ಅನುದಿನದ ಮನ್ನಾ
ಬದಲಾಗಲು ಇನ್ನೂ ತಡವಾಗಿಲ್ಲ
Tuesday, 5th of March 2024
1
0
329
Categories :
ಬದಲಾವಣೆ (Change)
"ಮತ್ತು ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಯಾರೂ ಹಾಕಿಡುವದಿಲ್ಲ; ಇಟ್ಟರೆ ಆ ದ್ರಾಕ್ಷಾರಸವು ಬುದ್ದಲಿಗಳನ್ನು ಒಡೆದು ದ್ರಾಕ್ಷಾರಸವು ಬುದ್ದಲಿಗಳು ಎರಡೂ ಕೆಟ್ಟುಹೋಗುವವು. ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ [ಹಾಕಿಡತಕ್ಕದ್ದು] ಎಂದು ಹೇಳಿದನು."(ಮಾರ್ಕ 2:22)
ಹಲವಾರು ವರ್ಷಗಳ ಹಿಂದೆ ದ್ರಾಕ್ಷಾರಸವನ್ನು ಗಾಜಿನ ಬಾಟಲಿಗಳಲ್ಲಿ ಹಾಕಿಡದೆ ಚರ್ಮದ ಬುದ್ದಲಿಗಳಲ್ಲಿ ಶೇಖರಿಸಿ ಇಡುತ್ತಿದ್ದರು. ಆ ಚರ್ಮದ ಬುದ್ದಲಿಗಳು ಹೊಸದಾಗಿದ್ದಾಗ ಬಹಳ ಮೃದುವಾಗಿಯೂ ನಮನೀಯವಾಗಿಯೂ ಇರುತ್ತಿದ್ದವು. ಆದರೆ ಅವು ಹಳೆಯದಾಗುತ್ತಾ ಆಗುತ್ತಾ ಅವು ಗಟ್ಟಿಯಾಗಿ ಹಿಗ್ಗಲಾರದಂತೆ ಆಗಿಬಿಡುತ್ತಿದ್ದವು. ಹಳೆಯದಾದ ಈ ಬುದ್ದಲಿಗಳಿಗೆ ಹೊಸ ದ್ರಾಕ್ಷರಸಗಳನ್ನು ಹಾಕಿಬಿಟ್ಟರೆ ಆ ಬುದ್ದಲಿಯು ಹಿಗ್ಗದೆ ಹೊಡೆದು ಹೋಗಿ ದ್ರಾಕ್ಷಾರಸವೆಲ್ಲಾ ಚೆಲ್ಲಿ ನಷ್ಟವಾಗಿ ಹೋಗುತ್ತಿತ್ತು.
ಈ ಒಂದು ವಾಕ್ಯ ಭಾಗದಿಂದ ದೇವರು ನನಗೆ ಹೀಗೆ ಹೇಳಿದನು. ದೇವರು ನಮಗಾಗಿ ಹೊಸದಾದ ಆಶೀರ್ವಾದಗಳನ್ನು ನೂತನವಾದ ಬಾಗಿಲುಗಳನ್ನು ಅನುಗ್ರಹಿಸಲು ಸಿದ್ಧನಾಗಿದ್ದಾನೆ. ಆದರೆ ಆತನು ಅನುಗ್ರಹಿಸುವುದನ್ನು ಹಿಡಿದುಕೊಳ್ಳುವ-ಹೊಂದಿಕೊಳ್ಳುವ ಸಾಮರ್ಥ್ಯ ನಮಗಿರಬೇಕು ಅಷ್ಟೇ. ನಮ್ಮಲ್ಲಿರುವ ಬದಲಾಗುವ ಆಸೆಯ ಕೊರತೆಯೇ ನಮ್ಮನ್ನು ವಿಸ್ತರಿಸುವಂತಹ ದೇವರ ಸಾಮರ್ಥ್ಯವನ್ನು ಸೀಮಿತಗೊಳಿಸಿ ಬಿಡುತ್ತದೆ. "ನಿನ್ನ ಬುದ್ದಲಿಯನ್ನು ಬದಲಾಯಿಸು-ನಿನ್ನ ಜೀವನಶೈಲಿಯನ್ನು ಬದಲಾಯಿಸಿಕೋ" ಎಂದು ಪವಿತ್ರಾತ್ಮನು ನನ್ನ ಕಿವಿಗಳಲ್ಲಿ ಪಿಸುಗುಟ್ಟುವುದನ್ನು ನಾನು ಕೇಳಿದ್ದೇನೆ.
ನೀವು ಪ್ರತಿದಿನವೂ ಮಾಡಿದ ಸಂಗತಿಗಳನ್ನೇ ಮಾಡಿಕೊಂಡು ವೈವಿಧ್ಯಮಯವಾದಂತಹ ಪ್ರತಿಫಲವನ್ನು ನಿರೀಕ್ಷಿಸಲು ಸಾಧ್ಯವಿಲ್ಲ- ಅದು ಹುಚ್ಚುತನ.
ನಾನು ವಾಕ್ಯಭಾಗವೊಂದನ್ನು ಓದುವಾಗ ಒಂದು ಆಸಕ್ತಿಕರವಾದ ಸತ್ಯವನ್ನು ಕಂಡುಕೊಂಡೆನು. ಯೇಸು ಸ್ವಾಮಿಯು ಜನರಿಗಾಗಿ ಪ್ರಾರ್ಥಿಸುವಾಗ ಆತನು "ಈ ಪರಿಸ್ಥಿತಿಯಲ್ಲಿ ಎಷ್ಟು ಕಾಲದಿಂದ ಇದ್ದೀಯ" ಎನ್ನುವ ಪ್ರಶ್ನೆ ಮಾಡುತ್ತಿದ್ದನು. ಆತನು ಬೆತ್ಸೆದ ಕೊಳದ ಬಳಿ ಮಲಗಿದ್ದ ಕುಂಟನನ್ನು ಕುರಿತು "ಎಷ್ಟು ಕಾಲದಿಂದ ನೀನು ಇಲ್ಲಿದ್ದೀಯ?" ಎಂದು ಕೇಳಿದಾಗ ಆ ಮನುಷ್ಯನು "38 ವರ್ಷಗಳಿಂದ" ಎಂದು ಉತ್ತರಿಸಿದನು. (ಯೋಹಾನ 5ನೇ ಅಧ್ಯಾಯವನ್ನು ಓದಿರಿ)
ಕರ್ತನಾದ ಯೇಸುವು ನಡುಬೊಗ್ಗಿದವಳಾದ ಸ್ತ್ರೀಯನ್ನು ಕಂಡು "ಎಷ್ಟು ಕಾಲದಿಂದ ನಿನಗೆ ಈ ರೋಗವು ಹಿಡಿದಿದೆ?" ಎಂದಾಗ ಆಕೆಯು 18 ವರ್ಷಗಳಿಂದ ಎಂದಳು. (ಲೂಕ 13) ಕುರುಡನಾಗಿದ್ದ ತಮ್ಮ ಮಗನನ್ನು ಯೇಸುವಿನ ಬಳಿ ಕರೆ ತಂದ ತಂದೆ ತಾಯಿಗಳನ್ನು ಯೇಸು ಸ್ವಾಮಿಯ ನೋಡಿ "ಎಷ್ಟು ಕಾಲದಿಂದ ನಿಮ್ಮ ಮಗನು ಕುರುಡನಾಗಿದ್ದಾನೆ?" ಎಂದು ಕೇಳಿದಾಗ ಅವರು "ಅವನು ಹುಟ್ಟಿದಾಗಿನಿಂದಲೂ" ಎಂದು ಉತ್ತರಿಸುತ್ತಾರೆ. (ಯೋಹಾನ 9:1-12)
ಕಾಲಾವಧಿಯ ಬಗ್ಗೆ ತಿಳಿದುಕೊಳ್ಳಲು ಯೇಸುವಿಗೆ ಏಕೆ ಅಷ್ಟು ಕುತೂಹಲ? ಏಕೆ ಆತನು ಸುಮ್ಮನೆ ಅವರನ್ನು ಸ್ವಸ್ಥ ಪಡಿಸಿ ಕಳುಹಿಸಿ ಬಿಡಲಿಲ್ಲ? ಏಕೆಂದರೆ ಇಲ್ಲಿ ಯಾವುದೂ ಸಹ ಶಾಶ್ವತವಲ್ಲ ಎಂಬ ಸತ್ಯವನ್ನು ನಮಗೆ ತಿಳಿಯ ಪಡಿಸಲೆಂದೇ ಆತನು ಹಾಗೆ ಕೇಳುತ್ತಿದ್ದನು. ಈ ಒಂದು ಪರಿಶುದ್ಧ ವಾಕ್ಯಗಳನ್ನು ತಲೆಮಾರುಗಳಿಂದ ತಲೆಮಾರುಗಳ ವರೆಗಿನ ಜನರು ಓದುತ್ತಾರೆ ಎಂಬುದು ಆತನಿಗೆ ತಿಳಿದಿತ್ತು. ಆದುದರಿಂದಲೇ ಅವರೆಲ್ಲರಿಗೂ ಬದಲಾಗಲು ಇನ್ನೂ ತಡವಾಗಿಲ್ಲ ಎಂಬ ಸತ್ಯವನ್ನು ಅವರು ಅರಿತುಕೊಳ್ಳಲಿ ಎಂದೇ ಆತನು ಹೀಗೆ ಕೇಳುತ್ತಿದ್ದನು. ನಿಮ್ಮ ಸದ್ಯದ ಪರಿಸ್ಥಿತಿ ಏನೇ ಆಗಿರಬಹುದು ಆದರೆ ಅದನ್ನು ಬದಲಾಯಿಸಲು ಕಾಲವು ಇನ್ನೂ ಮೀರಿ ಹೋಗಿಲ್ಲ.
ಒಬ್ಬರು ಹೀಗೆ ಹೇಳಿದ್ದಾರೆ "ಯಾರೂ ಸಹ ತಮ್ಮ ಜೀವನದಲ್ಲಿ ಹಿಂದೆ ಹೋಗಿ ತಮ್ಮಜೀವನವನ್ನು ಹೊಸದಾಗಿ ಆರಂಭಿಸಲು ಸಾಧ್ಯವಿಲ್ಲ ಆದರೆ ಯಾರಾದರೂ ಸರಿಯೇ ಇಂದಿನ ದಿನವನ್ನು ನೂತನವಾಗಿ ಆರಂಭಿಸಿ ನೂತನವಾದ ಮುಕ್ತಾಯವನ್ನು ಅದಕ್ಕೆ ಕೊಡಬಹುದು" ಎಂದು.
ಪ್ರಾರ್ಥನೆಗಳು
ತಂದೆಯೇ, ನಿನ್ನಿಂದ ಎಲ್ಲವೂ ಸಾಧ್ಯವಪ್ಪ. ನೀನು ನನ್ನ ಈ ಪರಿಸ್ಥಿತಿಯನ್ನು ಬದಲಾಯಿಸಬಲ್ಲೆ ಮತ್ತು ನನ್ನ ಕನಸುಗಳನ್ನು ಸಾಕಾರಗೊಳಿಸಬಲ್ಲೆ. ಪವಿತ್ರಾತ್ಮ ದೇವರೇ ನನ್ನನ್ನು ನೂತನ ಪಡಿಸು- ನನ್ನನ್ನು ಬದಲಾಯಿಸು, ಅದರಿಂದ ನಾನು ನೀನು ನನ್ನ ಮೇಲೆ ಸುರಿಸುವುದನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗುವುದು.
Join our WhatsApp Channel
Most Read
● ಯಹೂದವು ಮುಂದಾಗಿ ಹೊರಡಲಿ● ದೇವದೂತರ ಸಹಾಯವನ್ನು ಸಕ್ರಿಯಗೊಳಿಸುವುದು ಹೇಗೆ
● ಹೆಚ್ಚು ಹೆಚ್ಚಾಗಿ ಬೆಳೆಯುವ ನಂಬಿಕೆ
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ದಿನ 15:40 ದಿನಗಳ ಉಪವಾಸ ಮತ್ತು ಪಾರ್ಥನೆ.
● ಆಳವಾದ ನೀರಿನೊಳಗೆ
● ಯಜಮಾನನ ಬಯಕೆ
ಅನಿಸಿಕೆಗಳು