಪಿಗೆ ಗುರಿಯಾದರೋ ಅಲ್ಲಿಯೇ ನಾನು ಯೇಸು ನಾಮದಲ್ಲಿ ನೀತಿವಂತನಾಗಿ ಎಣಿಸಲ್ಪಡುತ್ತೇನೆ.
5. ನಾನು ಹೋಗುವ ಕಡೆಯಲ್ಲಾ ಯೇಸು ನಾಮದಲ್ಲಿ ಆಶೀರ್ವಾದ ನಿಧಿಯಾಗಿರುತ್ತೇನೆ.
Join our WhatsApp Channel
Most Read
● ನಂಬಿಕೆಯಲ್ಲಿಯೋ ಅಥವಾ ಭಯದಲ್ಲಿಯೋ● ಉಪವಾಸದ ಮೂಲಕ ದೇವದೂತರ ಸಂಚಲನೆಯನ್ನು ಉಂಟು ಮಾಡುವುದು.
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ
● ಕೃಪೆಯಲ್ಲಿ ಬೆಳೆಯುವುದು
● ಕರ್ತನ ಆನಂದ
● ನೂತನ ಆತ್ಮೀಕ ವಸ್ತ್ರಗಳನ್ನು ಧರಿಸಿಕೊಳ್ಳಿ
ಅನಿಸಿಕೆಗಳು