ಅನುದಿನದ ಮನ್ನಾ
ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಹೇಗೆ
Sunday, 10th of March 2024
1
0
346
Categories :
ಸಂಬಂಧಗಳು (Relationships)
ಸಂಬಂಧಗಳೆನ್ನುವುದು ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗಗಳಾಗಿ ಬಿಟ್ಟಿವೆ. ಕ್ರೈಸ್ತರಾದ ನಾವು ದೇವರ ಯೋಜನೆ ಪ್ರಕಾರ ಸಂಬಂಧಗಳನ್ನು ಹೇಗೆ ಬೆಳೆಸಿಕೊಳ್ಳಬೇಕು ಮತ್ತು ಪೋಷಿಸಬೇಕು ಎಂಬುದನ್ನು ಅರಿತುಕೊಳ್ಳುವುದು ಬಹು ಮುಖ್ಯವಾದ ಅಂಶವಾಗಿದೆ. ಇದಕ್ಕಾಗಿ ನಮಗಿರುವ ಮಾದರಿ ಎಂದರೆ ಯೇಸುಕ್ರಿಸ್ತ ನಲ್ಲದೆ ಮತ್ತೊಬ್ಬನಿಲ್ಲ. ಆತನು ತನ್ನ ಭೂಮಿಯ ಮೇಲಿನ ಜೀವಿತದ ಸಮಯದಲ್ಲಿ ಆತನಿಗೆ ಒಂದು ನಿರ್ಣಾಯಕವಾದ ಸೇವೆಯನ್ನು ಮುಗಿಸುವ ಅಗತ್ಯವಿದ್ದು, ನಮಗಿರುವ ಸರಿಯಾದ ಸಂಬಂಧಗಳು ತನ್ನ ತಂದೆಯ ಚಿತ್ತವನ್ನು ನೆರವೇರಿಸಲು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ತಿಳಿದವನಾಗಿದ್ದನು.
ಯೇಸುಕ್ರಿಸ್ತನೋ ಜನರೊಟ್ಟಿಗೆ ಸಂಬಂಧಗಳನ್ನು ಬೆಳೆಸಿಕೊಳ್ಳಲು ಹಿಡಿದ ಮಾರ್ಗವೇ ಪ್ರಾರ್ಥನೆ. ಆತನು ಜನರೊಟ್ಟಿಗೆ ಸಮಯ ಕಳೆಯಲು ಮತ್ತು ಅವರೊಟ್ಟಿಗೆ ಇರಲು ಸತತವಾಗಿ ತಂದೆಯ ಮಾರ್ಗದರ್ಶನವನ್ನು ಎದುರು ನೋಡುತ್ತಿದ್ದನು. ಲೂಕ 6:12-13 ರಲ್ಲಿ ಹೇಳಿರುವಂತೆ"ಆ ದಿವಸಗಳಲ್ಲಿ ಆತನು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟಕ್ಕೆ ಹೋಗಿ ರಾತ್ರಿಯನ್ನೆಲ್ಲಾ ಪ್ರಾರ್ಥನೆಯಲ್ಲೇ ಕಳೆದನು. ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡು ಅವರಿಗೆ ಅಪೊಸ್ತಲರೆಂತ ಹೆಸರಿಟ್ಟನು."
ಸಂಬಂಧಗಳನ್ನು ಬೆಳೆಸಿಕೊಳ್ಳಲು ಯೇಸುಕ್ರಿಸ್ತನು ಪ್ರಾರ್ಥನೆಯ ಮೇಲೆ ಆಧಾರವಾಗುವಂತಹ ಆತನ ನಡವಳಿಕೆಯು ನಮಗೆ ಅಮೂಲ್ಯವಾದ ಪಾಠವನ್ನು ಕಲಿಸುತ್ತದೆ. ನಾವೂ ಸಹ ನಮ್ಮ ಜೀವಿತದಲ್ಲಿ ನಮ್ಮ ಸುತ್ತಲೂ ಇರಬೇಕಾದ ಜನರನ್ನು ಆಯ್ಕೆ ಮಾಡಿಕೊಳ್ಳಲು ದೇವರ ಜ್ಞಾನವನ್ನು ಮಾರ್ಗದರ್ಶನವನ್ನು ಎದುರು ನೋಡಬೇಕು."ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು." ಎಂದು ಜ್ಞಾನೋಕ್ತಿಗಳು 13:20 ಎಚ್ಚರಿಸುತ್ತದೆ.
ಪ್ರಾರ್ಥನಾ ಪೂರ್ವಕವಾಗಿ ನಮ್ಮ ಸುತ್ತಲಿರಬೇಕಾದ ಸಂಬಂಧಗಳನ್ನು ಪರಿಗಣಿಸುವುದರಿಂದ ಅನಗತ್ಯವಾಗಿ ಆಗುವ ಹೃದಯದ ನೋವುಗಳನ್ನು ತಡೆಗಟ್ಟಬಹುದು ಮತ್ತು ನಮ್ಮನ್ನು ನಂಬಿಕೆಯಲ್ಲಿ ಬಲಪಡಿಸುವ ಉತ್ತೇಜಿಸುವಂತಹ ಜನರ ಒಟ್ಟಿಗೆ ಇರುವುದರಿಂದ ನಾವು ದೇವರ ಉದ್ದೇಶಗಳನ್ನು ಪರಿಪೂರ್ಣಗೊಳಿಸಲು ನಮಗೆ ಸಹಕರಿಸುತ್ತದೆ.
ಹೇಗೂ ಪ್ರಾರ್ಥನೆ ಇದ್ದರೂ, ವಿವೇಚನೆಯಿಂದ ಸಂಬಂಧಗಳನ್ನು ಆರಿಸಿಕೊಂಡರೂ ಎಲ್ಲಾ ಸಂಬಂಧಗಳು ಸುಲಭವಾಗಿ ನೋವುರಹಿತವಾಗಿ ಇರುತ್ತವೆ ಎಂದು ಹೇಳಲಾಗದು. ಇಸ್ಕರಿಯೋತ ಯೂದನ ಚರಿತ್ರೆಯು ನಮಗೆ ಈ ಸತ್ಯವನ್ನು ವಿವರಿಸುತ್ತದೆ. ಯೂದನು ಯೇಸುವಿನ ಕೈಗಳಿಂದಲೇ ಆರಿಸಲ್ಪಟ್ಟಿದ್ದರೂ ತನ್ನ ಕರ್ತನನ್ನು ಅವನು ಬಿಟ್ಟುಕೊಟ್ಟು ದ್ರೋಹಿಯಾದನು. ಯೋಹಾ 17:12 ರಲ್ಲಿ ಯೇಸು ಸ್ವಾಮಿಯು ಹೀಗೆ ಪ್ರಾರ್ಥಿಸುವುದನ್ನು ನಾವು ಕಾಣಬಹುದು.."ನಾನು ಇವರ ಜೊತೆ ಇದ್ದಾಗ ನೀನು ನನಗೆ ಕೊಟ್ಟ ನಿನ್ನ ಹೆಸರಿನಲ್ಲಿ ಇವರನ್ನು ಕಾಪಾಡಿ ಸಂರಕ್ಷಿಸಿದೆನು. ಧರ್ಮಶಾಸ್ತ್ರದ ಮಾತು ನೆರವೇರುವಂತೆ ನಾಶಕ್ಕಾಗಿ ಹುಟ್ಟಿದವನೇ ಹೊರತು ಇವರಲ್ಲಿ ಒಬ್ಬನೂ ನಾಶವಾಗಲಿಲ್ಲ."ಯೇಸುಸ್ವಾಮಿ ಮತ್ತು ಯೂದನ ನಡುವಿನ ಈ ಕ್ಲಿಷ್ಟಕರವಾದ ಸಂಬಂಧವನ್ನು ನೋಡುವುದಾದರೆ ಅತ್ಯಂತ ಸವಾಲೆನಿಸುವ ಸಂಬಂಧಗಳೂ ಸಹ ಕೆಲವೊಮ್ಮೆ ದೇವರ ಉದ್ದೇಶವನ್ನು ಪೂರೈಸಬಲ್ಲವು ಎಂಬುದನ್ನು ನಮಗೆ ನೆನಪಿಸುತ್ತದೆ.ರೋಮಾಪುರದವರಿಗೆ 8:28 ಹೇಳುವಂತೆ "ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತವೆ ಎಂದು ನಮಗೆ ಗೊತ್ತದೆ."
ಕೆಲವೊಂದು ಸಂಬಂಧಗಳು ಏಕೆ ಹೀಗೆ ಎಂಬುದರ ಕಾರಣವನ್ನು ನಾವು ಎಲ್ಲಾ ಸಮಯದಲ್ಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಅವುಗಳು ನಮ್ಮನ್ನು ರೂಪಿಸಲು ಹಾಗೂ ದೇವರ ಚಿತ್ತವನ್ನು ನಮ್ಮ ಜೀವಿತದಲ್ಲಿ ಪೂರೈಸುವುದಕೋಸ್ಕರ ದೇವರು ಈ ಸಂಬಂಧಗಳನ್ನು ಬಳಸಿಕೊಳ್ಳುತ್ತಿದ್ದಾನೆ ಎಂದು ದೇವರ ಮೇಲೆ ವಿಶ್ವಾಸವಿಡಬೇಕಷ್ಟೆ.
ನಾವು ಸಂಬಂಧಗಳಲ್ಲಿರುವ ಸಂಕೀರ್ಣತೆಗಳ ಬಗ್ಗೆ ದೃಷ್ಟಿ ಹರಿಸುವಾಗ ದೇವರು ನೇಮಿಸಲ್ಪಟ್ಟ ಪ್ರತಿಯೊಂದು ಸಂಬಂಧಗಳ ಹಿಂದೆ ಕಾಣದ ವೈರಿಯು ಕಾರ್ಯ ಮಾಡುತ್ತಿದ್ದಾನೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ನಾವು ನೋಡುವಂತದ್ದು ನಿರ್ಣಾಯಕ ಅಂಶವಾಗಿದೆ. "ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ."ಎಂದು ಎಫೆಸದವರಿಗೆ 6:12 ಎಚ್ಚರಿಸುತ್ತದೆ
ಆದುದರಿಂದಲೇ ದೇವರಿಂದ ದೊರಕುವ ಸಂರಕ್ಷಣೆ ಮತ್ತು ಬಲಕ್ಕಾಗಿ ನಮ್ಮ ಪ್ರತಿಯೊಂದು ಸಂಬಂಧಗಳನ್ನು ಯೇಸುವಿನ ರಕ್ತದಡಿಯಲ್ಲಿ ಮರೆಮಾಚುವಂತದ್ದು ಬಹಳ ಮುಖ್ಯವಾದ ಕಾರ್ಯವಾಗಿದೆ.ಇನ್ನೂ ಹೇಳಬೇಕೆಂದರೆ ಯೇಸು ಸ್ವಾಮಿಯು ತನ್ನ ಶಿಷ್ಯರೊಟ್ಟಿಗೆ ಸಮಯ ಕಳೆದಂತೆಯೇ ನಾವೂ ಸಹ ಸಕ್ರಿಯವಾಗಿ ನಮ್ಮ ಸಂಬಂಧಗಳಲ್ಲಿ ಸಮಯವನ್ನು ಹೂಡಿಕೆ ಮಾಡಬೇಕು. ಆತನು ತನ್ನ ಶಿಷ್ಯರಿಗೆ ಬೋಧಿಸುತ್ತಾ, ಅವರನ್ನು ನಡೆಸುತ್ತಾ ತನ್ನ ಜೀವಿತವನ್ನು ಅವರೊಂದಿಗೆ ಹಂಚಿಕೊಳ್ಳುತ್ತಾ ತನ್ನ ಸಮಯವನ್ನು ಅವರೊಟ್ಟಿಗೆ ಕಳೆದನು. ಜ್ಞಾನೋಕ್ತಿ 27:17 ಹೇಳುವಂತೆ "ಕಬ್ಬಿಣವು ಕಬ್ಬಿಣವನ್ನು ಹೇಗೋ ವಿುತ್ರನು ವಿುತ್ರನ ಬುದ್ಧಿಯನ್ನು ಹಾಗೆ ಹರಿತ ಮಾಡುವನು."
ನಾವು ಮನಪೂರ್ವಕವಾಗಿ ನಮ್ಮ ಜೀವಿತವನ್ನು ಮತ್ತೊಬ್ಬರಿಗಾಗಿ ಮುಡಿಪಾಗಿಡುವಾಗ ಅವರೂ ಸಹ ನಮಗಾಗಿ ಅದನ್ನೇ ಮಾಡಲು ಸಿದ್ದರಾಗುತ್ತಾರೆ. ಇದರಿಂದ ದೇವರ ಮಹಿಮೆಯನ್ನು ಉಜ್ವಲ ಗೊಳಿಸುವಂತಹ, ಸಂಬಂಧಗಳನ್ನು ವರ್ಧಿಸುವಂತಹ ಪರಿಸರವನ್ನು ನಾವು ಸೃಷ್ಟಿಸಬಹುದು.
ಅಂತಿಮವಾಗಿ, ನಮ್ಮೆಲ್ಲ ಸಂಬಂಧಗಳ ಅಡಿಪಾಯವು ಕ್ರಿಸ್ತನೊಂದಿಗೆ ಸಂಬಂಧವನ್ನು ಜೋಡಿಸುವಂತಿರಬೇಕು. ನಾವು ಆತನಲ್ಲಿ ನೆಲೆಗೊಂಡಾಗ ಮತ್ತು ಆತನ ಪ್ರೀತಿಯು ನಮ್ಮಲ್ಲಿ ಪುಟಿಯುವಾಗ ನಾವು ದೇವರ ಪ್ರೀತಿಯಿಂದ ಇತರರಿಗೆ ಸೇವೆ ಮಾಡುವ ಉತ್ತಮವಾದ ಸಾಧನವಾಗುತ್ತೇವೆ. "ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ."ಎಂದು ಯೋಹಾನ 15:5ರಲ್ಲಿ ಕರ್ತನು ನಮಗೆ ಹೇಳುತ್ತಾನೆ.
ಇನ್ನೇನು ಹೇಳೋಣ, ಸರಿಯಾದ ಸಂಬಂಧಗಳನ್ನು ಬೆಳೆಸಿಕೊಳ್ಳಲು ಪ್ರಾರ್ಥನೆಯ ಅಗತ್ಯವಿದೆ ಮತ್ತು ದೇವರ ಮೇಲೆ ಆಳವಾಗಿ ಆತುಕೊಳ್ಳುವ ಅವಶ್ಯಕತೆ ಇದೆ. ಯೇಸುಕ್ರಿಸ್ತನ ಮಾದರಿಯನ್ನು ಅನುಸರಿಸುವ ಮುಖಾಂತರ ಮತ್ತು ಆತನ ರಕ್ತದಲ್ಲಿ ನಮ್ಮ ಸಂಬಂಧಗಳನ್ನು ಮರೆಮಾಚುವ ಮೂಲಕ ಆತನಿಗೆ ಮಹಿಮೆ ಸಲ್ಲಿಸುವ ಆತನ ರಾಜ್ಯವನ್ನು ವಿಸ್ತರಿಸುವಂತಹ ಸಂಬಂಧಗಳನ್ನು ಬೆಳೆಸಿಕೊಳ್ಳಬಹುದು.
ನಮ್ಮ ಸಂಬಂಧಗಳಿಗೆ ಮನಪೂರ್ವಕವಾಗಿ ನಾವು ಬದ್ಧವಾಗಿರೋಣ. ಇದರಿಂದ ದೇವರು ಅವುಗಳಿಂದ ನಮ್ಮನ್ನು ಶುದ್ದಿಕರಿಸಿ ಆತನ ಪರಿಪೂರ್ಣವಾದ ಉದ್ದೇಶವನ್ನು ಪೂರೈಸಿಕೊಳ್ಳುತ್ತಾನೆ ಎಂದು ವಿಶ್ವಾಸವಿಡೋಣ.
ಪ್ರಾರ್ಥನೆಗಳು
ಪ್ರೀತಿಯುಳ್ಳ ತಂದೆಯೇ, ನಿನ್ನನ್ನು ಸನ್ಮಾನಿಸುವಂತಹ ಸಂಬಂಧಗಳನ್ನು ನಾವು ಬೆಳೆಸಿಕೊಳ್ಳುವಂತೆ ನಮಗೆ ಮಾರ್ಗದರ್ಶಿಸು. ನಿಮ್ಮ ಜ್ಞಾನ ವಿವೇಕಗಳನ್ನೇ ಎದುರು ನೋಡುವಂತೆ ನಮಗೆ ಸಹಾಯ ಮಾಡು. ನಿನ್ನ ಪರಿಶುದ್ಧ ರಕ್ತದಿಂದ ನಮ್ಮೆಲ್ಲಾ ಸಂಬಂಧಗಳನ್ನು ಮರೆಮಾಚಿ ನಿಮ್ಮ ಪರಿಪೂರ್ಣವಾದ ಉದ್ದೇಶಗಳ ಮೇಲೆಯೇ ಭರವಸೆ ಇಡುವಂತೆ ಸಹಾಯ ಮಾಡು ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇವೆ ತಂದೆಯೇ. ಆಮೆನ್.
Join our WhatsApp Channel
Most Read
● ಬೆಟ್ಟಗಳ ಮತ್ತು ತಗ್ಗಿನ ದೇವರು.● ದೇವರ ವಾಕ್ಯವನ್ನು ಹೊಂದಿಕೊಳ್ಳಿರಿ.
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಕಳೆದು ಹೋದ ರಹಸ್ಯ
● ಚಿಂತೆಯಿಂದ ಹೊರಬರಲು ಈ ಸಂಗತಿಗಳ ಕುರಿತು ಯೋಚಿಸಿ
● ಒಳಕೋಣೆ
● ಸ್ವಸ್ಥ ಚಿತ್ತತೆ ಎಂಬುದು ಒಂದು ವರ
ಅನಿಸಿಕೆಗಳು