ಅನುದಿನದ ಮನ್ನಾ
ನಿಮ್ಮ ರೂಪಾಂತರವನ್ನು ತಡೆಯುತ್ತಿರುವುದೇನು ಎಂಬುದನ್ನು ತಿಳಿದುಕೊಳ್ಳಿರಿ.
Thursday, 7th of March 2024
0
0
418
Categories :
ಬದಲಾವಣೆ (Change)
ಸ್ವಲ್ಪ ಸಮಯದ ಹಿಂದೆ ನಮ್ಮ ಬದಲಾವಣೆಗೆ ವಿರುದ್ಧವಾಗಿ ಕಾರ್ಯ ಮಾಡುತ್ತಿರುವ ವಿಚಾರಗಳಾವುವು ಎಂಬುದರ ಕುರಿತು ಕೆಲವು ಸತ್ಯಗಳನ್ನು ತಿಳಿಸಿದ್ದೇನೆ. ಈ ಎಲ್ಲಾ ವಿಚಾರಗಳು ಜನರು ತಮ್ಮ ಆಶೀರ್ವಾದಗಳನ್ನು ಅನುಭವಿಸಲಾರದಂತೆ ಮಾಡುವ ವಿಚಾರಗಳಾಗಿವೆ. ಈ ಎಲ್ಲಾ ಅಂಶಗಳು ಸೂಕ್ಷ್ಮವಾಗಿ ಕಂಡರೂ ಕಾಲಾಂತರದಲ್ಲಿ ನಾವು ಮುಂದಿನ ಹಂತಕ್ಕೆ ತಲುಪಲು ನಮಗೆ ತಡೆಯಾಗುವಂತ ವಿಚಾರಗಳಾಗಿವೆ.
3.ಹಠ :
ಹಠದ ಸ್ವಭಾವವು ನನಗೆ ಬದಲಾಗಲು ಇಷ್ಟವಿಲ್ಲ ಎನ್ನುತ್ತದೆ
ಹಠವು ನನಗೆ ಗೊತ್ತು ನಾನು ಬದಲಾಗಬೇಕಾದ ಅವಶ್ಯಕತೆ ಇದೆ ಆದರೆ ನನಗೆ ಬದಲಾಗಲು ಇಷ್ಟವಿಲ್ಲ ಎಂದು ಹೇಳುತ್ತದೆ.
ಪರಿಶುದ್ಧ ಗ್ರಂಥದಲ್ಲಿನ ವಾಕ್ಯ ಹೇಳುತ್ತದೆ ಹಠವು ಮಾಟ ಮಂತ್ರಕ್ಕೆ ಸಮನಾದ ಪಾಪವೆಂದು
"ಅವಿಧೇಯತ್ವವು ಮಂತ್ರತಂತ್ರಗಳಷ್ಟೇ ಕೆಟ್ಟದ್ದಾಗಿರುವದು; ಹಟವು ವಿುಥ್ಯಾಭಕ್ತಿಗೂ ವಿಗ್ರಹಾರಾಧನೆಗೂ ಸಮಾನವಾಗಿರುವದು."(1 ಸಮುವೇಲನು 15:23)
ಅರಸನಾದ ಸೌಲನು ಇಸ್ರಾರಲ್ಲಿಯೇ ಅತ್ಯಂತ ನೀಳವಾದ ಸ್ಫುರದ್ರೂಪಿಯಾದ ಪುರುಷನಾಗಿದ್ದನು. ಆದರೂ ಇವುಗಳಾವುವೂ ಅವನನ್ನು ಕಾಪಾಡಲಿಲ್ಲ. ಸೌಲನು ತನ್ನ ಹಠಸ್ವಭಾವವನ್ನು ಪೋಷಿಸಿಕೊಂಡು ತನ್ನ ಗತಿಯನ್ನು ಕೆಡಿಸಿಕೊಂಡನು. ನೀವು ಮತ್ತೊಬ್ಬ ಸೌಲನಾಗಬೇಡಿರಿ. ಹಠದ ಸ್ವಭಾವವನ್ನು ಗಂಭೀರವಾಗಿ ಪರಿಗಣಿಸಿ. ಆಗ ನಿಮ್ಮ ಜೀವಿತದಲ್ಲಿ ಆಗಬೇಕಾದ ಬದಲಾವಣೆಯು ಆಗಿಯೇ ತೀರುತ್ತದೆ
4.ಸೋಮಾರಿತನ:
ಸೋಮಾರಿತನವು ನನಗೇನೋ ಈಗ ಬದಲಾಗಬೇಕು ಎಂದು ಎನಿಸುತ್ತಿಲ್ಲ ಎನ್ನುತ್ತದೆ.
ಬದಲಾವಣೆಯು ಶಿಸ್ತನ್ನು ಎದುರು ನೋಡುತ್ತದೆ. ಕೆಲವು ಜನರು ಬದಲಾಗಲು ಅಷ್ಟೊಂದು ಕಾರ್ಯಗಳನ್ನು ಮಾಡಬೇಕಾಗುತ್ತದೆ ಎಂದು ನೆನೆಸುತ್ತಾರೆ. ಅವರು ತಾವು ತೆತ್ತಬೇಕಾದ ಬೆಲೆಯ ಅಳತೆಯ ಮಟ್ಟವನ್ನು ತೆತ್ತಲು ಸಿದ್ಧವಿರುವುದಿಲ್ಲ. ಒಂದು ದೊಡ್ಡ ಮೋಸ ಯಾವುದೆಂದರೆ ನಾನು ಈಗ ಹೇಗಿದ್ದೇನೋ ಅದರಲ್ಲೇ ಚೆನ್ನಾಗಿದ್ದೇನೆ ಎಂದು ಹೇಳಿಕೊಳ್ಳುವಂತದ್ದು.
ಜ್ಞಾನೋಕ್ತಿಗಳು 6:9-11 ಸೋಮಾರಿಯಾದವನನ್ನು ಹೀಗೆ ಬಣ್ಣಿಸುತ್ತದೆ.
"ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ? [10] ಇನ್ನು ಸ್ವಲ್ಪ ನಿದ್ದೆ, ಇನ್ನು ತುಸು ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? [11] ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು."(ಜ್ಞಾನೋಕ್ತಿಗಳು 6:9-11)
5.ಜ್ಞಾನಹೀನತೆ:
ಜ್ಞಾನಹೀನತೆಯು ನನಗೆ ಬದಲಾಗಬೇಕೆನ್ನುವ ವಿಷಯವೇ ತಿಳಿದಿರಲಿಲ್ಲ ಎಂದು ಹೇಳುತ್ತದೆ. ದೇವರು ಜ್ಞಾನ ಹೀನತೆಯನ್ನು ಸಹಿಸಿಕೊಂಡು ಕ್ಷಮಿಸುವವನಲ್ಲ.
ನೆನಪಿಡಿ, ತನ್ನ ಯಜಮಾನನ ಚಿತ್ತವೇನೆಂಬುದನ್ನು ತಿಳಿಯದಿದ್ದ ಸೇವಕನು ಶಿಕ್ಷೆಗೆ ಒಳಗಾದನು (ಲೂಕ 12:48).
ಜ್ಞಾನಹೀನತೆಯು ಖಂಡಿತವಾಗಿಯೂ ದೇವರ ರಾಜ್ಯದಲ್ಲಿ ಆನಂದಕಾರವಾದದ್ದಲ್ಲ. ಜ್ಞಾನಹೀನತೆಯೇ ಇಂದು ಅನೇಕ ದೇವ ಜನರು ನಾಶವಾಗಲು ಮುಖ್ಯ ಕಾರಣವಾಗಿದೆ. (ಹೋಶೆಯ 4:6)

ಪ್ರಾರ್ಥನೆಗಳು
ತಂದೆಯೇ, ನಾನು ಆಂತರ್ಯದಿಂದ ಬೆಳವಣಿಗೆ ಹೊಂದುವಂತೆ ಸಹಾಯ ಮಾಡು. ಆಗ ನನ್ನ ಎಲ್ಲಾ ಪರಿಸ್ಥಿತಿಗಳು ನನ್ನ ಜೀವಿತದಲ್ಲಿ ನಿನ್ನ ಸಾನಿಧ್ಯದ ಮುಂದೆ ಅಡ್ಡ ಬೀಳುತ್ತದೆ. ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್
Join our WhatsApp Channel
Most Read
● ಚಿಕ್ಕ ಸಂಗತಿಗಳೂ ಸಹ ಮಹತ್ತರ ಉದ್ದೇಶಗಳನ್ನು ಪೂರೈಸಬಲ್ಲವು.● ಚಾಡಿಮಾತು ಸಂಬಂಧಗಳನ್ನು ಹಾಳುಮಾಡುತ್ತದೆ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಕೃಪೆಯಿಂದಲೇ ರಕ್ಷಣೆ
● ಇತರರೊಂದಿಗೆ ಸಮಾಧಾನದಿಂದ ಜೀವಿಸಿರಿ
● ಹಣಕಾಸಿನ ಅವ್ಯವಸ್ಥೆಯಿಂದ ಪಾರಾಗುವುದು ಹೇಗೆ?
ಅನಿಸಿಕೆಗಳು